ಜಿಲ್ಲಾ ಸುದ್ದಿ:
“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!”
“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!” ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ‘ಗುಂಡಾಗಿರಿ’ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೇವಲ ಒಂದು ತಿಂಗಳ ಕಂತು ಬಾಕಿ ಇಟ್ಟ ಕಾರಣಕ್ಕೆ ರೈತನ ಜೀವಾಳವಾದ ಜಾನುವಾರುಗಳನ್ನು ಬಲಪ್ರಯೋಗದಿಂದ ಎಳೆದೊಯ್ದಿರುವ ಗೃಹಹಲ್ಲೆಯಂತ ಘಟನೆ ಸಿದ್ಲಿಪುರದಲ್ಲಿ ನಡೆದಿದೆ. ಸಿದ್ಲಿಪುರ ಗ್ರಾಮದ ಭರತ್ ಎಂಬ ಕೃಷಿಕರು 2 ಲಕ್ಷ ರೂಪಾಯಿ ಲೋನ್ ಪಡೆದಿದ್ದರು. ನಿಯಮಿತವಾಗಿ ತಿಂಗಳಿಗೆ ₹9,000 ಕಂತು ಪಾವತಿಸುತ್ತಿದ್ದರೂ, ಹಾಲಿಡುವ ಹಸು ಅಕಾಲಿಕವಾಗಿ ಸಾವನ್ನಪ್ಪಿದ…
SSLC ಅಂಕಪಟ್ಟಿಯಲ್ಲಿ ಶಾಲೆಯ ಹೆಸರು ಗೊಂದಲ – ರಾಮಕೃಷ್ಣ ವಿದ್ಯಾಲಯದಲ್ಲಿ ಪೋಷಕರ ದಿಢೀರ್ ಪ್ರತಿಭಟನೆ
SSLC ಅಂಕಪಟ್ಟಿಯಲ್ಲಿ ಶಾಲೆಯ ಹೆಸರು ಗೊಂದಲ – ರಾಮಕೃಷ್ಣ ವಿದ್ಯಾಲಯದಲ್ಲಿ ಪೋಷಕರ ದಿಢೀರ್ ಪ್ರತಿಭಟನೆ ರಿಪ್ಪನ್‌ಪೇಟೆ : ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಶಾಲೆಯ ಹೆಸರೇ ಬದಲಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಂಭೀರ ಅನಾಹುತ ಉಂಟು ಮಾಡಲಿದೆ ಎಂಬ ಅಸಮಾಧಾನದಿಂದಾಗಿ, ರಿಪ್ಪನ್‌ಪೇಟೆಯ ಶಾರದಾ ರಾಮಕೃಷ್ಣ ವಿದ್ಯಾಲಯದ ವಿರುದ್ಧ ಪೋಷಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಕಳೆದ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದ ಬಳಿಕ ನೀಡಲಾಗುತ್ತಿರುವ ವರ್ಗಾವಣೆ ಪತ್ರದಲ್ಲಿ ಶಾರದಾ ರಾಮಕೃಷ್ಣ ವಿದ್ಯಾಲಯದ ಬದಲು ‘ಸರ್ಕಾರಿ ಪದವಿ ಪೂರ್ವ ಕಾಲೇಜು, ರಿಪ್ಪನ್‌ಪೇಟೆ’…
ತೋಟಗಾರಿಕೆಯಲ್ಲಿ ಮಿಶ್ರ ಬೆಳೆಗೆ ಆಧ್ಯತೆ ನೀಡಿ – ಆರಗ ಜ್ಞಾನೇಂದ್ರ
ತೋಟಗಾರಿಕೆಯಲ್ಲಿ ಮಿಶ್ರ ಬೆಳೆಗೆ ಆಧ್ಯತೆ ನೀಡಿ – ಆರಗ ಜ್ಞಾನೇಂದ್ರ ರಿಪ್ಪನ್‌ಪೇಟೆಯ ಸೆಲಿ ಜೊಸೇಫ್ ತೋಟದಲ್ಲಿ ರೈತರೊಂದಿಗೆ ಆರಗ ಜ್ಞಾನೇಂದ್ರ ಸಮಾಲೋಚನೆ ರಿಪ್ಪನ್‌ಪೇಟೆ : ಇತ್ತೀಚೆನ ವರ್ಷಗಳಲ್ಲಿ ಆಡಿಕೆ ಬೆಳೆಗೆ ಎಲೆಚುಕ್ಕೆ ರೋಗದಿಂದಾಗಿ ಇಳುವರಿ ಕುಂಠಿತಗೊಂಡಿದ್ದು ಅಲ್ಲದೆ ಅಡಿಕೆ ಸೇವನೆಯಂದ ಮಾರಕ ರೋಗ ಕ್ಯಾನ್ಸರ್ ನಂತಹ ಕಾಯಿಲೆ ಬರುತ್ತದೆಂದು ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಾಗಿರುವ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಗೊಂದಲ ನಿರ್ಮಾಣವಾಗಿದೆ. ಕಳೆದ ವರ್ಷದಲ್ಲಿ ಮಲೆನಾಡಿನ ವ್ಯಾಪ್ತಿಯಲ್ಲಿನ ಹೊಸನಗರ ಸಾಗರ ತೀರ್ಥಿಹಳ್ಳಿ ಕೊಪ್ಪ ಶೃಂಗೇರಿ ಹಲವು …
ಅಪರೂಪದ ಥಲಸ್ಸೆಮಿಯಾ ರೋಗ ಪೀಡಿತರಿಗಾಗಿ ಹಿರೇಸಾನಿಯಲ್ಲಿ ರಕ್ತದಾನ ಶಿಬಿರ
ಅಪರೂಪದ ಥಲಸ್ಸೆಮಿಯಾ ರೋಗ ಪೀಡಿತರಿಗಾಗಿ ಹಿರೇಸಾನಿಯಲ್ಲಿ ರಕ್ತದಾನ ಶಿಬಿರ ರಿಪ್ಪನ್ ಪೇಟೆ: ಇಲ್ಲಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸಾನಿ ಎಂಬ ಕುಗ್ರಾಮಕ್ಕೆ ಇಂದಿಗೂ ಚಿಮುಣಿ ಬುಡ್ಡಿಯಂತೆ ಉರಿಯುವ ವಿದ್ಯುತ್ ದೀಪಗಳು, ರಸ್ತೆ, ಸಾರಿಗೆ, ದೂರವಾಣಿ ಹಾಗೂ ನೆಟ್ವರ್ಕ್ ಸೌಕರ್ಯವಿಲ್ಲ. ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುವ ಮುನ್ನ ಭರವಸೆ ನೀಡುವ ನಾಯಕರು ನಂತರ ಇತ್ತಕಡೆ ತಲೆ ಹಾಕಿ ಮಲಗಿದ ಉದಾಹರಣೆಯೂ ಇಲ್ಲ. ಆದರೂ, ಈ ಗ್ರಾಮದ ಯುವಕರ ಚಿಂತನೆ ಗ್ರಾಮಸ್ಥರ ಸಹಮತದೊಂದಿಗೆ ಯಶಸ್ವಿ ರಕ್ತದಾನ ಶಿಬಿರಕ್ಕೆ ಮುನ್ನುಡಿ …
ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ
ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯಲ್ಲಿ ಮತ್ತು ಮುಜರಾಯಿ ಇಲಾಖೆಯವರ ಅದೇಶದನ್ವಯ ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಸಂಭ್ರಮಸಿದರು. ಪಟ್ಟಣದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋವುಗಳನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ, ಗಣೇಶ್ ಎನ್.ಕಾಮತ್, ಸುಧೀಂದ್ರ ಪೂಜಾರಿ,,ಜಯಲಕ್ಷಿ, ಮುರುಳಿ…
ಆಯನೂರು – ರಿಪ್ಪನ್‌ಪೇಟೆ ನಾಲ್ಕು ದಿನ ರಸ್ತೆ ಸಂಚಾರ ತಾತ್ಕಾಲಿಕ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ !
ಆಯನೂರು – ರಿಪ್ಪನ್‌ಪೇಟೆ ನಾಲ್ಕು ದಿನ ರಸ್ತೆ ಸಂಚಾರ ತಾತ್ಕಾಲಿಕ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ ! ಶಿವಮೊಗ್ಗ – ರಿಪ್ಪನ್‌ಪೇಟೆ ರೈಲ್ವೆ ಮಾರ್ಗದಲ್ಲಿ ನಡೆಯುತ್ತಿರುವ ಪರೀಕ್ಷಾ ಕಾರ್ಯಗಳ ಹಿನ್ನೆಲೆ ಅ.23 ರಿಂದ 26ರವರೆಗೆ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸಂಚಾರ ನಿಷೇಧ ಅವಧಿ ▪ ಅ.23 ಬೆಳಿಗ್ಗೆ 7 ಗಂಟೆಯಿಂದ – ಅ.24 ಸಂಜೆ 6 ಗಂಟೆಯವರೆಗೆಅರಸಾಳು ರೈಲ್ವೆ ಗೇಟ್ ಹತ್ತಿರ ಮಾರ್ಗ ಪರಿಶೀಲನೆ…
ರಿಪ್ಪನ್‌ಪೇಟೆ | ಹಿರೇಸಾನಿಯಲ್ಲಿ ಅ.23 ರಂದು ಥಲಸ್ಸೆಮಿಯಾ ಮಕ್ಕಳಿಗಾಗಿ ರಕ್ತದಾನ ಶಿಬಿರ
ಹಿರೇಸಾನಿಯಲ್ಲಿ ಅ.23 ರಂದು ಥಲಸ್ಸೆಮಿಯಾ ಮಕ್ಕಳಿಗಾಗಿ ರಕ್ತದಾನ ಶಿಬಿರ ಶಿವಮೊಗ್ಗ: ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಥಲಸ್ಸೆಮಿಯಾ ರೋಗದಿಂದ ಹುಟ್ಟಿಕೊಳ್ಳುತ್ತಿದ್ದಾರೆ. ತಲಸ್ಸೇಮಿಯಾ ರಕ್ತಕಣಗಳ ಸರಿಯಾದ ಉತ್ಪತ್ತಿ ತಡೆಯುವ ರೋಗವಾಗಿದೆ, ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಸರಿಯಾಗಿ ಉತ್ಪತ್ತಿಯಾಗುವುದಿಲ್ಲ. ಈ ಹಿನ್ನೆಲೆಯಲ್ಲೇ, ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸಾನಿ ಗ್ರಾಮದಲ್ಲಿ ಮಲ್ನಾಡ್ ಗ್ರೂಪ್ಸ್ ಹಾಗೂ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ವಿಭಾಗದ ಸಹಯೋಗದಲ್ಲಿ 23 ಅಕ್ಟೋಬರ್ 2025 ರಂದು ಸಾರ್ವಜನಿಕ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಸರ್ಕಾರಿ…
ರಿಪ್ಪನ್‌ಪೇಟೆಯಲ್ಲಿ ನಿವೃತ್ತ ಯೋಧ ಗಿರೀಶ್ ಗೆ ಗೌರವ ಸಮರ್ಪಣೆ
ರಿಪ್ಪನ್‌ಪೇಟೆಯಲ್ಲಿ ನಿವೃತ್ತ ಯೋಧ ಗಿರೀಶ್ ಗೆ ಗೌರವ ಸಮರ್ಪಣೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಪಿ. ರಮೇಶ್ ಅವರ ಮಾಲೀಕತ್ವದ ಸಾಗರ ರಸ್ತೆಯಲ್ಲಿರುವ ಪಿ.ವಿ. ಸ್ಟೋರ್‌ನಲ್ಲಿ ಭಾರತೀಯ ಸೇನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಗಿರೀಶ್ ಅವರಿಗೆ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಯೋಧರಿಗೆ ಶಾಲು ಹೊದಿಸಿ, ಫಲತಾಂಬೂಲ ಮತ್ತು ನೆನಪಿನ ಕಾಣಿಕೆ ನೀಡಿ ಅವರ ಸೇವಾಭಾವವನ್ನು ಸ್ಮರಿಸಲಾಯಿತು. ನಂತರ ಸಿಹಿ ತಿನ್ನಿಸಿ ನಿವೃತ್ತಿ ಜೀವನವು ಸುಖಮಯವಾಗಿ ಮತ್ತು…
RIPPONPETE | ಬೈರಾಪುರದಲ್ಲಿ ಪಂಚಲೋಹ ದೇವರ ಮೂರ್ತಿಗಳ ಕಳವು ,ಗ್ರಾಮಸ್ಥರಲ್ಲಿ ಆತಂಕ, ನೋನಿ ಸಂಪ್ರದಾಯಕ್ಕೆ ಧಕ್ಕೆ!!
RIPPONPETE | ಬೈರಾಪುರದಲ್ಲಿ ಪಂಚಲೋಹ ದೇವರ ಮೂರ್ತಿಗಳ ಕಳವು ,ಗ್ರಾಮಸ್ಥರಲ್ಲಿ ಆತಂಕ, ನೋನಿ ಸಂಪ್ರದಾಯಕ್ಕೆ ಧಕ್ಕೆ!! ರಿಪ್ಪನ್‌ಪೇಟೆ : ಬೆನವಳ್ಳಿ ಗ್ರಾಮದ ವ್ಯಾಪ್ತಿಯ ಮುಡುಬ ಬೈರಾಪುರ ಭಾಗದಲ್ಲಿ ಭೂಮಿಗಡಿಯಲ್ಲಿ ಪರಂಪರೆಯಾಗಿ ಪ್ರತಿಷ್ಠಾಪಿಸಲಾಗಿದ್ದ ಪಂಚಲೋಹದ ದೇವರ ಮೂರ್ತಿಗಳು ಕಳವಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಪ್ರತಿವರ್ಷ ದೀಪಾವಳಿ ಹಬ್ಬದ ನೋನಿ ಆಚರಣೆಯ ಅಂಗವಾಗಿ ಗ್ರಾಮಸ್ಥರು ಬನಕ್ಕೆ ತೆರಳಿ ಕಳೆದ ವರ್ಷ ಮಡಿಕೆಯಲ್ಲಿ ಇಟ್ಟು ಭೂಮಿಗೆ ಮುಚ್ಚಿ ಇರಿಸಿದ್ದ ಮೂರ್ತಿಗಳನ್ನು ಹೊರತೆಗೆದು ಪೂಜೆ ಸಲ್ಲಿಸುವುದು ಪರಂಪರೆಯಾಗಿತ್ತು , ಇದೇ ಪ್ರಕಾರ …
RIPPONPETE | 22 ವರ್ಷ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ
RIPPONPETE | 22 ವರ್ಷದ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ ರಿಪ್ಪನ್‌ಪೇಟೆ: ದೇಶರಕ್ಷಣೆಯ ಕರ್ತವ್ಯವನ್ನು 22 ದೀರ್ಘ ವರ್ಷಗಳ ಕಾಲ ನಿರಂತರವಾಗಿ ನಿಭಾಯಿಸಿ ಗೌರವಪೂರ್ವಕ ನಿವೃತ್ತರಾಗಿರುವ ಗಿರೀಶ್ ಅವರು ತಮ್ಮ ಹೆಮ್ಮೆಯ ನಾಡಿಗೆ ಭಾನುವಾರ ಸಂಜೆ ಆಗಮಿಸಿದ್ದು ಗ್ರಾಮಸ್ಥರು ಅದ್ಭುತವಾದ ಗೌರವ ಸಮರ್ಪಣೆಯ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ಮೆಸ್ಕಾಂನ ನಿವೃತ್ತ ಉದ್ಯೋಗಿ ಮೋಹನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರನಾದ ಗಿರೀಶ್, 2003ರಲ್ಲಿ ಭಾರತೀಯ ಸೇನೆಗೆ ಸೇರಿದ್ದು ದೇಶದ ವಿವಿಧ ಗಡಿಭಾಗಗಳಲ್ಲಿ…