w
Headlines

ಅರಳಸುರುಳಿ ಸಜೀವ ದಹನ ಪ್ರಕರಣ – ಚಿಕಿತ್ಸೆ ಫಲಿಸದೇ ಭರತ್ ಆಸ್ಪತ್ರೆಯಲ್ಲಿ ಸಾವು|aralasurali

ಅರಳಸುರುಳಿಯಲ್ಲಿ ಮೂವರು ಸಜೀವ ದಹನ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಕೂಡ ಸಾವು ತೀರ್ಥಹಳ್ಳಿ : ಭಾನುವಾರ ಬೆಳ್ಳಂಬೆಳಗ್ಗೆ ಮನೆಯೊಂದರಲ್ಲಿ ಮೂರು ಮಂದಿ ಸಜೀವ ದಹನವಾಗಿದ್ದ ಘಟನೆ ತಾಲೂಕಿನ ಅರಳಸುರುಳಿಯಲ್ಲಿ ನೆಡೆದಿತ್ತು.  ಮನೆಯ ಒಳಗಿನ ಕೋಣೆಯೊಳಗೆ ರಾಘವೇಂದ್ರ ಕೆಕೋಡ್ (65),  ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ದಹನವಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಪುತ್ರ ಭರತ್ (28) ಕೂಡ ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ….

Read Full News

ರಿಪ್ಪನ್‌ಪೇಟೆ : ಚಲಿಸುತಿದ್ದ ಖಾಸಗಿ ಬಸ್ ನಿಂದ ಮಗುವಿನೊಂದಿಗೆ ಕೆಳಗೆ ಬಿದ್ದ ವ್ಯಕ್ತಿ – ಮೆಗ್ಗಾನ್ ಗೆ ರವಾನೆ|accident

ರಿಪ್ಪನ್‌ಪೇಟೆ : ಚಲಿಸುತಿದ್ದ ಖಾಸಗಿ ಬಸ್ ನಿಂದ ಮಗುವಿನೊಂದಿಗೆ ಕೆಳಗೆ ಬಿದ್ದ ವ್ಯಕ್ತಿ – ಮೆಗ್ಗಾನ್ ಗೆ ರವಾನೆ ರಿಪ್ಪನ್‌ಪೇಟೆ :  ಚಲಿಸುತ್ತಿದ್ದ ಬಸ್‌ನಿಂದ ಮಗುವಿನೊಂದಿಗೆ ಕೆಳಗೆ ಬಿದ್ದ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೋಡೂರು ಸಮೀಪದ ಶಾಂತಪುರದಲ್ಲಿ ಈ ಘಟನೆ ನಡೆದಿದೆ. ಬಸ್‌ನಲ್ಲಿ ಅಧಿಕ ಜನರಿದ್ದು ತಿರುವಿನಲ್ಲಿ ಚಾಲಕ ಅತಿವೇಗದಲ್ಲಿ ಬಸ್ ಚಲಾಯಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೊಸನಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ ಗುರುಶಕ್ತಿ ಬಸ್‌ ಗೆ ಕೀಳಂಬಿ ನಿಲ್ದಾಣದಲ್ಲಿ ಮಗುವಿನೊಂದಿಗೆ…

Read Full News

ಅಮ್ಮನಘಟ್ಟ ಜಾತ್ರಾ ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಹರಿದು ಬಂದ ಜನಸಾಗರ|ammanaghatta

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಾಣ ಪ್ರಸಿದ್ದ ಏಕಶೀಲೆಯ ಹೆಬ್ಬಂಡೆಯಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಾ ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಪರಿಹರಿಸುವ ಶ್ರೀ ಜೇನುಕಲ್ಲಮ್ಮ ದೇವಿಯ ದರ್ಶನಕ್ಕೆ ಇಂದು 3ನೇ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ. ಬೆಳಗ್ಗೆ 06 ಗಂಟೆಯಿಂದಲೇ ದೇವಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದು 08 ಗಂಟೆ ಹೊತ್ತಿಗೆ ಒಂದು ಕಿ.ಮೀ. ಗೂ ಅಧಿಕ ದೂರದಿಂದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು. ಕಿರಿದಾದ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ…

Read Full News

ಸಾಗರದ ಗಣಪತಿ ಕೆರೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ|accident

ಸಾಗರದ ಗಣಪತಿ ಕೆರೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಗಣಪತಿ ಕೆರೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿರುವ ಘಟನೆ ನಡೆದಿದೆ.  ನಿನ್ನೆ ರಾತ್ರಿ ಸಾಗರ ಪೇಟೆಯ ಗಣಪತಿ ಕೆರೆಯ ಬಳಿಯಲ್ಲಿ  ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಕೋ ಕಾರೊಂದು ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಗಣಪತಿ ಕೆರೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನೂ ಕಾರಿನಲ್ಲಿದ್ದವರಿಗೆ ಆದ ಗಾಯಗಳ ಬಗ್ಗೆ…

Read Full News

ಮೊಬೈಲ್ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಒಂಬತ್ತು ಮಂದಿ ವಶಕ್ಕೆ|crime-news

ಮೊಬೈಲ್ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಒಂಬತ್ತು ಮಂದಿ ವಶಕ್ಕೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಸಮನೆ ಪ್ರದೇಶದಲ್ಲಿ  ನಿನ್ನೆ ಯುವಕನೊಬ್ಬನಿಗೆ ಮಾರಕಾಸ್ತ್ರದಿಂದ ಇರಿಯಲಾಗಿದೆ. ಘಟನೆಯ ಸಂಬಂಧ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಘಟನೆಯ ಹಿನ್ನಲೆ : ಭದ್ರಾವತಿಯ ಹೊಸಮನೆಯ ಹನುಮಂತನಗರದಲ್ಲಿ ಗಾರೆ ಕೆಲಸ ಮಾಡುವ ಯುವಕ ನಂದಾ ಎಂಬಾತ ತನ್ನ ಮೊಬೈಲ್​ವೊಂದನ್ನ ಅಡವಿಟ್ಟಿದನಂತೆ. ಅದನ್ನು ಬಿಡಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ,ಅಡವಿಟ್ಟುಕೊಂಡಿದ್ದವರು ಮೊಬೈಲ್ ಕೊಡಲು ನಿರಾಕರಿಸಿದ್ದಾರೆ. ಈ ಸಂಬಂಧ…

Read Full News

ನಿಂತಿದ್ದ KSRTC ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ – ಮೂವರಿಗೆ ಗಾಯ|accident

ನಿಂತಿದ್ದ KSRTC ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ – ಮೂವರಿಗೆ ಗಾಯ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಗಾಂಧಿನಗರ ಸರ್ಕಲ್​ನಲ್ಲಿ ನಿಂತಿದ್ದ KSRTC ಬಸ್​ಗೆ ಬೈಕ್​ ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಪಟ್ಟಣದ ಗಾಂಧಿನಗರ ಸರ್ಕಲ್​ ನಲ್ಲಿ ನಿಂತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ವೇಗದಿಂದ ಬಂದ ಬೈಕ್​ವೊಂದು ಹಿಂಬದಿಯಿಂದ ಡಿಕ್ಕಿಯಾಗಿ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹಿಂಬದಿಯಿಂದ ಗುದ್ದಿದ ರಭಸಕ್ಕೆ ಬೈಕ್​ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆ ಬೆನ್ನಲ್ಲೆ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್…

Read Full News

ಹೆದ್ದಾರಿಯಲ್ಲಿ ಮೂರು ಬೈಕ್ ಗಳ ನಡುವೆ ಡಿಕ್ಕಿ – ಮೂವರಿಗೆ ಗಂಭೀರ ಗಾಯ|accident

ಶಿವಮೊಗ್ಗದ ಆಯನೂರು ಸಮೀಪ ಮೂರು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರಿಗೆ ಗಾಯಗಳಾಗಿವೆ.  ಇವತ್ತು ಬೆಳಗ್ಗೆ ವೀರಣ್ಣನ ಬೆನವಳ್ಳಿ ಸಮೀಪ ಈ ಘಟನೆ ಸಂಭವಿಸಿದೆ. ಆಯನೂರು ಕಡೆಯಿಂದ ಶಿವಮೊಗ್ಗ ಕಡೆ ಬೈಕ್​ವೊಂದು ಬರುತ್ತಿತ್ತು. ಅದೇ ಸಂದರ್ಭದಲ್ಲಿ ಶಿವಮೊಗ್ಗದ ಕಡೆಯಿಂದ ಎರಡು ಬೈಕ್​ಗಳು ಆಯನೂರು ಕಡೆಗೆ ಹೋಗುತ್ತಿತ್ತು. ಈ ಮಧ್ಯೆ ಒಂದು ಬೈಕ್​ ಸವಾರ ಟರ್ನ್​ ತೆಗೆದುಕೊಂಡಿದ್ದಾನೆ ಎನ್ನಲಾಗಿದ್ದು, ಹಿಂದಿನಿಂದ ಬರುತ್ತಿದ್ದ ಬೈಕ್​ ಮುಂದಿನ ಬೈಕ್​ಗೆ ಡಿಕ್ಕಿ ಹೊಡೆದಿದೆ.  ಇದೇ ವೇಳೆ ಆಯನೂರು…

Read Full News

ರಿಪ್ಪನ್‌ಪೇಟೆ – ಡೆಂಗ್ಯೂ ಜ್ವರಕ್ಕೆ ನವವಿವಾಹಿತೆ ಬಲಿ|dengue

ರಿಪ್ಪನ್‌ಪೇಟೆ : ಡೆಂಗ್ಯೂ ಜ್ವರದಿಂದ ನವ ವಿವಾಹಿತೆಯೊಬ್ಬರು ಮೃತಪಟ್ಟಿರುವ ಘಟನೆ ಶಬರೀಶನಗರದಲ್ಲಿ ನಡೆದಿದೆ. ಮಧುರ (31) ಮೃತಪಟ್ಟ ಮಹಿಳೆ,ಕಳೆದ ಆರು ತಿಂಗಳ ಹಿಂದೆ ಶಬರೀಶನಗರದ ಮಂಜುನಾಥ್ ಎಂಬುವವರೊಂದಿಗೆ ವಿವಾಹವಾಗಿತ್ತು. ಕಳೆದೊಂದು ವಾರದಿಂದ ಡೆಂಗ್ಯೂ ಜ್ವರದ ಹಿನ್ನಲೆಯಲ್ಲಿ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ನಿನ್ನೆ ಬೆಳಿಗ್ಗೆ ಡಿಸ್ಚಾರ್ಜ್ ಆಗಿ ತಾಯಿ ಮನೆಯಾದ ತಾಳಗುಪ್ಪಕ್ಕೆ ತೆರಳಿದ್ದಾರೆ ರಾತ್ರಿ ಸಮಯದಲ್ಲಿ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಾಗರ ಆಸ್ಪತ್ರೆಗೆ ಕರೆತರಲಾಗಿತ್ತು ಆದರೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಂತೆ…

Read Full News

ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿಯಲ್ಲಿ ಬೆಂಕಿ ಅವಘಡ – ಮೂವರ ಸಜೀವ ದಹನ,ಓರ್ವ ಗಂಭೀರ|fire accident

ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿಯಲ್ಲಿ ಬೆಂಕಿ ಅವಘಡ – ಮೂವರ ಸಜೀವ ದಹನ,ಓರ್ವ ಗಂಭೀರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಸಮೀಪದ ಕೆಕೋಡ್ ಎಂಬಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನವಾದ ಮನಕಲಕುವ ಘಟನೆಯೊಂದು ಇಂದು ಬೆಳ್ಳಂಬೆಳಿಗ್ಗೆ ನಡೆದಿದೆ.ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಒಳಗಿನ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಈ ಬೆಂಕಿ ದುರಂತದಲ್ಲಿ ಕುಟುಂಬದ ಹಿರಿಯರಾದ ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55),…

Read Full News

ಗಾಂಜಾ ಮಾರಾಟ: ಇಬ್ಬರಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ|court news

ಗಾಂಜಾ ಮಾರಾಟ: ಇಬ್ಬರಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ಶಿವಮೊಗ್ಗ : ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರಿಗೆ ಇಲ್ಲಿನ  ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷ ಕಠಿಣ ಶಿಕ್ಷೆ, ₹10 ಸಾವಿರ ದಂಡ ವಿಧಿಸಿದೆ. ಶಿವಮೊಗ್ಗದ ಬಾಪೂಜಿ ನಗರದ ನಿವಾಸಿ ರಾಹಿಲ್ ಖಾನ್ (22) ಹಾಗೂ ವಿನೋಬ ನಗರದ ನಿವಾಸಿ ರೋಹನ್ (19) ಶಿಕ್ಷೆಗೊಳಗಾದವರು. ಇಬ್ಬರೂ 2020ರ ಸೆಪ್ಟೆಂಬರ್ 5ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಗ್ರಾಮದಲ್ಲಿ ಮಾದಕ ವಸ್ತು ಗಾಂಜಾ…

Read Full News

ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಗೆ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಆಯ್ಕೆ|hosanagara

ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಗೆ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಆಯ್ಕೆ ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಕೊಡಮಾಡುವ ವಿಶೇಷ ಪ್ರಶಸ್ತಿಗೆ ಹೊಸನಗರ ತಾಲೂಕಿನ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಭಾಜನರಾಗಿದ್ದಾರೆ. ಚುಟುಕು, ಹನಿಗವನ ರಚನೆ ಮೂಲಕ ವಿದ್ಯಾರ್ಥಿ ದಿಸೆಯಲ್ಲೇ ಸಾಹಿತ್ಯ ಆಸಕ್ತಿ ಹೊಂದಿದ್ದ ನಾರವಿ ಕನ್ನಡ ಜನಾಂತರಂಗದ ಮೂಲಕ ಪತ್ರಿಕಾ ವರದಿಗಾರರಾಗಿ ಕೆಲಸ ಆರಂಭಿಸಿದರು. ಬಳಿಕ ವಿಜಯಕರ್ನಾಟಕ, ವಿಜಯವಾಣಿಯ ಬಳಿಕ ಪ್ರಸ್ತುತ ಪ್ರಜಾವಾಣಿಯ ಹೊಸನಗರ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸನಗರ…

Read Full News

ಶಾಸಕ ಬೇಳೂರು ಬಹಿರಂಗ ಕ್ಷಮೆಯಾಚನೆಗೆ ತಾಲೂಕ್ ವೀರಶೈವ ಲಿಂಗಾಯಿತ ಮಹಾಸಭಾ ಆಗ್ರಹ|rpet

ರಿಪ್ಪನ್‌ಪೇಟೆ : ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ನಮ್ಮ ಸಮಾಜದ ಹಿರಿಯರಾದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮತ್ತು ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರವರ ಬಗ್ಗೆ ಹಗುರವಾಗಿ ಮಾತಾನಾಡಿರುವುದನ್ನ ಹೊಸನಗರ ತಾಲ್ಲೂಕು ಅಖಿಲಭಾರತ ವೀರಶೈವ ಮಹಾಸಭಾ ಘಟಕ ಖಂಡಿಸುತ್ತದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.  ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹೇಳಿಕೆಯಲ್ಲಿ ತಿಳಿಸಿದ ಬಿ.ಎಸ್.ಯಡಿಯೂರಪ್ಪನವರು ನಾಲ್ಕು ಬಾರಿ ಈ ರಾಜ್ಯದ…

Read Full News

ಉದ್ಯಮಶೀಲತೆಯಿಂದ ಮಹಿಳೆಯರು ಸಾವಲಂಬನೆಯ ಬದುಕನ್ನು ಕಂಡುಕೊಳ್ಳಬಹುದು :ಸಿ.ಎಲ್.ರಮೇಶ್|rpet

ಉದ್ಯಮಶೀಲತೆಯಿಂದ ಮಹಿಳೆಯರು ಸಾವಲಂಬನೆಯ ಬದುಕನ್ನು ಕಂಡುಕೊಳ್ಳಬಹುದು :ಸಿ.ಎಲ್.ರಮೇಶ್ ರಿಪ್ಪನ್ ಪೇಟೆ : ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಉದ್ಯಮಶೀಲತೆ ಅವಶ್ಯಕ, ಉದ್ಯಮ ಶೀಲತೆಯಿಂದ ಮಹಿಳೆಯರು ಸಾವಲಂಬನೆಯ  ಬದುಕನ್ನು ಕಂಡುಕೊಳ್ಳಬಹುದು.ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಬಗ್ಗೆ ಪ್ರತಿಯೊಬ್ಬ ಮಹಿಳೆ ಅರಿವನ್ನು ಹೊಂದಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ರಮೇಶ್ ಸಿ.ಎಲ್. ಹೇಳಿದರು.  ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಗೂ ಮಲೆನಾಡು ಗ್ರಾಮೀಣ  ಅಭಿವೃದ್ಧಿ ಪ್ರತಿಷ್ಠಾನ ಬೆಳಂದೂರು ಇವರ ಸಂಯುಕ್ತ…

Read Full News

ಕೆಂಚನಾಲ : ಮಾರುತಿ ಓಮಿನಿ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಣಿಕೆಗೆ ಯತ್ನ – ಎರಡು ಪ್ರತ್ಯೇಕ ಪ್ರಕರಣ ದಾಖಲು|rpet

ಮಾರುತಿ ಓಮಿನಿ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಣಿಕೆಗೆ ಯತ್ನ ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಜಾನುವಾರುಗಳನ್ನು ಓಮಿನಿ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾದ ಘಟನೆ ನಡೆದಿದೆ. ನಡೆದಿದ್ದೇನು..?? ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಅನುಮಾನದಿಂದ ಗ್ರಾಮಸ್ಥರು ವಾಹನವನ್ನು ತಡೆದು ತಪಾಸಣೆಗೆ ಮುಂದಾಗುತ್ತಿದ್ದಂತೆ ಕಾರಿನ ಚಾಲಕ ಮಹಮ್ಮದ್ ತಪ್ಪಿಸಿಕೊಂಡು ಪರಾರಿಯಾಗಿದ್ದು ಇನ್ನೋರ್ವ ಆರೋಪಿ ಅಸ್ಲಾಂ ಬೇಗ್ ಸಿಕ್ಕಿಬಿದ್ದಿದ್ದಾನೆ ಈ ಸಂಧರ್ಭದಲ್ಲಿ ಓಮಿನಿ ಕಾರಿನಲ್ಲಿ ಕೈಕಾಲು ಕಟ್ಟಿ ಎರಡು ಜಾನುವಾರುಗಳನ್ನು…

Read Full News

ರಿಪ್ಪನ್‌ಪೇಟೆ : ಚರ್ಚ್ ಬಳಿಯ ತಿರುವಿನಲ್ಲಿ ಟಿಂಬರ್ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ|accident

ರಿಪ್ಪನ್‌ಪೇಟೆ : ಚರ್ಚ್ ಬಳಿಯ ತಿರುವಿನಲ್ಲಿ ಟಿಂಬರ್ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಜ್ಯೋತಿ‌ ಮಾಂಗಲ್ಯ ಮಂದಿರದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಂಬರ್ ಲಾರಿಯೊಂದು ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಟಿಂಬರ್ ಹೊತ್ತು ಸಾಗುತ್ತಿದ್ದ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಲಾರಿಯಲ್ಲಿದ್ದ ಮರದ ತುಂಡುಗಳೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ….

Read Full News

ಪರವಾನಗಿ ಇಲ್ಲದೆ ಹಸುಗಳ ರವಾನೆ. ದೂರು ದಾಖಲು|Sagara news

ಪರವಾನಗಿ ಇಲ್ಲದೆ ಹಸುಗಳ ರವಾನೆ. ದೂರು ದಾಖಲು ಸಾಗರ : ತಾಲೂಕಿನ ಹೆಗ್ಗೋಡು ಗ್ರಾಮದ ವಿಠ್ಠಲ್ ಪೈ ಅವರಿಗೆ ಸೇರಿದ ನಾಲ್ಕು ಹಸುಗಳನ್ನು ಮೂರಳ್ಳಿಯ ಶಿವರಾಜ್ ಮತ್ತು ನಾಗರಾಜ್ ಎಂಬುವವರು ಲಗೇಜ್ ಆಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ತೆಗೆದುಕೊಂಡು ಬರುತ್ತಿದ್ದಾಗ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮುಂಡಿಗೇಸರ ವೃತ್ತದಲ್ಲಿ ತಡೆದು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ. ಶಿವರಾಜ್ ಮತ್ತು ನಾಗರಾಜ್ ಹಸುಗಳನ್ನು ಖರೀದಿಸಿ ಲಗೇಜ್ ಆಟೋದಲ್ಲಿ ಒಯ್ಯುತ್ತಿದ್ದರು. ಆದರೆ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಹಿಂದೂ ಜಾಗರಣಾ ವೇದಿಕೆ…

Read Full News

ರಿಪ್ಪನ್‌ಪೇಟೆ – ಜಂಬಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿ|accident

ರಿಪ್ಪನ್‌ಪೇಟೆ – ಜಂಬಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಜಂಬಳ್ಳಿ ತಿರುವಿನಲ್ಲಿ ಇನ್ನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.  ಹುಂಚ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಟೊಯೋಟಾ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಲ್ಲಿ ನಾಲ್ವರು ಪ್ರಯಾಣಿಸುತಿದ್ದರು. ಜಂಬಳ್ಳಿ ತಿರುವಿನಲ್ಲಿ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಮನ್ (21) ಕುಮಾರ್ (21) ಇಬ್ಬರಿಗೆ…

Read Full News

ಗುಂಡು ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಲುವಳ್ಳಿ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ|rpet news

ಗುಂಡು ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಲುವಳ್ಳಿ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸುರಕ್ಷಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಪ್ರದೇಶವಾದ ಆಲುವಳ್ಳಿ ಸರ್ಕಾರಿ…

Read Full News

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ – ನಾಲ್ವರಿಗೆ 20 ವರ್ಷ ಜೀವಾವಧಿ ಶಿಕ್ಷೆ

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ – ನಾಲ್ವರಿಗೆ 20 ವರ್ಷ ಜೀವಾವಧಿ ಶಿಕ್ಷೆ ಶಿವಮೊಗ್ಗ – ಡಿಸೆಂಬರ್ 6 2020 ರಂದು ನಡೆದಿದ್ದ ಬಾಲಕಿ ಮೇಲಿನ ಗ್ಯಾಂಗ್​ ರೇಪ್ ಪ್ರಕರಣ ಸಂಬಂಧ ಶಿವಮೊಗ್ಗ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಿದೆ.  ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ಆರೈಕೆ ಮಾಡುತ್ತಿದ್ದ ಬಾಲಕಿಯೊಬ್ಬಳನನ್ನು ಪುಸಲಾಯಿಸಿ ಒಮಿನಿ ವಾಹನದಲ್ಲಿ ಕರೆದೊಯ್ದು ಅತ್ಯಾಚಾರವೆಸಗಲಾಗಿತ್ತು. ಶಿವಮೊಗ್ಗದಲ್ಲಿ ಕೋಮು ವಿಚಾರಕ್ಕೆ ಸೆಕ್ಷನ್​…

Read Full News

ಸಾಗರದ ಗಣಪತಿ ಕೆರೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆ|Sagara news

ಸಾಗರದ ಗಣಪತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆ ಸಾಗರ : ಅಪರಿಚಿತ ವ್ಯಕ್ತಿಯ ಶವವೊಂದು ಸಾಗರದ ಗಣಪತಿ ಕೆರೆಯಲ್ಲಿ ಪತ್ತೆಯಾಗಿದೆ. ಅಪರಿಚಿತ ಯುವಕನ ಶವ ಕೆರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದು ಮೃತ ವ್ಯಕ್ತಿಗೆ ಅಂದಾಜು 25 ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು ಶವವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಯಾವುದೆ ಸುಳಿವು ದೊರಕಿಲ್ಲ ಯಾರಿಗಾದರೂ ಮೃತ ವ್ಯಕ್ತಿಯ ಸುಳಿವು ದೊರೆತರೆ ಕೂಡಲೆ ಸಮೀಪದ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು…

Read Full News

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮನೆ ಮೇಲೆ ಈಡಿ ದಾಳಿ ರಾಜಕೀಯ ಪ್ರೇರಿತ|ED

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ರಿಪ್ಪನ್‌ಪೇಟೆ : ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ ಅವರ ಮನೆ ಮೇಲೆ ನಡೆದ ಈಡಿ ದಾಳಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತವಾಗಿದ್ದು, ರಾಜಕೀಯವಾಗಿ ಅವರನ್ನು ಎದುರಿಸಲು ಸಾಧ್ಯವಾಗದೆ ಇಂತಹ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಎಂ ಪರಮೇಶ್ ಜಂಟಿ ಪತ್ರೀಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ….

Read Full News

ರಿಪ್ಪನ್ ಪೇಟೆ : ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ಕಬ್ಬಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ|kabbadi

ರಿಪ್ಪನ್ ಪೇಟೆ : ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ  ಆಯ್ಕೆ  ರಿಪ್ಪನ್‌ಪೇಟೆ : ಪಟ್ಟಣದ ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬ್ಬಡ್ಡಿ  ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ  ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ  ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ   ಮೂಲಕ  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಗ್ರಾಮೀಣ ಪ್ರದೇಶವಾದ ರಿಪ್ಪನ್ ಪೇಟೆ ಪಟ್ಟಣದ ವಿದ್ಯಾರ್ಥಿಗಳ…

Read Full News

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಮಂಜುನಾಥ್ ಗೌಡ ಮನೆ ಮೇಲೆ ಇಡಿ (ED) ದಾಳಿ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಮಂಜುನಾಥ್ ಗೌಡ ಮನೆ ಮೇಲೆ ಇಡಿ (ED) ದಾಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಶಿವಮೊಗ್ಗ ಹಾಗೂ ತೀರ್ಥಹಳ್ಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಶರಾವತಿ ನಗರ ಮತ್ತು ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ಆರ್‌.ಎಂ. ಮಂಜುನಾಥಗೌಡ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆ ಸುತ್ತಮುತ್ತ ಶಸ್ತ್ರಾಸ್ತ್ರ ಪೊಲೀಸರು…

Read Full News

ಹೊಸನಗರ – ಎಂ ಗುಡ್ಡೆಕೊಪ್ಪದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ|theft

ಹೊಸನಗರ – ಎಂ ಗುಡ್ಡೆಕೊಪ್ಪದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಹೊಸನಗರ: ಹೊಸನಗರ ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮದ ಮುರುಳಿದರಭಟ್‌ರವರ ತೋಟದ ಮನೆ ರಾತ್ರಿ ಮುಂಭಾಗದ ಬಾಗಿಲಿನ ಬೀಗ ಮುರಿದು ಗೋಡ್ರೇಜ್ ಬಾಗಿಲು ಮುರಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ರಾತ್ರಿ ಮುರುಳಿಧರ್ ಭಟ್‌ರವರು ಹೊಸನಗರದ ಮನೆಗೆ ರಾತ್ರಿ 7ಗಂಟೆಯ ನಂತರ ಬಂದಿದ್ದಾರೆ ಬರುವ ಸಂದರ್ಭದಲ್ಲಿ ಮನೆಯ ಮುಂಬಾಗಿನ ಬಾಗಿಲಿಗೆ ಬೀಗ ಹಾಗೂ ಗೋಡ್ರೇಜ್ ಬೀಗ ಹಾಕಿಕೊಂಡು ಬಂದಿದ್ದು ಅವರ ಕೆಲಸದವರು ಬುಧವಾರ ಬೆಳಿಗ್ಗೆ ಕೆಲಸಕ್ಕೆ…

Read Full News

ಹೊಸನಗರ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ಇಲಾಖೆಯ ನೌಕರರಿಂದ ಧರಣಿ|protest

ಹೊಸನಗರ ಅಂಚೆ ಕಛೇರಿಯ ಮುಂಭಾಗ ಅಂಚೆ ಇಲಾಖೆಯ ಕೆಲವು ನೌಕರರು ತಮ್ಮ ಬೇಡಿಕೆಗಾಗಿ ಧರಣಿ ಹೊಸನಗರ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆ 169ವರ್ಷ ಸಂಭ್ರಮದಲ್ಲಿದ್ದು ಆದರೆ ನಮ್ಮ ಕೆಲವು ಬೇಡಿಕೆ ಈಡೇರಿಸಲಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಎ.ಐ.ಜಿ.ಓ.ಎಸ್.ಯು ಅಧ್ಯಕ್ಷ ಹೆಚ್.ಜಿ. ವೆಂಕಟೇಶ್‌ರವರ ನೇತೃತ್ವದಲ್ಲಿ ಹೊಸನಗರದ ಅಂಚೆ ಕಚೇರಿಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು. ಈ ಧರಣಿಯಲ್ಲಿ ಮಾತನಾಡಿದ ವೇಂಕಟೇಶ್‌ರವರು ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮುನಿದು 2016ನೇ ವರ್ಷದಲ್ಲಿ ಕಮಲೇಶ್ ಚಂದ್ರ ಕಮಿಟಿ ಆಯೋಗ ನೇಮಕ…

Read Full News

ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ದೋಬೈಲ್ ಶಾಲೆಯ ವಿದ್ಯಾರ್ಥಿನಿ ಜೀವಿತಾ|running – state – selection

ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ದೋಬೈಲ್ ಶಾಲೆಯ ವಿದ್ಯಾರ್ಥಿನಿ ಜೀವಿತಾ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ದೋಬೈಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ| ಜೀವಿತಾ ಓಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ 400 ಮೀ ಓಟದಲ್ಲಿ ಪ್ರಥಮ ಹಾಗೂ 600 ಮೀಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಜೀವಿತಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ…

Read Full News

ಚಲಿಸುತಿದ್ದ ಬೈಕ್‌ ಮೇಲೆ ಮರ ಬಿದ್ದು ಓರ್ವ ಸಾವು ಇನ್ನಿಬ್ಬರು ಗಂಭೀರ|crime news

ಚಲಿಸುತಿದ್ದ ಬೈಕ್‌ ಮೇಲೆ ಮರ ಬಿದ್ದು ಓರ್ವ ಸಾವು ಇನ್ನಿಬ್ಬರು ಗಂಭೀರ ಶಿವಮೊಗ್ಗ : ಯಲವಟ್ಟಿ ಗ್ರಾಮದಲ್ಲಿ ಮರವೊಂದನ್ನು ಕಟಾವು ಮಾಡುವ ವೇಳೆ ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದ ಕಾರಣ ಬೈಕ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು ಓರ್ವ ಸಾವು ಕಂಡಿದ್ದಾರೆ. ಯಲವಟ್ಟಿಯ ಖಾಸಗಿ ತೋಟದಲ್ಲಿದ್ದ ಮರ ಕಡಿಯುವ ವೇಳೆ ಮುಂಜಾಗೃತ ಕ್ರಮ ಕೈಗೊಳ್ಳದ ಪರಿಣಾಮ ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದಿದೆ. ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೂವರಲ್ಲಿ…

Read Full News

ಮನೆ ಮುಂದೆ ಆಟವಾಡುತಿದ್ದ ಬಾಲಕನ ಮೇಲೆ ಎರಗಿದ ಬೀದಿನಾಯಿಗಳು – KSRTC ಬಸ್ ನಲ್ಲಿ ಯುವಕನ ಪುಂಡಾಟಿಕೆ

ಮನೆ ಮುಂದೆ ಆಟವಾಡುತಿದ್ದ ಬಾಲಕನ ಮೇಲೆ ಎರಗಿದ ಬೀದಿನಾಯಿಗಳು ಸಾಗರ : ಇಲ್ಲಿನ ನಗರ ಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಇಲ್ಲದಂತಾಗಿದೆ ಎಂದು ಜನರು ದೂರುತ್ತಿದ್ದಾರೆ. ಈ ನಡುವೆ ಬೀದಿನಾಯಿಗಳು ದಾಳಿ ನಡೆಸಿ ಬಾಲಕನೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬಾಲಕನೊಬ್ಬ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆಯಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದು, ಆತನನ್ನ ಅಟ್ಟಾಡಿಸಿ ಆತನ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ.  ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಪಡೆದುಕೊಂಡು ಭಯಬೀತನಾಗಿ …

Read Full News

ಶಿವಮೊಗ್ಗದಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ,ಅದೆಲ್ಲಾ ಸುಳ್ಳು ಸುದ್ದಿ: ಎಸ್ಪಿ ಸ್ಪಷ್ಟನೆ|smg riots

ಶಿವಮೊಗ್ಗದಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ,ಅದೆಲ್ಲಾ ಸುಳ್ಳು ಸುದ್ದಿ: ಎಸ್ಪಿ ಸ್ಪಷ್ಟನೆ ಶಿವಮೊಗ್ಗ: ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಸುಳ್ಳು‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ‘ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಪೊಲೀಸರಿಂದ ಎನ್‌ಕೌಂಟರ್‌ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ…

Read Full News

ರಿಪ್ಪನ್‌ಪೇಟೆ : ಉತ್ತಮ ಶಿಕ್ಷಕಿಯರಿಗೆ ಗ್ರಾಪಂ ವತಿಯಿಂದ ಸನ್ಮಾನ|honour

ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಪಂ ಸಭಾಂಗಣದಲ್ಲಿ ತಾಲೂಕ್ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಇಬ್ಬರು ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಂಚನಾಲ ಗ್ರಾಮ ಪಂಚಾಯತ್ ನಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕ್ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗ್ರಾಪಂ ವ್ಯಾಪ್ತಿಯ ಚಂದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಾಜುನ್ ಬಿ ಹಾಗೂ ಕೆಂಚನಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭಾಗ್ಯಲಕ್ಷ್ಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.