ರಿಪ್ಪನ್ಪೇಟೆ ಜುಮ್ಮಾ ಮಸೀದಿ ಹಾಗೂ GCC ಸ್ನೇಹ ಬಳಗದ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ
ಆಂಬುಲೆನ್ಸ್ ಸೇವೆಗೆ ಹಸಿರು ನಿಶಾನೆ ತೋರಿದ ಶಾಸಕ ಬೇಳೂರು
ರಿಪ್ಪನ್ಪೇಟೆ : ದೇವರು ಮನುಷ್ಯನನ್ನು ಪರೀಕ್ಷಿಸಲೆಂದೇ ಜನನ-ಮರಣದ ನಡುವೆ ಜೀವನವೆಂಬ ಸಣ್ಣ ಅವಧಿಯನ್ನು ನೀಡಿದ್ಧಾನೆ. ಈ ಕಿರು ಅವಧಿಯಲ್ಲಿ ನಾವು ಮಾಡುವ ಸತ್ಕರ್ಮಗಳು ಮಾತ್ರ ನಮ್ಮನ್ನು ಕಾಪಾಡುತ್ತದೆ ಎಂದು ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಮುನೀರ್ ಸಖಾಫಿ ಹೇಳಿದರು.
ಮೊಹಿಯಿದ್ದೀನ್ ಜುಮ್ಮಾ ಮಸೀದಿ ಹಾಗೂ GCC ಸ್ನೇಹ ಬಳಗದ ವತಿಯಿಂದ ನಡೆದ ಸಾರ್ವಜನಿಕ ಸೇವೆಗೆ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಲ್ಪ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ರಿಪ್ಪನ್ಪೇಟೆ ಸುತ್ತಮುತ್ತಲಿನ ಯುವಕರು ತಮ್ಮ ಗಳಿಕೆಯ ಸಿಂಹಪಾಲನ್ನು ಸಾರ್ವಜನಿಕರಿಗೆ ಆಂಬುಲೆನ್ಸ್ ಸೇವೆ ನೀಡುವ ಉದ್ದೇಶದಿಂದ ದಾನ ಮಾಡಿದ್ದು ಇಂತಹ ಸೇವೆಯನ್ನು ಎಲ್ಲಾ ಜಾತಿ , ಮತ ,ಪಂಥದವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅರ್ಚಕರಾದ ಚಂದ್ರಶೇಖರ್ ಭಟ್ ಮಾತನಾಡಿ ನಾವು ನಮಗೋಸ್ಕರ ಮಾತ್ರ ಬದುಕುವುದಲ್ಲದೆ ನಮ್ಮ ಸಮಾಜದಲ್ಲಿರುವ ನೋವಿಗೂ ಧ್ವನಿಯಾಗಬೇಕಿದೆ. ಪ್ರಸ್ತುತ ಅಂತಹ ಸಮಾಜಮುಖಿ ಯುವಕರು ನಮ್ಮಲ್ಲಿ ಕಾಣ ಸಿಗುತ್ತಿರುವುದು ಆಶಾವಾದದ ಸಂಗತಿಯಾಗಿದೆ ಎಂದರು.
ಜೆಡಿಎಸ್ ರಾಜ್ಯ ಮುಖಂಡರಾದ ಅರ್ ಎ ಚಾಬುಸಾಬ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ,ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಈಶ್ವರ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಕೆಡಿಪಿ ಸದಸ್ಯರಾದ ಆಸೀಫ಼್ ಬಾಷಾ , ಮೊಹಿಯುದ್ದೀನ್ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಮಹಮ್ಮದ್ ರಫ಼ಿ , ಖಾಸಿಂ ಸಾಬ್ , ಅಜಾದ್ , ಹಸನಾರ್ , ಮದರಸದ ಮುಖ್ಯೋಪಾಧ್ಯಾಯ ಸೈಫುಲ್ ಸಖಾಫಿ ಹಾಗೂ ಇನ್ನಿತರರಿದ್ದರು.
_______________________________________________
MJM ವತಿಯ ಆಂಬುಲೆನ್ಸ್ ಸೇವೆಗೆ ಹಸಿರು ನಿಶಾನೆ ತೋರಿದ ಶಾಸಕ ಬೇಳೂರು ಗೋಪಾಲಕೃಷ್ಣ
ರಿಪ್ಪನ್ಪೇಟೆ : ಮೊಹಿಯಿದ್ದೀನ್ ಜುಮ್ಮಾ ಮಸೀದಿ ಹಾಗೂ GCC ಸ್ನೇಹ ಬಳಗದ ವತಿಯಿಂದ ನಡೆದ ಸಾರ್ವಜನಿಕರ ಸೇವೆಗೆ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗಲ್ಪ್ ರಾಷ್ಟಗಳಲ್ಲಿ ದುಡಿಯುತ್ತಿರುವ ಭಾರತೀಯರು ತಾವು ಓದಿದ ಶಾಲಾ ಕಾಲೇಜುಗಳಿಗೆ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಅನನ್ಯ ಸೇವೆ ಸಲ್ಲಿಸುವ ಮೂಲಕ ಮಣ್ಣಿನ ಋಣ ತೀರಿಸಬೇಕಾಗಿದೆ ಎಂದರು.
ಗಲ್ಪ್ ರಾಷ್ಟ್ರದಲ್ಲಿರುವ ರಿಪ್ಪನ್ಪೇಟೆ ಸುತ್ತಮುತ್ತಲಿನ ಯುವಕರು ಇಲ್ಲಿನ ಜನರ ಸೇವೆಗಾಗಿ ಆಂಬುಲೆನ್ಸ್ ಕೊಡುಗೆಯಾಗಿ ನೀಡಿರುವು ಮಾದರಿ ಕಾರ್ಯವಾಗಿದ್ದು ಎಲ್ಲರಿಗೂ ಈ ಕ್ಷೇತ್ರದ ಶಾಸಕನಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.