ಸೊರಬ: ತಾಲೂಕಿನಾದ್ಯಂತ 75ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕಿನ ವಿವಿಧಡೆ ಧ್ವಜಾರೋಹಣ ಮಾಡಲಾಯಿತು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಷ್ಟ್ರಾದ್ಯಂತ ಒಂದು ಲಕ್ಷಕ್ಕೂ ಹೆಚ್ಚಿನ ಸ್ಥಳದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಒಂದು ಗ್ರಾಮ ಒಂದು ತಿರಂಗ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ನಿಟ್ಟಿನಲ್ಲಿ ಸೊರಬ ತಾಲೂಕಿನ ವಿವಿಧಡೆ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ತಾಲೂಕಿನ ಕೆರೆಕೊಪ್ಪ, ಕಮಲಾಪುರ, ಕಂಚಿಕೊಪ್ಪ , ಶಿಂಡ್ಲಿ ,ಮಣ್ಣತ್ತಿ,, ಸಂಭಾಪುರ ,ಮಾವಿನಬಳ್ಳಿ ಕೊಪ್ಪ,ಮಂದಲಿಕೊಪ್ಪ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಎಬಿವಿಪಿ ಕಾರ್ಯಕರ್ತರ ಸಹಭಾಗಿತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳು ನೆರವೇರಿದವು ಈ ಸಂದರ್ಭದಲ್ಲಿ ದೇಶಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ವೀರಮರಣ ಹೊಂದಿದ ಕ್ರಾಂತಿಕಾರಿಗಳ ಬಗ್ಗೆ ಸ್ಮರಣೆ ಮತ್ತು ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಮಾಡಲಾಯಿತು.ಇದಷ್ಟೇ ಅಲ್ಲದೆ ಎಬಿವಿಪಿ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಇಡೀ ವರ್ಷ ಆಚರಿಸುವ ಬಗ್ಗೆಯೂ ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮನು ಎಚ್ ತೆಲಗುಂದ್ಲಿ, ವರುಣ್, ಸಂಜಯ್,ಶ್ರವಣ, ಅಕ್ಷರ್,ವಿನಾಯಕ್ ಶಿಂಡ್ಲಿ ಮತ್ತಿತರರು ಉಪಸ್ಥಿತರಿದ್ದರು.
ವರದಿ:ವೆಂಕಟೇಶ್ ಸೊರಬ