Headlines

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹತಾಯಿ : ಎಲ್ಲಿ ಗೊತ್ತಾ…???? ಈ ಸುದ್ದಿ ನೋಡಿ….

ಅವಳಿ ಮಕ್ಕಳು ಜನಿಸುವುದು ಸಾಮಾನ್ಯ, ಇನ್ನೂ ಕೆಲವು ಮಹಿಳೆಯರು ತ್ರಿವಳಿ ಮಕ್ಕಳಿಗೂ ಜನ್ಮ ನೀಡಿದ ಉದಾಹರಣೆಗಳಿವೆ. ಆದರೆ ಒಟ್ಟಿಗೆ ನಾಲ್ಕು ಮಕ್ಕಳು ಹುಟ್ಟಿರುವುದು ಸ್ವಲ್ಪ ವಿರಳ. ಶಿವಮೊಗ್ಗದ ಮಹಿಳೆಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ. ಇಂದು ಬೆಳಗ್ಗೆ ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಯಲ್ಲಿ ಅಲ್ಮಾ ಬಾನು ಎಂಬುವವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ವಿಷಯವೇನೆಂದರೆ ಅಲ್ಮಾ ಬಾನು ಅವರಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಜನಿಸಿವೆ. ಆರೀಫ್ ಮತ್ತು ಅಲ್ಮಾ…

Read More

ರಾಷ್ಟ್ರೀಯ ಹಾಕಿ ಆಟಗಾರ್ತಿ ಕು. ಪೂಜಿತ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದಿಂದ ಸನ್ಮಾನ :

ಗ್ರಾಮೀಣ ಪ್ರದೇಶದ ವರಾಹಿ ಸಾವೆಹಕ್ಲು ಮುಳುಗಡೆ  ಸಂತ್ರಸ್ಥರ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣ ವನ್ನು ಸರಕಾರಿ ಶಾಲೆಯಲ್ಲಿ ಪಡೆದು ನಂತರ ಕ್ರೀಡಾ ಶಾಲೆಗೆ ಸೇರಿ ಕಠಿಣ  ಪರಿಶ್ರಮ ನಿರಂತರ ಅಭ್ಯಾಸದ  ಮೂಲಕ  ಇಂದು ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪೂಜಿತ ಗೌಡ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದಿಂದ ರಿಪ್ಪನ್ ಪೇಟೆ ಪಟ್ಟಣದ ಬರುವೆ ಗ್ರಾಮದ ಪೂಜಿತ ರವರ ಸ್ವ-ಗೃಹದಲ್ಲಿ ಅಭಿನಂದಿಸಿ ಗೌರವಿಸಿಲಾಯಿತು. ಇದೇ ಸಂಧರ್ಭದಲ್ಲಿ ಪೂಜಿತ ರವರನ್ನು ಬೆಂಬಲಿಸಿ ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿ…

Read More

ಎಸ್ ಎಸ್ ಎಲ್ ಸಿ ಫಲಿತಾಂಶಕ್ಕಾಗಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ. ಶೇಕಡ ನೂರರಷ್ಟು ಫಲಿತಾಂಶ ಪಡೆಯುವುದು ಹೇಗೆ ಗೊತ್ತಾ……!?

ರಿಪ್ಪನ್ ಪೇಟೆ: ಪಟ್ಟಣದಲ್ಲಿ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯೊಂದು ತನ್ನ ವಿದ್ಯಾ ಸಂಸ್ಥೆಯ ಪ್ರತಿಷ್ಠೆಗಾಗಿ 9ನೇ ತರಗತಿಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ  ಮಕ್ಕಳನ್ನು 9ನೇ ತರಗತಿಯಲ್ಲಿ ಅನುತ್ತೀರ್ಣ ಗೊಳಿಸಿ ಕಲಿಕೆಯಲ್ಲಿ ಮುಂದಿರುವ ಮಕ್ಕಳನ್ನು 10 ನೇ ತರಗತಿಗೆ ದಾಖಲಿಸಿಕೊಂಡು ಪ್ರತಿಶತ ನೂರು ಫಲಿತಾಂಶವನ್ನು ಪಡೆಯುತ್ತಿದೆ ಎಂಬ ಆರೋಪ ಪೋಷಕ ವಲಯದಲ್ಲಿ ಕೇಳಿಬಂದಿದೆ. ೋಷಕರಿಂದ 1 ರಿಂದ 9ನೇ ತರಗತಿ ತನಕ ಸಾವಿರಾರು ರೂಪಾಯಿಗಳ ಶುಲ್ಕವನ್ನು ಪಡೆದುಕೊಂಡು 9ನೇ ತರಗತಿ ತನಕ ತಮ್ಮ ಸಂಸ್ಥೆಯಲ್ಲಿ ಶಿಕ್ಷಣ ನೀಡಿ 9ನೇ…

Read More

ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ : ಯಡೂರು ರಾಜಾರಾಂ

ರಾಜ್ಯದಲ್ಲಿ ಜೆಡಿಎಸ್ ಬಲಿಷ್ಟವಾಗಿದೆ, ಹೆಚ್.ಡಿ.ಕುಮಾರ ಸ್ವಾಮಿ ಯವರ ಆಡಳಿತವನ್ನು ರಾಜ್ಯದ ಜನತೆ ಸ್ಮರಿಸುತ್ತಿದ್ದಾರೆ, 2023ರಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ, ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರ್‌ಸ್ವಾಮಿಯವರು ಮತ್ತೆ ಸಿ ಎಂ ಆಗುತ್ತಾರೆ.ಗ್ರಾಮೀಣ ಬಾಗದಲ್ಲಿ ಜೆಡಿಎಸ್ ಬಲಿಷ್ಟ ಎಂದು ವಾಗಿ ಸಂಘಟನೆ ಯಾಗುತ್ತಿದೆ  ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ಹೇಳಿದರು. ಹೊಸನಗರ ತಾಲ್ಲೂಕಿನ ಜೆಡಿಎಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಿಪ್ಪನ್ ಪೇಟೆಯ ಎನ್ ವರ್ತೇಶ್ ಹಾಗೂ ಜೆಡಿಎಸ್ ಹಿರಿಯ…

Read More

ಎಸ್ ಎಸ್ ಎಲ್ ಸಿ ಪಲಿತಾಂಶ : 625 ಕ್ಕೆ 625 ಪಡೆದ 11 ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರದ್ದೇ ಮೇಲುಗೈ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಆನ್ ಲೈನ್ ಮೂಲಕ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಶೇ.84.60 ಫಲಿತಾಂಶ ದೊರೆತಿದ್ದು ಎ ಗ್ರೇಡ್ ಸ್ಥಾನ ದೊರೆತಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 23136 ಜನ‌ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 19574 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.  ಜಿಲ್ಲೆಯ 7 ತಾಲೂಕಿನ ಫಲಿತಾಂಶ ಇಂತಿದೆ: ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ 1654 ವಿದ್ಯಾರ್ಥಿಗಳಲ್ಲಿ 1516 ಜನ ಮಕ್ಕಳು ತೇರ್ಗಡೆಯಾಗಿದ್ದು ಶೇ.91.66 ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ತೀರ್ಥಹಳ್ಳಿ ಅತಿ ಹೆಚ್ಚು ಅಂಕಪಡೆದ ತಾಲೂಕಾಗಿದೆ. ಹೊಸನಗರ…

Read More

ಚಲಿಸುತ್ತಿದ್ದ ರಾಯಲ್ ಎನ್ ಫೀಲ್ಡ್ ಬುಲ್ಲೆಟ್ ಬೈಕ್ ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ :

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ  ಹೊರವಲಯದ ಉಳವಿ ರಸ್ತೆಯ ಪಡವಗೊಡು ಬಳಿ“ರಾಯಲ್ ಎನ್ಫಿಲ್ಡ್ ಬುಲ್ಲೆಟ್” ಬೈಕೊಂದು ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ತಕ್ಷಣ ಸ್ಥಳೀಯರು ವಾಹನಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ  ಸಹಕರಿಸಿದ್ದಾರೆ. ಎಂದು ತಿಳಿದು ಬಂದಿದೆ.  ಬೆಂಕಿ ಹೊತ್ತಿಕೊಂಡ ಬೈಕ್ ದಾವಣಗೆರೆ ನೊಂದಾಣಿಯ “KA 17 HQ 3482” ದಾವಣಗೆರೆ ಮೂಲದವರು ಎಂದು ಬಲ್ಲಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ :

ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಅಂಗನವಾಡಿಗಳಿಗೆ ಮೇ.19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಆದೇಶಿಸಿದ್ದಾರೆ.

Read More

ಶಿವಮೊಗ್ಗ ನಗರದಲ್ಲಿ ರೆಡ್ ಅಲರ್ಟ್ ಘೋಷಣೆ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಶಿವಮೊಗ್ಗದಲ್ಲಿ ಅಧಿಕ ಮಳೆ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನಿರೀಕ್ಷೆಯಂತೆ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ಶಿವಮೊಗ್ಗ ತಾಲ್ಲೂಕಿನಾದ್ಯಂತ ಅತಿಯಾದ ಮಳೆ ಸುರಿಯುತ್ತಿರುವ ಕಾರಣ ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಅಪರ ಜಿಲ್ಲಾಧಿಕಾರಿಗಳ ಸೂಚನೆಯನ್ವಯ ಈ ದಿನ ಅಂದರೆ ಮೇ.19ರಂದು ರಜೆ ಘೋಷಿಸಿದೆ. ಹವಮಾನದ ವೈಪರಿತ್ಯ ಹಾಗೂ ಅಧಿಕ ಮಳೆಯ ಹಿನ್ನಲೆಯಲ್ಲಿ ಇಂದು ರಜೆ ಘೋಷಿಸಲಾಗಿದೆ.ನಗರದ ಮತ್ತು ತಾಲೂಕಿನಲ್ಲಿರುವ  ಖಾಸಗಿ, ಅನುದಾನಿತ, ಅನುದಾನ ರಹಿತ ಹಾಗೂ ಸರ್ಕಾರದ ಶಾಲೆಗಳಿಗೆ  ಸಧ್ಯಕ್ಕೆ ಒಂದು…

Read More

ಜಿಲ್ಲಾಧಿಕಾರಿಗಳ ಭೇಟಿಯಿಂದ ಬೆಳ್ಳೂರು ಗ್ರಾಮದ ಜನರ ಸಂಕಷ್ಟ ದೂರವಾದಿತೆ…….!? ಇದೇ ತಿಂಗಳ 21 ರಂದು ಬೆಳ್ಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ.

ಗ್ರಾಮಗಳ ಜೀರ್ಣೋದ್ಧಾರಕ್ಕಾಗಿ ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳು ಬಿಡುಗಡೆ ಮಾಡಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಇಲ್ಲೊಂದು ಗ್ರಾಮ ಸುಮಾರು 70 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಇಷ್ಟೆಲ್ಲಾ ಸಂಕಷ್ಟ ಅನುಭವಿಸುತ್ತಿರುವ ಈ ಕುಗ್ರಾಮದ ಜನರ ಅಳಲನ್ನು ಯಾರು ಕೇಳವರೇ ಇಲ್ಲ. ಅಷ್ಟಕ್ಕೂ ಈ ಗ್ರಾಮ ಇರುವದಾದ್ರು ಎಲ್ಲಿ? ಇಲ್ಲಿಯ ಜನರ ಪರಿಸ್ಥಿತಿ ಆದ್ರೂ ಹೇಗಿದೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ… ಹೌದು, ನಾವಿಲ್ಲಿ ಹೇಳಲು ಹೊರಟಿರುವುದು…

Read More

SSLC ಪಲಿತಾಂಶಕ್ಕೆ ಕ್ಷಣಗಣನೆ : ಪಲಿತಾಂಶ ಮೊಬೈಲ್ ನಲ್ಲಿ ನೋಡುವುದು ಹೇಗೆ???? ಈ ಸುದ್ದಿ ನೋಡಿ!!!!

2021- 22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ  ಮೇ 19 ರಂದು  ಪ್ರಕಟವಾಗಲಿದೆ.  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೇ 19 ರ ಗುರುವಾರ  ಮಧ್ಯಾಹ್ನ 12.30ಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪಕಟಿಸಲಿದ್ದಾರೆ. ಬಳಿಕ ವಿವಿಧ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಮಾರ್ಚ್​ 28ರಿಂದ ಏಪ್ರಿಲ್​ 11ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಈ ಮೊದಲು ಮೇ 15ರಂದು ಫಲಿತಾಂಶ ಪ್ರಕಟಿಸುವುದಾಗಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ ನಡೆಸಿತ್ತು. ಆದರೆ ರಜೆಗಳು…

Read More