w
Headlines
Home » ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

Screenshot 2026 09 13 10 57 39 582 com.openai.chatgpt edit

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

Hosanagara Hindu Mahasabha Committee is all set to celebrate its 8th annual public Ganeshotsava from September 14 to 28, 2026, featuring religious, cultural, sports and social programmes.

ಹೊಸನಗರ : ಪಟ್ಟಣದ ವೀರ ಸಾವರ್ಕರ್ ಮಂಟಪದಲ್ಲಿ ಹೊಸನಗರ ಹಿಂದೂ ಮಹಾಸಭಾ ಸಮಿತಿ ವತಿಯಿಂದ ಆಯೋಜಿಸಿರುವ ಎಂಟನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಸರ್ವ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ.

ಸೆಪ್ಟೆಂಬರ್ 14ರಿಂದ 28ರವರೆಗೆ ಒಟ್ಟು 15 ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವವು ಸೆ.14ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಶೋಭಾಯಾತ್ರೆಯೊಂದಿಗೆ ಆರಂಭವಾಗಲಿದ್ದು, ಸೆ.28ರಂದು ನಡೆಯಲಿರುವ ಬೃಹತ್ ವಿಸರ್ಜನಾ ಶೋಭಾಯಾತ್ರೆ ಹಿಂದೂ ದಿಗ್ವಿಜಯ ಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಸಮಿತಿಯ ಗೌರವ ಸಂಚಾಲಕ ವಿನಾಯಕ ಶ್ರೇಷ್ಠಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಜನೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮ
ಉತ್ಸವದ ಅಂಗವಾಗಿ ಸುಮಾರು 21 ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ. ಇದರೊಂದಿಗೆ ಎರಡು ಭರತನಾಟ್ಯ ಕಾರ್ಯಕ್ರಮಗಳು, ಗಮಕ ಕಾರ್ಯಕ್ರಮ, ಕೆರೋಕೆ ಸಂಗೀತ ಸಂಜೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕಾಗಿ ಹಾಗೂ ಸಂಘಟಿತ-ಸಮರಸ ಹಿಂದೂ ಸಮಾಜದ ನಿರ್ಮಾಣಕ್ಕಾಗಿ ಸಂಕಲ್ಪ ಕೈಗೊಂಡು ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಸೇರಿದಂತೆ ಹಲವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಧಾನ ಸಂಚಾಲಕ ಗಣೇಶ್ ಮಧುಕರ್ ಮಾಹಿತಿ ನೀಡಿದರು.

ಉತ್ಸವದ ಅಂಗವಾಗಿ ಚೆಸ್ ಸ್ಪರ್ಧೆ, ವಿಜ್ಞಾನ ಮೇಳ ಪ್ರದರ್ಶನ ಮತ್ತು ಸ್ಪರ್ಧೆ, ಚರ್ಚಾ ಸ್ಪರ್ಧೆ, ಕರಾಟೆ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಇದಲ್ಲದೆ, ತಾಯಂದಿರು ಹಾಗೂ 10 ವರ್ಷದೊಳಗಿನ ಮಕ್ಕಳಿಗಾಗಿ ‘ಯಶೋಧಾ-ಕೃಷ್ಣ’ ಛದ್ಮವೇಷ ಸ್ಪರ್ಧೆ ಕೂಡ ನಡೆಯಲಿದೆ ಎಂದು ಸಾಂಸ್ಕೃತಿಕ ಪ್ರಭಾರಿ ಮಂಜುನಾಥ್ ಪೂಜಾರಿ ತಿಳಿಸಿದರು.

ಸಮಿತಿಯ ವತಿಯಿಂದ ನಡೆಯಲಿರುವ ಎಲ್ಲಾ ಸ್ಪರ್ಧೆಗಳು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಸಮಾಜದ ಸಜ್ಜನ ಬಂಧುಗಳು, ಮಾತಾ-ಭಗಿನಿಯರು ಹಾಗೂ ಕುಟುಂಬ ಸಮೇತರಾಗಿ ಭಾಗವಹಿಸುವ ಮೂಲಕ ಉತ್ಸವದ ಸಂಭ್ರಮವನ್ನು ಹೆಚ್ಚಿಸಬೇಕೆಂದು ಕಾರ್ಯಸಂಚಾಲಕ ಅನೂಪ ಅರವಿಂದ್ ಸುದ್ದಿಗೋಷ್ಠಿ ಮೂಲಕ ಸಾರ್ವಜನಿಕರಿಗೆ ಆಹ್ವಾನ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪೂರ್ವ ಗೌರವ ಸಂಚಾಲಕರು, ಪ್ರಧಾನ ಸಂಚಾಲಕರು, ಕಾರ್ಯಸಂಚಾಲಕರು, ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.