ಖಾಯಂ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಆಸ್ಪತ್ರೆಯ ಕಟ್ಟಡ ಏರಿ ಕುಳಿತ ಹೊಸನಗರ ತಾಲೂಕಿನ ನಗರ ಗ್ರಾಪಂ ಅಧ್ಯಕ್ಷ…!!!|nagara
ಗ್ರಾಮೀಣ ಭಾಗದ ಆಸ್ಪತ್ರೆಗೆ ಖಾಯಂ ವೈದ್ಯರನನು ನೇಮಿಸುವಂತೆ ಒತ್ತಾಯಿಸಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡವನ್ನು ಏರಿ ಗ್ರಾಮಪಂಚಾಯಿತಿ ಅಧ್ಯಕ್ಷರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ (ಬಿದನೂರು) ನಗರದ ಸರ್ಕಾರಿ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕ ಮಾಡುವಂತೆ ಆಗ್ರಹಿಸಿ ಆಸ್ಪತ್ರೆಯ ಕಟ್ಟಡ ಏರಿ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಪ್ರತಿಭಟಿಸಿದ್ದಾರೆ. ಸುಮಾರು 30 ರಿಂದ 40 ಸಾವಿರ ಜನಸಂಖ್ಯೆ ಇರುವ ನಗರ ಹೋಬಳಿಯಲ್ಲಿ ಯಾವುದೇ ಖಾಯಂ ವೈದ್ಯರಿಲ್ಲದೇ ಸ್ಥಳೀಯರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡವೇರಿ…