ಸಾಗರ : ತಾಲೂಕಿನ ಆನಂದಪುರದ ಗಾಣಿಗನ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಆನಂದಪುರದ ಜೆಡಿಸರ ಹೋಗುವ ರಸ್ತೆಯ ಕೆರೆಯ ಬಳಿ ಇದೀಗ ಮಹಿಳೆಯ ಶವ ಪತ್ತೆಯಾಗಿದೆ.ಮೃತ ಮಹಿಳೆ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿದ್ದು ಕಳೆದ ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದರು.
ಇದೀಗ ಗಾಣಿಗನ ಕೆರೆಯಲ್ಲಿ ಶವ ಪತ್ತೆಯಾಗಿದ್ದು ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹೆಜ್ಜೇನು ದಾಳಿ – ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು
ಹೊಸನಗರ : ಹೆಜ್ಜೇನು ದಾಳಿಯಿಂದ ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದ ಗಾಯಾಳು ಪ್ರಾಣಾಪಾಯದಿಂದ ಪಾರಾದ ಘಟನೆ ವರದಿಯಾಗಿದೆ.
ತಾಲೂಕಿನ ಮಾರುತಿಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 3 ರ ಸಮಯದಲ್ಲಿ ಹೊಸಕೆಸರೆ ಗ್ರಾಮದ ಮೂರ್ತಿ ಪೂಜಾರ್ ಎಂಬುವವರು ತಮ್ಮ ಸ್ವಂತ ಊರಾದ ಹುಲಿಕಲ್ ನಿಂದ ಮಾರುತಿಪುರ ಸಮೀಪದ ಹೊಸಕೆಸರೆಯಲ್ಲಿರುವ ತನ್ನ ಹೆಂಡತಿಯ ತವರು ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ. ಸುಮಾರು 200-300 ಜೇನುಹುಳುಗಳ ಏಕಾಏಕಿ ಆಕ್ರಮಣದಿಂದ ದಿಗ್ಬ್ರಮೆಗೊಂಡ ಅವರು ಕೂಗಾಡಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ಅಲ್ಲೇ ಇದ್ದ ಮಹಮ್ಮದ್ ಗೌಸ್ ಎಂಬುವವರು ತಮ್ಮ ಜೀವದ ಹಂಗನ್ನು ತೊರೆದು ಅವರಿಗೆ ಕಂಬಳಿ ಹೊದಿಸಿ ಆಸ್ಪತ್ರೆಗೆ ತಲುಪಿಸಿದ್ದಾರೆ.
ಮಾರುತಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಕ್ಷಿಸಲು ಮುಂದಾದ ಮಹಮ್ಮದ್ ಗೌಸ್ ರವರಿಗೂ ಜೇನುನೊಣಗಳು ಆಕ್ರಮಣ ಮಾಡಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.
ಸಕಾಲದಲ್ಲಿ ಜೀವದ ಹಂಗನ್ನು ತೊರೆದು ಸಹಾಯ ಮಾಡಿದ ಮಹಮ್ಮದ್ ಗೌಸ್ ರವರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.