ಹೆಚ್ಚು ಮಕ್ಕಳ ಸಾಗಾಟ – 17 ಶಾಲಾ ಬಸ್‌ಗಳ ವಿರುದ್ದ ಕೇಸು

ಹೆಚ್ಚು ಮಕ್ಕಳ ಸಾಗಾಟ – 17 ಶಾಲಾ ಬಸ್‌ಗಳ ವಿರುದ್ದ ಕೇಸು

ಶಿವಮೊಗ್ಗ: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಸೋಮವಾರ  ಬೆಳಿಗ್ಗೆ ನಗರ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್, ಹೆಚ್ಚಿನ ಮಕ್ಕಳನ್ನ ಕರೆದುಕೊಂಡು ಹೋಗುವ ಪ್ರಕರಣ, ಹಾಗೂ ಎಫ್ ಸಿ ಆಗದ ಪ್ರಕರಣಗಳು ಬೆಳಕಿಗೆ ಬಂದಿದೆ.

ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು  ಶಿವಮೊಗ್ಗ ನಗರದದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ಕಾಲೇಜು ವಾಹನಗಳನ್ನು ತಪಾಸಣೆ ಮಾಡಿದ್ದಾರೆ.

ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ಧ   ನಿಗದಿಕ್ಕಿಂತ ಹೆಚ್ಚು ಮಕ್ಕಳ ಸಾಗಾಟ ಸಂಬಂಧ ೧೭ ಪ್ರಕರಣ,  ಕುಡಿದು ವಾಹನ ಚಲಾಯಿಸಿದ ೪ ಪ್ರಕರಣ, ಮತ್ತು  ಎಫ್ ಸಿ ಇಲ್ಲದ ೩ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಹಾಗೂ  ವಾಹನ ಚಾಲಕರಿಗೆ ವಾಹನದವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಲು ಸೂಚನೆಗಳನ್ನು ನೀಡಲಾಯಿತು.
ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲಿಸುವಂತೆ ಸಹ ಪೊಲೀಸರು ಅರಿವು ಮೂಡಿಸಿದ್ದಾರೆ.  ಪಿಎಸ್‌ಐ ಭಾರತಿ ಹಾಗೂ ಇತರೆ ಸಿಬ್ಬಂದಿಗಳ ನೇತೃತ್ವದಲ್ಲಿ ಆಲ್ಕೊಳ ವೃತ್ತದಲ್ಲಿ ೧೦೦ ಕ್ಕೂ ಹೆಚ್ಚು ಶಾಲಾ ವಾಹನಗಳಿಗೆ ಜಾಗೃತಿ ಮೂಡಿಸಿದರು.