ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಬೆಳದಿಂಗಳ ಬಾಲೆಯೊಬ್ಬಳು ತನ್ನ ಬೇಡಿಕೆ ಈಡೇರಿಕೆಗಾಗಿ ಸಹಚರರ ಮೂಲಕ ಸೊರಬ ತಾಲೂಕು ಕ್ಯಾಸನೂರು ಗ್ರಾಮ ಉಮಟೆಗದ್ದೆ ನಿವಾಸಿ ವಿದ್ಯಾರ್ಥಿಗೆ ಬ್ಲಾಕ್ ಮೇಲ್ ಮಾಡಿ, ಹಣ ಕಿತ್ತುಕೊಂಡು ವಂಚಿಸಿರುವ ಘಟನೆ ನಿಧಾನವಾಗಿ ಬೆಳಕಿಗೆ ಬಂದಿದೆ.
ಸಾಗರದ ಸಂಜಯ್ ಮೆಮೋರಿಯಲ್ ಡಿಪ್ಲಮೋ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿಯ ವಿವೇಕ್ ಎಂಬ ಯುವಕನಿಗೆ ಇನ್ಸ್ಟಾ ಗ್ರಾಮ್ ನಲ್ಲಿ ಅಣಲೇಕೊಪ್ಪದ ಸೌಜನ್ಯ ಎಂಬ ಯುವತಿ ಹಾಯ್ ಎಂಬ ಮೆಸೇಜ್ ಕಳುಹಿಸುವ ಮೂಲಕ ಪರಿಚಿತಳಾಗುತ್ತಾಳೆ.
ಇಬ್ಬರು ಪರಸ್ಪರ ಮೊಬೈಲ್ ನಲ್ಲಿ ಮಾತಾಡಿಕೊಂಡಿದ್ದ ಸೌಜನ್ಯ ದಿಡೀರನೇ ಒಂದು ಹೊಸ ಮೊಬೈಲ್ ಕೊಡಿಸಲು ಬೇಡಿಕೆ ಇಡುತ್ತಾಳೆ. ಮರುದಿನವೇ ನಾಳೆ ಹುಟ್ಟುಹಬ್ಬವಿದೆ ಸಾಗರಕ್ಕೆ ಬಾ ಎಂದು ವಿವೇಕ್ ನನ್ನ ಕರೆದಿದ್ದಾಳೆ.
ಬೆಳದಿಂಗಳ ಬಾಲೆಯ ಭೇಟಿಗೆ ಬಂದಾಗ ಕಾದಿತ್ತು ಶಾಕ್:
ಪ್ರೇಯಸಿಯನ್ನು ಸಾಗರಕ್ಕೆ ಬಂದ ವಿವೇಕ್ ಅಣಲೇಕೊಪ್ಪದ ಪಾರ್ಕ್ ಬಳಿ ಬರುತ್ತಿದ್ದಂತೆ ಬೋಂಡ ರವಿ ಎಂಬ ವ್ಯಕ್ತಿ ನಾನು ಸೌಜನ್ಯಳ ಸ್ನೇಹಿತ ಆಕೆ ತಡವಾಗಿ ಬರುತ್ತಾಳೆ ಅಲ್ಲಿಯವರೆಗೆ ಪಾರ್ಕ್ ನಲ್ಲಿ ಕೂರೋಣ ಎಂದು ಕರೆದುಕೊಂಡು ಹೋಗಿದ್ದಾನೆ.
ಬೊಂಡಾ ರವಿ ಎಂಬುವವನ ಫೋನ್ ಗೆ ಬೆಳದಿಂಗಳ ಬಾಲೆ ಸೌಜನ್ಯ ಕರೆ ಮಾಡಿದಾಗ ಲೌಡ್ ಸ್ಪೀಕರ್ ಆನ್ ಮಾಡಿದ್ದಾನೆ. ವಿವೇಕ ಮೆಸೇಜ್ ಮಾಡಿರುವುದು ನಮ್ಮ ಮನೆಯಲ್ಲಿ ನಮ್ಮ ತಂದೆಗೆ ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಸೌಜನ್ಯ ತಿಳಿಸಿ ಕಾಲ್ ಕಟ್ ಮಾಡಿದ್ದಾಳೆ. ಸ್ವಲ್ಪ ಸಮಯದ ನಂತರ ಬೊಂಡಾ ರವಿಗೆ ಸೌಜನ್ಯ ತಂದೆ ತರಹ ಯಾರೋ ದ್ವನಿಯಲ್ಲಿ ಮಾತನಾಡಿ ನನ್ನ ಮಗಳಿಗೆ ಯಾರೋ ಮೆಸೇಜ್ ಮಾಡಿದ್ದಾರೆ. ಅವನ್ನು ಪತ್ತೆ ಮಾಡು ಎಂದು ತಿಳಿಸಿದ್ದಾನೆ.
ಇದಾದ 5 ನಿಮಿಷದಲ್ಲಿ ಇಸ್ಮಾಯಿಲ್ ಎಂಬ ವ್ಯಕ್ತಿ ಬಂದು ವಿವೇಕನಿಗೆ ಎರಡು ಹೊಡೆತವನ್ನು ಹೊಡೆದು ನಿನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇನೆಂದು ಬೆದರಿಕೆ ಹಾಕಿದ್ದಾನೆ ನಂತರ ಇಸ್ಮಾಯಿಲ್ ವಿಶ್ವನಾಥ ಎಂಬ ಪೊಲೀಸ್ ನವರಿಗೆ ಪೋನ್ ಮಾಡಿ ವಿವೇಕ್ ಎಂಬ ಹುಡುಗ ಒಂದು ಹುಡುಗಿಗೆ ಪೋನ್ ಮಾಡಿ ಕಿರುಕುಳ ನೀಡುತಿದ್ದಾನೆ ಆತನ ವಿರುದ್ಧ ಕೇಸು ಮಾಡಿ ಎಂದು ಹೇಳಿದ್ದಾನೆ.
ರಾಜಿ ಪಂಚಾಯಿತಿಯ ನಾಟಕ ನಡೆಸಿದ ವಂಚಕರು:
ನಂತರ ಇಸ್ಮಾಯಿಲ್ ಕೇಸು ಮುಚ್ಚಿ ಹಾಕಲು 20 ಸಾವಿರ ಹಣ ಕೊಡು ವಿಶ್ವನಾಥ ಪೊಲೀಸ್ ನವರಿಗೆ ಕೊಡಬೇಕು ಎಂದು ಹೇಳಿ ತಕ್ಷಣ ವಿವೇಕನ ಜೇಬಿನಲಿದ್ದ 3000 ಸಾವಿರ ರೂ ಹಣ ತೆಗೆದುಕೊಂಡು ಉಳಿದ ಹಣವನ್ನ ಇನ್ನು ನಾಲ್ಕೈದು ದಿನ ಬಿಟ್ಟುಕೊಡು ಎಂದು ಹೇಳಿ ಬಿಟ್ಟು ಕಳಿಸಿದ್ದಾನೆ.
ನಂತರ ಹಣಕ್ಕೆ ಇವರಿಬ್ಬ ಖದೀಮರು ಪದೇ ಪದೇ ವಿವೇಕ್ ಗೆ ಕಾಲ್ ಮಾಡಿದ್ದಾರೆ. ಇಬ್ಬರ ಕಾಟಕ್ಕೆ ವಿವೇಕ್ ಇಬ್ಬರ ಮೊಬೈಲ್ ನಂಬರನ್ನ ಬ್ಲಾಕ್ ಲೀಸ್ಟ್ ಗೆ ಹಾಕಿದ್ದಾನೆ.
ಮಾಸೂರಿಗೂ ಹುಡುಕಿಕೊಂಡು ಹೋದ ವಂಚಕರು:
ವಿವೇಕ್ ಪೋನ್ ರಿಸೀವ್ ಮಾಡದ ಹಿನಲೆಯಲ್ಲಿ ಇಸ್ಮಾಯಿಲ್ ಮತ್ತು ಬೋಂಡಾ ರವಿ ಮಾಸೂರಿಗೆ ಹುಡುಕಿಕೊಂಡು ಹೋಗಿ ವಿವೇಕ್ ನ ಭಾವ ಚಿತ್ರ ತೋರಿಸಿ ವಿಚಾರಿಸಿದ್ದಾರೆ. ಇದನ್ನ ಕಂಡ ವಿವೇಕ್ ನ ಸ್ನೇಹಿತ ನಿನನ್ನ ಯಾರೋ ಇಬ್ಬರು ಹುಡುಕುತ್ತಿರುವಾಗಿ ವಿಷಯ ಮುಟ್ಟಿಸುತ್ತಾನೆ.
ಕೂಡಲೇ ವಿವೇಕ್ ಮಧ್ಯವರ್ತಿಗಳ ಮೂಲಕ ಮಾಸೂರಿನ ಅಣ್ಣಪ್ಪ ಎಂಬುವವರ ಅಂಗಡಿಯಲ್ಲಿ 5 ಸಾವಿರ ರೂ. ಹಣವನ್ನು ಈ ಬೋಂಡ ರವಿಗೆ ಮತ್ತು ಇಸ್ಮಾಯಿಲ್ ಗೆ ಕೊಡಿಸುತ್ತಾನೆ.
ಠಾಣೆಗೆ ದೂರು ನೀಡಿದ ಸಂತ್ರಸ್ಥ ಯುವಕನ ತಂದೆ:
ಅಂಗಡಿಯ ಮಾಲೀಕ ಅಣ್ಣಪ್ಪ ವಿವೇಕ್ ನ ತಂದೆ ಕುಬೇರಪ್ಪನಿಗೆ ಈ ವಿಷಯವನ್ನು ಮುಟ್ಟಿಸುತ್ತಾರೆ. ವಿಷಯ ತಿಳಿದಾಕ್ಷಣ ಮೊಬೈಲ್ ಮೂಲಕ ಪರಿಚಯಿಸಿಕೊಂಡು ಮೊಬೈಲ್ ಕೊಡಿಸುವಂತೆ ಪಿಡೀಸಿ ವ್ಯವಸ್ಥಿತ ಜಾಲದಲ್ಲಿ ಬೆದರಿಸಿ ಹಣ ಪಡೆದು ಮೊಬೈಲ್ ಕಿತ್ತುಕೊಂಡ ಸೌಜನ್ಯ, ಬೊಂಡಾರವಿ, ಇಸ್ಮಾಯಿಲ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕುಬೇರಪ್ಪ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಟ್ಟಾರೆಯಾಗಿ ಬೆಳದಿಂಗಳ ಬಾಲೆಯ ಬೆನ್ನತ್ತಿ ಹೋದ ಯುವಕ ಮೊಬೈಲ್ ,ಹಣ ಎಲ್ಲಾ ಕಳೆದುಕೊಂಡಿದ್ದಾನೆ.ನಿಜವಾಗಿಯೂ ಸೌಜನ್ಯ ಎನ್ನುವ ಹುಡುಗಿ ಇದ್ದಾಳೋ ಅಥವಾ ಅದು ಕೂಡಾ ಈ ವಂಚಕರ ಜಾಲವೋ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.