ಹೊಸನಗರ  ಪಟ್ಟಣದ ಸಮೀಪದ ಮೇಲಿನಬೆಸಿಗೆ ಗ್ರಾಮದ ಮಹಿಳೆಯೊಬ್ಬಳಿಗೆ ಅಡುಗೆ ಮನೆಯಲ್ಲಿ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮೇಲಿನಬೆಸಿಗೆ ನಿವಾಸಿ  ನಾಗರಾಜ್ ಎಂಬುವವರ ಪತ್ನಿ ಸೌಮ್ಯ (24) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಸೌಮ್ಯ ಬುಧವಾರ ಮಧ್ಯಾಹ್ನ ಅಡುಗೆ ಮಾಡಲು ಅಡುಗೆ ಮನೆಗೆ ತೆರಳಿದಾಗ ಅವರ ಕಾಲಿಗೆ ಹಾವು ಕಚ್ಚಿದ್ದು ಅವರ ಗಮನಕ್ಕೆ ಬಂದಿರಲಿಲ್ಲ.ಕೆಲ ಹೊತ್ತಿನಲ್ಲಿಯೇ ಹಾವು ಕಚ್ಚಿದ ಜಾಗದಲ್ಲಿ ತೀವ್ರತರ ಬಾಧೆಯಾಗಲು ಶುರುವಾದಗ ಮನೆಯವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಮನೆಯವರು ಹಾವು ಕಚ್ಚಿರಬೇಕೆಂಬ ಶಂಕೆಯಿಂದ ಆಕೆಯನ್ನು ತಕ್ಷಣ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ವಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಆಕೆ ಮೃತಪಟ್ಟಿದ್ದಾರೆ.
ಸೌಮ್ಯ ನಾಲ್ಕು ವರ್ಷದ ಹಿಂದೆ ನಾಗರಾಜ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರೆನ್ನಲಾಗಿದೆ. ಮೃತ ಸೌಮ್ಯಳಿಗೆ ಮೂರು ವರ್ಷದ ಗಂಡು ಮಗುವಿದೆ ಎಂದು ತಿಳಿದುಬಂದಿದೆ.
ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಜರು ಕ್ರಮ ಜರಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
		 
                         
                         
                         
                         
                         
                         
                         
                         
                         
                        