ಹೃದಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ: ಡಾ. ಅಭಿಷೇಕ್
ರಿಪ್ಪನ್‌ಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ | Free health check-up camp held at Ripponpete Primary Health Centre with cardiologist Dr. Abhishek highlighting the importance of heart health, BP and diabetes screening.
ರಿಪ್ಪನ್‌ಪೇಟೆ: ಆರೋಗ್ಯ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ನೆಮ್ಮದಿಯ ಜೀವನಕ್ಕಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಹೃದಯ ತಜ್ಞ ಡಾ. ಅಭಿಷೇಕ ಹೇಳಿದರು.
ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಹೊಸನಗರ ಮಂಡಳದ ಸೇವಾ ಸಂಕಲ್ಪ ಅಭಿಯಾನ–2026, ಕೆರೆಹಳ್ಳಿ ಮಹಾಶಕ್ತಿ ಕೇಂದ್ರ, ರಿಪ್ಪನ್‌ಪೇಟೆ ರೋಟರಿ ಕ್ಲಬ್, ಮಂಡಲ OBC ಮೋರ್ಚಾ ಹಾಗೂ ಸರ್ಜಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೃದಯ ಕಾಯಿಲೆಯ ಬಗ್ಗೆ ಅನಗತ್ಯ ಭಯಪಡುವ ಅಗತ್ಯವಿಲ್ಲ. ನಿಯಮಿತವಾಗಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಅದೇ ರೀತಿ, ರಕ್ತದೊತ್ತಡ (BP) ಮತ್ತು ಮಧುಮೇಹ (ಸಕ್ಕರೆ ಕಾಯಿಲೆ) ಕುರಿತು ಸ್ಥಳೀಯವಾಗಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಈ ಕಾಯಿಲೆಗಳ ಬಗ್ಗೆ ಭಯಪಡುವ ಬದಲು ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಜನರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಮಹತ್ವವಿದೆ. ಹೃದಯದ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಆರೋಗ್ಯ ಶಿಬಿರಗಳು ಅಗತ್ಯವಾಗಿವೆ ಎಂದರು.
ಶಿಬಿರದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಂಜನಪ್ಪ, ಶಿವಮೊಗ್ಗ ಸರ್ಜಿ ಆಸ್ಪತ್ರೆಯ ಡಾ. ಲೇಖಾ, ಬಿಜೆಪಿ OBC ಮೋರ್ಚಾದ ಮುಖಂಡರಾದ ಎಂ. ಸುರೇಶ್ ಸಿಂಗ್, ಪದ್ಮಾ ಸುರೇಶ್, ರೇಖಾ ರವಿರಾವ್, ಗೀತಾ ಕರಿಬಸಪ್ಪ, ಶೈಲಾ ಆರ್. ಪ್ರಭು, ಸುಂದರೇಶ್ ಕೆರೆಹಳ್ಳಿ, ಸುದೀಂದ್ರ ಪೂಜಾರಿ, ಪಿ. ಸುದೀರ್, ಜಿ.ಡಿ. ಮಲ್ಲಿಕಾರ್ಜುನ, ಆರ್. ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಲಕ್ಷ್ಮಣಗೌಡ, ಗಣೇಶ್ ಎನ್. ಕಾಮತ್, ರಮೇಶ್ ಹೆಬ್ಬಾರ್ (ರಾಮು), ದೇವೇಂದ್ರಪ್ಪಗೌಡರು ನವಟೂರು, OBC ಮೋರ್ಚಾ ಅಧ್ಯಕ್ಷ ಬುಕ್ಕಿವರೆ ರಾಜೇಶ್, ಕೆ.ಬಿ. ಹೂವಪ್ಪ, ಮೆಣಸೆ ಆನಂದ, ಮುರುಳಿಧರ ಕೆರೆಹಳ್ಳಿ, ದೇವದಾಸ್ ಆಚಾರ್, ಹೆಚ್.ಎಂ. ವರ್ತೇಶ್‌ಗೌಡರು, ರಾಧಾಕೃಷ್ಣ ಜೆ., ರಾಮಚಂದ್ರರಾವ್, ಮಹೇಶ್ ಮಾಣಿಕೆರೆ, ಬೆಳ್ಳೂರು ತಿಮ್ಮಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸರ್ಜಿ ಆಸ್ಪತ್ರೆಯ ಸಿಬ್ಬಂದಿಗಳಾದ ಆಕಾಶ್ ಎನ್., ಮಂಜುನಾಥ, ಸೌಜನ್ಯ, ಪ್ರಿಯಾಂಕ, ಶ್ವೇತಾ ಹಾಗೂ ಇನ್ನಿತರರು ಶಿಬಿರದ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದರು.
