ರಿಪ್ಪನ್ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ
ರಿಪ್ಪನ್ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ ರಿಪ್ಪನ್ಪೇಟೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭಕ್ಕೆ ಹಲವು ಗಣ್ಯರು ಹಾಜರಿದ್ದರೂ, ಪ್ರಮುಖವಾಗಿ ಇಬ್ಬರು ಅತಿಥಿಗಳು ಮಾತ್ರ ಮಾತನಾಡಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಉಪನ್ಯಾಸಕರಾದ ಡಾ ಗಣೇಶ್ ಆಚಾರ್ ವಿಶ್ವಕರ್ಮ ಜಯಂತಿ ಶ್ರಮಜೀವಿಗಳ ಹಬ್ಬವಾಗಿದ್ದು, ಸಮಾಜದ ನೈತಿಕ ಶಕ್ತಿ ಹಾಗೂ ಅಭಿವೃದ್ಧಿಯ ಪ್ರತೀಕವಾಗಿದೆ ಎಂದು ಹೇಳಿದರು. “ಬಡಗಿ, ಕಮ್ಮಾರರು, ಕಾರ್ಮಿಕರು ತಮ್ಮ ಪರಿಶ್ರಮದಿಂದಲೇ ಸಮಾಜಕ್ಕೆ ಆಧಾರವಾಗಿದ್ದಾರೆ. ಅವರ ಶ್ರಮವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ”…