Headlines

ಎಲ್ ಬಿ ಕಾಲೇಜಿನ ಹಲ್ಲೆ ಪ್ರಕರಣಕ್ಕೆ ಶಾಸಕ ಹಾಲಪ್ಪ ರವರೇ ನೇರ ಕಾರಣ : ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು

ಸಾಗರ: ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಈಚೆಗೆ ನಡೆದಿರುವ ಹಲ್ಲೆ ನಡೆದಿರುವ ಪ್ರಕರಣಕ್ಕೆ ಶಾಸಕ ಹರತಾಳು ಹಾಲಪ್ಪ ಅವರೇ ನೇರವಾಗಿ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.

ಹಲ್ಲೆಗೊಳಗಾದ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಗೌಡ ಅವರ ಮನೆಗೆ ಬುಧವಾರ ತೆರಳಿ ಯೋಗಕ್ಷೇಮ ವಿಚಾರಿಸಿದ ನಂತರ ಮಾತನಾಡಿದ ಅವರು ಎಂಡಿಎಫ್ ಸಂಸ್ಥೆಯ ಆಂತರಿಕ ವಿಚಾರದಲ್ಲಿ ಶಾಸಕ ಹಾಲಪ್ಪ ಅವರು ಅನಗತ್ಯವಾಗಿ ಮೂಗು ತೂರಿಸಿದ್ದಾರೆ. ಸರ್ವ ಸದಸ್ಯರ ಸಭೆಗೆ ಹಾಜರಾಗಲು ಸಂಸ್ಥೆಯ ನಿಯಮಗಳ ಪ್ರಕಾರ ಅವರಿಗೆ ಅವಕಾಶವೇ ಇಲ್ಲದೆ ಇದ್ದರೂ ತಮ್ಮ ಅಧಿಕಾರ ದರ್ಪ ತೋರಿ ಗೊಂದಲಕ್ಕೆ ಕಾರಣರಾಗಿದ್ದಾರೆ’ ಎಂದು ದೂರಿದರು.


ಶಾಸಕ ಹಾಲಪ್ಪ ಅವರಿಗೆ ಸಂಸ್ಥೆಯ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಅಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ ನಡೆಸಬಹುದಿತ್ತು. ಅದನ್ನು ಬಿಟ್ಟು ಸಭೆಯಲ್ಲಿ ತಮ್ಮ ಬೆಂಬಲಿಗ ಗೂಂಡಾ ಪಡೆಯನ್ನು ಬಿಟ್ಟು ಸಂಸ್ಥೆಯ ಪದಾಧಿಕಾರಿಗಳ ಮೇಲೆ ಅಮಾನುಷ ಹಲ್ಲೆ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಶಾಸಕ ಹಾಲಪ್ಪ ಅವರು ಇತ್ತೀಚಿನ ದಿನಗಳಲ್ಲಿ ತಮಗೆ ಅಧಿಕಾರದ ಬಲ ಇದೆ ಎಂದು ಎಲ್ಲರ ಮೇಲೂ ದರ್ಪ ತೋರಿಸಲು ಮುಂದಾಗಿದ್ದಾರೆ. ಊರಿನ ಎಲ್ಲಾ ಸಂಘ ಸಂಸ್ಥೆಗಳ ವಿಷಯದಲ್ಲೂ ಅನಗತ್ಯವಾಗಿ ಹಸ್ತಕ್ಷೇಪ ಮಾಡುತಿದ್ದಾರೆ.ತಮ್ಮ ಬೆಂಬಲಿಗರ ಮೂಲಕ ಜಾತಿ ಜಾತಿಗಳ ನಡುವೆ ವೈಷಮ್ಮ ಬಿತ್ತುವ ಕೆಲಸಕ್ಕೆ ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ಸಾಗರದಲ್ಲಿ ಈಚೆಗೆ ನಡೆದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಹಲ್ಲೆಗೊಳಗಾದ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಗೌಡ ಅವರ ಮನೆಗೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಬುಧವಾರ ತೆರಳಿ ಯೋಗಕ್ಷೇಮ ವಿಚಾರಿಸಿದರು.

  

 ಈ ಸಂಧರ್ಭದಲ್ಲಿ  ಗಣಪತಿ  ಮಂಡಗಳಲೆ, ಅಶೋಕ್ ಬೇಳೂರು, ಸಂತೋಷ್ ಸದ್ಗುರು, ರವಿ ದೊಡ್ಮನೆ,ಬಸವರಾಜ್ ಕುಗ್ವೆ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *