DCC ಬ್ಯಾಂಕ್ ಹಗರಣ – ಆರ್ ಎಂ ಮಂಜುನಾಥ್ ಗೌಡಗೆ ಜಾಮೀನು ಮಂಜೂರು
ನಕಲಿ ಚಿನ್ನ ಅಡವಿಟ್ಟು 63 ಕೋಟಿ ರೂಪಾಯಿ ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡಗೆ ನ್ಯಾಯಾಲಯ ಜಾಮೀನು ನೀಡಿದೆ.
ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಐ.ಡಿ. (ಜಾರಿ ನಿರ್ದೇಶನಾಲಯ) ವಶದಲ್ಲಿದ್ದ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಕೊನೆಗೂ ನ್ಯಾಯಾಲಯದ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡಮಾನ ಪ್ರಕರಣದ ವಿಚಾರದಲ್ಲಿ ಐ.ಡಿ. ವಶದಲ್ಲಿದ್ದ ಮಂಜುನಾಥ್ ಗೌಡರು ಈ ಹಿಂದೆ ಸಲ್ಲಿಸಿದ್ದರು ಮೂರು ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿದ್ದವು.ಈ ಹಿನ್ನೆಲೆ ಸರಿ ಸುಮಾರು ಎರಡುವರೆ ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಆರ್.ಎಂ. ಮಂಜುನಾಥ್ ಅವರು ಜಾಮೀನು ಕೋರಿ ಗೌಡ ಮೊರೆ ಹೋಗಿದ್ದರು. ನ್ಯಾಯಾಲಯ ಇಂದು ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.
ಏನಿದು ಪ್ರಕರಣ :
ಕರ್ನಾಟಕ ಪೊಲೀಸರು ಸಲ್ಲಿಸಿದ ದೂರು ಮತ್ತು ಆರೋಪಪಟ್ಟಿಯ ಪ್ರಕಾರ, ಸದರಿ ಬ್ಯಾಂಕಿನ ಮಾಜಿ ಶಾಖಾ ವ್ಯವಸ್ಥಾಪಕಿ ಬಿ. ಶೋಭಾ, ಇತರ ಸಹ-ಆರೋಪಿಗಳೊಂದಿಗೆ ಪಿತೂರಿ ನಡೆಸಿ, ನಕಲಿ ಚಿನ್ನ ಅಡವಿಟ್ಟುಕೊಂಡು 62.77 ಕೋಟಿ ಸಾಲ ನೀಡಲಾಗಿದೆ ಎಂಬ ಆರೋಪ ಹೊರಿಸಲಾಗಿತ್ತು.
‘ಶಿವಮೊಗ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್, ನಗರ ಶಾಖೆಯಲ್ಲಿ ದೊಡ್ಡ ಪ್ರಮಾಣದ ಹಣ ದುರುಪಯೋಗ ನಡೆದಿದೆ’ ಎಂದು ಇಡಿ ತನಿಖೆಯಲ್ಲಿ ಕಂಡುಬಂದಿದೆ. ಆರ್.ಎಂ ಮಂಜುನಾಥ ಗೌಡ ಸೂಚನೆಯ ಮೇರೆಗೆ ಶಾಖಾ ವ್ಯವಸ್ಥಾಪಕಿ ಬಿ. ಶೋಭಾ ಸಾಲ ನೀಡಿದ್ದಾರೆ’ ಎಂದು ಇಡಿ ಹೇಳಿದೆ.
‘ಬಿ. ಶೋಭಾ ಇತರ ಸಹ-ಆರೋಪಿಗಳೊಂದಿಗೆ ಪಿತೂರಿ ನಡೆಸಿ ಸೃಷ್ಟಿಸಿ, ಪಡೆದ ಹಣವನ್ನು ಮಂಜುನಾಥ್ ಗೌಡರಿಗೆ ಹಸ್ತಾಂತರಿಸಲಾಗಿದೆ’ ಎಂದು ಇಡಿ ಆರೋಪಿಸಿದೆ. ಜೊತೆಗೆ ಈ ಅಕ್ರಮ ಹಣದಿಂದ ವಿವಿಧ ಚರ ಮತ್ತು ಸ್ಥಿರ ಆಸ್ತಿಗಳನ್ನು ಸಂಪಾದಿಸಿದ್ದಾರೆ ಮತ್ತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯ ಪ್ರಕಾರ, ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವುದು ಕಂಡುಬಂದಿದೆ’ ಎಂದು ED ತಿಳಿಸಿದೆ.