ಜಿಲ್ಲಾ ಸುದ್ದಿ:
ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಟಿ ಆರ್ ಕೃಷ್ಣಪ್ಪರವರಿಂದ ಅರೆ ಬೆತ್ತಲೆ ಪ್ರತಿಭಟನೆ :
ರಿಪ್ಪನ್ ಪೇಟೆ : ಲಾಭದಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ರವರು ಇಂದು ರಿಪ್ಪನ್ ಪೇಟೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿರುವುದೇ ರೈತರು ಮತ್ತು ಬಡ ವರ್ಗಕ್ಕೆ ನೆರವಾಗುವುದಕ್ಕಾಗಿ, ಇದೀಗ ಖಾಸಗೀಕರಣ ಮಾಡಿದರೆ ಬಡ ವರ್ಗ ಸಂಕಷ್ಟಕ್ಕೆ ಸಿಗಲಿದೆ. ಆದ್ದರಿಂದ ಯಾವುದೇ ರಾಷ್ಟ್ರೀಕೃತ ಬ್ಯಾಂಕನ್ನು ಖಾಸಗೀಕರಣ ಮಾಡುವುದಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿದರು….
ಆಸ್ತಿ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ :
ಸಾಗರ ತಾಲೂಕಿನ ಹುಲಿದೇವರಬನ ಸಮೀಪ ಸಣ್ಣಕೊಪ್ಪ ಗ್ರಾಮದ ಗುರುಬಸಪ್ಪ ಎಂಬ ವ್ಯಕ್ತಿಯು ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗಿ ಎದುರು ಪಾರ್ಟಿಗಳಿಗೆ ಸಮನ್ಸ್ ಕಳುಹಿಸಿರುವ ಹಿನ್ನೆಲೆಯಲ್ಲಿ ಗುರುಬಸಪ್ಪ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. >ಗುರುಬಸಪ್ಪ ಎಂಬ ವ್ಯಕ್ತಿಗೆ ಬೇಸೂರು ಗ್ರಾಮದ ಸರ್ವೆ ನಂಬರ್ 33 ರಲ್ಲಿ ಕುಟುಂಬದ ಹಿಸ್ಸೆ ಮೂಲಕ ಬರಬೇಕಾದ ಜಮೀನನ್ನು ಪಡೆಯುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿರುತ್ತಾರೆ. ಇದರಿಂದ ರೊಚ್ಚಿಗೆದ್ದ ಇದೇ ಗ್ರಾಮದವರಾದ ರಾಮನಾಯ್ಕ,…
ಸ್ನಾನದ ಕೋಣೆಗೆ ನುಗ್ಗಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ :
ತೀರ್ಥಹಳ್ಳಿ : ಬೇಸಿಗೆಯ ಈ ಅವಧಿಯಲ್ಲಿ ಹಾವುಗಳು ಹೆಚ್ಚಾಗಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿವೆ. ಆಹಾರ ಅರಸುತ್ತಾ ಉರಗಗಳು ಕಾಡಿನಿಂದ ನಾಡಿನತ್ತ ಬರುವುದು ಸಾಮಾನ್ಯವಾಗಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಮನೆಯೊಂದರ ಸ್ನಾನದ ಕೋಣೆಗೆ ನುಗ್ಗಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಮಂಡಗದ್ದೆ ಹೋಬಳಿಯ ಕೆರೆಕೊಪ್ಪದ ನಿವಾಸಿ ಆನಂದ ನಾಯ್ಕರ್ ಅವರ ಸ್ನಾನದ ಕೋಣೆಯಲ್ಲಿ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಸೇರಿಕೊಂಡಿತ್ತು….
ಅನೈತಿಕ ಚಟುವಟಿಕೆಯ ತಾಣವಾಗಿರುವ ಹೊಸನಗರ ಪರಿವೀಕ್ಷಣಾ ಮಂದಿರ (ಐಬಿ) : ಸಂಜೆಯಾಗುತಿದ್ದಂತೆ ಕುಡುಕರದ್ದೇ ದರ್ಬಾರ್ ಇಲ್ಲಿ!!!!!!!!
ಹೊಸನಗರ : ಪಟ್ಟಣದ ಪರಿವೀಕ್ಷಣಾ ಮಂದಿರ (ಐಬಿ) ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ನೆಚ್ಚಿನ ತಾಣವಾಗಿದೆ ಹಾಗೆ ಇಲ್ಲಿರುವ ಪ್ರವಾಸಿ ಮಂದಿರವು ರಾತ್ರಿ ಸಮಯದಲ್ಲಿ ಭೂತ ಬಂಗಲೆಯಂತೆ ಕಾಣುವ ಎಲ್ಲಾ ರೀತಿಯ ವಾತಾವರಣವು ನಿರ್ಮಾಣವಾಗಿದೆ. ಹೌದು ಹೊಸನಗರ ತಾಲ್ಲೂಕಿನ ಆಸುಪಾಸಿನ ಹುಂಚದ ಪದ್ಮಾವತಿ ದೇವಸ್ಥಾನ, ರಾಮಚಂದ್ರಾಪುರ ಮಠ, ಕಾರಣಗಿರಿ(ಕಾರ್ಗಡಿ)ಯ ಗಣಪತಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹೀಗೆ ವಿವಿಧ ದೇವಾಲಯಗಳನ್ನು ವೀಕ್ಷಿಸಲು ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಭಕ್ತರು ಹೊಸನಗರ ತಾಲ್ಲೂಕಿನ ಕೊಡಚಾದ್ರಿ…
ಶಿವಮೊಗ್ಗ ಜಿಲ್ಲೆಗೆ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!!!!!!
ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಯಲ್ಲಮ್ಮ ಗುಡ್ಡದಲ್ಲಿ ಮಹಿಳೆಯೊಬ್ಬರಿಗೆ ಕ್ಯಾಸನೂರು ಅರಣ್ಯ ಕಾಯಿಲೆಯ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಯಲ್ಲಮ್ಮ ಗುಡ್ಡದ ನಿವಾಸಿ ಸೀಮಾ ಬಾನು ಅವರಿಗೆ ತಲೆನೋವು, ಜ್ವರ, ಶೀತ, ನೆಗಡಿ, ಕೆಮ್ಮು, ಕಣ್ಣು ನೋವು ಕಾಣಿಸಿಕೊಂಡಿತ್ತು. ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಪರೀಕ್ಷೆ ಮಾಡಿದಾಗ ಕೆಎಫ್‌ಡಿ ಸೋಂಕು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಾರ್ಗಲ್ ಆಸ್ಪತ್ರೆಗೆ ಸೀಮಾ ಬಾನು ಚಿಕಿತ್ಸೆಗೆ ಬಂದಾಗ ಶುಶ್ರೂಷಕಿಯರು ಜಿಲ್ಲಾ ವೈರಾಣು ಪರೀಕ್ಷಾ ಕೇಂದ್ರಕ್ಕೆ ಅವರ…
ಹೊಸನಗರ ವಿಧಾನ ಸಭಾ ಕ್ಷೇತ್ರ ಮರಳಿ ಪಡೆಯುವ ಹೋರಾಟದ ಪೂರ್ವಭಾವಿ ಸಭೆ : ಹೋರಾಟಕ್ಕೆ ನಿಟ್ಟೂರು ಶ್ರೀಗಳ ಸಾರಥ್ಯ !!!!!
ಹೊಸನಗರ ವಿಧಾನಸಭಾಕ್ಷೇತ್ರ ಹೋರಾಟದ ಕೂಗು ಸಂಘಟನೆಯೇ ಶಕ್ತಿ ಎಂಬ ದ್ಯೇಯದೊಂದಿಗೆ ಮುಂದಿನ ಹೋರಾಟದ ರೂಪುರೇಷೆ ಸಭೆ ನಡೆಯಿತು. ಸಂಘಟನೆಯೇ ಮೂಲಶಕ್ತಿ ಎಂಬ ಯೋಜನೆ ಮುಖಾಂತರ ಇಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಹೋರಾಟದ ಪೂರ್ವಭಾವಿ ರೂಪುರೇಷಗಳನ್ನು ಚರ್ಚಿಸುವುದಕ್ಕಾಗಿ ಇಂದು ಸರ್ವಧರ್ಮದ ಪ್ರಮುಖರು, ಸರ್ವ ಪಕ್ಷದ ಪ್ರಮುಖರು ಹಾಗೂ ಹೊಸನಗರ ತಾಲೂಕಿನ ನಾಗರಿಕರು ಉಪಸ್ಥಿತರಿದ್ದರು. ಈ ಸಭೆಯ ಉದ್ದೇಶ ಸಂಘಟನೆ ಮತ್ತು ಹೋರಾಟದ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಬೇಕಾದಂತಹ ಯೋಜನೆಯನ್ನು ರೂಪಿಸುವುದಾಗಿತ್ತು ಅದರಂತೆ ಉಪಸ್ಥಿತರಿದ್ದ ಮುಖಂಡರುಗಳು…
ಆರ್ ಎಸ್ ಎಸ್ ನಿಂದ ಮಾಹಿತಿ ಪಡೆದು ಗೃಹಸಚಿವರು ಹೇಳಿಕೆ ನೀಡುತ್ತಿದ್ದಾರೆ : ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ
ಗೃಹಸಚಿವ ಆರಗ ಜ್ಞಾನೇಂದ್ರರವರು ಚಂದ್ರು ಹತ್ಯೆಯ ಹೇಳಿಕೆಗೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನೆಡೆಸುತ್ತಿದ್ದು ಇಂದು ಶಿವಮೊಗ್ಗದಲ್ಲಿ ಬೇಳೂರು ಗೋಪಾಲಕೃಷ್ಣ ಆರಗ ವಿರುದ್ಧ ವಾಗ್ದಾಳಿ ನೆಡೆಸಿದರು. ಆರಗ ಮಾತನಾಡುವ ರೀತಿ ನೋಡಿದರೆ ಸಣ್ಣ ಮಕ್ಕಳು ಸಹ ಆ ರೀತಿ ಮಾತನಾಡುವುದಿಲ್ಲ. ಆರಗ ತಮ್ಮ ನೇತೃತ್ವದಲ್ಲಿ ಇರುವ ಅಧಿಕಾರಿಗಳ ಮಾಹಿತಿ ತೆಗೆದುಕೊಳ್ಳದೆ ಆರ್ ಎಸ್ ಎಸ್ ನಿಂದ ಮಾಹಿತಿ ಪಡೆದು ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೋಮು ಪ್ರಚೋದನೆಗೆ ಗೃಹಸಚಿವರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ. ಯಾವ ವ್ಯಕ್ತಿ ಸತ್ತರು…
ಅಪರಿಚಿತ ಕಾಮುಕನ ದಾಹಕ್ಕೆ ಯುವತಿ ಬಲಿ :
ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಬೆತ್ತಲೆ ವಿಡಿಯೋವನ್ನ ಪಡೆದು ಬ್ಲಾಕ್ ಮೇಲ್ ಗೆ ಮುಂದಾಗಿದ್ದ ಕಾಮುಕನ ದಾಹಕ್ಕೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಶಿರಾಳಕೊಪ್ಪದ ತೊಗರ್ಸಿ ಗ್ರಾಮದ 23 ವರ್ಷದ ಯವತಿಯೊಬ್ಬಳು ಬಿಎ ಪದವಿಧರೆ. ಮನೆಯಲ್ಲಿಯೇ ಇದ್ದ ಯುವತಿಯ ಬಳಿ ಆಂಡ್ರಯ್ಡ್ ಮೊಬೈಲ್ ಹೊಂದಿದ್ದಳು.ಇನ್ ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿದ್ದ ಯುವತಿಗೆ ಪದೇ ಪದೇ ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆತ್ತೆಲೆ ವಿಡಿಯೋ ಹಾಕದಿದ್ದರೆ ನಿನ್ನ ಫೋಟೊ ಎಡಿಟ್ ಮಾಡಿ ಬೆತ್ತಲೆಯಾಗಿ ರಚಿಸಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಈ ಬೆದರಿಕೆಗೆ ಬೆಚ್ಚಿಬಿದ್ದ…
ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ : ಯುವ ಕಾಂಗ್ರೆಸ್ ವತಿಯಿಂದ ಗೃಹ ಸಚಿವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು :
ತೀರ್ಥಹಳ್ಳಿ : ರಾಜ್ಯ ಸರ್ಕಾರದ ಗೃಹಸಚಿವ ಆರಗ ಜ್ಞಾನೇಂದ್ರ ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ್ದಾರೆ ಈ ಕಾರಣಕ್ಕೆ ಆದಷ್ಟು ಬೇಗ ರಾಜೀನಾಮೆ ಕೊಟ್ಟು ತೀರ್ಥಹಳ್ಳಿಯ ಗೌರವ ಕಾಪಾಡಿ ಎಂದು ಇಂದು ತೀರ್ಥಹಳ್ಳಿಯ ತಾಲೂಕು ಕಛೇರಿ ಮುಂಭಾಗ ನೆಡದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕಿಮ್ಮನೆ ರತ್ನಾಕರ್ ವಾಗ್ದಾಳಿ ನೆಡೆಸಿದರು. ಅವರೊಬ್ಬ ರಾಜ್ಯದ ಗೃಹಸಚಿವ, ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮಾಡುವ ಕೆಲಸ ಅವರದ್ದು ಯಾವುದೇ ಕೇಸ್ ಗೆ ಸಂಬಂಧಪಟ್ಟ ವಿಷಯವಾದರೂ ತನಿಖೆ ನೆಡೆಯುವದರೊಳಗೆ ಹೇಳಿಕೆ ನೀಡಬಾರದು. ಆದರೆ ಗೃಹಸಚಿವರು ವಿಷಯ…
ಕ್ಷುಲ್ಲಕ್ಕ ವಿಚಾರಕ್ಕೆ ಹಿಂದೂ ಯುವಕನ ಮೇಲೆ ಗುಂಪಿನಿಂದ ಹಲ್ಲೆ , ಆಸ್ಪತ್ರೆಗೆ ದಾಖಲು : ಆಸ್ಪತ್ರೆಗೆ ಹಿಂದೂ ಮುಖಂಡ ಧೀನ್ ದಯಾಳ್ ಭೇಟಿ
ಶಿವಮೊಗ್ಗ: ಹೂವಿನ ಮಾರ್ಕೆಟ್‌ನಲ್ಲಿ ಕೆಲಸ ಮಾಡುವ ಮಧು (21) ಎಂಬ ಯುವಕನಿಗೆ ಗಾಂಜಾ ಮತ್ತಿನಲ್ಲಿದ್ದ ಯುವಕರು ಹಲ್ಲೆ ನಡೆಸಿದ್ದಾರೆ. ಇಂದು ಮಧ್ಯಾಹ್ನ ಮಂಡ್ಲಿಯ ಮೊದಲನೇ ಕ್ರಾಸ್‌ನಲ್ಲಿ ಹೂ ಕೊಡಲು ಹೋದಾಗ ಮೂರು ಬೈಕ್‌ನಲ್ಲಿ ಬಂದ ಆರು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಸ್ ನಿಲ್ದಾಣದ ಬಳಿ ಶ್ರೀನಿವಾಸ್ ಫ್ಲವರ್ ಸ್ಟಾಲ್ ಬಳಿ ಕೆಲಸ ಮಾಡುತ್ತಿದ್ದ ಯುವಕ ಮಧು ಪ್ರತಿ ನಿತ್ಯ ನ್ಯೂಮಂಡ್ಲಿಯಲ್ಲಿರುವ ಹೂವಿನ ಗ್ರಾಹಕರಿಗೆ ಹೂವು ಕೊಟ್ಟು ಬರುತ್ತಿದ್ದನು. ಇಂದು ಹೂವು ಕೊಟ್ಟು ಬೈಕ್ ನಲ್ಲಿ…