ಹೊಸನಗರ : ಹಸುವಿನ ಕೆಚ್ಚಲು ಕೊ*ಯ್ದ ಪ್ರಕರಣ – ಆರೋಪಿ ರಾಮಚಂದ್ರ ಅರೆಸ್ಟ್

ಹೊಸನಗರ : ಹಸುವಿನ ಕೆಚ್ಚಲು ಕೊ*ಯ್ದ ಪ್ರಕರಣ – ಆರೋಪಿ ರಾಮಚಂದ್ರ ಅರೆಸ್ಟ್

ಹೊಸನಗರ ; ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೇಲಿನಸಂಪಳ್ಳಿ ಗ್ರಾಮದ ವಿಜಾಪುರ ನಿವಾಸಿ ರಾಮಚಂದ್ರ ಬಿನ್ ಹುಚ್ಚಾನಾಯ್ಕ ಬಂಧಿತ ಆರೋಪಿ. ಈತನ ವಿರುದ್ದ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ – 1960 (prevention of cruelty to animals act) ರ ಅಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಘಟನೆ ಹಿನ್ನಲೆ ಏನು?

ವಿಜಾಪುರ ನಿವಾಸಿ ನವೀನ್ ಶೆಟ್ಟಿ ಎಂಬುವರಿಗೆ ಸೇರಿದ ಹಸುಗಳನ್ನು ಜೂನ್ 28 ರಂದು ಎಂದಿನಂತೆ ಮೇಯಲು ಬಿಡಲಾಗಿತ್ತು. 4:00 ಗಂಟೆ ಸುಮಾರಿಗೆ ಹಸುವೊಂದರ ಕೆಚ್ಚಲು ಕತ್ತರಿಸಿದ್ದು ಕಂಡುಬಂದಿತ್ತು. ಈ ಕುರಿತಂತೆ ಭಾನುವಾರ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿ ರಾಮಚಂದ್ರ ಕತ್ತಿ ಹಾಗೂ ದೊಣ್ಣೆಯಿಂದ ಹೊಡೆದು, ಹಸುವಿನ ಕೆಚ್ಚಲು ಗಾಯಪಡಿಸಿದ್ದು ಪತ್ತೆಯಾಗಿತ್ತು. ಆರೋಪಿಯ ತೋಟಕ್ಕೆ ದನಗಳು ನುಗ್ಗುತ್ತಿದ್ದು, ಇದರಿಂದ ಆಕ್ರೋಶಗೊಂಡು ಈ ಕೃತ್ಯ ನಡೆಸಿರುವುದಾಗಿ ಎಂದು ತಿಳಿದುಬಂದಿದೆ.