ಸಾಗರ ಬಂದ್ ಸಂಪೂರ್ಣ ಯಶಸ್ವಿ – ಅಜಾದ್ ರಸ್ತೆಯಲ್ಲಿ ಮಾತಿನ ಚಕಮಕಿ : ಕೊಲೆ ಯತ್ನ ಘಟನೆಗೆ ರೋಚಕ ಟ್ವಿಸ್ಟ್|sagara


ಸಾಗರದಲ್ಲಿ ಹಿಂದೂ ಸಂಘಟನೆಗಳು ಕರೆ ನೀಡಿರುವ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಸಾಗರದ ಮೀನು ಮಾರುಕಟ್ಟೆಯ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಂದ್ ಮಾಡಿಸಲು ಬಂದಾಗ ಮಾತಿನ ಚಕಮಕಿ ನಡೆದಿದೆ. ಮಾರ್ಕೆಟ್ ನಲ್ಲಿ ಹಿಂದೂ ಸಂಘಟನೆಯ ಗುಂಪು ಸಾಗರದ ಬಂದ್ ಹಿನ್ಬಲೆಯಲ್ಲಿ ಮೀನು ಮಾರ್ಕೆಟ್ ಬಂದ್ ಮಾಡಿಸಲು ಮುಂದಾದಾಗ ಸ್ಥಳೀಯರು ಬಂದ್ ಮಾಡಲು ನಿರಾಕರಿಸಿದ್ದಾರೆ.

ಪರಸ್ಪರ ಘೋಷಣೆ ಕೂಗಲಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಕೂಗಿದರೆ ಸ್ಥಳೀಯರು ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಕೂಗಿದ್ದಾರೆ. ಪರಸ್ಪರ ಕಣ್ಣಿನಲ್ಲೇ ಗುರಾಯಿಸುವ ದೃಶ್ಯಗಳು ನಡೆದಿದೆ.

ನಂತರ ಎಎಸ್ಪಿರೋಷನ್ ಜಗದೀಶ್ ಪರಿಸ್ಥಿತಿಯನ್ನ ಕೂಲ್ ಮಾಡಿದ್ದಾರೆ.

ಸಾಗರದಗಣಪತಿದೇವಸ್ಥಾನದಿಂದ ಮೆರವಣಿಗೆ ಹೊರಟು ಶಿವಪ್ಪ ನಾಯಕ ಮಾರ್ಕೆಟ್ ಮೀನು ಮಾರುಕಟ್ಟೆ ಹಿಂಬದಿ ರಸ್ತೆಯ ಮೂಲಕ ಬಸ್ ನಿಲ್ದಾಣ ತಲುಪಲಿದೆ.

ಆಜಾದ್ ರಸ್ತೆ,ಯಲ್ಲಿ ಗಣಪತಿ ಮೆರವಣಿಗೆಯಾಗಲೀ ಇತರೆ ಯಾವೂದೇ ಮೆರವಣಿಗೆ ನಡೆದಿಲ್ಲ. ಇಂದು ಬಜರಂಗ ದಳದ ಸಾಗರ ಬಂದ್ ಮೆರವಣಿಗೆ ಬಿಟ್ಟಿರುವ ಬಗ್ಗೆ ಸ್ಥಳೀರು ಆಕ್ಷೇಪಿಸಿದ್ದಾರೆ.

ಬಿಗ್ ಟ್ವಿಸ್ಟ್ ಪಡೆದುಕೊಂಡ ಪ್ರಕರಣ

ಸಾಗರದ ನೆಹರೂ ನಗರದಲ್ಲಿ ಬಜರಂಗ ದಳ ಸಹ ಸಂಚಾಲಕ ಸುನಿಲ್‌ ಹತ್ಯಾ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದು ಹಿಂದು ಮತ್ತು ಮುಸ್ಲಿಂ ಸಂಘರ್ಷ ಎಂದು ಇದುವರೆಗೆ ಹೇಳಲಾಗಿತ್ತು. ಆದರೆ, ಇದು ವೈಯಕ್ತಿಕ ಜಗಳದಿಂದ ನಡೆದಿರುವ ಹಲ್ಲೆ ಯತ್ನ.

ಸುನಿಲ್‌ ತನ್ನ ಸೋದರಿಯನ್ನು ಚುಡಾಯಿಸಿದ್ದರಿಂದ ಸಿಟ್ಟುಗೊಂಡು ಸಮೀರ್‌ ಹಲ್ಲೆಗೆ ಮುಂದಾಗಿದ್ದಾನೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಸುನಿಲ್‌ ಸಮೀರ್‌ನ ಸೋದರಿಯನ್ನು ಚುಡಾಯಿಸಿದ್ದಕ್ಕೆ ಸಂಬಂಧಿಸಿದ ಕಾಲ್‌ ರೆಕಾರ್ಡ್ಸ್‌ ಕೂಡಾ ಸಿಕ್ಕಿದೆ ಎಂದು ಎಸ್ಪಿ ಹೇಳಿದ್ದಾರೆ.

ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಅವರು ಸೋಮವಾರ ಬೆಳಗ್ಗೆ ಬೈಕ್‍ನಲ್ಲಿ ತಮ್ಮ ಮನೆಯಿಂದ ಬಿ.ಎಚ್. ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ಹೋಗುತ್ತಿದ್ದಾಗ ಸಮೀರ್‌ ಎಂಬಾತ ತಲವಾರಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಅದೃಷ್ಟವಶಾತ್‌ ಸುನಿಲ್‌ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾರೆ.

ಸಮೀರ್‌ನ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದ ಸಾಗರ ಟೌನ್ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ. ಜತೆಗೆ ಆತನ ಜತೆ ಸೇರಿದ್ದಾರೆ ಎಂದು ಹೇಳಲಾದ ಇಮಿಯಾನ್‌ ಮತ್ತು ಮನ್ಸೂರ್‌ ಅವರನ್ನೂ ಬಂಧಿಸಲಾಗಿದೆ.

ಇದೀಗ ಸಮೀರ್‌ನ ವಿಚಾರಣೆ ಸಂದರ್ಭ ಕೊಲೆ ಯತ್ನದ ಹಿಂದಿನ ಕಾರಣಗಳು ಬಯಲಾಗಿವೆ.

Leave a Reply

Your email address will not be published. Required fields are marked *