
ಜಿಲ್ಲಾ ಸುದ್ದಿ:
ಕೋಣಂದೂರಿನ ಬಿಜೆಪಿ ಬೆಂಬಲಿತ ಸದಸ್ಯನ ದೌರ್ಜನ್ಯ ಖಂಡಿಸಿ ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ಸೋಮವಾರ ಪತಿಭಟನೆ : ಅಮ್ರಪಾಲಿ ಸುರೇಶ್
ತೀರ್ಥಹಳ್ಳಿ : ಗುರುವಾರ ಕೋಣಂದೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿಗ ಸದಸ್ಯ ರವರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಬಿಜೆಪಿ ಬೆಂಬಲಿತ ಸದಸ್ಯ ಪೂರ್ಣೇಶ್ ಗ್ರಾಮ ಪಂಚಾಯತ್ ಸದಸ್ಯತ್ವವನ್ನು ರದ್ದುಗೊಳಿಸ ಬೇಕೆಂದು ಆಗ್ರಹಿಸಿ ಸೋಮವಾರ ದಿನಾಂಕ 17/01/2022 ರಂದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ರವರ ನೇತೃತ್ವದಲ್ಲಿ ತಾಲ್ಲೂಕು ತಹಶಿಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್ ತಿಳಿಸಿದ್ದಾರೆ. (…
ಕೋಣಂದೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಮಾರಾಮಾರಿ : ಇಬ್ಬರು ಆಸ್ಪತ್ರೆಗೆ ದಾಖಲು
ಕೋಣಂದೂರು : ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಬೆಳಿಗ್ಗೆ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಇಬ್ಬರು ಗ್ರಾಮ ಪಂಚಾಯತ್ ಸದಸ್ಯರು ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದ್ದು, ಇಬ್ಬರೂ ಆಸ್ಪತ್ರೆ ದಾಖಲಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯ ಸುರೇಶ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯ ಪೂರ್ಣೇಶ್ ಇಬ್ಬರ ನಡುವೆ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಇಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಸುರೇಶ್ ಅವರಿಗೆ ಗಂಭೀರ ಗಾಯವಾಗಿದ್ದು, ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪೂರ್ಣೇಶ್…
ರಿಪ್ಪನ್ ಪೇಟೆಯ ಕಾಲೇಜುಗಳಿಗೆ ವಕ್ಕರಿಸಿರುವ ಮಹಮಾರಿ ಕೊರೊನಾ : ಇಂದು ಸಹ ಒಬ್ಬ ಪಿಯು ಕಾಲೇಜಿನ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಧೃಡ
ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ಯುವಕನೊರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು,ಯುವಕನನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.ಈ ಕಾಲೇಜಿನಲ್ಲಿ ಸುಮಾರು 605 ವಿದ್ಯಾರ್ಥಿಗಳು ಇದ್ದಾರೆ. ಕಳೆದ ಮೂರು ದಿನಗಳ ಹಿಂದೆ ವಿದ್ಯಾರ್ಥಿ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ಪಿಹೆಚ್ ಸಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾನೆ ಕೋವಿಡ್ ಪರೀಕ್ಷೆಯ ವರದಿಯು ಇಂದು ಪಾಸಿಟಿವ್ ಎಂದು ಬಂದ ಕಾರಣ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿ ಕೊಡಲಾಗಿದೆ,ಹಾಗೂ ಕಾಲೇಜನ್ನು ಸಂಪೂರ್ಣವಾಗಿ…
ರಿಪ್ಪನ್ ಪೇಟೆ : ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ : ರಾಷ್ಟ್ರೀಯ ಯುವ ದಿನದ ಇತಿಹಾಸ
ರಿಪ್ಪನ್ ಪೇಟೆ : ರಾಷ್ಟ್ರೋತ್ಥಾನ ಬಳಗದ ವತಿಯಿಂದ ಇಲ್ಲಿಯ ರಾಷ್ಟ್ರೋತ್ಥಾನ ಶಿಶು ಮಂದಿರದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರೆಸ್ಸೆಸ್ ಪ್ರಮುಖರಾದ ಬೆಳ್ಳೂರು ತಿಮ್ಮಪ್ಪ ಮಾತನಾಡಿ ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. 18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ ಅವರ 159ನೇ ಜನ್ಮಜಯಂತಿ ದಿನವನ್ನು ಇಂದು ನಾವು ರಾಷ್ಟ್ರೀಯ…
ಕ್ಯಾಪ್ ಧರಿಸದ ಅರಣ್ಯ ಹಾಗೂ ಅಬಕಾರಿ ಸಿಬ್ಬಂದಿಗಳ ವಿರುದ್ಧ ಗರಂ ಆದ ಶಾಸಕ ಹರತಾಳು ಹಾಲಪ್ಪ
ಹೊಸನಗರ : ಬುಧವಾರ ಪಟ್ಟಣದ ತಾಲ್ಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ನಾಡಗೀತೆ ಹಾಡುವ ವೇಳೆಯಲ್ಲಿ ಅಬಕಾರಿ ಹಾಗೂ ಅರಣ್ಯ ಸಿಬ್ಬಂದಿಗಳು ಕ್ಯಾಪ್ ಧರಿಸದೆ ಇರುವುದನ್ನು ಗಮನಿಸಿದ ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯ ಆರಂಭದಲ್ಲಿ ನಾಡಗೀತೆಗೆ ಗೌರವ ಸೂಚಿಸುವ ಸಂದರ್ಭದಲ್ಲಿ ಅರಣ್ಯ ಹಾಗೂ ಅಬಕಾರಿ ಸಿಬ್ಬಂದಿಗಳು ಕ್ಯಾಪ್ ಧರಿಸದೆ ನಾಡಗೀತೆಗೆ ಅಗೌರವ ತೋರಿದ್ದು ಶಾಸಕರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರಿಗಳ ಮೇಲೆ ಗರಂ ಆದರು. ನಂತರ ಅಗೌರವ…
ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ : ನೂತನ ಜಿಲ್ಲಾಧಿಕಾರಿಯಾಗಿ ಡಾ. ಸೆಲ್ವಮಣಿ ಅಧಿಕಾರ ಸ್ವೀಕಾರ
ಜಿಲ್ಲೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಕೆ ಬಿ ಶಿವಕುಮಾರ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದ್ದು , ಅವರ ಸ್ಥಾನಕ್ಕೆ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಸೆಲ್ವಮಣಿ (2013 ನೇ ಬ್ಯಾಚಿನ ಐಎಎಸ್ ಅಧಿಕಾರಿ)ರವರನ್ನು ಸರ್ಕಾರ ವರ್ಗಾಯಿಸಿ ಆದೇಶ ನೀಡಿದ್ದು .ಇಂದು ಬೆಳಿಗ್ಗೆ ನೂತನ ಜಿಲ್ಲಾಧಿಕಾರಿಗಳು ಹಿಂದಿನ ಜಿಲ್ಲಾಧಿಕಾರಿ ಅವರಿಂದ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಹಿಂದಿನ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಸೇವೆ ಸಲ್ಲಿಸಿದ್ದು ಕೆಲವು ಮಾಫಿಯಾಗಳು ಅದರಲ್ಲೂ ಮುಖ್ಯವಾಗಿ ಹುಣಸೋಡು ಕ್ರಷರ್ ಮತ್ತು…
ರಿಪ್ಪನ್ ಪೇಟೆ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು,ಯುವಕನನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ವಿದ್ಯಾರ್ಥಿಗೆ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ಪಿಹೆಚ್ ಸಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾನೆ ಕೋವಿಡ್ ಪರೀಕ್ಷೆಯ ವರದಿಯು ಇಂದು ಪಾಸಿಟಿವ್ ಎಂದು ಬಂದಿದೆ.ವಿದ್ಯಾರ್ಥಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಾಲೇಜಿನ 2nd ಬಿಕಾಂ ನ ಎಲ್ಲಾ ವಿದ್ಯಾರ್ಥಿಗಳ ಸ್ಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಕಾಲೇಜಿನ ಆಡಳಿತ…
70 ಸಾವಿರ ರೂ. ಲಂಚ ಪಡೆಯುತ್ತಿದ್ದ ಪಿಡಿಒ ಮೇಲೆ ಎಸಿಬಿ ದಾಳಿ
ಬಿಳಕಿ ಗ್ರಾಮಪಂಚಾಯಿತಿ ಪಿಡಿಒ ಭ್ರಷ್ಟಾಚಾರ ನಿಗ್ರಹದಳದ (ACB) ಬಲೆಗೆ ಬಿದ್ದಿದ್ದಾನೆ. ಪಿಡಿಒ ಕೇಶವ ಮೂರ್ತಿ 70 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ. ಇ-ಸ್ವತ್ತಿನಲ್ಲಿ ರಿಲೀಸಿಂಗ್ ಡೀಡ್ ಮಾಡಿಕೊಡಲು ಹರೀಶ್ ಎಂಬುವರ ಬಳಿ ಪಿಡಿಒ ಕೇಶವ ಮೂರ್ತಿ 1 ಲಕ್ಷ ರೂ ಹಣದ ಬೇಡಿಕೆ ಇಟ್ಟಿದ್ದನು. ಈ ಕುರಿತು 5 ಸಾವಿರ ರೂ ಮುಂಗಡವಾಗಿ ಹಣ ಪಡೆದು ಉಳಿದ ಹಣ ಕೆಲಸ ಮುಗಿದ ಮೇಲೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇಂದು ಶಿವಮೊಗ್ಗ…
ಮೇಕೆದಾಟು ಪಾದಯಾತ್ರೆಗೆ ಜಿಲ್ಲೆಯಿಂದ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ : ಹೆಚ್ ಎಸ್ ಸುಂದರೇಶ್
ಶಿವಮೊಗ್ಗ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ಜ.19 ರಂದು ಶಿವಮೊಗ್ಗ ಜಿಲ್ಲೆಯಿಂದ ಸುಮಾರು 2000 ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಜಾರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಜ.19ರಂದು ಬೆಳಿಗ್ಗೆ 8.30ಕ್ಕೆ ಶಿವಮೊಗ್ಗ ಜಿಲ್ಲೆಯವರು ಕೆಪಿಸಿಸಿ ಕಚೇರಿ ಬಳಿ ಹಾಜರಿರುವಂತೆ ವರಿಷ್ಠರು ಸೂಚನೆ…
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೆ ಕೊರೊನಾ ಸೋಂಕು ಧೃಡ :
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಸೋಂಕು ದೃಢಪಡಿಸಿದ್ದಾರೆ. ಮೂರನೇ ಅಲೆಯ ಹೊಸ್ತಿಲಿನಲ್ಲಿರುವ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಈ ವೇಳೆ ಸಿಎಂ ಬೊಮ್ಮಾಯಿ ಸಣ್ಣಪ್ರಮಾಣದ ಲಕ್ಷಣ ಕಾಣಿಸಿಕೊಂಡ ಬೆನ್ನಲ್ಲಿ ಕೊರೋನ ಪರೀಕ್ಷೆಗೆ ಒಳಪಟ್ಟಿದ್ದು, ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಕೊರೋನ ಪಾಸಿಟಿವ್ ಕಾಣಿಸಿಕೊಂಡ ಬೆನ್ನಲ್ಲಿ ನಾನು ಹೋಂಕ್ಯಾರಂಟೈನ್ ಆಗಿರುವುದಾಗಿ ತಿಳಿಸಿರುವ ಸಿಎಂ ನನ್ನೊಂದಿಗೆ ಸಂಪರ್ಕದಲ್ಲಿರುವವರು ಪರೀಕ್ಷೆಗೆ ಒಳಪಡುವಂತೆ ಹಾಗೂ ಐಸೋಲೇಷನ್…