ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ರಕ್ತದಾನ ಶಿಬಿರ
ತೀರ್ಥಹಳ್ಳಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71 ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಸೇವೆ ಮತ್ತು ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಇದರ ಪ್ರಯುಕ್ತ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ಮಂಗಳವಾರ ರಾಮ ಮಂದಿರದಲ್ಲಿ ರಕ್ತದಾನ ಕಾರ್ಯಕ್ರಮ ನಡೆಸಿದರು. ಈ ಶಿಬಿರದಲ್ಲಿ ಬರೋಬ್ಬರಿ 157 ಯೂನಿಟ್ ರಕ್ತದಾನವಾಗಿದ್ದು 78 ಜನರು ಮೊದಲ ಬಾರಿ ರಕ್ತದಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ, ಉಪಾಧ್ಯಕ್ಷರಾದ ಗಣೇಶ್ ಬಿಳಕಿ ,ಸುಹಾಸ್ ಶಾಸ್ತ್ರಿ, ರಕ್ಷಿತ್ ಮೇಗರವಳ್ಳಿ, ಕಾರ್ಯದರ್ಶಿಗಳಾದ ಮೇಘರಾಜ್ ಹೊಳಲೂರು,…