ಪ್ರಾಮಾಣಿಕ ಶಿಕ್ಷಕ ವೃತ್ತಿಗೆ ನಿವೃತ್ತಿ ಇಲ್ಲ – ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ
ಅರಸಾಳು ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಅನ್ನಪೂರ್ಣ ರವರಿಗೆ ಸನ್ಮಾನ ಕಾರ್ಯಕ್ರಮ
ರಿಪ್ಪನ್ ಪೇಟೆ : ಗುರುಗಳಿಗೆ ಈ ಸಮಾಜದಲ್ಲಿ ಉತ್ತಮ ಸ್ಥಾನ ಇದೆ. ಹರ ಮುನಿದರು ಗುರು ಹರಸುವನು, ಕಾಯುವವನು. ಗುರಿಯ ಮುಂದೆ, ಗುರು ಇದ್ದಾಗ ಆ ಕಾರ್ಯ ಸಫಲವಾಗುವುದು. ಹಾಗಾಗಿ ಶಿಕ್ಷಣ ಇಲಾಖೆಯ ಯಶಸ್ವಿ ಕಾರ್ಯಕ್ರಮದ ಹಿಂದೆ ಶಿಕ್ಷಕರ ಛಲ ಮತ್ತು ಆತ್ಮ ವಿಶ್ವಾಸ ಇದೆ ಎಂದು ಹೊಸನಗರ ತಾಲೂಕ್ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹೇಳಿದರು.
ಅರಸಾಳು ಸರ್ಕಾರಿ ಪ್ರೌಢಶಾಲೆ ಅರಸಾಳು ಇಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ, ದಿ-30/06/2025 ರಂದು ವಯೋನಿವೃತ್ತಿ ಹೊಂದಿರುವ ಅನ್ನಪೂರ್ಣ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಶಿಕ್ಷಕ ವೃತ್ತಿಯು ಪವಿತ್ರವಾದುದು ಮತ್ತು ಶಿಕ್ಷಕರು ತಮ್ಮ ಬಳಿಗೆ ಬರುವ ಪ್ರತಿಯೊಂದು ಮಗುವಿನಲ್ಲೂ ಹೊಸತನವನ್ನು ಕಾಣುವರು. ತಾನು ಶಿಕ್ಷಕ ವೃತ್ತಿ ಪ್ರಾರಂಭಿಸಿದಗಿನಿಂದ ತನ್ನ ನಿವೃತ್ತಿಯವರೆಗೆ ತನ್ನ ಬಳಿ ಬರುತ್ತಿರುವ ಪ್ರತಿಯೊಂದು ವಿದ್ಯಾರ್ಥಿಯಲ್ಲೂ ತನ್ನ ಮಕ್ಕಳನ್ನು ಕಾಣುವ ಶಿಕ್ಷಕ ವೃತ್ತಿಗೆ ನಿವೃತ್ತಿಯೇ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕರಿಬಸಪ್ಪ, ಮುಖ್ಯ ಶಿಕ್ಷಕರಾದ ಸರಿತಾ, SDMC ಅಧ್ಯಕ್ಷ ಜಯರಾಜ್, ನೌಕರ ಸಂಘದ ಅಧ್ಯಕ್ಷ ಸೋಮಶೇಖರ್ B P, ಪ್ರೌಢಶಾಲಾ ಸಂಘ ಅಧ್ಯಕ್ಷರಾದ ರೇಣುಕೇಶ್, ಸದಸ್ಯರುಗಳು, ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ಅರಸಾಳು ಕ್ಲಸ್ಟರ್ ನ ಪ್ರಾಥಮಿಕ ಶಾಲಾ ಶಿಕ್ಷಕರು, SDMC ಸದಸ್ಯರು, ಪೋಷಕರು, ಗ್ರಾಮಸ್ಥರು ಭಾಗವಹಿಸಿ, ಅವರ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಿವೃತ್ತಿ ಜೀವನ ಸುಖವಾಗಿರಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಅನ್ನಪೂರ್ಣ ರವರ ಪತಿ ಅಶೋಕ್, ಮಕ್ಕಳಾದ ಭರತ್ ಮತ್ತು ಶರತ್ ಮತ್ತು ಕುಟುಂಬ ವರ್ಗದವರು ಭಾಗವಹಿಸಿದ್ದರು.
ಅಪರೂಪದ ಮಾದರಿ ಶಿಕ್ಷಕಿ ಅನ್ನಪೂರ್ಣ
ಹೊಸನಗರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಅರಸಾಳು ಇಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ, ದಿ-30/06/2025 ರಂದು ವಯೋನಿವೃತ್ತಿ ಹೊಂದಿರುವ ಶ್ರೀಮತಿ ಅನ್ನಪೂರ್ಣ ರವರು ಅಪರೂಪದ ವ್ಯಕ್ತಿತ್ವ ಹೊಂದಿರುವ ಶಿಕ್ಷಕರು. 13 ವರ್ಷಗಳ ಕಾಲ ಸತತವಾಗಿ ಕನ್ನಡ ಭಾಷೆಯಲ್ಲಿ ಹತ್ತನೆಯ ತರಗತಿಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ತಂದುಕೊಟ್ಟವರು. ಹಾಗೆಯೇ ಶಾಲೆಯ ಮಕ್ಕಳಿಗೆ 2024-25 ನೇ ಸಾಲಿನಲ್ಲಿ ಮೂವತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಉಚಿತ ಪ್ರವಾಸ ಮಾಡಿಸಿದ್ದರು. 2025-26 ನೇ ಸಾಲಿನಲ್ಲಿ 40 ಸಾವಿರ ವೆಚ್ಚದಲ್ಲಿ ಶಾಲೆಗೆ ಸುಣ್ಣ ಬಣ್ಣಗಳನ್ನು ಮಾಡಿಸಿದ್ದಾರೆ.
ಮಳೆಗಾಲದಲ್ಲಿ ಮಕ್ಕಳಿಗೆ ಅನುಕೂಲವಾಗಲೆಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆಲ್ಲಾ ಉಚಿತವಾಗಿ ಛತ್ರಿಯನ್ನು ಕೊಡುಗೆಯಾಗಿ ನೀಡಿದರು. ಮಕ್ಕಳಿಗೆ ಕುಡಿಯುವ ನೀರಿಗಾಗಿ 15 ಸಾವಿರ ರೂಪಾಯಿ ವೆಚ್ಚದಲ್ಲಿ ನೀರಿನ syntax ನ ವ್ಯವಸ್ಥೆಯನ್ನು ಮಾಡಿಸಿದ್ದಾರೆ.