Headlines

Ripponpete | ನಂದಿ ಆಸ್ಪತ್ರೆಗೆ ಮೈಸೂರಿನ ಅವಧೂತ ಅರ್ಜುನ್ ಮಹರಾಜ್ ಗುರೂಜಿ ಭೇಟಿ

Ripponpete | ನಂದಿ ಆಸ್ಪತ್ರೆಗೆ ಮೈಸೂರಿನ ಅವಧೂತ ಅರ್ಜುನ್ ಮಹರಾಜ್ ಗುರೂಜಿ ಭೇಟಿ

ರಿಪ್ಪನ್‌ಪೇಟೆ : ಮೈಸೂರಿನ ಅವಧೂತ ಅರ್ಜುನ್ ಮಹಾರಾಜ್ ಗುರೂಜಿಯವರು ಸೋಮವಾರ ಪಟ್ಟಣದ ಶ್ರೀ ನಂದಿ ಆಸ್ಪತ್ರೆಗೆ ಭೇಟಿ ನೀಡಿದರು.

ನಂತರ ಪ್ರವಚನ ನೀಡಿದ ಅವಧೂತ ಅರ್ಜುನ್ ಮಹರಾಜ್ ಗುರೂಜಿ ಮಾನವ ಜೀವಿತದಲ್ಲಿ ಸಮಾಜ ಸೇವೆಯು ನೆಮ್ಮದಿಯ ಬದುಕಿಗೆ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಜಗತ್ತಿನಲ್ಲಿ ಅತ್ಯುತ್ತಮ ಸೇವೆಗಳಲ್ಲಿ ಒಂದಾದ ಆರೋಗ್ಯ ಸೇವೆಯನ್ನು ಮಾಡುವುದರ ಮೂಲಕ  ಮಲೆನಾಡಿನಲ್ಲಿ ಅದರಲ್ಲೂ ಹೊಸನಗರ ತಾಲೂಕಿನ  ಗ್ರಾಮೀಣ ಪ್ರದೇಶದಲ್ಲಿನ  ಜನತೆಗೆ  ಸದುಪಯೋಗವಾಗಲೆಂದು ಸದುದ್ದೇಶದಿಂದ ದಿನದ 24 ಗಂಟೆ ಉಚಿತ ವೈದ್ಯರ ಸೇವಾ ತಪಾಸಣೆ ಯನ್ನು ಶ್ರೀ ನಂದಿ ಹಾಸ್ಪಿಟಲ್ ನಲ್ಲಿ ಅನುಷ್ಠಾನಗೊಳಿಸಲಾಗಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವುದರ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಹೇಳಿದರು.


ಈ ಸಂಧರ್ಭದಲ್ಲಿ ನಂದಿ ಆಸ್ಪತ್ರೆಯ ಮಾಲೀಕರಾದ ಸಚಿನ್ ಗೌಡ ಹಾಗೂ ವಚನ್ ಗೌಡ ರವರು ಅವಧೂತ ಅರ್ಜುನ್ ಮಹರಾಜ್ ರವರನ್ನು ಸನ್ಮಾನಿಸಿ ಗೌರವಿಸಿದರು.


ಈ ಸಂಧರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಹನುಮಂತ ನಾಯ್ಕ್ , ಡಾ ಅಮಿತ್ , ಗ್ರಾಪಂ ಸದಸ್ಯರಾದ ಆಸೀಫ಼್ , ನಿರೂಪ್  ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *