ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿ ಹಾಕಿ ವೃದ್ಧೆ ಮೇಲೆ ಹಲ್ಲೆ – ಸಾಗರ ತಾಲೂಕಿನ ಗೌತಮಪುರದಲ್ಲೊಂದು ಅಮಾನವೀಯ ಘಟನೆ
ಶಿವಮೊಗ್ಗ: ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 67 ವರ್ಷದ ಹುಚ್ಚಮ್ಮ ಎಂಬವವರ ಮನೆಯ ಮುಂದೆ ನೆರೆಮನೆಯವರಾದ ಪ್ರೇಮಾ ಕಸ ತಂದು ಹಾಕಿದ್ದಳು. ಇದನ್ನು ಪ್ರಶ್ನೆ ಮಾಡಿದಕ್ಕೆ ಮಂಜುನಾಥ್ , ದರ್ಶನ್ ಹಾಗೂ ಪ್ರೇಮಾ ಹುಚ್ಚಮ್ಮ ಗೆ ಕೆಟ್ಟದಾಗಿ ಬೈದು, ಮನೆಯಿಂದ ಎಳೆದುಕೊಂಡು ಹೋಗಿ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರು ನೀಡಲಾಗಿದೆ.
ಹುಚ್ಚಮ್ಮರ ದೂರಿನ ಮೇರೆಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಪ್ರೇಮಾ , ಮಂಜುನಾಥ ಹಾಗೂ ದರ್ಶನ್ ಎಂಬುವವರ ಮೇಲೆ ಭಾರತೀಯ ನ್ಯಾಯ ಸಂಹಿತಾ (BNS), 2023 (U/s-54,115(2), 127(2),352, r/w 3(5)) ಕಾಯ್ದೆ ಪ್ರಕಾರ ಎಫ್ಐಆರ್ ದಾಖಲಾಗಿದೆ.
ಹಲ್ಲೆಗೊಳಗಾದ ವೃದ್ಧೆಯ ಪುತ್ರ ಕನ್ನಪ್ಪ, ತಾಯಿ ಮೇಲೆ ಅಗಿರುವ ಹಲ್ಲೆ ಆಘಾತಕಾರಿ ಘಟನೆಯಾಗಿದೆ. ಪೋಲಿಸ್ ಇಲಾಖೆ ನನ್ನ ತಂದೆ ತಾಯಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.