Headlines

ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ|ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ |Credit

ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವಿದೇಶಿ ವಿಶ್ವ ವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮಾಸ್ಟರ್ ಡಿಗ್ರಿ, ಪಿ.ಹೆಚ್.ಡಿ. ಹಾಗೂ ಪೋಸ್ಟ್ ಡಾಕ್ಟರಲ್ ಕೋರ್ಸ್‍ಗಳ ವ್ಯಾಸಂಗಕ್ಕೆ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ವಾರ್ಷಿಕ ರೂ. 3.50 ಲಕ್ಷಗಳಂತೆ ಕೋರ್ಸ್‍ನ ಅವಧಿಗೆ ಗರಿಷ್ಟ ರೂ. 10.00 ಲಕ್ಷಗಳ ಸಾಲವನ್ನು ಶೇ. 2ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ವಿದ್ಯಾರ್ಥಿ ಕುಟುಂಬದ ವಾರ್ಷಿಕ ವರಮಾನ ರೂ. 3.50 ಲಕ್ಷಗಳ ಮಿತಿಯಲ್ಲಿರಬೇಕು. ಮಂಜೂರು ಮಾಡುವ…

Read More

ಮೋದಿಯವರ ಹೆಸರೇ ನಮಗೆ ಸ್ಪೂರ್ತಿ : ಗೃಹ ಸಚಿವ ಆರಗ ಜ್ಞಾನೇಂದ್ರ|Humcha

ಭವ್ಯ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೆಸರೇ ನಮಗೆ ಸ್ಪೂರ್ತಿಯಾಗಿದೆ ಅಂತಹ ಮಹಾನ್ ವ್ಯಕ್ತಿತ್ವ ಅವರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪ್ರಧಾನಿ ಮೋದಿ ಯವರ 72 ನೇ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾ ಹುಂಚದಲ್ಲಿ ನಡೆಸಿದ್ದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿನ ಬಗ್ಗೆ ಹುಂಚ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ದವರು ಅಯೋಜಿಸಿದ್ದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಿ…

Read More

ರಿಪ್ಪನ್‌ಪೇಟೆ : ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪ|tammadikoppa

ರಿಪ್ಪನ್‌ಪೇಟೆ;-ಅರಸಾಳು ಗ್ರಾಮ ಪಂಚಾಯಿತ್ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಹೊಟ್ಯಾಳಪುರದಲ್ಲಿ ಮಿನಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಜಾಗ ಇಲ್ಲದೆ ಗ್ರಾಮಸ್ಥರು ಊರ ಬಳಿಯಲ್ಲಿನ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕವಾಗಿ ಸೆಡ್ ನಿರ್ಮಿಸಿಲಾಗಿ ಅರಣ್ಯ ಇಲಾಖೆಯವರು ತೆರವುಗೊಳಿಸಲು ಮುಂದಾದಾಗ ಪ್ರತಿಭಟನೆ ನಡೆಸಲಾಗಿದ್ದು ಶಾಸಕರ ಗಮನಕ್ಕೆ ತರಲಾಗಿ ಭಾನುವಾರದಂದು ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಗ್ರಾಮಸ್ಥರ ಬೇಡಿಕೆಯಂತೆ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡುವುದರೊಂದಿಗೆ…

Read More

ಏಕಾಏಕಿ 200 ಮನೆ ತೆರವಿಗೆ ಮುಂದಾದ ಅಧಿಕಾರಿಗಳು : ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ – ಹಲವರನ್ನು ವಶಕ್ಕೆ ಪಡೆದ ಪೊಲೀಸ್|Shivamogga

ಶಿವಮೊಗ್ಗದ ಮಲ್ಲಿಗೇನಹಳ್ಳಿಯಲ್ಲಿ ಅಕ್ರಮ ಮನೆ ತೆರವು ಕಾರ್ಯಚರಣೆ ನಡೆಸಿ ಮನೆಗಳನ್ನ ನೆಲಸಮ ಗೊಳಿಸಲಾಗಿದೆ. ಕಾರ್ಯಾಚರಣೆಗೆ ಅಡ್ಡ ಬಂದವರನ್ನು ವಶಕ್ಕೆ ಪಡೆದು ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ. ಮಲ್ಲಿಗೇನಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಅಪ್ಪರ್ ತುಂಗ ಜಾಗದಲ್ಲಿ ಇಲ್ಲಿನ ಹಕ್ಲಿಪಿಕ್ಕಿ ಜನ ಅಕ್ರಮ ಮನೆ ನಿರ್ಮಿಸಿಕೊಂಡಿದ್ದು ಅವರನ್ನು ತೆರವುಗೊಳಿಸಲು ಯುಟಿಪಿ ಇಲಾಖೆ ಅನೇಕ ಬಾರಿ ನೋಟೀಸ್ ನೀಡಲಾಗಿತ್ತು.ಆದರೆ ನೋಟೀಸ್ ಗೆ ಉತ್ತರ ನೀಡಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಮಗೆ 6 ತಿಂಗಳು ಕಾಲಾವಕಾಶಕೊಡಿ ಕಾಲಾವಕಾಶ ನೀಡಿದ ನಂತರ ವಸತಿ ಸಚಿವರಿಂದಲೇ ಅನುಮತಿ ತರಲಿದ್ದೇವೆ…

Read More

ಕಬ್ಬಿಣವನ್ನು ಬಂಗಾರ ಮಾಡಿದವರಿಂದ ಸೊರಗಿ ಹೋಗಿದ್ದ ಜಿಲ್ಲಾ ಸಹಕಾರಿ ಬ್ಯಾಂಕ್ ಈಗ ಸುಭದ್ರವಾಗಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ|Talale

ರಿಪ್ಪನ್‌ಪೇಟೆ : ಸಹಕಾರ ಸಂಘದಲ್ಲಿ ಮೇವು ಉಂಡು ಜೀರ್ಣಿಸಿಕೊಂಡು ಕಬ್ಬಿಣವನ್ನು ಬಂಗಾರ ಮಾಡಿದ ಮಹಾನುಭಾವರಿಂದ ಸಹಕಾರಿ ಸಂಘಗಳು ಮುಳುಗಿ ಹೋದವು ಎಂಬ ಪರಿಸ್ಥಿತಿ ಉದ್ಬವಿಸಿದಾಗ ಉತ್ತಮ ಆಡಳಿತ ನೀಡಿ ಜಿಲ್ಲಾ ಸಹಕಾರಿ ಬ್ಯಾಂಕ್ ನ್ನು ಪುನಶ್ಚೇತನಗೊಳಿಸಿ ಎತ್ತರಕ್ಕೆ ಏರಿಸುವ ಮೂಲಕ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪನವರು ಜನಮನ್ನಣೆ ಗಳಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಲ್ಲಿನ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇವರು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಬಹುಸೇವಾ…

Read More

ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್ ಕುನ್ನೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ | ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ; ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ|koduru

ರಿಪ್ಪನ್‌ಪೇಟೆ : ಸಾರ್ವಜನಿಕ ಸಮಸ್ಯೆ ಪರಿಹರಿಸಲು‌ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಹೊಸನಗರ ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ತಿಳಿಸಿದರು. ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್ ಕುನ್ನೂರು ಗ್ರಾಮದಲ್ಲಿಂದು ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಹಳ್ಳಿ ಜನರ ಕಷ್ಟ ಸುಖ ಮೇಲ್ಮಟ್ಟದ ಅಧಿಕಾರಿಗಳಿಗೆ ಗೊತ್ತಾಗೋದು ಇಲ್ಲಿ ಬಂದಾಗ ಮಾತ್ರ. ಹೀಗಾಗಿ ರಾಜ್ಯ…

Read More

ಕೋಟಿ ಹಣವಿದ್ದರೂ ತುತ್ತು ಅನ್ನಕ್ಕೆ ಪರದಾಟ : ಆಸ್ತಿ ಪಡೆದು ಕೈಕೊಟ್ಟ ಮಕ್ಕಳು – ಅನ್ನಕ್ಕಾಗಿ ಅಂಗಲಾಚುತ್ತಿರುವ ವೃದ್ದ|sadstory

ಹೊಸನಗರ : ಮನುಷ್ಯ ತನ್ನ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿ ಆಸ್ತಿಪಾಸ್ತಿಗಳನ್ನು ಗಳಿಸುವುದು ತನ್ನ ಮಕ್ಕಳು ತಾನು ಪಟ್ಟ ಕಷ್ಟ ಅನುಭವಿಸದಿರಲಿ ಹಾಗೂ ತಮ್ಮ ವೃದ್ದಾಪ್ಯ ಸ್ಥಿತಿಯಲ್ಲಿ ಆಸರೆಯಾಗಿ ಇರಲಿ ಎಂದು ತಾನೇ…ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಳ್ಳಿಯೊಂದರಲ್ಲಿ ತಾನು ಗಳಿಸಿದ ಆಸ್ತಿಯೇ ವೃದ್ದರೊಬ್ಬರಿಗೆ ಮುಳುವಾಗಿ ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಹೌದು ಹೊಸನಗರ ಪಟ್ಟಣದಿಂದ ಸುಮಾರು 12 ಕಿಮೀ ದೂರದಲ್ಲಿರುವ ಮಳಲಿ ಗ್ರಾಮದ ಅತೀ ಶ್ರೀಮಂತರಾಗಿ ಬಾಳಿ ಬದುಕಿದ್ದ ಮಳಲಿ ಶೀನಯ್ಯನವರು ತಮ್ಮ…

Read More

ಕುತ್ತಿಗೆ ಕತ್ತರಿಸುವ ಸಂಸ್ಕೃತಿ ನಮ್ಮದಲ್ಲ – ಕೊರಳಿಗೆ ಹಾರ ಹಾಕುವುದು ನಮ್ಮ ಭಾರತ ದೇಶದ ಸಂಸ್ಕೃತಿ : ಕಲ್ಲಡ್ಕ ಪ್ರಭಾಕರ್ ಭಟ್ |Ripponpet

ರಿಪ್ಪನ್‌ಪೇಟೆ : ಭಾರತ ದೇಶವನ್ನು ಮುಸಲ್ಮಾನ್, ಕ್ರೀಶ್ಚಿಯನ್ ದೇಶವನ್ನಾಗಿ ಮಾಡಬೇಕು ಎಂಬ ಹಿನ್ನಲೆಯಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಿದರು.ಮತಾಂತರ ಮಾಡುವುದರೊಂದಿಗೆ ಭಯೋತ್ಪದನೆಯನ್ನು ಹುಟ್ಟು ಹಾಕಿ ಹಿಂದು ಧರ್ಮವನ್ನು ಒಡೆಯುವುದರೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ದಕ್ಕೆ ತರುವ ಕಾರ್ಯದಲ್ಲಿ ತೊಡಗಿರುವವರಿಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಸಂಘಟನ್ಮಾಕವಾಗಿ ತಕ್ಕ ಉತ್ತರ ನೀಡುತ್ತದೆಂದು ಕರ್ನಾಟಕ ದಕ್ಷಿಣ ಪ್ರಾಂತ್ ಕಾರ್ಯಕಾರಣಿ ಅಹ್ವಾನಿತ ಸದಸ್ಯ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಎಚ್ಚರಿಸಿದರು. ರಿಪ್ಪನ್‌ಪೇಟೆಯ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಸಾಗರ ಜಿಲ್ಲಾ ಪ್ರಾಂತ್ಯದ  ರಾಷ್ಟ್ರೀಯ ಸ್ವಯಂ ಸೇವಕರ ಸಂಘದವರು ಅಯೋಜಿಸಲಾದ…

Read More

ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಕಿಮ್ಮನೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ | ಶಿವಮೊಗ್ಗದಲ್ಲೊಂದು 7 ಚಕ್ರದ ಹೈಟೆಕ್ ಆಟೋ -ಏನಿದರ ವಿಶೇಷ??? ಸುದ್ದಿ ನೋಡಿ

ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುರುವಳ್ಳಿ ಬಂಡೆಯಲ್ಲಿ ಕಾರ್ಮಿಕರಿಗೆ ಭೂ ಮತ್ತು ಗಣಿ ಅಧಿಕಾರಿಗಳು ಹಿಂಸೆ ನೀಡುತ್ತಿರುವುದನ್ನು ಖಂಡಿಸಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನೆಡೆಸುತ್ತಿದ್ದಾರೆ.   ಗೃಹ ಸಚಿವರು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಬಂಡೆ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವುದರಿಂದ ಶುಕ್ರವಾರ ಬೆಳಿಗ್ಗೆ 9 ಗಂಟೆಯೊಳಗಾಗಿ ಅವರ ಸಮಸ್ಯೆ ಬಗೆಹರಿಸಿದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಫೋಟೋದೊಂದಿಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ…

Read More

ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಕರ್ ರಾಜೀನಾಮೆ |arasalu

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಕರ್ ರಾಜೀನಾಮೆ ಸಲ್ಲಿಸಿದ್ದಾರೆ. ಅರಸಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ 20 ತಿಂಗಳ ಕಾಲ ಕಾರ್ಯನಿರ್ವಹಿಸಿದ ಹೂವಪ್ಪ ಯಾನೆ ಉಮಾಕರ್ ಸಾಗರದ ಉಪ ವಿಭಾಗ ಅಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಕೆಲಸದ ಒತ್ತಡ ಹಾಗೂ ಕಾರಣಾಂತರದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ ನಗರಸಭೆಯ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆಸಿಫ್ ಭಾಷಾಸಾಬ್,…

Read More