Headlines

ಕಿಮ್ಮನೆ ರತ್ನಾಕರ್ ಗೆ ಕಾಂಗ್ರೆಸ್ ಸಮಾವೇಶದಲ್ಲಿ ಅವಮಾನ…?!!!!! ಜಿಲ್ಲಾ ಕಾಂಗ್ರೆಸ್ ನ ಗುಂಪುಗಾರಿಕೆಗೆ ಕಿಮ್ಮನೆ ಬೆಂಬಲಿಗರ ಆಕ್ರೋಶ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ ಇದೀಗ ರಾಜ್ಯ ನಾಯಕರ ಅಂಗಳಕ್ಕೆ ತಲುಪಿದೆ.ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದ ಅಸಮಾಧಾನ, ಭಿನ್ನಮತ ಇದೀಗ ಜಿಲ್ಲಾ ನಾಯಕತ್ವದಲ್ಲೂ ಹೊರ ಬಿದ್ದಿದೆ.

 ನಡೆದಿದ್ದೇನು??

ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿಯ ಗುಡ್ಡೆಕೊಪ್ಪದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿ ಸಾವಿರಾರು ಕಾರ್ಯಕರ್ತರೊಂದಿಗೆ  ಶಿವಮೊಗ್ಗದ ಸಮಾವೇಶಕ್ಕೆ ಹಾಜರಾಗಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಮಂದಿ ಕಾರ್ಯಕರ್ತರು ಬಂದಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ನಾಯಕರಾದ ಹರಿಪ್ರಸಾದ್, ಕಾಗೋಡು ತಿಮ್ಮಪ್ಪ, ಕಿಮ್ಮನೆ, ಮಂಜುನಾಥ ಗೌಡ, ಸುಂದರೇಶ್ ಇತರರು ಇದ್ದರು.
ವೇದಿಕೆಯಲ್ಲಿ ಇಡಿ ಕಾರ್ಯಕ್ರಮದ ರೂವಾರಿ ಕಿಮ್ಮನೆ ರತ್ನಾಕರ್ ಅವರಿಗೆ ಭಾಷಣಕ್ಕೆ ಅವಕಾಶ ನೀಡದೆ ಎಲ್ಲಾ ನಾಯಕರ ಭಾಷಣ ಮುಗಿದ ಮೇಲೆ ಜನ ಎದ್ದು ಹೋದ ಮೇಲೆ ಅವಕಾಶ ನೀಡಲಾಗಿತ್ತು. ಇದರಿಂದ ಸಿಟ್ಟಾದ ಕಿಮ್ಮನೆ ಸುಮ್ಮನೆ ವಂದನೆ ಹೇಳಿ ಕೆಳಗಿಳಿದರು. ಇದರಿಂದ ಕಿಮ್ಮನೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ಲೆಕ್ಸ್ ಲಿ ಕಿಮ್ಮನೆ ಪೋಟೋ ನಾಪತ್ತೆ:::

ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಹಾಕಿರುವ ಬ್ಯಾನರ್ ಅಲ್ಲಿ ಕೂಡ ಕಿಮ್ಮನೆ ಫೋಟೋ ಇರಲಿಲ್ಲ ಎನ್ನಲಾಗಿದೆ. ಜಿಲ್ಲಾ ಕಾಂಗ್ರೆಸ್ ಗುಂಪುಗಾರಿಕೆಗೆ ಕಿಮ್ಮನೆ ರತ್ನಾಕರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ನೇತೃತ್ವದ ಕಾಂಗ್ರೆಸ್ ಸಭೆಯಲ್ಲಿ ಕಿಮ್ಮನೆ ರತ್ನಾಕರ್ ಗೆ ಅಪಮಾನ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮಾನಿಗಳ ಆಕ್ರೋಶ ಹೊರ ಹಾಕಿದರು.

ಮೇ 6ರಿಂದ ಇಂದಿನವರೆಗೆ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೊಪ್ಪ ಗ್ರಾಮದಿಂದ 65 ಕಿಮೀ ಪಾದಯಾತ್ರೆ ನಡೆಸಿದ್ದ ಕಿಮ್ಮನೆ ರತ್ನಾಕರ್ ಅವರನ್ನು ಅವಮಾನ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕಿಮ್ಮನೆ ಅಭಿಮಾನಿಗಳ ಆಕ್ರೋಶ: 

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಕ್ಕೆ 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದ ಕಿಮ್ಮನೆ ರತ್ನಾಕರ್ ಅವರ ಫೋಟೋ ಇಲ್ಲ.
ಸಭೆಯಲ್ಲಿ ಕಿಮ್ಮನೆ ರತ್ನಾಕರ್  ಭಾಷಣ ಮಾಡಲು ಅವಕಾಶ ನೀಡಿಲ್ಲ. ಪಕ್ಷದ ಕಚೇರಿಯ ಬಳಿ ಕಿಮ್ಮನೆ ರತ್ನಾಕರ್ ಭಾವಚಿತ್ರವಿರುವ ಬ್ಯಾನರ್ ಕೂಡ ಹಾಕಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯ ಎದುರು ಕಿಮ್ಮನೆ ರತ್ನಾಕರ್ ಬೆಂಬಲಿಗರ ಪ್ರತಿಭಟನೆ ನಡೆಸಿದರು. ಈ ವೇಳೆ ಕಿಮ್ಮನೆ ಪರ ಘೋಷಣೆ ಕೂಗಿದ ಅಭಿಮಾನಿಗಳು ಹಾಗೂ ಎರಡು ಗುಂಪು ಗಳ ನಡುವೆ ಪರಸ್ಪರ ವಾಗ್ದಾಳಿ ನಡೆಯಿತು. ಎರಡು ಗುಂಪಿನ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ಕಾಂಗ್ರೆಸ್ ಪಕ್ಷದ ಕಚೇರಿಯ ಬಳಿಯಿಂದ ಹೊರ ಕಳುಹಿಸಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪೋಲಿಸರ ಮದ್ಯ ಪ್ರವೇಶದಿಂದ ತಿಳಿಯಾದ ಪರಿಸ್ಥಿತಿ ತಿಳಿಯಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಕಿಮ್ಮನೆ ಬಣದ ಇಬ್ಬರು ನಾಯಕರ ನಡುವೆ ನಡು ರಾತ್ರಿ ಗಲಾಟೆ, ಹೊಡೆದಾಟ ನಡೆದಿದ್ದು ಸುದ್ದಿಯಲ್ಲಿರುವ ನಡುವೆ ಇದೀಗ ಮತ್ತೊಂದು ಭಿನ್ನಮತ ಸ್ಫೋಟಗೊಂಡಿದೆ. ಆದರೆ ಈ ಎಲ್ಲಾ ಘಟನೆ ಹಿಂದೆ ಯಾರ ಕೈ ಇರಬಹುದು ಎಂಬ ಚರ್ಚೆ ತೀರ್ಥಹಳ್ಳಿಯಲ್ಲಿ ಶುರುವಾಗಿದೆ.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *