Headlines

ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ವ್ಯಕ್ತಿ ಸಾವು ಆರೋಪ – ಆಲುವಳ್ಳಿ ವೀರೇಶ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ದಿಡೀರ್ ಪ್ರತಿಭಟನೆ

ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ವ್ಯಕ್ತಿ ಸಾವು ಆರೋಪ – ಆಲುವಳ್ಳಿ ವೀರೇಶ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ದಿಡೀರ್ ಪ್ರತಿಭಟನೆ

ರಿಪ್ಪನ್‌ಪೇಟೆ;- ಪಟ್ಟಣದ ಪ್ರಾಥಮಿಕಆರೋಗ್ಯಕೇಂದ್ರದಲ್ಲಿ  ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ಶುಕ್ರವಾರ ಬೆಳಗ್ಗೆ  ಕಲ್ಲೂರು ಗ್ರಾಮದ ರಾಮಪ್ಪ ಎಂಬುವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆಂದು ಆರೋಪಿಸಿ  ಬಿಜೆಪಿ ಪಕ್ಷದವರು  ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವಿರೇಶ್ ಆಲುವಳ್ಳಿ  ನೇತೃತ್ವದಲ್ಲಿ ಆಸ್ಪತ್ರೆಗೆ ಬೇಟಿ ನೀಡಿ  ಇರುವ ವೈದ್ಯರ ಬಳಿ ಚರ್ಚೆ ನಡೆಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಇಲ್ಲಿನ ವೈದ್ಯಾಧಿಕಾರಿಗಳು ಇನ್‌ಚಾರ್ಜ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಬೆಳಗ್ಗೆಯಿಂದ ಸಂಜೆಯವರಗೆ ಕರ್ತವ್ಯ ನಿರ್ವಹಿಸುತಿದ್ದು ಹೆರಿಗೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳು ಸಾರ್ವಜನಿಕರಿಗೆ ದೊರಕುತ್ತಿಲ್ಲ. ರಾತ್ರಿ ವೇಳೆ ಬಂದರೆ ಯಾರು ಇರುವುದಿಲ್ಲ ಇದರಿಂದಾಗಿ ಸಮಸ್ಯೆ ಉದ್ಬವವಾಗುವಂತಾಗಿದೆ.ಅಲ್ಲದೆಆರೋಗ್ಯಕಾರ್ಯಕರ್ತೆಯರು ಸಹ ಡೆಪ್ಟೇಷನ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಕಾಯಂ  ಆರೋಗ್ಯ ಕಾರ್ಯಕರ್ತೆಯರ ನಿಯೋಜನೆ ಇಲ್ಲದೆ ಇರುವುದರಿಂದ ಅಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರರೇ ಚುಚ್ಚು ಮದ್ದು ನೀಡುವುದು ಅನಿವಾರ್ಯವಾಗಿದೆ , ಡಿ.ಗ್ರೂಪ್ನೌಕರರು ಇಂಜೆಕ್ಷನ್ ನೀಡಿ ಏನಾದರೂಅವಘಡ ಸಂಭವಿಸಿದರೆ ಹೂಣೆಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನುಕಾಡುವಂತಾಗಿದೆ   ತಕ್ಷಣ ಈ ಅವ್ಯವಸ್ಥೆಯನ್ನು ಸರಿಪಡಿಸಿಕೊಡುವುದರೊಂದಿಗೆ ರೋಗಿಗಳಿಗೆ ಸಮರ್ಪಕ ಸೇವೆ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ವೈದ್ಯರುಗಳು ಹಾಗೂ ನರ್ಸ್ ಗಳ ನೇಮಕಾತಿ  ಮತ್ತು ಆಸ್ಪತ್ರೆಯ ಅಭಿವೃದ್ಧಿಯ ಬಗ್ಗೆ  ಶಾಸಕರು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಹರಿಸದಿದ್ದರೆ  ಮುಂದಿನ ದಿನಗಳಲ್ಲಿ ನಾವು ಆಸ್ಪತ್ರೆಯ ಮುಂಭಾಗ ಆಥವಾ ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳ ಮತ್ತುಜಿಲ್ಲಾ ಅರೋಗ್ಯಾಧಿಕಾರಿಗಳ ಕಛೇರಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಛೇರಿಗೆ ರಿಪ್ಪನ್‌ಪೇಟೆಯಿಂದ ಕಾಲ್ನುಡಿಗೆ ಮೂಲಕ ಬೃಹತ್ ಪ್ರತಿಭಟನೆ  ನಡೆಸುವುದಾಗಿ ಸರ್ಕಾರಕ್ಕೆಎಚ್ಚರಿಕೆ ನೀಡಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಶಾಸಕ ಹರತಾಳು ಹಾಲಪ್ಪನವರು ಆಧಿಕಾರದಲ್ಲಿದ್ದ ಅವಧಿಯಲ್ಲಿ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ಇವರು ಸರ್ಕಾರಿ ಅಸ್ಪತ್ರೆಯ ವಿರುದ್ದ ಪಾದಯಾತ್ರೆ ನಡೆಸುವ ಮೂಲಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ದ ಪ್ರತಿಭಟನೆ ನಡೆಸಿ ಈ ಅಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಭರವಸೆ ನೀಡಿದವರು  ಈಗ ಎಲ್ಲಿ ಹೋಗಿದ್ದಾರೆ.ಅಧಿಕಾರ ಬಂದು ಹತ್ತಿರ ಹತ್ತಿರ ಎರಡುವರೆ ವರ್ಷ ಕಳೆದರು ಆಸ್ಪತ್ರೆಯ ಅಭಿವೃದ್ದಿಗೆ ಸರ್ಕಾರದಿಂದ  ಒಂದು ನೈಯಾ ಪೈಸೆ ಅನುದಾನ ತರದೇ ಆಸ್ಪತ್ರೆ ಅವ್ಯಸ್ಥೆಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿಜಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್ ಮುಖಂಡರಾದ ಪದ್ಮಸುರೇಶ್, ಎಂ.ಬಿ. ಮಂಜುನಾಥ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್, ಆಶ್ವಿನಿರವಿಶಂಕರ್ , ತಾಲ್ಲೂಕ್ ಪಂಚಾಯಿತ್ ಮಾಜಿ ಅಧ್ಯಕ್ಷೆ ನಾಗರತ್ನದೇವರಾಜ್, ಪಿ.ಸುದೀರ್ ಇನ್ನಿತರರು ಹಾಜರಿದ್ದರು.