ಆನಂದಪುರದ ಕೆರೆಯಲ್ಲಿ ಮಹಿಳೆಯ ಶವ ಪತ್ತೆ | ಹೊಸನಗರದಲ್ಲಿ ಹೆಜ್ಜೇನು ದಾಳಿ|CRIME NEWS

ಸಾಗರ :  ತಾಲೂಕಿನ ಆನಂದಪುರದ ಗಾಣಿಗನ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಆನಂದಪುರದ ಜೆಡಿಸರ ಹೋಗುವ ರಸ್ತೆಯ ಕೆರೆಯ ಬಳಿ ಇದೀಗ ಮಹಿಳೆಯ ಶವ ಪತ್ತೆಯಾಗಿದೆ.ಮೃತ ಮಹಿಳೆ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿದ್ದು ಕಳೆದ ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದರು. ಇದೀಗ ಗಾಣಿಗನ ಕೆರೆಯಲ್ಲಿ ಶವ ಪತ್ತೆಯಾಗಿದ್ದು ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೇನು ದಾಳಿ – ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ…

Read More

Ripponpete | ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

Ripponpete | ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ – ಆರೋಪಿಯ ಬಂಧನ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹರತಾಳು ಗ್ರಾಮದ ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.  ಹರತಾಳು ಗ್ರಾಮದ ರಾಘವೇಂದ್ರ ಬಂಧಿತ ಆರೋಪಿಯಾಗಿದ್ದಾನೆ. ಘಟನೆಯ ಹಿನ್ನಲೆ : ಹರತಾಳು ಗ್ರಾಮದ ಮಹಿಳೆಯೊಬ್ಬರು ಪ್ರತಿ ನಿತ್ಯ ಕೂಲಿ ಕೆಲಸಕ್ಕೆ ಹೋಗುವಾಗ ಅವರ ಪಕ್ಕದ ಮನೆಯ ರಾಘವೇಂದ್ರ ಎಂಬಾತ ಕಾಡಿನ ಹತ್ತಿರ ಬಂದು ನೀನು ನನಗೆ ಇಷ್ಟ…

Read More

Ripponpete | ತಮ್ಮಡಿಕೊಪ್ಪ ನಾಗಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಸಂಪನ್ನ – ಶಾಸಕ ಆರಗ ಜ್ಞಾನೇಂದ್ರ ಭಾಗಿ

Ripponpete | ತಮ್ಮಡಿಕೊಪ್ಪ ನಾಗಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಸಂಪನ್ನ – ಶಾಸಕ ಆರಗ ಜ್ಞಾನೇಂದ್ರ ಭಾಗಿ ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪದ ಶ್ರೀ ಗುರು ಕರಿಬಸವೇಶ್ವರ, ಬಾಲಸುಬ್ರಹ್ಮಣ್ಯ ನಾಗದೇವತೆ ಮತ್ತು ನಾಗ ಕ್ಷೇತ್ರದಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಅಶ್ಲೇಷ ಬಲಿ ಕಾರ್ಯಕ್ರಮ ಸಂಪನ್ನಗೊಂಡಿತ್ತು. ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನಾಗದೇವರ ಪ್ರತಿಷ್ಟಾಪನೆ , ಉದ್ಯಾಪನ ಹೋಮ , ಕಲಾ ಹೋಮ ,ಹಾಗೂ ಲೋಕ ಕಲ್ಯಾಣಾರ್ಥವಾಗಿ ಅಶ್ಲೇಷ ಬಲಿ ಕಾರ್ಯಕ್ರಮ…

Read More

ರಿಪ್ಪನ್‌ಪೇಟೆ : ನಿವೃತ ಎ ಎಸ್ ಐ ಮನೆಗೆ ಹಗಲು ಹೊತ್ತಿನಲ್ಲಿಯೇ ನುಗ್ಗಿ ಕಳ್ಳತನ – ಹತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ|Theft

ರಿಪ್ಪನ್‌ಪೇಟೆ : ಇಲ್ಲಿ‌ನ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಾಗಿರುವ ನಿವೃತ್ತ ಎಎಸ್ ಐ ರೊಬ್ಬರ ಮನೆಗೆ ಹಗಲು ಹೊತ್ತಿನಲ್ಲಿಯೇ ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ. ದಿನದಿಂದ ದಿನಕ್ಕೆ ಕಳ್ಳರು ಸ್ಮಾರ್ಟ್​ ಆಗುತ್ತಿದ್ದಾರೆ, ಮತ್ತಷ್ಟು ಚುರುಕಾಗುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ.. ಅವರವರದ್ದೇ ಆದ ದಾರಿಗಳನ್ನು ಕಂಡುಕೊಂಡು, ತಾವು ಐನಾತಿ ಕಳ್ಳರೇ ಸರಿ ಎಂಬವುದನ್ನು ಸಾಬೀತುಪಡಿಸುತ್ತಿದ್ದಾರೆ. ತಂತ್ರಜ್ಞಾನದ ಸಮ್ಮುಖದಲ್ಲಿ ರಾತ್ರಿಗಳು ಮೊದಲಿನಂತಿಲ್ಲ… ಹಾಗಂತ ಹಗಲು ಎಚ್ಚೆತ್ತುಕೊಳ್ಳುವುದಕ್ಕೆ ಅವಕಾಶವಿದೆಯಾ ಎಂದು ನೋಡಿದರೆ…

Read More

ಸೊರಬ ಪುರಸಭೆ ಅಧಿಕಾರ ಬಿಜೆಪಿ ತೆಕ್ಕೆಗೆ : ಅಧ್ಯಕ್ಷರಾಗಿ ಈರೇಶ್ ಮೇಸ್ತ್ರಿ ಆಯ್ಕೆ

ಸೊರಬ: ಭಾರಿ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ವೀರೇಶ್ ಮೇಸ್ತ್ರಿ ಅಧ್ಯಕ್ಷರಾಗಿ ಆಯ್ಕೆಯಾದರು. ಶುಕ್ರವಾರ ನಡೆದ ಅಧ್ಯಕ್ಷರ ಚುನಾವಣೆಗೆ ಬಿಜೆಪಿಯಿಂದ ವೀರೇಶ್ ಮೇಸ್ತ್ರಿ, ಕಾಂಗ್ರೆಸ್‌ನಿಂದ ಸುಲ್ತಾನಾ ಬೇಗಂ ನಾಮಪತ್ರ ಸಲ್ಲಿಸಿದ್ದರು. ವೀರೇಶ್ ಮೇಸ್ತ್ರಿ 8 ಮತಗಳನ್ನು ಹಾಗೂ ಕಾಂಗ್ರೆಸ್‌ನ ಸುಲ್ತಾನಾ ಬೇಗಂ 4 ಮತಗಳನ್ನು ಪಡೆದರು. ಅಧ್ಯಕ್ಷರಾಗಿದ್ದ ಎಂ.ಡಿ. ಉಮೇಶ್ ವಿರುದ್ಧ ಸ್ವ‍ಪಕ್ಷದ ಸದಸ್ಯರೇ ಸೆ.27ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದರಿಂದ ಚುನಾವಣೆ ನಡೆಯಿತು.  ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ…

Read More

ಕಾರ್ಗಲ್ ಗ್ರಾಮದಲ್ಲಿ ಕಲುಷಿತ ನೀರು,ಆಹಾರ ಸೇವನೆಯಿಂದ ಸುಮಾರು 80 ಕ್ಕೂ ಹೆಚ್ಚು ಜನ ಅಸ್ವಸ್ಥ : ಶಾಸಕ ಹರತಾಳು ಹಾಲಪ್ಪ ಭೇಟಿ

ಸಾಗರ : ತಾಲೂಕಿನ ಕಾರ್ಗಲ್ ಮತ್ತು ಜೋಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಸುಮಾರು 80 ಜನ ಅಸ್ವಸ್ಥರಾಗಿ ಸಾಗರ ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರ್ಗಲ್ ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಮಾಡಿದವರಲ್ಲಿ ವಾಂತಿ ಭೇದಿ, ಜ್ವರ ಕಾಣಿಸಿಕೊಂಡಿದೆ. ಜೋಗದಲ್ಲಿ ಮೆಸ್ ಮತ್ತು ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಈ ರೀತಿಯ ರೋಗ ಲಕ್ಷಣ ಕಂಡುಬಂದಿದೆ. ನ.11 ರಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಈ ರೀತಿ ವಾಂತಿ ಭೇದಿ ಮತ್ತು ಜ್ವರದ…

Read More

ಗೃಹ ಸಚಿವ ಆರಗ ಜ್ಞಾನೇಂದ್ರ ಕಾರು ವಶಕ್ಕೆ ಪಡೆದ ಚುನಾವಣಾ ಆಯೋಗ|election

ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಾರನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಅರಳಸುರಳಿಯಲ್ಲಿ ಕಾರ್ಯಕರ್ತನ ಆರೋಗ್ಯ ವಿಚಾರಿಸಲು ಆರಗದಿಂದ ಹೊರಟಿದ್ದ ಗೃಹಸಚಿವರು ಕಾರ್ಯಕರ್ತನ ಆರೋಗ್ಯ ವಿಚಾರಿಸಿ ತೂದೂರು ಕಾರ್ಯಕ್ರಮಕ್ಕೆ ತೆರಳಬೇಕಿತ್ತು. ತೂದೂರಿನ ಕಾಕನಗದ್ದೆ ಕೋದಂಡ ಸ್ವಾಮಿ ದೇವಸ್ಥಾನಕ್ಕೆ ಬರುವ ವೇಳೆ ಚುನಾವಣೆ ನೀತಿ ಜಾರಿಯಾಗಿತ್ತು. ದೇವಸ್ಥಾನದ ಬಳಿ ಗೃಹಸಚಿವರು ಸರ್ಕಾರಿ ಕಾರನ್ನ ಬಿಟ್ಟು ತಮ್ಮ ಖಾಸಗಿ ಕಾರಿನಲ್ಲಿ ತೆರಳಿದ್ದರು. ಚುನಾವಣೆನೀತಿ ಜಾರಿ ಹಿನ್ಬಲೆಯಲ್ಲಿ ಎಂಪಿ, ಶಾಸಕರ ಸರ್ಕಾರಿ ಕಾರುಗಳು ಹಾಗೂ ಕಚೇರಿಗಳು ಸಹ…

Read More

ರಿಪ್ಪನ್ ಪೇಟೆ ಸಮೀಪದಲ್ಲಿ ಹಣವಿದ್ದ ಕಪ್ಪು ಬಣ್ಣದ ಬ್ಯಾಗ್ ಕಳೆದುಹೋಗಿದೆ : ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ವಿನಾಯಕ ವೃತ್ತದಲ್ಲಿ ಗುರುವಾರ ರಾತ್ರಿ ಸುಮಾರು 9.15 ರ ಅಸುಪಾಸಿನ ಸಮಯದಲ್ಲಿ ತೀರ್ಥಹಳ್ಳಿ ರಸ್ತೆಯಿಂದ ಹೊಸನಗರ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ ಮಿನಿ‌ ಟ್ರ್ಯಾಕ್ಟರ್ ನಲ್ಲಿ ಇದ್ದ ಕಪ್ಪು ಬಣ್ಣದ ಬ್ಯಾಗ್ ಕೆಳಗೆ ಬಿದ್ದು ಹೋಗಿದ್ದು ಅದರಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಇಟ್ಟಿದ್ದ 1ಲಕ್ಷದ 40 ಸಾವಿರ ರೂ ಹಣ ಹಾಗೂ ಕೆಲವೊಂದು ಉಪಯುಕ್ತ ದಾಖಲಾತಿಗಳಿದ್ದೂ  ಯಾರಿಗಾದರೂ ಸಿಕ್ಕಿದ್ದಲ್ಲಿ ಹಿಂತಿರುಗಿಸಬೇಕೆಂದು ಮಾಲೀಕರಾದ ಶ್ರೀಧರ್ ಅಲಸೆ ಇವರು ರಿಪ್ಪನ್ ಪೇಟೆ ಸುತ್ತಮುತ್ತಲಿನ…

Read More

IPL Auction ನೆನಪಿಸುವಂತೆ ನಡೆದ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ….!!!!!!!

ಹೆದ್ದಾರಿಪುರ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಕೆಟ್‌ ಪ್ರೀಮಿಯರ್ ಆಯೋಜನೆ ಗರಿಗೆದರತೊಡಗಿವೆ.  ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರದಲ್ಲಿ ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್(HPL) ಕ್ರಿಕೆಟ್ ಟೂರ್ನಿ ಆಯೋಜನೆಗೆ ಈಗ ಭರ್ಜರಿ ಚಾಲನೆ ಸಿಕ್ಕಿದ್ದು, ಭಾನುವಾರ ವೃತ್ತಿಪರ ಶೈಲಿಯಲ್ಲಿ ಐಪಿಎಲ್ ಹರಾಜು ನೆನಪಿಸುವಂತೆ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ನಡೆದಿದೆ. ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು,…

Read More

ತೀರ್ಥಹಳ್ಳಿ:ಆಸ್ತಿ ವಿಚಾರಕ್ಕೆ ಗಲಾಟೆ – ರಸ್ತೆ ಮಧ್ಯೆದಲ್ಲೇ ಸೀಮೆಎಣ್ಣೆ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆ

ತೀರ್ಥಹಳ್ಳಿ :  ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು   ಬೈಕ್ ನಲ್ಲಿ ಸಾಗುವಾಗ ಮಾರ್ಗ ಮಧ್ಯೆಯೇ ಬೈಕ್ ನಿಲ್ಲಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಅಕ್ಲಾಪುರದ ನಿವಾಸಿ ರಾಘವೇಂದ್ರ (40)  ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಅಕ್ಲಾಪುರದ ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಬೈಕ್ ನಿಲ್ಲಿಸಿ ರಾಘವೇಂದ್ರ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಆಸ್ತಿ ವಿಚಾರಕ್ಕೆಗಲಾಟೆಯಾಗಿದ್ದು ಇದೆ  ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ತೀರ್ಥಹಳ್ಳಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More