ಆಸ್ತಿ ವಿಚಾರಕ್ಕೆ ಕಲಹ – ಪೆಟ್ರೋಲ್ ಸುರಿದು,ಬೆಂಕಿ ಹಚ್ಚಿ ಚಿಕ್ಕಪ್ಪನ ಕೊಲೆಗೈದ ದುರುಳರು
ಶಿವಮೊಗ್ಗ : ಬೆಳಲಕಟ್ಟೆ ಗ್ರಾಮದಿಂದ ಮಗಳ ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಪೆಟ್ರೋಲ್ ಎರಚಿ ಜೀವಂತವಾಗಿ ಸುಟ್ಟಿರುವ ಘಟನೆ ನಡೆದಿದೆ.
ಬೆಳಲಕಟ್ಟೆ ಗ್ರಾಮದ ಮಹೇಶಪ್ಪ (60) ಕೊಲೆಯಾದ ವ್ಯಕ್ತಿ. ಬಿಕ್ಕೋನಹಳ್ಳಿಯ ಮಗಳ ಮನೆಯಿಂದ ಬರುತ್ತಿದ್ದ ವೇಳೆ ಅಡ್ಡಗಟ್ಟಿ ಪೆಟ್ರೋಲ್ ಎರಚಿ ಕೊಲೆ ಮಾಡಲಾಗಿದೆ.
ಬೆಳಲಕಟ್ಟೆಯ ಕಾರ್ತಿಕ್ ಮತ್ತು ಕುಮಾರ್ ಎಂಬುವರಿಂದ ಈ ಕೃತ್ಯ ನೆಡೆದಿದೆ. ಮಹೇಶಪ್ಪನವರಿಗೆ ಬೆಳಲಕಟ್ಟೆಯಲ್ಲಿ ಮೂರು ಎಕರೆ ಜಮೀನು ಇದ್ದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕುಮಾರ್, ಕಾರ್ತಿಕ್ ಹಾಗೂ ಮಹೇಶಪ್ಪನವರಿಗೆ ಜಮೀನಿನ ವಿಚಾರದಲ್ಲಿ ಮನಸ್ಥಾಪವಿತ್ತು. ಈ ಮನಸ್ಥಾಪವೇ ಮಹೇಶಪ್ಪನವರನ್ನ ಜೀವಂತ ಸುಡಲು ಕಾರಣವೆಂದು ಕುಟುಂಬ ಆರೋಪಿಸಿದೆ.
ಕುಮಾರ್, ಕಾರ್ತಿಕ್ ಮತ್ತು ಇತರರ ಹೆಸರನ್ನ ಸುಟ್ಟ ಸ್ಥಿತಿಯಲ್ಲಿ ಮಹೇಶಪ್ಪ ಹೇಳಿರುವುದನ್ನ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಇದನ್ನ ಡೆತ್ ನೋಟ್ ಎಂದು ಪರಿಗಣಿಸಲಾಗುತ್ತದೆಯೇ ಎಂದು ಕಾದುನೋಡಬೇಕಿದೆ.
ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಮಹೇಶಪ್ಪ ಅವರನ್ನು ಸಾಗಿಸಲಾಯಿತಾದರೂ ಮೆಗ್ಗಾನ್ ನಲ್ಲಿ ಮಹೇಶಪ್ಪ ಕೊನೆ ಉಸಿರೆಳೆದಿದ್ದಾರೆ.