ರಿಪ್ಪನ್ ಪೇಟೆ : ಧಾರ್ಮಿಕ ಕ್ಷೇತ್ರಗಳು ಭಕ್ತಾದಿಗಳ ಪಾಲಿಗೆ ಶ್ರದ್ಧಾ ಭಕ್ತಿಯತಾಣವಾಗಬೇಕು. ಭೇಟಿ ಇಟ್ಟಾಗ ಮನಸ್ಸಿಗೆ ನೆಮ್ಮದಿ ತರುವಂತಾಗಬೇಕು, ಜೋಗ ಜಲಪಾತ ಜಲಮಯವಾಗಿದೆ. ಅಮ್ಮನಘಟ್ಟ ಜೇನು ಕಲ್ಲಮ್ಮ ದೇವಸ್ಥಾನ ಶಿಲಾಮಯವಾಗಿದೆ ಎಂದು ರಾಮಚಂದ್ರಾಫುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಐತಿಹಾಸಿಕ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹೊಸಕೆಸರೆ ಗ್ರಾಮದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಶಿಲಾಮಯ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಸೃಷ್ಠಿಯ ವಿಸ್ಮಯದಲ್ಲಿ ನಾವು ಅಣು ಮಾತ್ರ. ತಾಯಿಯ ಹೃದಯ ಎಂದೂ ಕಲ್ಲಾಗದು. ಅದು ಜೇನಿನಂತೆ ಸವಿ. ಇಲ್ಲಿ ಜೇನುಕಲ್ಲಮ್ಮ ದೇವಿಯ ದೇವಸ್ಥಾನ ನಿರ್ಮಾಣ ಕಾರ‍್ಯ ಭಕ್ತರ ಬಹುದಿನಗಳ ಕನಸನ್ನು ನನಸು ಮಾಡಲು ಹೊರಟಿದೆ. ಸರಕಾರ ಈ ಕಾರ್ಯಕ್ಕೆ ಇನ್ನೂ ಹೆಚ್ಚಿನ ಮಹತ್ವ ನೀಡಲಿ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಧರ್ಮದ ಹೆಸರಿನಲ್ಲಿ ಹಿಂಸೆ, ಭಯೋತ್ಪಾದನೆ ಹುಟ್ಟುವಂತೆ ಮಾಡುವುದು ಸರಿಯಲ್ಲ. ಶಾಂತಿ ಸಹಬಾಳ್ವೆಯನ್ನು ಬಿತ್ತುವ ಹಿಂದೂಧರ್ಮ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ ಎಂದರು.
ಭಯೋತ್ಪಾದನೆ ಹುಟ್ಟುವಂತೆ ಮಾಡುವುದು ಸರಿಯಲ್ಲ. ಶಾಂತಿ ಸಹಬಾಳ್ವೆಯನ್ನು ಬಿತ್ತುವ ಹಿಂದೂಧರ್ಮ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ ಎಂದರು.
ಶಾಸಕ ಹಾಗೂ ಎಮ್ ಎಸ್ ಐ ಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಸ್ಥಾನ ಶಿವಮೊಗ್ಗ ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣವಾಗಿದೆ. ಮುಂದಿನ 5 ವರ್ಷಗಳಲ್ಲಿ 5ಕೋಟಿ ರೂ. ಅನುದಾನದಲ್ಲಿ ಇಲ್ಲಿನ ದೇವಸ್ಥಾನವನ್ನು ಅಭಿವೃದ್ಧಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇಲ್ಲಿನ ಸುಂದರ ಪರಿಸರವನ್ನು ಹಾಳುಗೆಡವದೇ, ಅದನ್ನು ಉಳಿಕೊಂಡು ದೇವಸ್ಥಾನವನ್ನು ಅಭಿವೃದ್ಧಿಪಡಿಸುವುದು ನಮ್ಮಗುರಿ. ಆಸ್ತಿಕರಿಗೆ ನಂಬಿಕೆಯ ಸ್ಥಳವಾಗಿ, ಪ್ರವಾಸಿ ತಾಣವಾಗಿ ರೂಪುಗೊಳ್ಳುವ ವಿಶ್ವಾಸವಿದೆ. ಎಂದರು.ಶಾಸಕ ಹಾಗೂ ಎಮ್ ಎಸ್ ಐ ಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಸ್ಥಾನ ಶಿವಮೊಗ್ಗ ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣವಾಗಿದೆ. ಮುಂದಿನ 5 ವರ್ಷಗಳಲ್ಲಿ 5ಕೋಟಿ ರೂ. ಅನುದಾನದಲ್ಲಿ ಇಲ್ಲಿನ ದೇವಸ್ಥಾನವನ್ನು ಅಭಿವೃದ್ಧಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಮೂಲೆಗದ್ದೆಯ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗರ್ತಿಕೆರೆಯ ನಿಟ್ಟೂರು ಮಠದ ಶ್ರೀರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದು, ಭಕ್ತಾದಿಗಳಿಗೆ ಶುಭ ಹಾರೈಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ಪ್ರಾಸ್ತಾವಿಕ ಮಾತನಾಡಿದರು.
ತಹಶೀಲ್ದಾರ್ ವಿ.ಎಸ್ ರಾಜೀವ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕಟ್ಟಡ ಸಮಿತಿ ಸದಸ್ಯರು ಮತ್ತು ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಪ್ಪು ಬಾವುಟ ಪ್ರದರ್ಶನ :
ಈ ಕಾರ‍್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೆಸರನ್ನು ಸೇರಿಸಿಲ್ಲ. ದೇವಸ್ಥಾನಕ್ಕೆ ನಡೆದುಕೊಳ್ಳುವ ಕೆಲ ಸಮುದಾಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ.ಚಿದಂಬರ ವೇದಿಕೆ ಮುಂಭಾಗ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಮುಂದಾದರು.
ವ್ಯವಸ್ಥಾಪನಾ ಸಮಿತಿ ಅಧ್ಯಕರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದು ರಿಪ್ಪನ್‌ಪೇಟೆ ಠಾಣೆಗೆ ಕರೆದೊಯ್ಯಲಾಯಿತು. ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಲಾಯಿತು.