ತೀರ್ಥಹಳ್ಳಿ : ಮನೆ ಮುಂದೆ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಪೊಲೀಸರೆ ಮರಳು ತುಂಬಿ ವಾಹವನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ‘ಹೆದ್ದೂರು ಬಳಿ ಮನೆಯೊಂದರ ಮುಂದೆ ಪಿಕಪ್ ವಾಹನಕ್ಕೆ ಪೊಲೀಸರೆ ಮರಳು ತುಂಬಿದ್ದಾರೆ. ಅದನ್ನು ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಕಪ್ ವಾಹನಕ್ಕೆ ಮರಳು ತುಂಬಿದ ಪೊಲೀಸರನ್ನು ಕೂಡಲೆ ಅಮಾನತು ಮಾಡಬೇಕು. ಬಿಜೆಪಿಯವರು ಅವ್ಯಾಹತವಾಗಿ ಮರಳು ದಂಧೆ ನಡೆಸುತ್ತಿದ್ದಾರೆ. ಅವರನ್ನು ತಡೆಯಲು ಪೊಲೀಸರು ಮುಂದಾಗುತ್ತಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಖಾಸುಮ್ಮನೆ ಪ್ರಕರಣ ದಾಖಲು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿಗೆ ಹೆದ್ದೂರು ಸಮೀಪ ಲೈನ್ ಮ್ಯಾನ್ ಒಬ್ಬರು ಮದ್ಯಾನ್ಹದ ವೇಳೆ ಸಾವಿಗಿಡಾದರೂ ಸಂಜೆಯವರೆಗೂ ಅಲ್ಲಿಗೆ ಪೊಲೀಸರು ಭೇಟಿ ನೀಡಿಲ್ಲ. ನಾನು ನನ್ನ ಕೈಯಲ್ಲಿದ್ದ ಐದು ಸಾವಿರ ಹಣವನ್ನು ಕೊಟ್ಟು ಬಂದಿದ್ದೆ. ಅದರಲ್ಲಿ
ಒಂದು ಸಾವಿರ ಹಣ ಪೊಲೀಸರು ಕೇಳುತ್ತಾರಂತೆ. ಕಂಪ್ಲೇಂಟ್ ಕೊಡದಿದ್ದರೆ ತೆಗೆದುಕೊಳ್ಳುವುದಿಲ್ಲವಂತೆ. ಅದೇ ನಮ್ಮ ಕಾರ್ಯಕರ್ತರ ಮೇಲೆ ದೇವರು ಕೂಡ ಕಂಪ್ಲೇಂಟ್ ಕೊಡದಿದ್ದರೂ ಸುಮೊಟೊ ಕಂಪ್ಲೇಂಟ್ ದಾಖಲಿಸುತ್ತೀರಾ ? ಪೊಲೀಸ್ ಇಲಾಖೆ ಬಾಡಿಗೆಗೆ ಇದೆಯಾ ಎಂದು ವಾಗ್ದಾಳಿ ನೆಡೆಸಿದರು.
ಹೆದ್ದೂರು ಬಳಿ ಮರಳು ತುಂಬಲು ಜ್ಞಾನೇಂದ್ರ ಹೇಳಿದ್ದ ಅಥವಾ ನೀವೇ ತುಂಬಿದ್ದ ನನಗೆ ಗೊತ್ತಾಗಬೇಕು. ಆರಗದಲ್ಲಿ 14 ಜನ ಮರಳನ್ನು ಹೊಡೆಯುತ್ತಾಯಿದ್ದಾರೆ. ಅವರನ್ನು ಯಾರು ಹಿಡಿಯಲ್ಲ.ಅದೇ ನಾನು ಮಂತ್ರಿ, ಎಂ ಎಲ್ ಎ ಆದಾಗ ಜ್ಞಾನೇಂದ್ರ ಮರಳು ದಂಡೆಯನ್ನೇ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆಗಿನ ಸಮಯದಲ್ಲಿ ನಾನು ಆನೆ ಹಿಡಿಯಲಿಲ್ಲ ಅಂತ ಕೂಗುತ್ತಿದ್ದರು. ಈಗ ಆನೆ ಆಗುಂಬೆ, ಮುಗುಡ್ತಿ, ಶೆಡ್ಗಾರ್, ಕೊನೆಗೆ ಕುರುವಳ್ಳಿಗೂ ಬಂತು ಆರಗ ಜ್ಞಾನೇಂದ್ರ ನಾಪತ್ತೆಯಾಗಿದ್ದಾರೆ. ಪುಣ್ಯಕ್ಕೆ ತಾಲೂಕು ಕಚೇರಿ ಒಂದಕ್ಕೆ ಆನೆ ಬಂದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಗೃಹ ಇಲಾಖೆಗೆ ರಾಜೀನಾಮೆ ಕೊಡಿ
ಸ್ಯಾಂಟ್ರೋ ರವಿ ಬಳಿ ಜ್ಞಾನೇಂದ್ರ ಅವರು ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಎಚ್ ಡಿ ಕೆ ವಿಡಿಯೋವೊಂದನ್ನು ಬಿಟ್ಟಿದ್ದಾರೆ. ಇನ್ನು ವಿಡಿಯೋ ಬಿಡ್ತೀನಿ ಅಂತಾನೂ ಹೇಳಿದ್ದಾರೆ. ಹಾಗಾಗಿ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ಕೊಡುವುದು ಒಳ್ಳೆಯದು. ಈಗಾಗಲೇ ಭ್ರಷ್ಟಾಚಾರ, ಪಿಎಸ್ಐ ನೇಮಕಾತಿ ವಿಚಾರದಲ್ಲಿ ಆರೋಪವಿದೆ ಹೀಗಾಗಿ ಗೃಹ ಇಲಾಖೆಗೆ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡುವುದು ಒಳ್ಳೆಯದು ಎಂದರು.
ವರದಿ : ಅಕ್ಷಯ್ ಕುಮಾರ್