w
Headlines
Home » ಗೃಹ ಸಚಿವ ಆರಗ ಜ್ಞಾನೇಂದ್ರ ಕಾರು ವಶಕ್ಕೆ ಪಡೆದ ಚುನಾವಣಾ ಆಯೋಗ|election

ಗೃಹ ಸಚಿವ ಆರಗ ಜ್ಞಾನೇಂದ್ರ ಕಾರು ವಶಕ್ಕೆ ಪಡೆದ ಚುನಾವಣಾ ಆಯೋಗ|election

ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಾರನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.




ಅರಳಸುರಳಿಯಲ್ಲಿ ಕಾರ್ಯಕರ್ತನ ಆರೋಗ್ಯ ವಿಚಾರಿಸಲು ಆರಗದಿಂದ ಹೊರಟಿದ್ದ ಗೃಹಸಚಿವರು ಕಾರ್ಯಕರ್ತನ ಆರೋಗ್ಯ ವಿಚಾರಿಸಿ ತೂದೂರು ಕಾರ್ಯಕ್ರಮಕ್ಕೆ ತೆರಳಬೇಕಿತ್ತು.

ತೂದೂರಿನ ಕಾಕನಗದ್ದೆ ಕೋದಂಡ ಸ್ವಾಮಿ ದೇವಸ್ಥಾನಕ್ಕೆ ಬರುವ ವೇಳೆ ಚುನಾವಣೆ ನೀತಿ ಜಾರಿಯಾಗಿತ್ತು. ದೇವಸ್ಥಾನದ ಬಳಿ ಗೃಹಸಚಿವರು ಸರ್ಕಾರಿ ಕಾರನ್ನ ಬಿಟ್ಟು ತಮ್ಮ ಖಾಸಗಿ ಕಾರಿನಲ್ಲಿ ತೆರಳಿದ್ದರು.




ಚುನಾವಣೆನೀತಿ ಜಾರಿ ಹಿನ್ಬಲೆಯಲ್ಲಿ ಎಂಪಿ, ಶಾಸಕರ ಸರ್ಕಾರಿ ಕಾರುಗಳು ಹಾಗೂ ಕಚೇರಿಗಳು ಸಹ ಚುನಾವಣೆ ಆಯೋಗ 24 ಗಂಟೆಯಲ್ಲಿ ವಶಕ್ಕೆ ಪಡೆಯಲಿದೆ.ಮುಂದಿನ 42 ದಿನಗಳ ವರೆಗೆ ಇವೆಲ್ಲವೂ ಆಯೋಗದ ವಶದಲ್ಲಿರುತ್ತದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.