w
Headlines
Home » Blog » Page 15

ಸಮಾಜದಲ್ಲಿ ಶಾಂತಿ ಕದಡುವ ದುಷ್ಟ ಶಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ: ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ: ಆರ್‌ಎಸ್‌ಎಸ್‌, ಬಿಎಸ್‌ವೈ, ಸಿಎಂ ನನ್ನ ಮೇಲೆ ಭರವಸೆ ಇಟ್ಟು ಗೃಹಖಾತೆ ಕೊಟ್ಟಿದ್ದಾರೆ ನನಗೆ ನೀಡಿರುವ ಸ್ಥಾನ ಮತ್ತು ಜವಾಬ್ದಾರಿಯನ್ನು ಬಳಸಿಕೊಂಡು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡುತ್ತೇನೆ ಎಂದು ನೂತನ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಇಂದಿಲ್ಲಿ ಹೇಳಿದರು. ಅವರು ಇಂದು ಶಿಕಾರಿಪುರಕ್ಕೆ ತೆರಳುವ ಮಾರ್ಗದ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಹೇಳಲಾಗಿದ್ದರೂ ಕೂಡಾ ಕೆಲವು ವ್ಯಕ್ತಿಗಳು ದೇಶದ್ರೋಹದ ಕೃತ್ಯದಲ್ಲಿ ತೊಡಗಿಕೊಂಡಿದ್ದು ಆಂತಹವರನ್ನು ಆರಂಭದಲ್ಲಿ ಚಿವುಟುವ ಕಾರ್ಯ…

Read Full News

ರಿಪ್ಪನ್ ಪೇಟೆ: ಸ್ವಾತಂತ್ರ್ಯೋತ್ಸವದ ದಿನದಂದು ಮೌನ ಹೋರಾಟಕ್ಕಿಳಿದ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ:

ರಿಪ್ಪನ್ ಪೇಟೆ:ದೇಶಕ್ಕೆ ಸ್ವಾತಂತ್ರ್ಯಬಂದು ಎಪ್ಪತ್ತೈದು ವರ್ಷವಾಯಿತು,  ಭ್ರಷ್ಟಾಚಾರ ಮಾಡುವವರು,ಲೂಟಿ ಹೊಡೆಯುವವರು ಸ್ವಾತಂತ್ರ್ಯ ಸಿಕ್ಕಿದೆ.ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೇವೆ,ಕೊಡಿಸಿದ್ದೇವೆ ಎಂಬ ಕೀಳು ಮಟ್ಟದ ಮಾತುಗಳನ್ನಾಡುತ್ತಿದ್ದಾರೆಯೇ ಹೊರತು ದೇಶದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲಾ ಇಚ್ಚಾಶಕ್ತಿ ಇಲ್ಲದ ರಾಜಕಾರಣಿಗಳಿಂದ ದೇಶಕ್ಕೆ ಏನೂ ಪ್ರಯೋಜನ ಇಲ್ಲಾ. ಎಲ್ಲಾ ಆಡಂಬರದ ಆಚರಣೆ ಎಂದು ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪೋಲಿಸರನ್ನು ಸದ್ಬಳಕೆ ಮಾಡಿಕೊಂಡ್ಡಿದ್ದರೆ ದೇಶ ಪ್ರಪಂಚಕ್ಕೆ ಮಾದರಿಯಾಗುತ್ತಿತ್ತು,ಆದರೆ ಅವರನ್ನು ಸದ್ಬಳಕೆ ಮಾಡಿಕೊಳ್ಳದೆ ದುರ್ಬಳಕೆ ಮಾಡಿಕೊಂಡು ಕೆಟ್ಟ ನೀತಿಯನ್ನು ಮಾಡಿಕೊಂಡು…

Read Full News

ಶೈಕ್ಷಣಿಕ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಆರಗ ಜ್ಞಾನೇಂದ್ರ

 ರಿಪ್ಪನ್ ಪೇಟೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತಿಭೆ ಇದ್ದರೂ ಅವಕಾಶವಿರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ರಾಜ್ಯದ ಗೃಹ ಮಂತ್ರಿ ಆರಗ ಜ್ಞಾನೇಂದ್ರ  ಹೇಳಿದರು.  ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತ್ಯುತ್ತಮ ಕಾಲೇಜ್ ಎಂದು ಖ್ಯಾತಿ ಗಳಿಸಿರುವ ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರು  ಹಾಗೂ ಗೃಹಸಚಿವರಾದ ಆರಗ ಜ್ಞಾನೇಂದ್ರ ಅವರು ಸೋಮವಾರ ಭೇಟಿ ನೀಡಿ…

Read Full News

ಶಿವಮೊಗ್ಗ: ನೂತನ ಸುದ್ದಿವಾಹಿನಿ ಟಿವಿ12 ಕನ್ನಡ ರಾಜ್ಯಾದ್ಯಂತ ಏಕಕಾಲದಲ್ಲಿ ಲೋಕಾರ್ಪಣೆ

  ಶಿವಮೊಗ್ಗ: 75ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ TV12 ಕನ್ನಡ ಸುದ್ದಿವಾಹಿನಿಯ “ಲೋಗೋ” ವನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ರವರು ಜ್ಯೋತಿ ಬೆಳಗಿಸುವುದರ ಮೂಲಕ ಲೋಕಾರ್ಪಣೆ ಮಾಡಿದರು. ನಗರದ ಮಥುರಾ ಸೆಂಟ್ರಲ್ ಸಭಾಂಗಣದಲ್ಲಿ ನಡೆದ ಟಿವಿ೧೨ ಕನ್ನಡ ಸುದ್ದಿ ವಾಹಿನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ರವರು ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ಹಾಗೂ ಪತ್ರೀಕಾರಂಗದ ಕ್ಷೇತ್ರವು ನಮ್ಮ ಸಾಮಾಜಿಕ ಕ್ಷೇತ್ರದ…

Read Full News

ಸೊರಬ:ಎಬಿವಿಪಿಯ ವತಿಯಂದ ಒಂದು ಗ್ರಾಮ ಒಂದು ತಿರಂಗ ಅಭಿಯಾನ:

ಸೊರಬ: ತಾಲೂಕಿನಾದ್ಯಂತ 75ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕಿನ ವಿವಿಧಡೆ ಧ್ವಜಾರೋಹಣ ಮಾಡಲಾಯಿತು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಷ್ಟ್ರಾದ್ಯಂತ ಒಂದು ಲಕ್ಷಕ್ಕೂ ಹೆಚ್ಚಿನ ಸ್ಥಳದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಒಂದು ಗ್ರಾಮ ಒಂದು ತಿರಂಗ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ.  ಈ ನಿಟ್ಟಿನಲ್ಲಿ ಸೊರಬ ತಾಲೂಕಿನ ವಿವಿಧಡೆ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ತಾಲೂಕಿನ ಕೆರೆಕೊಪ್ಪ, ಕಮಲಾಪುರ, ಕಂಚಿಕೊಪ್ಪ , ಶಿಂಡ್ಲಿ ,ಮಣ್ಣತ್ತಿ,, ಸಂಭಾಪುರ ,ಮಾವಿನಬಳ್ಳಿ ಕೊಪ್ಪ,ಮಂದಲಿಕೊಪ್ಪ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಎಬಿವಿಪಿ…

Read Full News

ರಿಪ್ಪನ್ ಪೇಟೆ: ಗುರು ರಾಘವೇಂದ್ರ ಸ್ವಾಮಿಗಳವರ 350ನೇ ಆರಾಧನ ಮಹೋತ್ಸವ:

ರಿಪ್ಪನ್‌ಪೇಟೆ:ಇಲ್ಲಿನ ಬೈರಾಪುರದ ಕಿರುಮಂತ್ರಾಲಯ ಶ್ರೀಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 23 ರಿಂದ 25 ರವರೆಗೆ ಗುರುರಾಘವೇಂದ್ರ ಸ್ವಾಮಿಗಳವರ 350ನೇ ಆರಾಧನಾ ಮಹೊತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಟಿ.ಪುರುಷೋತ್ತಮ್‌ರಾವ್ ಮತ್ತು ಕಾರ್ಯದರ್ಶಿ ಕೆ.ದೇವರಾಜ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊರೊನಾ ಮಾರ್ಗಸೂಚಿಯನ್ವಯ ಸರಳ ಸಂಪ್ರದಾಯದಂತೆ 23ರಂದು ಸೋಮವಾರ ಬೆಳಗ್ಗೆ ಪೂರ್ವಾರಾಧನೆ ಮತ್ತು ವಿಶೇಷ ಪೂಜೆಗಳು ತೀರ್ಥಪ್ರಸಾದ ವಿತರಣೆ, ಆಗಸ್ಟ್ 24 ರಂದು ಮಂಗಳವಾರ ಗುರುರಾಯರ ಆರಾಧನೆ ವಿಶೇಷ ಪೂಜೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ…

Read Full News

ಚಿಕ್ಕಜೇನಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷರಾಗಿ ಉಮೇಶ್ ಗೌಡ ಆಯ್ಕೆ:

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕ ಜೇನಿ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಉಮೇಶ್ ಗೌಡ ಚಿಕ್ಕಜೇನಿ ಆಯ್ಕೆಯಾಗಿದ್ದಾರೆ. ಶನಿವಾರ ಪ್ರೌಢಶಾಲಾ ಆವರಣದಲ್ಲಿ ನಡೆದ ಪೋಷಕರಿಂದ ಆಯ್ಕೆಯಾದ ಸದಸ್ಯರು ಉಮೇಶ್ ಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.  ಸಮಿತಿಯ ಸದಸ್ಯರಾಗಿ ಶ್ರೀಮತಿ ಆಶಾ ನರಸಿಂಹ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಯಶೋಧ, ಧನಂಜಯ ಹಿರೇಜೇನಿ, ನಾಗರಾಜ್ ಬಿಳಿಕಿ, ಹರೀಶ್ ಕುಮಾರ್ ಕಾರೆಮಟ್ಟಿ, ಜಿಎಲ್ ಲಿಂಗರಾಜ್ ಹಿರೇಮೈತೆ, ಶಿವಕುಮಾರ್ ಶೆಟ್ಟಿಬೀಡು ಇವರುಗಳು ಆಯ್ಕೆಯಾದರು.  ಸಭೆಯ ಅಧ್ಯಕ್ಷತೆಯನ್ನು ಶಾಲಾ…

Read Full News

ತಮ್ಮ ಆಕ್ರೋಶದ ಹೇಳಿಕೆಯನ್ನ ವಾಪಸ್ ಪಡೆದ ತೀ. ನಾ .ಶ್ರೀನಿವಾಸ್:

ಸಾಗರ: ಕಾಂಗ್ರೆಸ್ ಪಕ್ಷ ಬಗರಹುಕುಂ ಸಾಗುವಳಿ ಮಂಜೂರಾತಿಗಾಗಿ11/8/21ರಂದು  ನಡೆಸಿದ ಪ್ರತಿಭಟನೆ ವೇಳೆ ಮಾಜಿ ಪುರಸಭಾಧ್ಯಕ್ಷ  ತೀ ನಾ ಶ್ರೀನಿವಾಸ್ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂದು ಆರೋಪಿಸಿ ಸಾಗರ ಬಿಜೆಪಿ ಘಟಕ ದಿನಾಂಕ12/8/21 ರಂದು ಪ್ರತಿಭಟನೆ ನಡೆಸಿತ್ತು  ಇಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿರುವ ಮಾಜಿ ಪುರಸಭಾ ಅಧ್ಯಕ್ಷ ತೀ ನಾ ಶ್ರೀನಿವಾಸ್ ನಾನು ಯಾವುದೇ ನಾಯಕರನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಸಂಕಷ್ಟದಲ್ಲಿರುವ ರೈತರ ಸ್ಥಿತಿಗತಿ ಮತ್ತು ಜನಸಾಮಾನ್ಯರ ಪರಿಸ್ಥಿತಿಯಿಂದ ಆಕ್ರೋಶಗೊಂಡು ಮಾತನಾಡಿದ್ದು ಅಷ್ಟೆ ಅದನ್ನು…

Read Full News

ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ: ಪೊಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆ ಇತ್ಯರ್ಥ:

ಹೊಸನಗರ: ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮೀಸಲಿಟ್ಟಿದ್ದ ರುದ್ರಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿ ಶವಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಘಟನೆ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೋಗಿ ಎಂಬಲ್ಲಿ ನಡೆದಿದೆ. ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿದ್ದರಿಂದ ಬುಡಕಟ್ಟು ಜನಾಂಗದ ಮೃತಪಟ್ಟ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಕಾಯಿಸಿದ ಘಟನೆ ಮುಂಬಾರು ಗ್ರಾಮದ ಹಿರಿಯೋಗಿಯಲ್ಲಿ ನಡೆದಿದೆ. ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೋಗಿ ಗ್ರಾಮದ ಸರ್ವೆ ನಂ16 ರಲ್ಲಿ 2 ಎಕರೆ ಪ್ರದೇಶವನ್ನು ಆದಿವಾಸಿ…

Read Full News

ರೈತರ ಬದುಕು ಹಸನಾಗಿಸುವ ಕಾರ್ಯವನ್ನು ಕೃಷಿ ಇಲಾಖೆ ನಡೆಸಬೇಕು : ಶಾಸಕ ಹೆಚ್ ಹರತಾಳು ಹಾಲಪ್ಪ .

ಸಾಗರ: ರೈತರ ಬದುಕನ್ನು ಹಸನು ಗೊಳಿಸುವಂತಹ ಕಾರ್ಯವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ನಡೆಸಬೇಕು.ಕೃಷಿ ಇಲಾಖೆಯ ಯೋಜನೆಗಳು ಕೇವಲ ಬಳಕೆಯಾಗದೆ ರೈತರಿಗೆ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕರಾದ ಹರತಾಳು ಹಾಲಪ್ಪ ಹೇಳಿದರು. ಅವರು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪ್ರಸಕ್ತ ವರ್ಷದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ದೇಶದಲ್ಲಿ ರೈತ ದಿನದ ಹನ್ನೆರಡು ಗಂಟೆ ಕೆಲಸ ಮಾಡುತ್ತಾನೆ ಆದ್ದರಿಂದಲೇ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ದೇಶವಾಗಿ ನೆರೆ ದೇಶಕ್ಕೆ ಆಹಾರ ಸಾಮಗ್ರಿಗಳನ್ನು ರಫ್ತು…

Read Full News

ದಾವಣಗೆರೆ: ಕಾಂಗ್ರೆಸ್‌ ಮುಖಂಡನ ಭೀಕರ ಹತ್ಯೆ:ನಾಲ್ವರ ಬಂಧನ

ದಾವಣಗೆರೆ: ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಇಲ್ಲಿನ ಬಸವರಾಜಪೇಟೆ ನಿವಾಸಿ ಸೀಮೆಎಣ್ಣೆ ಪರಮೇಶ್(43) ತಮ್ಮ ಮನೆ ಪಕ್ಕದ ಬೀದಿ ಹುಬ್ಬಳ್ಳಿ ಚೌಡಪ್ಪ ಗಲ್ಲಿಯಲ್ಲಿರುವ ಪರಿಚಿತರ ಮನೆಗೆ ಹೋಗಿ ಬರುತ್ತಿದ್ದಾಗ ಆಟೋದಲ್ಲಿ ಬಂದ ಮೂವರು ಪರಮೇಶ್‍ಗೆ ಹೊಡೆದು ಕೆಳಗೆ ಬೀಳಿಸಿದ್ದಾರೆ. ನಂತರ ಪರಮೇಶ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ಪರಮೇಶ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು. ಈ ಹಿಂದೆ…

Read Full News

ಶಿವಮೊಗ್ಗ:ಕೋವಿಡ್19 ಮೂರನೇ ಅಲೆ ನಿಯಂತ್ರಣ ಮಾರ್ಗಸೂಚಿ ತಿದ್ದುಪಡಿ ಆದೇಶ:

ಶಿವಮೊಗ್ಗ: ನೆರೆಹೊರೆ ರಾಜ್ಯಗಳಲ್ಲಿ ಕೋವಿಡ್ 19 ರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮುಂದೆ ಸಂಭವಿಸಬಹುದಾದ ಕೋವಿಡ್ 19 ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಕೆಳಕಂಡಂತೆ ತಿದ್ದುಪಡಿ ಮಾಡಿ ಆದೇಶಿಸಿರುತ್ತಾರೆ. • ಜಿಲ್ಲಾ ವ್ಯಾಪ್ತಿಯ ಎಲ್ಲಾ ಲಾಡ್ಜ್, ಹೋಟೆಲ್, ಹೋಂ ಸ್ಟೇ/ಅರಣ್ಯ ಇಲಾಖೆ ವಸತಿ ಗೃಹಗಳಲ್ಲಿ ತಂಗಲಿರುವವರು ಬುಕಿಂಗ್ ಸಮಯದಲ್ಲಿ ಸದರಿ ಪ್ರವಾಸಿಗರು ಚೆಕ್‍ಇನ್ ದಿನದಿಂದ ಹಿಂದಿನ 72 ಗಂಟೆಗಳ ಒಳಗಾಗಿ ಮಾಡಿಸಿದ ಆರ್‍ಟಿಪಿಸಿಆರ್ ನೆಗೆಟಿವ್ ವರದಿ/ಆರ್‍ಎಟಿ ನೆಗೆಟಿವ್…

Read Full News

ಶಿವಮೊಗ್ಗ: ಒತ್ತುವರಿ ಕೆರೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯಿಂದ ಖಡಕ್ ಆದೇಶ:

ಶಿವಮೊಗ್ಗ: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆರೆಗಳ ಒತ್ತುವರಿ ತೆರವು ಪ್ರಗತಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಜಿಲ್ಲಾ ಮಟ್ಟದಲ್ಲಿ ಈ ಕುರಿತಾದ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಕೆರೆಗಳ ಸರ್ವೇ ಕಾರ್ಯವನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಎಲ್ಲಾ ತಹಶೀಲ್ದಾರ್ ಕ್ರಮ ವಹಿಸಬೇಕು. ಪ್ರತಿ ತಿಂಗಳು…

Read Full News

ಕೆಂಚನಾಲ ನೂತನ ಮಾರಿಕಾಂಬಾ ದೇವಾಲಯ ಲೋಕಾರ್ಪಣೆ:

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬಾ ದೇವಾಲಯವು ಇಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲೋಕಾರ್ಪಣೆಗೊಂಡಿತು. ಕೆಂಚನಾಲ ಮಾರಿಕಾಂಬಾ ದೇವಾಲಯದ ಲೋಕಾರ್ಪಣ ಕಾರ್ಯಕ್ರಮವು ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಡೆಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮವು ಕೆಂಜಿಗಾಪುರ ಶ್ರೀಧರ ಭಟ್ ನೇತ್ರತ್ವದಲ್ಲಿ ಜರುಗಿತು.ಹಾಗೂ ಕೊರೊನಾ ರೋಗದ ಭೀತಿಯಿಂದ ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿತ್ತು.  ರಾಜ್ಯ ಸರ್ಕಾರದ ಆದೇಶದಂತೆ ಕೊರೋನ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿತ್ತು. ತಾಲೂಕು ಆಡಳಿತ, ಗ್ರಾಮಾಡಳಿತ, ಕಂದಾಯ…

Read Full News

ಬಗರ್ ಹುಕುಂ ಸಾಗುವಳಿ ಅರ್ಜಿದಾರರಿಗೆ ತಕ್ಷಣದಲ್ಲೇ ಸಾಗುವಳಿ ಚೀಟಿಯನ್ನು ನೀಡಿ : ಕಾಗೋಡು ತಿಮ್ಮಪ್ಪ

ಸಾಗರ :ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಪ್ರಕರಣಗಳ ಸಾಗುವಳಿ ಚೀಟಿಯನ್ನು ತಕ್ಷಣದಲ್ಲಿ ನೀಡುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರ ವತಿಯಿಂದ ಸಾಗರ ತಹಶೀಲ್ದಾರ್ ರಿಗೆ ಮನವಿಯನ್ನು ಸಲ್ಲಿಸಿದರು.  ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಮಾಜಿ ಸಚಿವರು ಮಾಜಿ ವಿಧಾನಸಭಾ ಅಧ್ಯಕ್ಷರು ಆದ ಶ್ರೀ ಕಾಗೋಡು ತಿಮ್ಮಪ್ಪನವರು ಮಾತನಾಡುತ್ತಾ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ  ರೈತರ ಬಗರ್ ಹುಕುಂ ಜಮೀನು ಗಳಿಗೆ ಅರ್ಜಿ ಸಲ್ಲಿಸಿ ಸಾಕಷ್ಟು ಸಮಯ ಆದರೂ ಕೂಡ ಇದುವರೆಗೂ ಸಾಗುವಳಿ ಚೀಟಿಯನ್ನು ನೀಡಿಲ್ಲ ರೈತರು ಅತಂತ್ರ…

Read Full News

ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಸಕಾಲದ ಮಾಹಿತಿಯ ಫಲಕ ಕಾಣೆ :

ಹೊಸನಗರ: ಇಲ್ಲಿನ ಸಮೀಪದ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ಜನರಿಗೆ ಮಾಹಿತಿ ನೀಡುವ ಸಕಾಲ ದ ಫಲಕ ಕಾಣೆಯಾಗಿದೆ. ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಕಾಲ ದ ಫಲಕ ಹಾಕುವುದು ಕಡ್ಡಾಯವಾಗಿದೆ ಆದರೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಹೊಸ ಕಟ್ಟಡಕ್ಕೆ ಕಛೇರಿ ವರ್ಗಗೊಂಡಿದ್ದು ಹಳೆ ಪಂಚಾಯಿತಿಯನ್ನು ಸ್ವಚ್ಚ ಸಂಕೀರ್ಣ ಅಡಿಯಲ್ಲಿ ಸಿದ್ದಪಡಿಸಿದ್ದಾರೆ. ಆದರೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಸಲುವಾಗಿ ಹಾಕುವ ಸಕಾಲ ಫಲಕ ಇನ್ನೂ ಸ್ವಚ್ಚ ಸಂಕೀರ್ಣ…

Read Full News

ದೇವೇಗೌಡರು ಹಾಗೂ ಕುಮಾರಸ್ವಾಮಿ ಬೆಂಬಲ ಇರುವ ತನಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ : ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬೆಂಬಲ ಇರುವ ತನಕ ಮಾತ್ರ ಅಸ್ತಿತ್ವದಲ್ಲಿರುತ್ತದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.  ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಸವರಾಜ್ ಬೊಮ್ಮಾಯಿ ಅವರ ಸರಕಾರಕ್ಕೆ ಅವರ ಪಕ್ಷದಿಂದಲೇ ಬಹಳಷ್ಟು ವಿರೋಧವಿದೆ. ಈಗಾಗಲೇ ಭಿನ್ನಮತೀಯರ ಚಟುವಟಿಕೆ ಹೆಚ್ಚಾಗಿದ್ದು ಕೆಲವೇ ದಿನಗಳಲ್ಲಿ ಕೆಲವು ಮಂತ್ರಿಗಳು ಹಾಗೂ ಶಾಸಕರು…

Read Full News

ಅವ್ಯವಸ್ಥೆಯ ಆಗರ,ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾದ ರಿಪ್ಪನ್ ಪೇಟೆ ಬಸ್ ಪ್ರಯಾಣಿಕರ ತಂಗುದಾಣ !!

  ರಿಪ್ಪನ್ ಪೇಟೆ : ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್, ಸ್ವಚ್ಚ ಭಾರತ್ ಅಭಿಯಾನದಲ್ಲಿ ಪ್ರಶಸ್ತಿ ಪಡೆದ ಪಂಚಾಯತಿ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ರಿಪ್ಪನ್ ಪೇಟೆ ಯಲ್ಲಿರುವ ಒಂದೇ ಒಂದು ಪ್ರಯಾಣಿಕರ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ. ರಿಪ್ಪನ್ ಪೇಟೆ ಜನತೆಯ ದಶಕದ ಬೇಡಿಕೆ ಬಸ್ ನಿಲ್ದಾಣ ರಾಜಕಾರಣಿ ಗಳ ಇಚ್ಚ ಶಕ್ತಿ ಕೊರತೆಯಿಂದ ಆಗದೆ ರಾಜಕಾರಣಿ ಗಳಿಗೆ ತಮ್ಮ ಎಲೆಕ್ಷನ್ ಸಮಯದ ಪ್ರಚಾರದ ಅಸ್ತ್ರಕ್ಕೆ ಸೀಮಿತ ವಾಗಿದೆ. ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು…

Read Full News

ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಸಾಗರ ಪ್ರಾಂತ್ಯ ವತಿಯಿಂದ ಭೂಮಿ ಮಂಜೂರಾತಿಗೆ ಆಗ್ರಹಿಸಿ ಮನವಿ:

ಸಾಗರ: ಸೈನಿಕರಾಗಿ ದೇಶದ ಗೌರವ ಪೂರ್ವಕ ಸೇವೆಯನ್ನು ನಿರ್ವಹಿಸಿ ಸೇನೆಯಿಂದ  ನಿವೃತ್ತಿಯಾದ ಮಾಜಿ ಯೋಧರಿಗೆ ವ್ಯವಸಾಯದ ಉದ್ದೇಶಕ್ಕೆ ಭೂ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಸಾಗರ ಉಪ ವಿಭಾಗಾಧಿಕಾರಿಗಳ ಮುಖಾಂತರ  ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.      ಈ ಸಭೆಯ ನೇತೃತ್ವವನ್ನು ವಹಿಸಿದ ರಾಜ್ಯ ಮಾಜಿ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುಭಾಷ್ ಚಂದ್ರ ತೇಜಸ್ವಿ ಮಾತನಾಡುತ್ತಾ ರಾಜ್ಯ ಸರ್ಕಾರದ ಆದೇಶವಿದ್ದರೂ ಭೂ ಮಂಜೂರಾತಿಗಾಗಿಅರ್ಜಿ ಸಲ್ಲಿಸಿದ ಸೈನಿಕರ ಅರ್ಜಿಗಳನ್ನು ಪುರಸ್ಕರಿಸದೆ ಕಾಲಹರಣ…

Read Full News

ಯಾರೇ ಆಗಲಿ ನಮಗೆ ಗೌರವ ಕೊಡದಿದ್ದರೆ ಅವರಿಗೆ ನಾವು ಗೌರವ ಕೊಡಲ್ಲ : ಆಯನೂರು ಮಂಜುನಾಥ್ ಗುಡುಗು

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಎದುರು ಅವರದ್ದೇ ಪಕ್ಷದ ಎಂಎಲ್ ಸಿ ಆಯನೂರ್ ಮಂಜುನಾಥ್ ಅಸಮಾಧಾನ ಹೊರಹಾಕಿದ ಘಟನೆ ಇಂದು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಕೋವಿಡ್ ಮತ್ತು ಪ್ರವಾಹ ಸಂಬಂದಿಸಿದ ಸಭೆಯಲ್ಲಿ ನಡೆದಿದೆ. ಘಟನೆಗೆ ಕಾರಣ ಏನು? ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ತಾಲೂಕ್ ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ಮತ್ತು ಪ್ರವಾಹ ಸಂಬಂದಿಸಿದ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಆಯನೂರ್ ಮಂಜುನಾಥ್ ತಮ್ಮ ಅಸಮಾಧಾನ ಹೊರ ಹಾಕಿದರು.. ನಮಗೇನು ಗೌರವ ಇಲ್ವಾ..?…

Read Full News

ತೀರ್ಥಹಳ್ಳಿ: ತಾಲೂಕು ಪಂಚಾಯತ್ ಅಧಿಕಾರವದಿ ಮುಕ್ತಾಯ,ವಿದಾಯ ಸಭೆ:

ತೀರ್ಥಹಳ್ಳಿ: 5 ವರ್ಷಗಳ ಕಾಲ  ಆಡಳಿತ ನಡೆಸಿ ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಇಂದು ತನ್ನ ಅವಧಿಯನ್ನು ಪೂರೈಸಿದೆ. ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ 13 ಜನ ಸದಸ್ಯರುಗಳ ಅಂತಿಮ ವಿಧಾಯಸಭೆ ಇಂದು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು  ತಾಲ್ಲೂಕು  ಅಧ್ಯಕ್ಷೆ ಶ್ರೀಮತಿ ನವಮಣಿ ರವಿಕುಮಾರವರು ಉಪಾಧ್ಯಕ್ಷೆ ಶ್ರೀಮತಿ ಯಶೋಧ ಮಂಜುನಾಥ .ಸದಸ್ಯರುಗಳಾದ ಸಾಲೆಕೊಪ್ಪ ರಾಮ ಚಂದ್ರ. ಕುಕ್ಕೆ ಪ್ರಶಾಂತ್ ,ಕೆಳಕೆರೆ ದಿವಾಕರ್ .ಶ್ರುತಿ ವೆಂಕಟೇಶ್.   ಲಕ್ಷ್ಮಿ ಉಮೇಶ್,  ಗೀತಾ ಸದಾನಂದ ಶೆಟ್ಟಿ,  ವೀಣಾ ಗಿರೀಷ್,ಸುಮಾ ಉದಯ . ಚಂದವಳ್ಳಿ ಸೋಮಶೇಖರ್. ಬೇಗುವಳ್ಳಿ…

Read Full News

ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ :ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಪೊಲೀಸ್ ಅಧಿಕಾರಿಗಳಿಗೆ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ಎಲ್ಲರಂತೆ ನಾನೂ ಸಂಚರಿಸುತ್ತೇನೆ. ನನಗಾಗಿ ಯಾವುದೇ ವಿಶೇಷ ಸೌಲಭ್ಯ ಬೇಡ ಎಂದು ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸಲು ಅವಕಾಶವಿದೆ. ಆದರೆ ಮಂತ್ರಿಗಳಿಗೆ ಈ ವಿಶೇಷ ಸೌಲಭ್ಯವಿಲ್ಲ. ಅವಕಾಶ ಇಲ್ಲದೇ ಇದ್ದರೂ ಕೆಲ ಮಂತ್ರಿಗಳು ಪ್ರಭಾವ ಬಳಸಿ ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸುತ್ತಾರೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುತ್ತದೆ. ಈ ಹಿಂದೆ…

Read Full News

ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಶಿವಮೊಗ್ಗದ ಯುವಕನ ಕೊಲೆ:

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಇಂದು ಹಾಡುಹಗಲೇ ಭೀಕರ ಕೊಲೆಯಾಗಿದೆ. ಚಾಕುವಿನಿಂದ ಇರಿದು ಈ ಕೊಲೆ ಮಾಡಲಾಗಿದ್ದು, ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ರಾಹಿಲ್(20) ಕೊಲೆಯಾದ ಯುವಕನಾಗಿದ್ದು, ಅಜ್ಗರ್(19) ಕೊಲೆಮಾಡಿರುವ ಯುವಕನಾಗಿದ್ದಾನೆ.ನಿನ್ನೆ ಸಂಜೆ ಕೊಲೆ ಆರೋಪಿ ಅಜ್ಗರ್ ತಂದೆಯು ಟ್ಯಾಂಕ್ ಮೊಹಲ್ಲಾ ರಸ್ತೆಯಲ್ಲಿ ಸೈಕಲ್ ನಲ್ಲಿ ಬರುತ್ತಿದ್ದ ವೇಳೆ, ರಾಹಿಲ್ ನ ಬೈಕ್ ಡಿಕ್ಕಿ ಹೊಡೆದಿತ್ತು. ಈ ವಿಚಾರದಲ್ಲಿ ತನ್ನ ತಂದೆಯ ಸೈಕಲ್ ರಿಪೇರಿ ಮಾಡಿಕೊಡುವಂತೆ ಅಜ್ಗರ್ ತಿಳಿಸಿದ್ದನಂತೆ. ಈ ವೇಳೆ ಮಾತಿಗೆ ಮಾತು…

Read Full News

ಶಿವಮೊಗ್ಗಜಿಲ್ಲೆಯ ನೂತನ ಮಂತ್ರಿಗಳಿಗೆ ಶ್ರೀ ರೇಣುಕಾನಂದ ಸ್ವಾಮೀಜಿಗಳಿಂದ ಅಭಿನಂದನೆ.

ರಿಪ್ಪನ್ ಪೇಟೆ : ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಬಸವರಾಜ್ ಬೊಮ್ಮಾಯಿ ಅವರ ಸರಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಕೆಎಸ್ ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ರವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಅಭಿನಂದಿಸಿದ್ದಾರೆ.  ರಿಪ್ಪನ್ ಪೇಟೆ ಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ಜನನಾಯಕ ಆರಗ ಜ್ಞಾನೇಂದ್ರ ರವರಿಗೆ ರಾಜ್ಯದ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ. …

Read Full News

ಸಹೃದಯಿ ಶಾಸಕ ಆರಗ ಜ್ಞಾನೇಂದ್ರರವರಿಗೆ ಗೃಹಖಾತೆ ಲಭಿಸಿರುವುದು ಖುಷಿ ತಂದಿದೆ : ಎಂ ಬಿ ಲಕ್ಷಣಗೌಡ

ರಿಪ್ಪನ್ ಪೇಟೆ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಸರಳ ಹಾಗೂ ಸಹೃದಯಿ ವ್ಯಕ್ತಿತ್ವದ ಜನನಾಯಕ ಆರಗ ಜ್ಞಾನೇಂದ್ರರವರು ಗೃಹ ಸಚಿವರಾಗಿ ಆಯ್ಕೆಯಾಗಿರುವುದು ಸಮಾಜಕ್ಕೆ ಹರ್ಷ ತಂದಿದೆ ಎಂದು ಹೊಸನಗರ ತಾಲೂಕಿನ ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಎಂ ಬಿ ಲಕ್ಷಣಗೌಡ ಹೇಳಿದ್ದಾರೆ. ಕಳೆದ 45 ವರ್ಷಗಳಿಂದ ಸಂಘ ಪರಿವಾರದಲ್ಲಿ ಸಕ್ರೀಯ ನಾಯಕರಾಗಿದ್ದು 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 4 ಬಾರಿ ಶಾಸಕರಾಗಿ ಎಂದಿಗೂ ಅಧಿಕಾರಕ್ಕಾಗಿ ಲಾಭಿ ನಡೆಸದೇ ಇದ್ದ ಜನನಾಯಕನಿಗೆ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಗೃಹ ಸಚಿವರಾಗಿ…

Read Full News

ಹೊಸನಗರ :ಸಾರ್ವಜನಿಕ ಆಸ್ಪತ್ರೆಯಲ್ಲೆ ನೇಣಿಗೆ ಶರಣಾದ ರೋಗಿ:

ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದಾಖಲಾಗಿದ್ದ  ಸೊನಲೆಯ ರೋಗಿಯೊಬ್ಬ ಆಸ್ಪತ್ರೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೊನಲೆಯ ವಾಸಿ ಕೃಷಿಕ ವೃತ್ತಿ ಮಾಡಿಕೊಂಡಿದ್ದ ಜಗದೀಶ್ (50) ಎಂಬುವವರು ಅನಾರೋಗ್ಯ ನಿಮಿತ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು,ಶನಿವಾರ ಮಧ್ಯರಾತ್ರಿ ತಾನು ಮಲಗಿದ್ದ ಕೊಠಡಿಯಿಂದ ಹೊರಬಂದ ಜಗದೀಶ್ ಸಾರ್ವಜನಿಕ ಆಸ್ಪತ್ರೆ ಎರಡನೆ ಅಂತಸ್ತಿಗೆ ತೆರಳುವ ಮೆಟ್ಟಿಲುಗಳಿಗೆ ಅಳವಡಿಸಿದ ಸರಳುಗಳಿಗೆ ತಾನು ಧರಿಸಿದ ಲುಂಗಿಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ….

Read Full News

ಚಂದ್ರಗುತ್ತಿ: ರೇಣುಕಾಂಬ ದೇವಸ್ಥಾನದ ಪ್ರಧಾನ ಅರ್ಚಕರಾದ ಅರ್ಚಕ್ ದತ್ತಾತ್ರೇಯ ಭಟ್ ನಿಧನ:

ಚಂದ್ರಗುತ್ತಿ: ಇಲ್ಲಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಅರ್ಚಕ್ ದತ್ತಾತ್ರೇಯ ಭಟ್ (80) ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಶನಿವಾರ ತೀವ್ರವಾದ ಎದೆನೋವು ಕಾಣಿಕೊಂಡಿತ್ತು, ತಕ್ಷಣವೇ ಶಿರಸಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತರು ಪುತ್ರರಾದ ಅರ್ಚಕ ಅರವಿಂದ್ ಭಟ್, ಅರ್ಚಕ ನಿರಂಜನ್ ಭಟ್ ಸೇರಿದಂತೆ ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸಂತಾಪ:  ಶ್ರೀ…

Read Full News

ರಿಪ್ಪನ್ ಪೇಟೆ : ಜಿಲ್ಲೆಯ ನೂತನ ಸಚಿವರುಗಳಿಗೆ ಅದ್ದೂರಿ ಸ್ವಾಗತ

ರಿಪ್ಪನ್ ಪೇಟೆ: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ಮೊದಲ ಬಾರಿಗೆ ರಿಪ್ಪನ್ ಪೇಟೆಗೆ ಆಗಮಿಸಿದ ಶಿವಮೊಗ್ಗ ಉಸ್ತುವಾರಿ ಸಚಿವರಾದ ಕೆಎಸ್ ಈಶ್ವರಪ್ಪನವರು ಹಾಗೂ ಪ್ರಪ್ರಥಮವಾಗಿ ಸಚಿವರಾಗಿರುವ ಆರಗ ಜ್ಞಾನೇಂದ್ರ ರವರನ್ನು ರಿಪ್ಪನ್ ಪೇಟೆಯ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಡಗರದಿಂದ ಪಟಾಕಿ ಸಿಡಿಸಿ,ಸಾರ್ವಜನಿಕರಿಗೆ ಸಿಹಿ ಹಂಚಿ ಬರಮಾಡಿಕೊಂಡರು. ರಿಪ್ಪನ್ ಪೇಟೆಯ ವಿನಾಯಕ ವೃತ್ತಕ್ಕೆ ಬಂದಿಳಿದ ಸಚಿವರುಗಳು ಅದ್ದೂರಿ ಸ್ವಾಗತ ಸ್ವೀಕರಿಸಿದ ನಂತರ ಗ್ರಾಮ ಪಂಚಾಯತ್ ವರೆಗೂ ಮೆರವಣಿಗೆ ಮೂಲಕ ಬಂದ ಸಚಿವರುಗಳಿಗೆ ರಿಪ್ಪನ್ ಪೇಟೆ ಗ್ರಾಮ…

Read Full News

ಧರೆ ಕುಸಿತ ಪ್ರದೇಶಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ:

ರಿಪ್ಪನ್ ಪೇಟೆ: ಮಲೆನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಬಾರಿ ಮಳೆಗೆ ವಿಪರೀತ ಹಾನಿಯಾಗಿತ್ತು ಈ ಹಿನ್ನಲೆ ಯಲ್ಲಿ  ಹೊಸನಗರ ತಾಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ದೊಂಬೆಕೊಪ್ಪದ  ಗ್ರಾಮದ ಹುಚ್ಚಪ್ಪ ನವರ ಮನೆ ಸಮೀಪದಲ್ಲಿ ಅತಿವೃಷ್ಟಿಯಿಂದ ಧರೆ ಕುಸಿದಿರುವ ಪ್ರದೇಶಕ್ಕೆ ಎಂಐಎಸ್ಎಲ್ ಅಧ್ಯಕ್ಷ ಹಾಗು ಸಾಗರ ವಿಧಾನ ಸಭೆ ಶಾಸಕ ಹರತಾಳು ಹಾಲಪ್ಪನವರು ಇಂದು ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಈ…

Read Full News

ಇಂದಿನಿಂದ ರಾಜ್ಯಾದ್ಯಂತ ವೀಕೆಂಡ್ ಕರ್ಫ಼್ಯೂ ಜಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:  ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಇತ್ತೀಚೆಗೆ ಏರುಗತಿಯಲ್ಲಿ ಸಾಗಲು ಆರಂಭಿಸಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದು ಕೋವಿಡ್ ಟಫ್ ರೂಲ್ಸ್ ಜಾರಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇನ್ನು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ನಿರ್ಧರಿಸಲಾಗಿದೆ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.