w
Headlines
Home » ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ : ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ

ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ : ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ

ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ  ಮುನೀರ್ ಸಖಾಫಿ ಮತ್ತು ಮೆಹಬೂಬ್ ಆಲಾಮ್ ರವರ ನೇತೃತ್ವದಲ್ಲಿ  ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.


ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

 ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಸೋಮವಾರ ಚಂದ್ರನ ದರ್ಶನ ಆದ ಹಿನ್ನೆಲೆಯಲ್ಲಿ  ಇಂದು ಸಡಗರ ಹಾಗೂ ಸಂಭ್ರಮದಿಂದ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ಯಾದಿಯಾಗಿ ಭಕ್ತಿಪೂರ್ವಕವಾಗಿ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿ ಪರಸ್ಪರ ಶುಭಕೋರಿ  ರಂಜಾನ್ ಹಬ್ಬವನ್ನು ಆಚರಣೆ ಮಾಡಿದರು.

ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಂತರದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ, ಪೈಗಂಬರ್ ಜೀವನ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಸಾರ್ಥಕವಾಗುವುದು ಎಲ್ಲ ಧರ್ಮದ ಸಾರವುದು ಒಂದೇ ಅಗಿದೆ ಭಾರತ ದೇಶ ವಿವಿಧತೆಯಲ್ಲಿ ಏಕತೆಯ ದೇಶವಾಗಿದೆ ಯಾವುದೇ ಜಾತಿ ಭಾವನೆ ತೋರದೆ ಸರ್ವ ಧರ್ಮದ ಭಾವೈಕ್ಯತೆಯ ದೇಶವಾಗಿದೆ .

ಭಾರತ ದೇಶದಲ್ಲಿ ಹಲವಾರು ಧರ್ಮ ಜಾತಿ ಪಂಗಡಗಳಿವೆ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಇದನ್ನು ಸಂವಿಧಾನದ ಅಡಿಯಲ್ಲಿ ಉಪಯೋಗಿಸಿಕೊಂಡು ಪರಸ್ಪರ ಸಾಮರಸ್ಯವನ್ನು, ಸಹಿಷ್ಣುತೆಯನ್ನು ಅಳವಡಿಸಿಕೊಂಡು ಪ್ರೀತಿ ಗೌರವದೊಂದಿಗೆ ಬಾಳಬೇಕಾಗಿದೆ.ಯಾವುದೇ ಧರ್ಮಗಳನ್ನಾಗಲಿ ಪಂಗಡಗಳನ್ನಾಗಲಿ ಜಾತಿಯವರನ್ನಾಗಲಿ ಹೀಯಾಳಿಸುವ ಅಧಿಕಾರ ಇಸ್ಲಾಂ ಧರ್ಮ ಕೊಡಲಿಲ್ಲ.ಯಾವುದೇ ಧರ್ಮದ ಅಥವಾ ಪಂಗಡದ ಒಬ್ಬ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದರೆ ಇಡೀ ಜನ ಸಮೂಹವನ್ನೇ ಕೊಲೆ ಮಾಡಿದ ಶಿಕ್ಷೆಯನ್ನು ಆತನಿಗೆ ಅಲ್ಲಾಹು ನೀಡುತ್ತಾನೆ ಎಂದು ಬೋಧಿಸುವ ಧರ್ಮವಾಗಿದೆ ಇಸ್ಲಾಂ ಎಂದು ಹೇಳಿದರು.

ಧರ್ಮ ಧರ್ಮಗಳ ನಡುವಿನ ಸಂಘರ್ಷಗಳನ್ನು ಬದಿಗೊತ್ತಿ ಭಾವೆಕ್ಯತೆ, ಸಹೋದರತ್ವ, ಭ್ರಾತೃತ್ವದಿಂದ ಬದುಕೋಣ ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಮತ್ತು ಯುವ ಸಾಹಿತಿ ಹಾಗೂ ಯುವ ಪತ್ರಕರ್ತ ರಫಿ ರಿಪ್ಪನ್‌ಪೇಟೆ ಇವರನ್ನು ಮುಸ್ಲಿಂ ಸಮಾಜದವರು ಸನ್ಮಾನಿಸಿ ಗೌರವಿಸಿದರು.


ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫ಼ಿ,ಕಾರ್ಯದರ್ಶಿಗಳಾದ ಮಹಮ್ಮದ್ ಶಫ಼ಿ ,ಮೆಕ್ಕಾ ಮಸ್ಜಿದ್ ಅಧ್ಯಕ್ಷರಾದ ಮಹಮ್ಮದ್ ಫ಼ಾಜಿಲ್ ,ಕಾರ್ಯದರ್ಶಿ ನದೀಮ್ ಮುಖಂಡರಾದ ಅರ್ ಎ ಚಾಬುಸಾಬ್,ಅಮೀರ್ ಹಂಜಾ ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾಸಾಬ್, ಆರ್ ಎಸ್ ಶಂಶುದ್ದೀನ್, ಭಾಪುಖಾನ್, ರೆಹಮಾನ್ ,ಹಸನಬ್ಬ ಹಾಗೂ ಇನ್ನಿತರರಿದ್ದರು. 

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.