ರಿಪ್ಪನ್ ಪೇಟೆ ನಾಡಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಂಚನಾಲ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವರ್ಷಿಣಿ ರವರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಕೆಂಚನಾಲ ಗ್ರಾಮ ಪಂಚಾಯಿತ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ವರ್ಷಿಣಿ ರವರು ಕಳೆದ 6 ವರ್ಷಗಳಿಂದ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗರಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮಕ್ಕೆ ವರ್ಗಾವಣೆಗೊಂಡಿದ್ದಾರೆ.
ಇವರ ಅನುಪಮ ಸೇವೆ ಹಾಗೂ ಕರ್ತವ್ಯಕ್ಕೆ ಗೌರವಸೂಚಕವಾಗಿ ಇಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಧಿಕಾರಿ ವರ್ಗದವರು ಇಂದು ವರ್ಷಿಣಿ ರವರಿಗೆ ಸನ್ಮಾನಿಸಿ ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಕೆಂಚನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಬೇದುಲ್ಲಾ ಶರೀಫ್ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಗ್ರಾಪಂ ಪಂಚಾಯತ್ ಕಾರ್ಯದರ್ಶಿ ಶಿವಪ್ರಸಾದ್, ಸಿಬ್ಬಂದಿಗಳಾದ ಗೀತಮ್ಮ, ಲೋಹಿತ್, ಮಂಜಣ್ಣ, ಸುರೇಶ್, ಫೈರೋಜ್, ಮಲ್ಲಿಕಪ್ಪ ಹಾಗೂ ನಯಾಜ್ ಉಪಸ್ಥಿತರಿದ್ದರು.