w
Headlines

ಸಿಗಂದೂರು ದೇವಸ್ಥಾನಕೆ ಬಂದಿದ್ದ ಭಕ್ತಾಧಿಗಳ ಜೀಪ್ ಕಂದಕಕ್ಕೆ ಉರುಳಿ ಓರ್ವ ಮಹಿಳೆ ಸಾವು : ಉಳಿದ ಪ್ರಯಾಣಿಕರ ಸ್ಥಿತಿ ಗಂಭೀರ

ಸಾಗರ ತಾಲೂಕಿನ ತುಮರಿ ಬಳಿಯ ವಕ್ಕೋಡಿ ತಿರುವಿನಲ್ಲಿ ಕಂದಕಕ್ಕೆ ಟೆಂಪೋ ಟ್ರ್ಯಾಕ್ಸ್ ಉರುಳಿ ಬಿದ್ದು ಓರ್ವ ಮಹಿಳೆ ಮೃತ ಪಟ್ಟಿರುವ ಘಟನೆ ನಡೆದಿದೆ. ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ  ಕುಷ್ಟಗಿಯ ಭಕ್ತಾದಿಗಳು ಇದ್ದ ಜೀಪ್ ಕಂದಕಕ್ಕೆ ಬಿದ್ದು ಗೌರಮ್ಮ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ತುಮರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸಾಗರ ಆಸ್ಪತ್ರೆಗೆ ಕಳುಹಿಸಲಾಗಿದೆ.  ಇವತ್ತು ದ್ವೀಪದಲ್ಲಿ ಎರಡು ಅಫಘಾತವಾದ ಕಾರಣ 108 ಮೊದಲ ಅಫಘಾತಕ್ಕೆ ಸೇವೆ ನೀಡಲು ಕುಂದಾಪುರ ಹೋದ ಕಾರಣ ಲಭ್ಯವಾಗಲಿಲ್ಲ. ಜಂಟಿ 108…

Read Full News

ಎರಡು ಬೈಕ್ ಗಳ ನಡುವೆ ಡಿಕ್ಕಿ : ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

ಸಾಗರ ತಾಲೂಕಿನ ಸುರುಗುಪ್ಪೆ ಕೆರೆ ಏರಿ ಮೇಲೆ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ . ಸೊರಬ ತಾಲೂಕಿನ ಬಂದಿಗೆ ನಿವಾಸಿಗಳಾದ ನಾಗಪ್ಪ (42)ಹಾಗೂ ಅವರ ಪುತ್ರ ಲೋಹಿತ್(16) ಸಣ್ಣ ಮನೆ ಗ್ರಾಮದೇವತೆಯ ಜಾತ್ರೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಯಲಕುಂದ್ಲಿ  ನಿವಾಸಿ ಕಿರಣ್(20) ಮನೆಗೆ ಹೋಗುವ ಸಂದರ್ಭದಲ್ಲಿ ಇಬ್ಬರ ದ್ವಿಚಕ್ರವಾಹನ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಗಪ್ಪ (42) ಸ್ಥಳದಲ್ಲೇ ಮೃತಪಟ್ಟಿದ್ದು ಲೋಹಿತ್(16) ಹಾಗೂ ಕಿರಣ್(20) ರವರ ಸ್ಥಿತಿ…

Read Full News

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ : ಲಾರಿ ಕ್ಲೀನರ್ ಸ್ಥಳದಲ್ಲೇ ಸಾವು…!!!

ಆನಂದಪುರ ಸಮೀಪದ ಹೊಸಗುಂದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಭೀಕರ ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದ ಬಳಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಲಾರಿ (KA 05 AA 5068 ) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಗುದ್ದಿದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.ಮೃತರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಅಪಘಾತದಲ್ಲಿ ಲಾರಿ ಡ್ರೈವರ್ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ….

Read Full News

ಕಾಡು ಹಂದಿ ಭೇಟೆ : ಮಾಂಸ ಸಹಿತ ಐವರ ಬಂಧನ

ಕಾಡುಹಂದಿ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೆಡದಾಳು ಗ್ರಾಮದಲ್ಲಿ ನಡೆದಿದೆ. ಹೆಡದಾಳು ಗ್ರಾಮದ ಮಧುಕುಮಾರ್, ಈರೇಶ ಜಯಪ್ಪ, ಕೃಷ್ಣ, ವಿಜಯ ಕುಮಾರ್ ಬಂಧಿತ ಆರೋಪಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮೀಪುರ ಸಮೀಪದ ಲಕ್ಯಾ ಕ್ರಾಸ್ ಬಳಿ ಆಲ್ಟೋ ಕಾರನ್ನು ತಡೆದು ಶೋಧಿಸಿದಾಗ ಕಾಡು ಹಂದಿ ಮಾಂಸ ಪತ್ತೆಯಾಗಿದ್ದು, ಬಂಧಿತರಿಂದ 23 ಕೆಜಿ ಮಾಂಸ, ಬಂದೂಕು, ಸಜೀವ ಗುಂಡುಗಳು, ಕತ್ತಿ ಇತರೆ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

Read Full News

ರಿಪ್ಪನ್ ಪೇಟೆ ಸಮೀಪ ಕ್ಯಾಂಟರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಯುವಕ ಸಾವು

ರಿಪ್ಪನ್‌ಪೇಟೆ :ಇಲ್ಲಿನ ಸಮೀಪದ ಮೂಗುಡ್ತಿ ಗ್ರಾಮದ ಕಣಬಂದೂರು ತಿರುವಿನಲ್ಲಿ ನಡೆದ ಕ್ಯಾಂಟರ್ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಹೆದ್ದಾರಿಪುರದ ಪುನೀತ್ (25) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ರಿಪ್ಪನ್‌ಪೇಟೆಯ ದೇವಿ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುನೀತ್  ರಾತ್ರಿ 9.30 ರ ವೇಳೆಗೆ ಹೆದ್ದಾರಿಪುರದ ಮನೆಗೆ ಹೋಗುವಾಗ ಮೂಗುಡ್ತಿಯ ಕಣಬಂದೂರು ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು ಸ್ಥಳದಲ್ಲೇ ಬೈಕ್ ಸವಾರ ಪುನೀತ್ ತಲೆ ಮೇಲೆ  ಕ್ಯಾಂಟರ್ ಲಾರಿ ಹರಿದ ಪರಿಣಾಮ ಮೃತಪಟ್ಟಿದ್ದಾನೆ….

Read Full News

ಕರ್ತವ್ಯ ವೇಳೆ ಕುಸಿದು ಬಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ ಸಾವು : ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

ಶಿವಮೊಗ್ಗ : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ ಟಿ.ಕೆ. ಗಾನವಿ (22) ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಗಾನವಿ ಅವರು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಗ್ಯಾಸ್ಟೊ್ರೕ ಎಂಟರಾಲಜಿ ಸೈನ್ಸಸ್‌ ಆ್ಯಂಡ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಗೆ ಕರೆತರಲಾಯಿತು. ಈ ವೇಳೆ ವೈದ್ಯರು ಮಿದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು. ಇದರಿಂದ ಪೋಷಕರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ…

Read Full News

ಊಟ ಮಾಡುತಿದ್ದ ಮಗನಿಗೆ ಚೂರಿ ಇರಿದ ತಂದೆ : ಹೊಸನಗರದಲ್ಲೊಂದು ವಿಚಿತ್ರ ಘಟನೆ

ಹೊಸನಗರ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಹೆಸರಾಂತ ಖಾಸಗಿ ಹೋಟೆಲ್‌ನಲ್ಲಿ ಇಂದು ಮಧ್ಯಾಹ್ನ ಊಟ ಮಾಡುತಿದ್ದ ಮಗನಿಗೆ ಸ್ವತಃ ತಂದೆಯೇ ಏಕಾಏಕಿ ಬಂದು ಚೂರಿ‌ ಇರಿದಿರುವ ಘಟನೆ ನಡೆದಿದೆ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗಾದಲ್ಲಿ ವಾಸ್ತವ್ಯ ಹೊಂದಿರುವ ಗೊರಗೋಡಿನ ಜಿ.ಆರ್ ತೀರ್ಥೇಶ್ ರವರು ಊಟ ಮಾಡುವ ವೇಳೆ ಏಕಾಏಕಿ ಹೋಟೆಲ್‌ಗೆ ಬಂದ ಅವರ ತಂದೆ ಸಂಕ್ಲಾಪುರ ರಾಜಪ್ಪ ಗೌಡ ಎಂಬುವವರು ಊಟ ಮಾಡುತ್ತಿದ್ದ ತೀರ್ಥೇಶ್ ಎಂಬುವವರಿಗೆ ಚಾಕುವಿನಿಂದ ಇರಿದಿದ್ದು ತೀರ್ಥೇಶ್ ರವರ ಬೆನ್ನು ಕೈ ಹಾಗೂ ಕಿಬ್ಬೊಟ್ಟೆಗೆ…

Read Full News

ಚಿನ್ಮನೆ ಬಳಿ ಭೀಕರ ಅಪಘಾತ : ಒಬ್ಬ ಸಾವು,ಇಬ್ಬರ ಸ್ಥಿತಿ ಗಂಭೀರ

ಚಿನ್ನಮನೆ ಗ್ರಾಮದ ಬಳಿ ಬೊಲೆರೊ ಪಿಕಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.ಅಪಘಾತವಾಗಿ ನಿಲ್ಲಿಸಿದ್ದ ಬೊಲೆರೊ ಪಿಕಪ್ ಗೆ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಆಯನೂರು ಕಡೆಯಿಂದ ಬರುತ್ತಿದ್ದ ಬೊಲೆರೊ ಪಿಕಪ್ ವಾಹನಕ್ಕೆ ಸೂಡೂರು ಕಡೆಯಿಂದ ಆಯನೂರು ಕಡೆ ಬರುತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಚಿಕ್ಕಮಚಲಿ ಗ್ರಾಮದ ನಿವಾಸಿ ಶ್ಯಾಮು (40) ಎಂಬುವವನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ನಂತರ ಹಿಂಬದಿಯಿಂದ ಬಂದು…

Read Full News

ಹನಿಟ್ರ್ಯಾಪ್ : ನಗ್ನ ವೀಡಿಯೋ ಮಾಡಿ ಹಣಕ್ಕಾಗಿ ಬೆದರಿಸುತ್ತಿದ್ದ ಶಿವಮೊಗ್ಗ ಮೂಲದ ಮಹಿಳೆ ಸೇರಿ ಇಬ್ಬರು ಬಂಧನ

ಹನಿ ಟ್ರಾಪ್‌ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಮೂವರನ್ನು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ.  ಯುವಕನೊಬ್ಬನ ನಗ್ನ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಎಂದು ಯುವಕನಿಗೆ ಹೆದರಿಸಿದ್ದಾರೆ. ಶಿರಸಿ ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗದ ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. ಬಂಧಿತ ಆರೋಪಿಗಳು. ಆರೋಪಿ ಅಜಿತ್ ಜತೆ…

Read Full News

ವಿವಾಹಿತ ಮಹಿಳೆ ನಾಪತ್ತೆ : ಸುಳಿವು ಪತ್ತೆಗೆ ಮನವಿ

2021 ರ ಏಪ್ರಿಲ್ 13 ರಂದು ಅನುಷಾ ಕೋಂ ಆನಂದ, 26 ವರ್ಷ, ಗೃಹಿಣಿ ಈಕೆ ನಗರದ ಹೊಸಮನೆ 06 ನೇ ಕ್ರಾಸ್‍ನಲ್ಲಿರುವ ತನ್ನ ನಿವಾಸದಿಂದ ಕಾಣೆಯಾಗಿರುತ್ತಾರೆ.       ಅಂದು ರಾತ್ರಿ 8 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಹೋದವಳು ಹಿಂತಿರುಗಿ ಬಂದಿರುವುದಿಲ್ಲ. ಅಕ್ಕ ಪಕ್ಕ, ನೆಂಟರ ಮನೆ ಹೀಗೆ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರುದಿಲ್ಲ. ಕಾಣೆಯಾದ ಮಹಿಳೆ ಅನುಷಾ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ…

Read Full News

ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ :

ರಿಪ್ಪನ್ ಪೇಟೆ : ತಾಯಿ ತನ್ನ ಮಗುವಿನ ಜತೆ ಬಿದರಹಳ್ಳಿಯ ತನ್ನ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಬಿದರಹಳ್ಳಿಯ ನಿವಾಸಿ ವಿದ್ಯಾ(32) ಮಗಳು ತನ್ವಿ(4) ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗುರುವಾರ ಬೆಳಗಿನ ಜಾವ ವಿದ್ಯಾ ಮಗುವಿನೊಂದಿಗೆ ಬಾವಿಗೆ ಹಾರಿದ್ದಾರೆ.ಇಂದು ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಭೀಷ್ಮಚಾರಿ 50 ಅಡಿ ಆಳದ ಬಾವಿಗೆ ಇಳಿದು ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ರಿಪ್ಪನ್…

Read Full News

ಕಾರಿಗೆ ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಚಾನೆಲ್ ಗೆ ಇಳಿದ ಕಾರು : ಒಬ್ಬರ ಸಾವು

ಕಾರಿಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ತುಂಗಾ ಚಾನೆಲ್ ಗೆ ಕಾರು ಬಿದ್ದು  ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವ 2 ಗಂಟೆಯ ಸಮಯದಲ್ಲಿ ಸಂಭವಿಸಿದೆ. ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಸುಷ್ಮ.ಇ(28) ಮೃತ ದುರ್ಧೈವಿ. ಸುಷ್ಮ ಮತ್ತು ಪತಿ ಚೇತನ್ ಕುಮಾರ್ ತುಮಕೂರಿನಲ್ಲಿರುವ ಅತ್ತೆಗೆ (ಚೇತನ್ ತಾಯಿಗೆ) ಎದೆ ನೋವು ಕಾಣಿಸಿಕೊಂಡಿದ್ದರಿಂದ ತುಮಕೂರಿಗೆ ಕಾರಿನಲ್ಲಿ…

Read Full News

ಮದ್ಯವ್ಯಸನಿ ಪತಿಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ:

ಕೌಟುಂಬಿಕ ಸಮಸ್ಯೆಗಳಿಂದ ಹಾಗೂ ಮದ್ಯವ್ಯಸನಿ ಪತಿಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಪಿನ ಕಟ್ಟೆ ರಸ್ತೆಯಲ್ಲಿರುವ ಸಿದ್ದೇಶ್ವರ ನಗರದ ನಿವಾಸಿ ಸವಿತಾ(35) ಎಂಬುವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಸಿಯ ನಿವಾಸಿಯಾಗಿದ್ದ ಸವಿತಾ ಕಳೆದ 14 ವರ್ಷದ ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಎಂಬಾತನನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳಿದ್ದರು. ಮದುವೆಯಾದಾಗಿನಿಂದ ರಾಘವೇಂದ್ರ ವಿಪರೀತ ಮದ್ಯ ವ್ಯಸನಿಯಾಗಿದ್ದು  ಈ ವ್ಯಸನದಿಂದ ಬದಲಾಗದ ಹಿನ್ನಲೆಯಲ್ಲಿ ಪವಿತ್ರ ಬೇಸತ್ತಿದ್ದರು. ಇಂದು ಮನೆಯಲ್ಲಿ ಪವಿತ್ರಾ ನೇಣು…

Read Full News

ರಿಪ್ಪನ್ ಪೇಟೆ : ಕಾರಿನ ಟೈರ್ ಸ್ಪೋಟಗೊಂಡು ಸರಣಿ ಅಪಘಾತ : ಇಬ್ಬರಿಗೆ ಗಂಭೀರ ಗಾಯ : ಮೆಗ್ಗಾನ್ ಗೆ ದಾಖಲು

ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಬಳಿ ಚಲಿಸುತ್ತಿದ್ದ ಮಾರುತಿ ಬ್ರೀಜಾ ಕಾರಿನ ಮುಂಭಾಗದ ಎರಡು ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತಿದ್ದ ಎರಡು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ರಿಪ್ಪನ್ ಪೇಟೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಮಾರುತಿ ಬ್ರೀಜಾ ಕಾರಿನ ಮುಂದಿನ ಎರಡು ಟೈರ್ ಸ್ಪೋಟಗೊಂಡ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಬರುವೆ ಗ್ರಾಮದ ನಿವಾಸಿ ತಿಮ್ಮಪ್ಪ (40) ಇವರ ಬಜಾಜ್…

Read Full News

ಆಗುಂಬೆ ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಂದೂವರೆ ಕ್ವಿಂಟಲ್ ಅಡಿಕೆ ಕದ್ದಿದ್ದ ಆರೋಪಿ ಮಾಲು ಸಮೇತ ಬಂಧನ

ತೀರ್ಥಹಳ್ಳಿ : ಅಡಿಕೆ ಮೂಟೆ ಕದ್ದ ಕಳ್ಳನನ್ನು ಆಗುಂಬೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದೂವರೆ ಕ್ವಿಂಟಲ್ ಅಡಿಕೆ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸುಧಾಕರ್ ಎಂಬುವವನು ಜನವರಿ ತಿಂಗಳಲ್ಲಿ ಕೌರಿಹಕ್ಕಲು ಬಿಎಸ್ಎನ್ಎಲ್ ವೆಂಕಟೇಶ್ ಎಂಬುವವರ ಮನೆಯಲ್ಲಿ ಒಣಹಾಕಿದ್ದ ಒಂದುವರೆ ಕ್ವಿಂಟಲ್ ಅಡಿಕೆ ಕದ್ದಿದ್ದ. ಈ ಬಗ್ಗೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿವೈಎಸ್ ಪಿ ಶಾಂತವೀರ, ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರ್,ಆಗುಂಬೆ ಪಿಎಸ್ ಐ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ವೀರೇಂದ್ರ,…

Read Full News

ಬಸ್ ನಿಯಂತ್ರಣ ತಪ್ಪಿ ಪಾದಾಚಾರಿಗಳಿಗೆ ಡಿಕ್ಕಿ : ಗಾಯಾಳುಗಳು ಮೆಗ್ಗಾನ್ ಗೆ ದಾಖಲು

ಆಯನೂರು ಮೆಸ್ಕಾಂ ಕಚೇರಿ ಎದುರು ನಡೆದುಕೊಂಡು ಹೋಗುತಿದ್ದ  ವಿದ್ಯಾರ್ಥಿಗಳಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರೂ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಬಸ್ ಆಯನೂರಿನ ಮೆಸ್ಕಾಂ ಕಚೇರಿ ಎದುರು ಚಾಲಕನ ನಿಯಂತ್ರಣ ಕೈತಪ್ಪಿ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಅಲ್ಲಾಭಕ್ಷಿ (17) ಆಯನೂರು ಸಮೀಪದ ಹೊಸೂರು ಗ್ರಾಮದವನೆಂದು ತಿಳಿದುಬಂದಿದೆ. ಸನು (16) ಎಂಬ ಯುವಕನು ಭದ್ರಾವತಿ ದಡಂಘಟ್ಟದ ಯುವಕನೆಂದು ಹಾಗೂ ಹಾರನಹಳ್ಳಿಯ ರಾಹುಲ್ (17) ಎಂಬುವರನ್ನು ಹೆಚ್ಚಿನ…

Read Full News

ಬೈಕ್ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ : ಸಾಗರದ ಚಾರ್ಟಡ್ ಅಕೌಂಟೆಂಟ್ ಸೇರಿದ್ದಂತೆ ಇಬ್ಬರ ದುರ್ಮರಣ

ಸಾಗರ : ಸಾಗರದ ಆರ್. ಎಂ.ಸಿಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸಾಗರದ ಚಾರ್ಟೆಡ್ ಅಕೌಂಟೆಂಟ್ ರಾಜೇಶ್ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ರಾಜೇಶ್ ರವರು ಬಂದಗದ್ದೆಯ ನಿವಾಸಿಯಾಗಿದ್ದಾರೆ. ಹಾಗೂ ಎದುರುಗಡೆ ಬೈಕಿನ ಹರೀಶ್ (25 ) ವರ್ಷ  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೀಶ್ ಕಾರವಾರದಿಂದ ಕೂಲಿ ಕೆಲಸಕ್ಕೆ ಸಾಗರಕ್ಕೆ ಆಗಮಿಸಿದ್ದರು  ಅಪಘಾತದಲ್ಲಿ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ಸಾಗರ ಟೌನ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read Full News

ಆನ್ ಲೈನ್ ವಂಚನೆ : 79,998 ರೂ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ

ಸರಕಾರ ಹಾಗೂ ಬ್ಯಾಂಕ್ ಗಳು ಹಲವಾರು ಜಾಹಿರಾತಿನ ಮೂಲಕ ಆನ್ ಲೈನ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು ಹಲವರು ಈಗಲೂ ಆನ್ ಲೈನ್ ವಂಚಕರ ಬಲೆಗೆ ಬೀಳುತಿದ್ದಾರೆ. ಶಿವಮೊಗ್ಗದ ವಿದ್ಯಾರ್ಥಿಯೊಬ್ಬ ಆನ್ ಲೈನ್ ವಂಚನೆಗೆ ಒಳಗಾಗಿ ಪರಿತಪಿಸುತ್ತಿರುವ ಘಟನೆ ನಡೆದಿದೆ. ಪಾನ್ ಕಾರ್ಡ ಅಪ್ಡೇಟ್ ಮಾಡಿಕೊಳ್ಳುವಂತೆ ಬಂದ ಲಿಂಕ್ ಒತ್ತುವ ಮೂಲಕ ವಿದ್ಯಾರ್ಥಿಯೋರ್ವ 79998/- ರೂ. ಹಣ ಕಳೆದುಕಂಡ ಘಟನೆ ಈಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ನಡದಿದೆ. ಅಪರಿಚಿತ ಮೊಬೈಲ್ ನಂಬರ್ ಮೂಲಕ ಬಂದ ಲಿಂಕ್ ನಲ್ಲಿ…

Read Full News

ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ : ಸ್ಥಳದಲ್ಲೆ ಇಬ್ಬರು ಸಾವು

ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಂದು ಮುಂಜಾನೆ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಚೇನಹಳ್ಳಿ ಡೈರಿ ಸಮೀಪ ನಡೆದ ಭೀಕರ ಅಪಘಾತದಲ್ಲಿ ಬೆಳ್ಳಂಬೆಳಗ್ಗೆಯೇ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಭದ್ರಾವತಿಯಿಂದ ಶಿವಮೊಗ್ಗದ ಕಡೆಗೆ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ದಾಟಿ ಭದ್ರಾವತಿ ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ…

Read Full News

ಸಾಗರ: ನಿಗೂಢವಾಗಿ ಕಣ್ಮರೆಯಾಗಿದ್ದ “”ಪ್ರಕಾಶ್ ಟ್ರಾವೆಲ್ಸ್” ಮಾಲೀಕ ಶವವಾಗಿ ಪತ್ತೆ! ನಿಜಕ್ಕೂ ಇದು ಆತ್ಮಹತ್ಯೆಯೇ…? “ಪಟಗುಪ್ಪೆ” ಸುತ್ತಾ, ಈಗ ಅನುಮಾನದ ಹುತ್ತ…!

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರ ಅಳಿಯ ಕಾಫೀ ಡೇ ಸಿದ್ಧಾರ್ಥ್ ಆತ್ಮಹತ್ಯೆಯ ಪ್ರಕರಣದಂತೆಯೇ ಸಾಗರದ ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕರಾದ ಪ್ರಕಾಶ್ ರವರ ನಿಗೂಢ ನಾಪತ್ತೆ ಪ್ರಕರಣವೂ ಸಹ ನೋಡಲು ಒಂದೇ ರೀತಿಯಾಗಿ ಕಾಣುತ್ತಿದೆ! ಯಾಕಂದ್ರೇ, ಎಲ್ ಎನ್ ಟಿ ಇನ್ನಿತರೆ ತೀರಾ ಟಾರ್ಚರ್ ಕೊಡುವ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಮಾಡಿಕೊಂಡಿದ್ದ ಸಿದ್ಧಾರ್ಥ್ ರವರು ದಿಕ್ಕೇ ಕಾಣದಂತಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು, ಇದೇ ಪ್ರಕರಣದಂತೆಯೆ ಪ್ರಕಾಶ್ ರವರು ಸಹ ಸಾಲ ಸೋಲಕ್ಕೆ ಅಂಜಿ…

Read Full News

ಶವವಾಗಿ ಪತ್ತೆಯಾದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ : ಸತತ ಮೂರು ದಿನಗಳ ಕಾರ್ಯಾಚರಣೆ ನಂತರ ಪತ್ತೆ

ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲಿಕ ಪ್ರಕಾಶ್ ರವರ ಶವ ಕೊನೆಗೂ ಪಟಗುಪ್ಪ ಹೊಳೆಯಲ್ಲಿ  ಪತ್ತೆಯಾಗಿದೆ. ಕಳೆದ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದ ಪ್ರಕಾಶ್,ಶನಿವಾರ ಅವರ ಮೊಬೈಲ್ ಹಾಗೂ ಕಾರು ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿದ್ದವು.ಕೂಡಲೇ ಕ್ಷಿಪ್ರ ಕಾರ್ಯಾಚರಣೆಗಿಳಿದಿದ್ದ ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆದಿತ್ತು.ಆದರೆ ಮೂರು ದಿನ ಸತತವಾಗಿ ಶೋಧ ಕಾರ್ಯ ನಡೆಸಿದರು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳ್ಳಗ್ಗೆ ಪ್ರಕಾಶ್ ಅವರ ಶವ ಪಟಗುಪ್ಪೆ ಹೊಳೆಯಲ್ಲಿಯೇ ಪತ್ತೆಯಾಗಿದೆ. ಅವರ ಹಿತೈಷಿಗಳು ಮತ್ತು ಕುಟುಂಬಸ್ಥರು ಈ ಪ್ರಕರಣದ ಹಿಂದೆ…

Read Full News

ಬೈಕ್ ಅಪಘಾತ : ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಪುರುದಾಳು ಗ್ರಾಮದ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿ ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತ ಪಟ್ಟಿದ್ದಾನೆ.  ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದರ ಪರಿಣಾಮ ಬೈಕ್ ನಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸುಧನ್ವ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ತಾಲೂಕಿನ ಸುಧನ್ವ ಎಂಬ 21 ವರ್ಷದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯು ತನ್ನ ಸ್ನೇಹಿತರೊಂದಿಗೆ ಪುರುದಾಳು ಗ್ರಾಮದಿಂದ ಶಿವಮೊಗ್ಗಕ್ಕೆ ಬೈಕ್ ನಲ್ಲಿ ತೆರಳಿದ್ದಾರೆ. ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಸ್ನೇಹಿತ ಮನೋಜ್…

Read Full News

ಅನಾರೋಗ್ಯ ಹಿನ್ನಲೆ : SSLC ವಿದ್ಯಾರ್ಥಿನಿ ಆತ್ಮಹತ್ಯೆ

ಹೊಸನಗರ ಪಟ್ಟಣದ ಮಾರಿಗುಡ್ಡದಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ತಾಲೂಕಿನ ಅರೋಡಿ ಕೊಡಸೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ರವರ ಪುತ್ರಿ ಶಮಾ ಎಲ್ ಬಂಡಿ (15) ತನ್ನ ತಾಯಿಯನ್ನು ಮಾರ್ನಿಂಗ್ ಕ್ಲಾಸ್ ಡ್ಯೂಟಿಗೆ ಕಳುಹಿಸಿ ಮನೆಗೆ ಬಂದು ನೇಣಿಗೆ ಶರಣಾದ ದುರಂತ ಘಟನೆ ಇಂದು ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಶಮಾ ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದು ಕಳೆದ ಕೆಲ ಸಮಯದಿಂದ ಆಕೆ ಅನಾರೋಗ್ಯ ಪೀಡಿತಳಾಗಿದ್ದಳು ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿನಿಯ…

Read Full News

ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟ 5 ವರ್ಷದ ಪುಟ್ಟ ಮಗು :

ಕುಂಸಿ : ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ 5 ವರ್ಷದ ಪುಟ್ಟ ಮಗುವು ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಮಾಸನಕಟ್ಟೆ ಗ್ರಾಮದಿಂದ ರಸ್ತೆ ಕಾಮಗಾರಿಗೆ ಇಮಾಮ್ ಸಾಬ್ ಕುಟುಂಬ ಕೆಲಸಕ್ಕೆಂದು ಆಯನೂರಿನ ಕುಂಸಿಯ ರೇಚಿಕೊಪ್ಪ ಗ್ರಾಮಕ್ಕೆ ಬಂದಿತ್ತು. ನಿನ್ನೆ ಮಧ್ಯಾಹ್ನ ಮಗುವನ್ನು ಜಮೀನಿನ ಪಕ್ಕದಲ್ಲಿ ಮಲಗಿಸಿ ಪೋಷಕರು ಅಲ್ಲೇ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದರು. ಮಗುವಿಗೆ ಬಿಸಿಲು ಆಗಬಾರದೆಂಬ ಉದ್ದೇಶದಿಂದ ಮಗುವಿನ ಮೇಲೆ ಟುವೆಲ್  ಹಾಸಲಾಗಿತ್ತು ಅದೇ…

Read Full News

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಮೊಬೈಲ್ ನಲ್ಲಿ ಚಿತ್ರಿಕರಿಸಿ ಹರಿಬಿಟ್ಟಿದ್ದ ಆರೋಪಿಗಳ ಬಂಧನ

ಕಾಲೇಜು ಮುಗಿಸಿ ಮನೆಗೆ ಹೊರಟ್ಟಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ನಡೆಸಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದ ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯು ಜ.15 ರಂದು ಮಧ್ಯಾಹ್ನ ತನ್ನ ಗ್ರಾಮಕ್ಕೆ ಹೋಗಲು ಹೊಸನಗರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಸಮಯದಲ್ಲಿ ಪರಿಚಯವಾಗಿದ್ದ ಸಂತೋಷ ಮತ್ತು ಸುನಿಲ್ ಇಬ್ಬರು ಬಾಲಕಿಯನ್ನು…

Read Full News

ಜಾತ್ರೆಗೆ ತೆರಳುವಾಗ ನಡೆಯಿತು ಭೀಕರ ಅಪಘಾತ : ನಾಲ್ವರು ಸ್ಥಳದಲ್ಲಿಯೇ ಸಾವು,ಏಳು ಜನ ಗಂಭೀರ

ಉಕ್ಕಡಗಾತ್ರಿ ಜಾತ್ರೆಗೆ ಹೊರಟಿದ್ದ ಶಿಕಾರಿಪುರದ ನಾಲ್ವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು 7 ಜನರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೆನಾಲ್ಟ್ ಕ್ವಿಡ್ ಮತ್ತು ಟಾಟಾ ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಉಕ್ಕಡಗಾತ್ರಿಯ ಬಳಿಯ ಕಡೂರು ಕ್ರಾಸ್ ಬಳಿ ಲಾರಿಗೆ ಎರಡೂ ಕಾರುಗಳು ಡಿಕ್ಕಿ ಹೊಡೆದಿದೆ.  ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಗೊಂಡಿದ್ದ 7 ಜನರನ್ನು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಶಿಕಾರಿಪುರ ತಾಲೂಕಿನ ಮಾಯತಮ್ಮನ ಮುಚೂಡಿಯ ಶಾಂತ(30), ಪೃಥ್ವಿ(12) ಕರ್ನಹಳ್ಳಿಯ ಸದಾ(10)ಮತ್ತಿಕೋಟೆಯ ಶಂಕರ ಗೌಡ(37), ಈ ನಾಲ್ವರೂ…

Read Full News

ಮಲೆನಾಡಲ್ಲೊಂದು ಹೃದಯವಿದ್ರಾವಕ ಘಟನೆ : ವ್ಯವಹಾರದಲ್ಲಿ ನಷ್ಟಕ್ಕೊಳಗಾದ ದಂಪತಿಗಳ ಆತ್ಮಹತ್ಯೆ

ತೀರ್ಥಹಳ್ಳಿ : ವ್ಯವಹಾರದಲ್ಲಿ ನಷ್ಟ ಅನುಭವಿಸಿ ಮನನೊಂದ ದಂಪತಿಗಳಿಬ್ಬರೂ ನೇಣಿಗೆ ಕೊರಳು ಒಡ್ಡಿದ ದುರಂತ ಘಟನೆ ತಾಲ್ಲೂಕಿನ ಸಂತೆಹಕ್ಲು ಸಮೀಪದ ಪೂರಲುಕೊಪ್ಪದಲ್ಲಿ ನಡೆದಿದೆ. ಸಂತೆಹಕ್ಲು ಸಮೀಪದ ಮಂಜುನಾಥ್ (46) ಮತ್ತು ಉಷಾ (43) ನೇಣಿಗೆ ಶರಣಾದ ದಂಪತಿಗಳಾಗಿದ್ದು, ಇವರಿಗೆ ಇಬ್ಬರು ಪುತ್ರರಿದ್ದಾರೆ‌. ಸುಮಾರು 2 ಎಕರೆ ಜಮೀನು ಇದ್ದು ಸಣ್ಣ ಕೃಷಿಕರಾಗಿದ್ದಾರೆ, ಹಲವು ಕೃಷಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಕಡೆ ಸಾಲವನ್ನು ಮಾಡಿಕೊಂಡಿದ್ದು ಕೊರೊನಾ ಹಿನ್ನೆಲೆಯಲ್ಲಿ ಅವರಿಗೆ ಅದನ್ನು ನಿರ್ವಹಣೆ ಮಾಡಲು ಕಷ್ಟವಾಗಿತ್ತು. ಇದರಿಂದ ಮನನೊಂದ…

Read Full News

ಕಾರು ಮರಕ್ಕೆ ಡಿಕ್ಕಿ : ಭೀಕರ ಅಪಘಾತದಲ್ಲಿ ಓರ್ವನ ಸಾವು

ಭದ್ರಾವತಿ : ಇಲ್ಲಿನ ಬಿ.ಹೆಚ್ ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಬಳಿ ಭೀಕರ ರಸ್ತೆ‌ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಈ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮೂವರು ಪ್ರಯಾಣಿಕರು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಭದ್ರಾವತಿಯ ಡಿಎಫ್ ಒ ಕಚೇರಿ ಮುಂಭಾಗದ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶರತ್ ಎಂಬುವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಉಳಿದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ ಮಧ್ಯಾಹ್ನ ರಾತ್ರಿ ಈ ಅವಘಢ ಸಂಭವಿಸಿದ್ದು…

Read Full News

ಅಪ್ರಾಪ್ತೆಯ ಮೇಲೆ ಅತ್ಯಾಚಾರ : ಆರೋಪಿ ಬಂಧನ

ಶಿವಮೊಗ್ಗ : ಶಾಲೆಗೆ ಹೊರಟ್ಟಿದ್ದ ವಿದ್ಯಾರ್ಥಿ ಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವೆಸಗಿರುವ‌ ಘಟನೆ‌ ವರದಿಯಾಗಿದೆ. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಂದೂರು ಗ್ರಾಮದಲ್ಲಿನ ಹಳ್ಳಿಮನೆ  ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ 15 ವರ್ಷದ ಮಗಳನ್ನು ಅದೇ ಹೋಟೆಲ್ ನಲ್ಲಿ ಸಪ್ಲೈರ್ ಆಗಿ ಕೆಲಸ ಮಾಡುತ್ತಿದ್ದ ನಿದಿಗೆ ಗ್ರಾಮದ ಉಮೇಶ್, ( 28), ಬಾಲಕಿಯನ್ನು  ಪರಿಚಯಮಾಡಿಕೊಂಡು ತುಂಬಾ ಸಲುಗೆಯಿಂದ ಮಾತನಾಡುತ್ತಿದ್ದನು. ನಿನ್ನೆ ಬಾಲಕಿ ಶಾಲೆಗೆ ಹೋಗಲು ಹೊರಟಿದ್ದಾಗ ಬಾರಂದೂರಿನಿಂದ ತರೀಕೆರೆಗೆ ಹೋಗುವ ಬಸ್…

Read Full News

ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ : ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಸಾಗರ : ಇಲ್ಲಿನ ಅರಣ್ಯ ವಲಯ ವ್ಯಾಪ್ತಿಯ ಮಂಕೋಡು ಗ್ರಾಮ ಜೆ.ಪಿ ನಗರದಲ್ಲಿ ಅಕ್ರಮವಾಗಿ ಶ್ರೀಗಂಧದ ಚಕ್ಕೆಗಳನ್ನು ಕೆತ್ತುತ್ತಿದ್ದ ಇಬ್ಬರು ಆರೋಪಿಗಳನ್ನು ಸಾಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ಬಂಧಿಸಿದ್ದಾರೆ.   ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ವೆಂಕಟರಮಣ ಇವರನ್ನು ಬಂಧಿಸಿ ಅವರಿಂದ  ಐದೂ ಕಾಲು ಕೆಜಿ ಶ್ರೀಗಂಧದ ಚಕ್ಕೆ, ಒಂದು ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲು ಮಾಡಿದ್ದಾರೆ. ವಲಯ ಅರಣ್ಯಾಧಿಕಾರಿ ಡಿ ಆರ್ ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.