w
Headlines
Home » Blog » Page 17

ಜುಲೈ 30 ರ ಹುಬ್ಬಳ್ಳಿ ಕಾಂಗ್ರೆಸ್ ಸಮಾವೇಶದಲ್ಲಿ ಮಧುಬಂಗಾರಪ್ಪ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆ: ಅರ್ ಎಂ ಮಂಜುನಾಥ ಗೌಡ

ಸಾಗರ: ಸೊರಬದ ಮಾಜಿ ಶಾಸಕರಾದ ಮಧು ಬಂಗಾರಪ್ಪ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಆರ್ ಎಂ ಮಂಜುನಾಥ ಗೌಡರವರು ಹೇಳಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜುಲೈ 30ರಂದು ಹುಬ್ಬಳ್ಳಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ  ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಮಧು ಬಂಗಾರಪ್ಪ ರವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ…

Read Full News

ಕುಮಾರ್ ಬಂಗಾರಪ್ಪನವರಿಗೆ ಸಚಿವ ಸ್ಥಾನ ನೀಡಿ:ಸೊರಬ ಬಿಜೆಪಿ ಮುಖಂಡರ ಆಗ್ರಹ:

ಸೊರಬ:ಶಾಸಕ ಕುಮಾರ್ ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡಬೇಕೆಂದು ಸೊರಬ ತಾಲೂಕ್ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.  ಬಂಗಾರಪ್ಪನವರ ಪುತ್ರರಾದ ಕುಮಾರ ಬಂಗಾರಪ್ಪ ಸೊರಬ ತಾಲೂಕು ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು ,ತಾಲೂಕಿನ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ದೇವಸ್ಥಾನ, ಸೇತುವೆ,ಮುಗೂರು,ಮೂಡಿ,ಕಚವಿ ಏತ ನೀರಾವರಿ ಹಾಗೂ ಶ್ರೀ ರೇಣುಕಾಂಬ ದೇವಸ್ಥಾನ ಚಂದ್ರಗುತ್ತಿ,ಮೊರಾರ್ಜಿ ವಸತಿ ಶಾಲೆಗೆ ಸಾವಿರಾರು ಕೋಟಿ ಅನುದಾನವನ್ನು ಸ್ವ ಪ್ರಯತ್ನದಿಂದ ತಂದು ಕಾಮಗಾರಿಗಳು ನಡೆಯುತ್ತಿವೆ. ಸೊರಬ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿದ್ದು ಮತ್ತು ಆನವಟ್ಟಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿ…

Read Full News

ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ್ ಬೊಮ್ಮಾಯಿ ಗೆ ಶುಭಾಶಯ ಕೋರಿದ ಕುಮಾರ್ ಬಂಗಾರಪ್ಪ:

  ಸೊರಬ: ಶಾಸಕರಾದ ಕುಮಾರ್ ಬಂಗಾರಪ್ಪನವರು ನೂತನ ನಿಯೋಜಿತ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ರವರಿಗೆ ಸೊರಬ ವಿಧಾನಸಭಾ ಜನತೆಯ ಪರವಾಗಿ ಶುಭಾಶಯ ಕೋರಿದರು. ಕರ್ನಾಟಕದ  ಜನರ ಸೇವೆ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ,ಸಮರ್ಥವಾಗಿ ನಿಭಾಯಿಸುವ ಶಕ್ತಿ ಅವರಲ್ಲಿದೆ,ಜನಪರ ಹಾಗೂ ಅಭಿವೃದ್ಧಿ ಪರ ಸರ್ಕಾರ ನೀಡುತ್ತಾರೆ ಅನ್ನೋ ಭರವಸೆ ಇದೆ ಒಳ್ಳೆಯದಾಗಲಿ ಎಂದು ಹಾರೈಸುವೆ ಎಂದರು. ವರದಿ: ವೆಂಕಟೇಶ್ ಚಂದ್ರಗುತ್ತಿ ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್…

Read Full News

ಕರ್ನಾಟಕದ ನೂತನ ಉಪ ಮುಖ್ಯಮಂತ್ರಿಗಳಾಗಿ ಆರ್ ಅಶೋಕ್,ಗೋವಿಂದ ಕಾರಜೋಳ, ಶ್ರೀರಾಮುಲು ಆಯ್ಕೆ:

ಬೆಂಗಳೂರು: ಮುಖ್ಯಮಂತ್ರಿ ಘೋಷಣೆ ಬಳಿಕ ಮೂವರು ಉಪಮುಖ್ಯಮಂತ್ರಿಗಳ ಹೆಸರು ಘೋಷಣೆ ಮಾಡಲಾಗಿದೆ. ಈ ಮೊದಲು ಕಂದಾಯ ಸಚಿವರಾಗಿದ್ದ ಹಾಗೂ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆರ್. ಅಶೋಕ್, ಗೋವಿಂದ ಕಾರಜೋಳ ಮತ್ತು ಬಿ. ಶ್ರೀರಾಮುಲು ಉಪಮುಖ್ಯಮಂತ್ರಿಗಳಾಗಿ ನೇಮಕಗೊಂಡಿದ್ದಾರೆ. ಒಕ್ಕಲಿಗ, ದಲಿತ ಮತ್ತು ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ. ಹೆಸರು ಘೋಷಣೆ ಬಳಿಕ ಬಸವರಾಜ ಬೊಮ್ಮಾಯಿ…

Read Full News

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ

ಬೆಂಗಳೂರು: ಇಂದು ಇಲ್ಲಿ ನಗರದ ಕ್ಯಾಪಿಟಲ್ ಹೊಟೇಲ್ ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ರವರನ್ನು ಆಯ್ಕೆ ಮಾಡಲಾಗಿದೆ.   ಉತ್ತರ ಕರ್ನಾಟಕ ಮೂಲದ ಲಿಂಗಾಯತ ಸಮುದಾಯಕ್ಕೆ ಸೇರಿದ ಬೊಮ್ಮಾಯಿಯವರ ಆಯ್ಕೆಯಿಂದ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ.ನಿರಾಣಿ,ಬೆಲ್ಲದ್,ಸಂತೋಷ್ ಹಾಗೂ ಜೋಶಿ ಯವರ ಹೆಸರು ಕೇಳಿ ಬಂದಿತ್ತು.

Read Full News

ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್:

ಶಿವಮೊಗ್ಗ:  ಸೊರಬ ಕ್ಷೇತ್ರದ ಮಾಜಿ ಶಾಸಕರಾದ ಮಧು ಬಂಗಾರಪ್ಪ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷದ ಕೈ ಹಿಡಿಯವ ಮುಹೂರ್ತ ಫಿಕ್ಸ್ ಆಗಿದೆ.   ಇದೇ ತಿಂಗಳ 30 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜಿವಾಲಾ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿದ್ದಾರೆ.ಮಧುಬಂಗಾರಪ್ಪನವರೊಂದಿಗೆ ಅವರ ಬೆಂಬಲಿಗರು ಕೂಡ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ.   ಶಿವಮೊಗ್ಗದಲ್ಲಿ ಬೃಹತ್‌ ಸಮಾವೇಶ ನಡೆಸಿ ಕಾಂಗ್ರೆಸ್ ಸೇರ್ಪಡೆಯಾಗುವ…

Read Full News

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ:

  ಬೆಂಗಳೂರು: ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ವಿಧಾನ ಸೌಧದಲ್ಲಿಂದೂ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದಾಯ ಭಾಷಣ ಮಾಡಿದ ಅವರು ತಮ್ಮ ರಾಜಕೀಯ ಏಳು – ಬೀಳುಗಳನ್ನು ಹೇಳುವಾಗ ಭಾವುಕರಾದರು. ದುಃಖತಪ್ತರಾಗಿ ಮಾತನಾಡಿದ ಅವರು “75 ವರ್ಷ ದಾಟಿದ ಯಡಿಯೂರಪ್ಪನವರನ್ನು ಮತ್ತೆ ಎರಡು ವರ್ಷ ಮುಖ್ಯಮಂತ್ರಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಅಮಿತ್‌ ಶಾರವರಿಗೆ, ಜೆ.ಪಿ ನಡ್ಡಾರವರಿಗೆ ಧನ್ಯವಾದ ತಿಳಿಸುತ್ತೇನೆ ಅವರಿಗೆ ನಾನು ಋಣಿಯಾಗಿದ್ದೇನೆ….

Read Full News

ರಿಪ್ಪನ್ ಪೇಟೆ: ಬುಧವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಪ್ರತಿಭಟನೆ

ರಿಪ್ಪನ್ ಪೇಟೆ: ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಬುಧವಾರ ಬೆಳಗ್ಗೆ 10:00 ಗಂಟೆ ಗೆ ಸರಿಯಾಗಿ ಬಿಜೆಪಿ ಪಕ್ಷದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಿಪ್ಪನ್ ಪೇಟೆ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಪಂ ಸದಸ್ಯರಾದ ಆಸೀಪ್ ಬಾಷಾಸಾಬ್ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಕ್ಕಳು ಹಾಗೂ ಬಾಣಂತಿಯರಿಗೆ ಹಂಚುವ ಮೊಟ್ಟೆಯಲ್ಲಿ ಭಾರಿ ಹಗರಣ ನಡೆಸಿರುವ ಶಶಿಕಲಾ ಜೊಲ್ಲೆ ತಮ್ಮ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರ ವಿರುದ್ಧ…

Read Full News

ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ವಿಶಾಲ ಗಾಣಿಗ ಕೊಲೆಯ ಪಿನ್​ ಟು ಪಿನ್​ ಡೀಟೈಲ್ಸ್​:

ಉಡುಪಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದ ವಿಶಾಲ ಗಾಣಿಗ ಅವರ ಹತ್ಯೆ ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ ಪತಿಯೇ ಪತ್ನಿಯ ಕೊಲೆ ಸಂಚು ರೂಪಿಸಿದ ವಿಚಾರ ಬೆಳಕಿಗೆ ಬಂದಿದ್ದು, ಕೊಲೆಯ ಹಿಂದಿನ ಪಿನ್​ ಟು ಪಿನ್​ ಡೀಟೈಲ್ಸ್​ ಇಲ್ಲಿದೆ. ವಿಶಾಲ ಗಾಣಿಗ ತನ್ನ ಆರು ವರ್ಷದ ಮಗಳ ಜೊತೆಗೆ ಜೂನ್ ತಿಂಗಳಾಂತ್ಯದಲ್ಲಿ ದುಬೈನಿಂದ ತವರಿಗೆ ಬಂದಿದ್ದರು. ಪತಿ ರಾಮಕೃಷ್ಣ ದುಬೈನಲ್ಲಿ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ವಿಶಾಲ ಗಾಣಿಗ ಅವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು…

Read Full News

ಅತಿವೃಷ್ಟಿ ಮಳೆಗೆ ಸಾಗರ ತಾಲ್ಲೂಕಿನಲ್ಲಿ 50 ಕೋಟಿಗೂ ಅಧಿಕ ನಷ್ಟ: ಮಾಜಿ ಜಿಪಂ ಸದಸ್ಯೆ ಅನಿತಾ ಕುಮಾರಿ

ಆನಂದಪುರ: ತಾಲ್ಲೂಕಿನಲ್ಲಿ ಕಳೆದ ವಾರದಿಂದ ಸುರಿದ ಮಳೆಗೆ ಇದುವರೆಗೂ 50 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾಕುಮಾರಿ ಹೇಳಿದ್ದಾರೆ. ಆನಂದಪುರ ಸಮೀಪದ ಹೊಸೂರು ಗ್ರಾಮಪಂಚಾಯತಿ  ವ್ಯಾಪ್ತಿಯಲ್ಲಿ ಅತಿವೃಷ್ಟಿ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ ಸಾಗರ ತಾಲ್ಲೂಕಿನಲ್ಲಿ ಇದುವರೆಗೂ ಸುರಿದ ಮಳೆಗೆ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ    ಭತ್ತ ನಾಟಿ ಮಾಡಿ 500 ಹೆಕ್ಟೇರ್ ಬೆಳೆ ನಾಶವಾಗಿದೆ    ಶುಂಠಿ ಹಾಗೂ ಜೋಳ ಕೊಳೆಯುವ ಹಂತಕ್ಕೆ ಬಂದಿದೆ ಇದರಿಂದ…

Read Full News

ಅರಮನೆ ಹಳ್ಳ ಸೇತುವೆ: ಹಲವು ದಶಕಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ:ಹಳಿಯೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಹಲವು ದಶಕಗಳ  ಬೇಡಿಕೆಯಾದ ಅರಮನೆ ಹಳ್ಳ ಸೇತುವೆಗೆ ಹಣ ಬಿಡುಗಡೆಯಾಗಿದ್ದು ಕೆಲವೆ ದಿನಗಳಲ್ಲಿ ಕಾಮಗಾರಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.   ಇಲ್ಲಿನ ಅರಮನೆ ಹಳ್ಳಕ್ಕೆ ಸೇತುವೆ ನಿರ್ಮಾಣ ವಿಚಾರದಲ್ಲಿ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎಂಬ ಅಡಿಬರಹದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಮಾಡಿತ್ತು.ಈ ವರದಿಗೆ ಕೂಡಲೇ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪನವರ ಆಪ್ತ ಸಹಾಯಕರಾದ ಕೀರ್ತಿ ಗೌಡರವರು ಅರಮನೆ ಹಳ್ಳ ಸೇತುವೆಗೆ ಬಿಡುಗಡೆಯಾಗಿರುವ  ಅನುದಾನದ ಬಗ್ಗೆ ಮಾಹಿತಿ ನೀಡಿದರು.  ಈ…

Read Full News

ರಿಪ್ಪನ್ ಪೇಟೆ: ಕಾರ್ ಟೈರ್ ಸ್ಪೋಟ, ಚಲಿಸುತ್ತಿದ್ದ ಬಸ್ ಗೆ ಹಿಮ್ಮುಖವಾಗಿ ಡಿಕ್ಕಿ :

ರಿಪ್ಪನ್ ಪೇಟೆ : ರಿಪ್ಪನ್ ಪೇಟೆ ಯಿಂದ ತೀರ್ಥಹಳ್ಳಿ ಕಡೆ ಹೋಗುತಿದ್ದ ರಾಜಲಕ್ಷ್ಮಿ ಬಸ್ ಗೆ ಅದೇ ದಿಕ್ಕಿನಲ್ಲಿ ಹೋಗುತಿದ್ದ ಕಾರಿನ ಟೈರ್ ಸ್ಫೋಟಗೊಂಡು ಬಸ್ ಗೆ ಹಿಮ್ಮುಖ ವಾಗಿ ಡಿಕ್ಕಿ ಹೊಡೆದಿದೆ.. ಬಸ್ ಚಾಲಕನ ಸಮಯ ಪ್ರಜ್ಞೆ ಯಿಂದ ಸಂಭವಿಸಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ. ಕಾರ್ ನಲಿದ್ದ ಮೂವರು ಸುರಕ್ಷಿತ ರಾಗಿದ್ದಾರೆ.. ಕಾರ್ ನ ಮುಂಬಾಗ ಸಂಪೂರ್ಣ ಜಖಂಗೊಂಡಿದೆ. ವರದಿ : ರಾಮನಾಥ್ ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು…

Read Full News

ಮನೆ ಕಳ್ಳತನ ಆರೋಪಿ ಬಂಧನ:ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ ವಶ:

ಭದ್ರಾವತಿ: ಹೊರ ಜಿಲ್ಲೆಗಳಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು  ಪಟ್ಟಣದ ಪೊಲೀಸರು ಬಂಧಿಸಿ ಕಳವು ಮಾಡಿದ್ದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿ ಪ್ರಸಾದ್ ಮತ್ತು ಮಾನ್ಯ ಹೆಚ್ಚುವರಿ ಅಧೀಕ್ಷಕರಾದ ಶೇಖರ್ ಹೆಚ್ ಟಿ ರವರ ಮಾರ್ಗದರ್ಶನದಲ್ಲಿ ಭದ್ರಾವತಿ ಉಪವಿಭಾಗದ ಎಎಸ್ಪಿ ಯವರಾದ ಸಾಹಿಲ್ ಬಾಗ್ಲಾ ರವರ ನೇತೃತ್ವದ ಪೊಲೀಸ್ ತಂಡ ಹೊರ ಜಿಲ್ಲೆಯಲ್ಲಿ ಬೀಗ ಹಾಕಿದ ಮನೆ ಕಳ್ಳತನ ಮಾಡುತ್ತಿದ್ದ ಭದ್ರಾವತಿ ಸತ್ಯಸಾಯಿ…

Read Full News

ಹಲವು ದಶಕದ ಸಮಸ್ಯೆ ಕೇವಲ ಭರವಸೆಯಲ್ಲೆ ಕಳೆಯಿತು:ಸೇತುವೆ ಇಲ್ಲದೇ ಹಳಿಯೂರು ಗ್ರಾಮಸ್ಥರ ನರಕಯಾತನೆ

ರಿಪ್ಪನ್ ಪೇಟೆ: ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಗವಟೂರು ಗ್ರಾಮದ ಹಳಿಯೂರು (ಮತ್ತಿಮನೆ, ಸಂಪಳ್ಳಿ ಸಂಪರ್ಕ)ಭಾಗದ ಜನರು ಕಳೆದ 60 ವರ್ಷಗಳಿಂದ ಸೇತುವೆ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.  ದಿನ ನಿತ್ಯದ ವಸ್ತುಗಳನ್ನು ಖರೀದಿಸುವರು, ಶಾಲೆಗೆ ಹೋಗುವ ಮಕ್ಕಳು, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗೋಕೆ ಆಗದೇ ಪರದಾಡುತ್ತಿರುವ ಊರಿನ ಜನರು, ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ ಇತ್ಯಾದಿ ಮೂಲಭೂತ ಸೌಕರ್ಯಗಳ ಸಮಯಕ್ಕೆ ಸರಿಯಾಗಿ ಪಡೆಯಲು ಕೃಷಿಕರು ಸೇತುವೆ ಇಲ್ಲದೆ ಸಂಕಟಪಡುತ್ತಿದ್ದಾರೆ. ಗ್ರಾಮಸ್ಥರು ಸೇತುವೆ ರಸ್ತೆ ಇಲ್ಲದೆ ಬೇಸತ್ತು…

Read Full News

ಜೆಡಿಎಸ್ ಮುಖಂಡ ಅರ್ ಎ ಚಾಬುಸಾಬ್ ಗೆ ಮಾತೃ ವಿಯೋಗ:

ರಿಪ್ಪನ್ ಪೇಟೆ: ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ರವರ ತಾಯಿ ಆಯಿಶಾಬೀ (95) ರವರು ವಯೋಸಹಜ ಕಾಯಿಲೆಯಿಂದ ರಿಪ್ಪನ್ ಪೇಟೆಯ ಸ್ವಗೃಹ ದಲ್ಲಿ  ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ರಿಪ್ಪನ್ ಪೇಟೆಯ ಖಬರ್ ಸ್ಥಾನ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.ಮೃತರು ಅರ್ ಎ ಚಾಬುಸಾಬ್ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

Read Full News

ಮುಖ್ಯಮಂತ್ರಿಗಳಿಂದ ಸಾಗರ ತಾಲ್ಲೂಕಿನಲ್ಲಿ 459.19 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಸಾಗರ:ತಾಲ್ಲೂಕಿನ ಹಲವು ಕಾಮಗಾರಿಗಳಿಗೆ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ರವರು ಚಾಲನೆ ನೀಡಿದರು.   ಅವರು ಇಲ್ಲಿನ ಗಾಂಧಿಮಂದಿರದ ಹೊರಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಈ ಕೆಳಗಿನ ಕಾಮಗಾರಿಗಳಿಗೆ ಚಾಲನೆ ನೀಡಿದರು.  ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯ 155-00 ಕೋಟಿ ರೂಪಾಯಿಗಳು, ಜೋಗ ಅಭಿವೃದ್ಧಿ ಕಾಮಗಾರಿಗಳಿಗೆ 165-00ಕೋಟಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206 (69) ತುಮಕೂರು ಹೊನ್ನಾವರ ರಸ್ತೆಯ ಕಿ.ಮೀ. 278 ರಿಂದ 286.40ರವರೆಗೆ ಸಾಗರ ನಗರ ವ್ಯಾಪ್ತಿಯಲ್ಲಿ…

Read Full News

ಜೀವನದ ಕೊನೆ ಕ್ಷಣದವರೆಗೂ ಸಮಾಜ ಸೇವೆಗೆ ಸಿದ್ಧ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಆನಂದಪುರಂ: ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಜೀವನದ ಕೊನೆ ಕ್ಷಣದವರೆಗೂ ಸಮಾಜಸೇವೆ ಮಾಡಲು ಸಿದ್ಧ.ಕೊವಿಡ್ ಸಂದರ್ಭದಲ್ಲಿ ಸರ್ಕಾರ ಅತೀ  ಹೆಚ್ಚಿನ ಗಮನ ಕೊಡಬೇಕಿತ್ತು, ಸರ್ಕಾರ ಅತಿ ಹೆಚ್ಚಿನ ಒತ್ತು ಕೊಟ್ಟಿಲ್ಲ , ಆದ್ದರಿಂದ ಹಲವರು ನೊಂದಿದ್ದಾರೆ,ಕಷ್ಟದಲ್ಲಿದ್ದಾರೆ. ಸಮಾಜದಲ್ಲಿ ಇನ್ನೂ ಕಡುಬಡವರಿದ್ದಾರೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದರು. ಕರೋನದ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,…

Read Full News

ತುರ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ದರಾಗಿರಿ: ಕುಮಾರ್ ಬಂಗಾರಪ್ಪ

ಸೊರಬ: ತಾಲೂಕಿನಲ್ಲಿ ಅತಿವೃಷ್ಟಿ ನಿಮಿತ್ತ ಮಾನ್ಯ ಶಾಸಕರು ಇಂದು ತಾಲೂಕು ಕಚೇರಿ ಸೊರಬದಲ್ಲಿ ತುರ್ತು ಸಭೆಯನ್ನು ನಡೆಸಿದರು. ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು  ಈ ಸಂದರ್ಭದಲ್ಲಿ ತಾಲೂಕ ಆಡಳಿದ ತುರ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿರಲು ಸೂಚಿಸಿದರು. ಈ ಸಂದರ್ಭದಲ್ಲಿ  ತಹಶೀಲ್ದಾರ್ ಸೊರಬ, ಪುರಸಭೆ ಅಧ್ಯಕ್ಷರು ಹಾಗೂ ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ಸೊರಬ ವಿಧಾನಸಭಾ ಕ್ಷೇತ್ರದ ಸೊರಬ ಪಟ್ಟಣದ ದಂಡಾವತಿ ಸೇತುವೆ, ಹಳೆಸೊರಬ ಗ್ರಾಮದ ಕೆರೆ ತೀರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ವಿಷಯ…

Read Full News

ಸೊರಬ ತಾಲೂಕಿನಲ್ಲಿ ಮಳೆಯ ಅಬ್ಬರ : ಹಲವೆಡೆ ಪ್ರವಾಹ

ಸೊರಬ:ತಾಲ್ಲೂಕಿನಲ್ಲಿ ಇಂದು ವರುಣನ ಅಬ್ಬರ ಹೆಚ್ವಾಗಿದ್ದು ಹಲವು ಭಾಗಗಳಲ್ಲಿ ಮನೆ, ಕೃಷಿ ಭೂಮಿ ಹಾಗೂ ರಸ್ತೆಗಳು ಜಲಾವೃತಗೊಂಡಿದ್ದು ಇಡೀ ತಾಲ್ಲೂಕಿನಲ್ಲಿ ಪ್ರವಾಹವನ್ನು ಸ್ರಷ್ಟಿಸಿದೆ. ಚಂದ್ರಗುತ್ತಿಯ ವರದಾನದಿ,ಸೊರಬದ ಗೌರಿ ಕೆರೆ,ಚನ್ನಪಟ್ಟಣ ಸೇತುವೆ,ಕಡಸೂರ್ ರಸ್ತೆ,ಕತವಾಯಿ ಸೇತುವೆ ಮುಳುಗಡೆಯಾಗಿವೆ, ಇದರಿಂದ ಸಂಪರ್ಕ ರಸ್ತಗಳು ಸಂಪೂರ್ಣವಾಗಿ ಬಂದ್ ಆಗಿ ರಸ್ತೆಗಳಮೇಲೆ  ಅಪಾಯದಮಟ್ಟ  ಮೀರಿ ನೀರು ಹರಿಯುತ್ತಿದ್ದು ವಾಹನಗಳು ಸಂಚರಿಸದಂತೆ  ಸೊರಬ ಪೋಲೀಸ್ ಇಲಾಖೆಯವರು ರಸ್ತೆಗೆ ಅಡ್ಡವಾಗಿ  ಬ್ಯಾರಿಕೇಡ್ ಅಳವಡಿಸಿದ್ದಾರೆ, ಹಾಗೂ ಯಾವುದೇ ರೀತಿಯ  ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ…

Read Full News

ಪುರಲೆ ಕೆರೆಗೆ ಹಾರಿದ ಯುವಕ!: ಮಳೆಯ ನಡುವೆ ಶೋಧ ಕಾರ್ಯಾಚರಣೆ.

ಶಿವಮೊಗ್ಗ:ಕಿಡ್ನಿ ಸಮಸ್ಯೆ ಯಿಂದ ಬಳಲುತಿದ್ದ ಯುವಕನೊಬ್ಬ ಪುರಲೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ವೇಳೆ ನಡೆದಿದೆ. ಪುರಲೆ ನಿವಾಸಿ ಹರೀಶ್ (26) ಕೆರೆಗೆ ಹಾರಿದ್ದು ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಕರೆಸಿದ್ದಾರೆ.ಅಗ್ನಿ ಶಾಮಕ ದಳದ ಸಿಬ್ಬಂದಿ ಶೋದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ ಆರ್ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆಯುತ್ತಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು…

Read Full News

ತೀರ್ಥಳ್ಳಿ ತಾಲೂಕಿನ 10000 ಕಟ್ಟಡ ಕಾರ್ಮಿಕರಿಗೆ ಕಿಟ್ ಗಳ ವಿತರಣೆ : ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ :ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಸುಮಾರು 10000ಸಂಖ್ಯೆಯ ಆಹಾರ ಕಿಟ್ ಗಳನ್ನು ಕ್ಷೇತ್ರದ64 ಗ್ರಾಮ ಪಂಚಾಯಿತಿ ಗಳಲ್ಲಿ 58 ಗ್ರಾಮಪಂಚಾಯಿತಿಗಳಲ್ಲಿ ವಿತರಿಸಲಾಗಿದ್ದು ಇನ್ನುಳಿದ ಆರು ಗ್ರಾಮ ಪಂಚಾಯಿತಿಗಳಿಗೆ ಇನ್ನೆರಡು ದಿನಗಳಲ್ಲಿ ವಿತರಿಸಲಾಗುವುದೆಂದು ತೀರ್ಥಹಳ್ಳಿ  ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿಯ ಅಧ್ಯಕ್ಷರಾದ  ಆರಗ ಜ್ಞಾನೇಂದ್ರ ಹೇಳಿದರು  ಗುರುವಾರ ಹೆದ್ದಾರಿಪುರ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ಟು ಗಳನ್ನು ವಿತರಿಸಿ ಮಾತನಾಡಿದ ಅವರು ದೇಶದಲ್ಲಿನ ಮೋದಿ ಸರ್ಕಾರವು ರಾಜ್ಯದಲ್ಲಿನ…

Read Full News

ಕಸದ ತೊಟ್ಟಿಯಾದ ಉಳವಿ ಬಸ್ ನಿಲ್ದಾಣ: ಗಾಢ ನಿದ್ರೆಯಲ್ಲಿ ಗ್ರಾಮಾಡಳಿತ.!

ಸೊರಬ: ಇಲ್ಲಿನ ಸಮೀಪದ ಉಳವಿಯ ಬಸ್ ನಿಲ್ದಾಣಕ್ಕೆ ಕಾಲಿಡಲು ಹೆದರುವ ಪರಿಸ್ಥಿತಿ ಪ್ರಯಾಣಿಕರದ್ದು,ಪಟ್ಟಣದಲ್ಲಿರುವ ಬಸ್‌ ನಿಲ್ದಾಣ ಹಾಳು ಕೊಂಪೆಯಂತಾಗಿದ್ದು, ಇದ್ದೂ ಇಲ್ಲದಂತಾಗಿದೆ.  ಸೊರಬಕ್ಕೆ ಹೊಂದಿರುವ ಪಟ್ಟಣಕ್ಕೆ ಅಗತ್ಯ ತಕ್ಕಂತೆ ಬಸ್‌ ನಿಲ್ದಾಣ ಅವಶ್ಯಕತೆ ಇದೆ. ಬೆಳೆಯುತ್ತಿರುವ ಪಟ್ಟಣಕ್ಕೆ ಬಸ್‌ ನಿಲ್ದಾಣದ ಭಾಗ್ಯ ಯಾವಾಗ ಕೂಡಿ ಬರುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಬಸ್ ನಿಲ್ದಾಣದ ಸುತ್ತ ಕಸ ಕಡ್ಡಿ ಹುಲ್ಲು ಬೆಳೆದಿದ್ದು,ಬಸ್ ನಿಲ್ದಾಣಕ್ಕೆ ಹೋಗಲು ಮಾರ್ಗವೇ ಇಲ್ಲದಾಗಿದೆ,ಒಳಗೆ ಬಾಟಲಿ ಕಸ ಕಡ್ಡಿ ಕೆಸರು ತುಂಬಿದೆ, ಬಣ್ಣವಿಲ್ಲದೆ‌ ಸೊರಗುತ್ತಿದೆ,ಪ್ರಯಾಣಿಕರು ಶಾಲಾ…

Read Full News

ಬಸವಪುರ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ನಾಲೆ ಕುಸಿತ:

ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯ ಕಾರಣದಿಂದ ಕಡೆ ಗೆದ್ದೆ ಪಿಕಪ್ ನಾಲೆಯಿಂದ ಕೋಣನ ಜಡ್ಡು ಮಾರ್ಗವಾಗಿ ಬಸವಪುರ ಗ್ರಾಮದಲ್ಲಿರುವ ನಾಲೆಯು ಕುಸಿದಿದ್ದು ಬಸವಪುರ ಗ್ರಾಮದ ನೂರಾರು ಎಕರೆ ಜಮೀನುಗಳಿಗೆ ನೆಟ್ಟಿ ಮಾಡಲು ನೀರು ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.  ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾನಗೋಡು ಉಮಾಕರ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಲಗೋಡು ರತ್ನಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ…

Read Full News

ರಿಪ್ಪನ್ ಪೇಟೆ: ಜನಪ್ರತಿನಿಧಿಗಳಿಗೆ ಇಚ್ಛಾ ಶಕ್ತಿ ಇದ್ದರೆ ಹಿಡಿದ ಕೆಲಸ ಪೂರ್ಣಗೊಳಿಸಬಹುದೆಂದು ನಿದರ್ಶಿಸಿದ ಗ್ರಾಪಂ ಸದಸ್ಯ ಸುಂದರೇಶ್:

ರಿಪ್ಪನ್ ಪೇಟೆ: ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾಗರ ರಸ್ತೆಯ ಕಾಲೇಜು ಬಳಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು, ವಿದ್ಯಾರ್ಥಿ ಗಳಿಗೆ ತುಂಬಾ ತೊಂದರೆಯಾಗುತ್ತಿತ್ತು. .       :ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಮೊದಲು;        ಗ್ರಾಮ ಪಂಚಾಯತ್ ಸದಸ್ಯರಾದ ಸುಂದರೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಸಾಗರ ರಸ್ತೆಯ ಕಾಲೇಜ್ ಬಳಿ ಚರಂಡಿ ನೀರು ರಸ್ತೆಗೆ  ಹರಿಯುತಿರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ…

Read Full News

ರಿಪ್ಪನ್ ಪೇಟೆ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆ

ರಿಪ್ಪನ್ ಪೇಟೆ. ಜು.21: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಂದು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಸರಕಾರದ ಹೊಸ ಮಾರ್ಗಸೂಚಿಯಂತೆ ರಿಪ್ಪನ್ ಪೇಟೆ ಹಾಗೂ ಕೆಂಚನಾಲ,ಗರ್ತಿಕೆರೆ,ಎಣ್ಣೆನೊಡ್ಲು,ಗಾಳಿಬೈಲು ಮಸೀದಿಗಳಲ್ಲಿ ಬಕ್ರೀದ್ ಹಬ್ಬ ಆಚರಿಸಲಾಯಿತು. ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮಥ್ರ್ಯಕ್ಕೆ ಅನುಗುಣವಾಗಿ ಶೇ.50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಜ್ ನೆರವೇರಿತು. ಮುಸ್ಲಿಂ ಭಾಂಧವರು ಜಗತ್ತಿನಲ್ಲಿ ವ್ಯಾಪಿಸಿರುವ ಕೊರೊನಾ ಮಹಮಾರಿ ಶೀಘ್ರ ರೋಗಮುಕ್ತವಾಗಬೇಕು,ಜಗತ್ತಿನಲ್ಲೆಡೆ ಶಾಂತಿ ಪಸರಿಸಬೇಕು ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಬೇಕು ಎಂದು ವಿಶೇಷ ಪ್ರಾರ್ಥನೆ…

Read Full News

ರಸ್ತೆ ಮೇಲೆ ಹರಿಯುವ ಮಳೆ ನೀರು..!ರಸ್ತೆ ತಡೆದು ಪ್ರತಿಭಟನೆಯ ಎಚ್ಚರಿಕೆ:ಗ್ರಾಪಂ ಸದಸ್ಯ ಸುಂದರೇಶ್ ಟಿ.

ರಿಪ್ಪನ್ ಪೇಟೆ: ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾಗರ ರಸ್ತೆ ಯಲ್ಲಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು, ವಿದ್ಯಾರ್ಥಿಗಳು ಫಜೀತಿಗೊಳಗಾಗುತ್ತಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾದ ಸುಂದರೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಸಾಗರ ರಸ್ತೆಯ ಕಾಲೇಜ್ ಬಳಿ ಚರಂಡಿ ನೀರು ರಸ್ತೆಗೆ  ಹರಿಯುತಿರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಯಾಗುತ್ತಿದೆ ಇದರ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಚರಂಡಿಯ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಮನವಿ…

Read Full News

ಮರ ಬಿದ್ದು ರಸ್ತೆ ಸಂಚಾರ ಹಾಗೂ ವಿದ್ಯುತ್ ಸಂಪರ್ಕ ಕಡಿತ:

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಪೂಜಾರದಿಂಬ ಎಂಬಲ್ಲಿ  ರಸ್ತೆ ಮೇಲೆ ಮರ ಬಿದ್ದು ಬಟ್ಟೆಮಲ್ಲಪ್ಪ ರಿಪ್ಪನ್ ಪೇಟೆ ರಸ್ತೆಸಂಪರ್ಕ ಕಡಿತಗೊಂಡಿದೆ.  ಮರ ಬಿದ್ದ ಸ್ಥಳದಲ್ಲಿ ವಿದ್ಯುತ್ ಕಂಬವಿದ್ದು, ವಿದ್ಯುತ್ ವಯರ್ ಗಳು ತುಂಡಾಗಿ ಬಿದ್ದಿದ್ದು ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಸಂಬಂಧಪಟ್ಟ ಇಲಾಖೆ ಸೂಕ್ತಕ್ರಮ ಕೈಗೊಂಡು ವಿದ್ಯುತ್ ಸಂಪರ್ಕ ಸರಿಪಡಿಸುವುದರೊಂದಿಗೆ, ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ವರದಿ: ದೇವರಾಜ್ ರಿಪ್ಪನ್ ಪೇಟೆ ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ…

Read Full News

ರಿಪ್ಪನ್ ಪೇಟೆ:ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಗುರುಸ್ಮರಣೆ

ರಿಪ್ಪನ್ ಪೇಟೆ : ಇಲ್ಲಿಯ ಗೌಡಸಾರಸ್ವತ ಕಲ್ಯಾಣ ಮಂದಿರದಲ್ಲಿ ಮಂಗಳವಾರದಂದು ಗೌಡ ಸಾರಸ್ವತ ಸಮಾಜ ಬಾಂಧವರು ಸಭೆ ಸೇರಿ ಸೋಮವಾರ ಹರಿಪಾದ ಸೇರಿದ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ  ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆರ್ ಸ್ವಾಮೀಜಿಯವರ ಪುಣ್ಯಸ್ಮರಣ ಕಾರ್ಯಕ್ರಮ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ  ಮಂಜುನಾಥ ಕಾಮತ್ ರಿಪ್ಪನ್ ಪೇಟೆ ಗೌಡ ಸಾರಸ್ವತ ಸಮಾಜ ಸ್ಥಾಪನೆಗೆ  ಪೂಜ್ಯರು ಕಾರಣರಾಗಿದ್ದನ್ನು ಸ್ಮರಿಸಿದರು. ಪೂಜ್ಯರ ಮಠಕ್ಕೂ ರಿಪ್ಪನ್ ಪೇಟೆ ಗೌಡ ಸಾರಸ್ವತ ಸಮಾಜಕ್ಕೂ ಅನೇಕ ಕಾಲದಿಂದಲೂ…

Read Full News

ಜಿಲ್ಲಾ ಪಂಚಾಯತ್ ಚುನಾವಣೆ2021:ರಿಪ್ಪನ್ ಪೇಟೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧ : ಎನ್.ಸತೀಶ್.

 ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಪಂಚಾಯತಿ ಕ್ಷೇತ್ರವಾದ ರಿಪ್ಪನ್ ಪೇಟೆಯಿಂದ ಈ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಆಸಕ್ತಿಯನ್ನು ಹೊಂದಿದ್ದೇನೆ ಎಂದು ಸಮಾಜ ಸೇವಕ ಹಾಗೂ ರಿಪ್ಪನ್ ಪೇಟೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ಹೇಳಿದ್ದಾರೆ.  ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಬಾರಿ ರಿಪ್ಪನ್ ಪೇಟೆ ಜಿಲ್ಲಾ ಪಂಚಾಯತಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದು ನಾನು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದು ಬಿಜೆಪಿ…

Read Full News

ರಿಪ್ಪನ್ ಪೇಟೆ: ಫಲಿತಾಂಶಕ್ಕೆ ಹೆದರಿ SSLC ವಿಧ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಬಂದ ವಿಧ್ಯಾರ್ಥಿ ಅಂಕಗಳು ಕಡಿಮೆ ಬರಬಹುದೆಂದು ಹೆದರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ  ಎಸ್ಎಸ್ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದ ಕೆಂಚನಾಲದ ವಿಧ್ಯಾರ್ಥಿನಿಯೊಬ್ಬಳು ಇಂದು ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದು  ಮನೆಗೆ ತೆರಳಿ  ಫಲಿತಾಂಶದಲ್ಲಿ ಕಡಿಮೆ ಅಂಕ ಬರಬಹುದು ಎಂದು ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಕೂಡಲೇ ಸಂಬಂಧಿಕರು ರಿಪ್ಪನ್ ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.