w
Headlines
Home » SSLC ಪಲಿತಾಂಶಕ್ಕೆ ಕ್ಷಣಗಣನೆ : ಪಲಿತಾಂಶ ಮೊಬೈಲ್ ನಲ್ಲಿ ನೋಡುವುದು ಹೇಗೆ???? ಈ ಸುದ್ದಿ ನೋಡಿ!!!!

SSLC ಪಲಿತಾಂಶಕ್ಕೆ ಕ್ಷಣಗಣನೆ : ಪಲಿತಾಂಶ ಮೊಬೈಲ್ ನಲ್ಲಿ ನೋಡುವುದು ಹೇಗೆ???? ಈ ಸುದ್ದಿ ನೋಡಿ!!!!

2021- 22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ  ಮೇ 19 ರಂದು  ಪ್ರಕಟವಾಗಲಿದೆ. 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೇ 19 ರ ಗುರುವಾರ  ಮಧ್ಯಾಹ್ನ 12.30ಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪಕಟಿಸಲಿದ್ದಾರೆ. ಬಳಿಕ ವಿವಿಧ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಮಾರ್ಚ್​ 28ರಿಂದ ಏಪ್ರಿಲ್​ 11ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಈ ಮೊದಲು ಮೇ 15ರಂದು ಫಲಿತಾಂಶ ಪ್ರಕಟಿಸುವುದಾಗಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ ನಡೆಸಿತ್ತು. ಆದರೆ ರಜೆಗಳು ಸಾಲುಸಾಲಾಗಿ ಬಂದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ತಡವಾಯಿತು. ರಾಜ್ಯದ ಸುಮಾರು 234 ಮೌಲ್ಯಮಾಪನ ಕೇಂದ್ರಗಳಲ್ಲಿ 63,796 ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ 3,446 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರು.

ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಗ್ರೇಸ್​ ಮಾರ್ಕ್ಸ್​ ಕೊಡಲು ಸರ್ಕಾರ ನಿರ್ಧರಿಸಿದೆ. ಮೂರು ವಿಷಯಗಳಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು, ಅಕಸ್ಮಾತ್ ಉಳಿದ ಮೂರು ವಿಷಯಗಳಲ್ಲಿ ಕಡಿಮೆ ಅಂಕ ಪಡೆದು, ಫೇಲ್ ಆಗುವ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ಮಾತ್ರ ಕೃಪಾಂಕ ಸಿಗುತ್ತದೆ. ಜೂನ್ 4 ನೇ ವಾರದಲ್ಲಿ ಪೂರಕ ಪರೀಕ್ಷೆ (SSLC supplementary exams) ನಡೆಯಲಿದೆ.

ಫಲಿತಾಂಶ ನೋಡುವ ವೆಬ್‌ಸೈಟ್ ಇಲ್ಲಿವೆ 👇👇👇👇👇



ಹಂತ 1 – ಕರ್ನಾಟಕ ಬೋರ್ಡ್ ಫಲಿತಾಂಶ ವೆಬ್‌ಸೈಟ್‌ಗೆ ಭೇಟಿ ನೀಡಿ: karresults.nic.in 2022 SSLC ಫಲಿತಾಂಶ.
ಹಂತ 2 – ಇದು 2022 ರ SSLC ವೆಬ್‌ಸೈಟ್‌ನಲ್ಲಿ Karresults nic ನ ಮುಖಪುಟವನ್ನು ತೆರೆಯುತ್ತದೆ.
ಹಂತ 3 – 10 ನೇ ಫಲಿತಾಂಶ ಕರ್ನಾಟಕ 2022 ವೆಬ್‌ಸೈಟ್‌ನಲ್ಲಿ, ಕರ್ನಾಟಕ SSLC ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 4 – ಇದು KSEEB SSLC ಫಲಿತಾಂಶ 2022 ಲಾಗಿನ್ ವಿಂಡೋಗೆ ಕಾರಣವಾಗುತ್ತದೆ.
ಹಂತ 5 – kseeb.kar.nic.in 2022 ಫಲಿತಾಂಶ ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ಹಂತ 6 – SSLC ಫಲಿತಾಂಶ 2022 ಕರ್ನಾಟಕವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 7 – SSLC ಫಲಿತಾಂಶ ಪರಿಶೀಲನೆಯ ನಂತರ ಪ್ರಿಂಟ್‌ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.