ಸಾಗರ: ಅಂದಾಜು 7.50 ಲಕ್ಷ ಮೌಲ್ಯದ ಲಾರಿಯನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಪ್ರಕರಣ ದಾಖಲಾದ ಹತ್ತೇ ದಿನಗಳಲ್ಲಿ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ನಿವಾಸಿ ಬಿ.ಕೆ.ಕರಿಬಸಪ್ಪ ಅಲಿಯಾಸ್ ಕರಿಯ(32) ಎಂಬಾತನೇ  ಬಂಧಿತ ಆರೋಪಿ. ಈತನ ಬಳಿಯಿಂದ ಕದ್ದಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ:
ಆನಂದಪುರ ದಾಸಕೊಪ್ಪ ಗ್ರಾಮದ ವಾಸಿಯೊಬ್ಬರ ಲಾರಿಯನ್ನು ಮಾರ್ಚ್ 3ರಂದು ರಾತ್ರಿ ಹೊತ್ತಲ್ಲಿ ಕಳ್ಳತನ ಮಾಡಲಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಾಗರ ಗ್ರಾಮಾಂತರ ಠಾಣೆಯ ವೇರಿ ಸ್ಮಾರ್ಟ್ ಆಂಡ್ ಇಂಟಲಿಜೆಂಟ್  ಪಿಐ ಮತ್ತು ಸಿಬ್ಬಂದಿ ತಂಡವು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲಾರಿ ಕಳ್ಳತನ ಪ್ರಕರಣ ದಾಖಲಾಗಿದ್ದು ಮಾಲು ಮತ್ತು ಆರೋಪಿ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಶ್ರೀ ಲಕ್ಷ್ಮೀ ಪ್ರಸಾದ್ ಐ.ಪಿ.ಎಸ್  ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಯುತ ವಿಕ್ರಮ್ ಅಮಟೆ. ರವರ ಮಾರ್ಗದರ್ಶದಲ್ಲಿ ಸಹಾಯಕ ಪೊಲೀಸ ಅಧೀಕ್ಷಕರು, ಸಾಗರ ಉಪವಿಭಾಗದ ಶ್ರೀಯುತ ರೋಷನ್ ರವರ ಸೂಚನೆಯಂತೆ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಿ, ಸಾಗರ ಗ್ರಾಮಾಂತರ  ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್,ಶ್ರಿ ಬಿ. ಸಿ ಗಿರೀಶ್ ರವರ ನೇತೃತ್ವದಲ್ಲಿ. ಪೊಲೀಸ್ ಸಿಬ್ಬಂಧಿಗಳಾದ ಎಎಸ್‌ಐ  ಸಿದ್ದರಾಮಪ್ಪ, ಸನಾವುಲ್ಲಾ . ತಾರಾನಾಥ ,ಅಶೋಕ್. ರವಿಕುಮಾರ್. ಈರಯ್ಯ ಮಠಪತಿ,  ಪ್ರವೀಣ್ ಕುಮಾರ್, ಪ್ರಕಾಶ್ ಅಂಬ್ಲಿ.  ಗಿರೀಶ್ ರವರು ಪ್ರಕರಣದ ಆರೋಪಿಯಾದ ಕರಿಬಸಪ್ಪ ಬಿ.ಕೆ ಕರಿಯಾ ತಂದೆ ಲೇಟ್ ಸಂಜೀವಪ್ಪ, 32 ವರ್ಷ, 3 ನೇ ಕ್ರಾಸ್, ವಿನೋಬ ನಗರ ನ್ಯಾಮತಿ ತಾಲ್ಲೂಕ್ ದಾವಣಗೆರೆ ಜಿಲ್ಲೆ ಎಂಬಾತನನ್ನು ದಿನಾಂಕ:- 11-03-2022 ರಂದು ಸಾಗರ ತಾಲ್ಲೂಕ್ ತ್ಯಾಗರ್ತಿ ಗ್ರಾಮದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಸಾಗರ ಗ್ರಾಮಾಂತರ ಠಾಣೆಯ ಅಪರಾಧ ಸಂಖ್ಯೆ 105/2022 ಕಲಂ 379 ಐಪಿಸಿ ಕೇಸಿನಲ್ಲಿ ಕಳ್ಳತನ ವಾಗಿದ್ದ, 7,50,000/- ರೂ ಬೆಲೆಯ ಕೆಎ-16-ಬಿ-5442 ನೇ ಟಾಟಾ ಲಾರಿಯನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರಿಂದ  ಪ್ರಶಂಸೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ  ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅದೀಕ್ಷಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಮಾಹಿತಿ : ಮಲೆನಾಡ ರಹಸ್ಯ
 
                         
                         
                         
                         
                         
                         
                         
                         
                         
                        