“ಆತ್ಮನ ಗುಣಗಳನ್ನು ತಿಳಿದುಕೊಳ್ಳಲು ಇರುವ ಪರ್ವವೇ ದಶಲಕ್ಷಣ ಮಹಾಪರ್ವ” – ಹೊಂಬುಜಾ ಶ್ರೀ

“ಆತ್ಮನ ಗುಣಗಳನ್ನು ತಿಳಿದುಕೊಳ್ಳಲು ಇರುವ ಪರ್ವವೇ ದಶಲಕ್ಷಣ ಮಹಾಪರ್ವ” – ಹೊಂಬುಜಾ ಶ್ರೀ

ಹೊಂಬುಜ : ದಶಲಕ್ಷಣ ಪರ್ವ ಎನ್ನುವಂತಹದ್ದು ಆತ್ಮನ ಗುಣಗಳನ್ನು ತಿಳಿದುಕೊಳ್ಳಲು ಇರುವ ಪರ್ವ. ಇದರಲ್ಲಿ ಬರುವಂತಹ ಕ್ಷಮಾದಿ ದಶಲಕ್ಷಣ ಧರ್ಮಗಳು ಆತ್ಮನ ಲಕ್ಷಣಗಳಾಗಿದೆ. ಮೊದಲನೇಯದು ಉತ್ತಮ ಕ್ಷಮೆಯಾಗಿದ್ದು ಇದು ಕ್ರೋಧದ ಅಭಾವದಿಂದ ನಿಜವಾದಂತಹ ಸ್ವಾಭಾವವಾದಂತಹ ಕ್ಷಮಾಗುಣ ಪ್ರಕಟವಾಗುವಂತದಾಗಿದೆ ಎಂದು ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

ಕ್ಷಮೆಯಿಂದ ನಾವು ಇನ್ನೊಬ್ಬರನ್ನು ಕ್ಷಮಿಸುವುದರೊಂದಿಗೆ ನಮಗೆ ಇನ್ನೊಬ್ಬರಿಂದ ಆದಂತಹ ಹಾನಿಯನ್ನು ಸಹ ಆ ಕ್ಷಣದಲ್ಲಿ ಮರೆತರೆ ನಮಗೆ ನಿಜವಾದಂತಹ ಕ್ಷಮಾಗುಣ ನಮ್ಮ ಧರ್ಮದಲ್ಲಿ ಇನ್ನಷ್ಟು ವೃದ್ಧಿಯಾಗುತ್ತದೆ.
ಅದಕ್ಕಾಗಿ ನಾವು ಯಾವಾಗಲೂ ಎಂತಹ ಕಠಿಣ ಪರಿಸ್ಥಿತಿಯಲ್ಲೂ ನಮಗೆ ನಿಂದೆ, ಅಪಮಾನ, ಅವಮಾನ ಮಾಡಲಿ ಯಾವ ಪರಿಸ್ಥಿತಿ ಯಾವುದೇ ಒಬ್ಬ ವ್ಯಕ್ತಿಗೆ ಆ ಸಂದರ್ಭದಲ್ಲಿ ಕ್ಷಮಿಸಿ ಅವನು ಪದೇ ಪದೇ ತಪ್ಪನ್ನು ಮಾಡಿದರೂ ಅವನನ್ನು ಕ್ಷಮಿಸಿ ಮುಂದೆ ನಮ್ಮ ಜೀವನವನ್ನು ನೋಡಿಕೊಳ್ಳಬೇಕು. ವಿಕೃತಿಯನ್ನು ಮಾಡುವವರ ಜೊತೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂಬುದೇ ಕ್ಷಮಾ ಧರ್ಮವಾಗಿದೆ.


ನೂರಾರು ವರ್ಷ ತಪಸ್ಸು ಮಾಡಿದ ತಪಸ್ವಿಗಿಂತಲೂ ಕ್ಷಣ ಮಾತ್ರದಲ್ಲಿ ಯಾವುದೇ ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಕ್ಷಮಿಸುವವನೇ ನಿಜವಾದಂತಹ ಮಹಾನ್ ವ್ಯಕ್ತಿಯಾಗಿರುತ್ತಾನೆಂದು ಆಚಾರ್ಯರು ಹೇಳಿರುತ್ತಾರೆ.
ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ, ಶ್ರೀ ಮಹಾವೀರ ತೀರ್ಥಂಕರರ ಸಾನಿಧ್ಯದಲ್ಲಿ ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ ಉಪಸ್ಥಿತಿಯಲ್ಲಿ ಸ್ವಸ್ತಿಶ್ರೀಗಳವರು ಜೈನಾಗಮದಲ್ಲಿ ಮಹಾಪರ್ವ ಎಂದೇ ದಶಲಕ್ಷಣ ಅಥವಾ ಉತ್ತಮ ಹತ್ತು ಧರ್ಮಗಳು ಎಂಬ ಸಿದ್ಧಾಂತಗಳು ಲೋಕಶಾಂತಿಯತ್ತ ಸಾಗುವಂತೆ ಪ್ರೇರೇಪಿಸುತ್ತವೆ ಎಂದರು.


ಶ್ರೀ ನೇಮಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಆದಿನಾಥ ಸ್ವಾಮಿ ಸಾನಿಧ್ಯದಲ್ಲಿ ದಾರ್ಮಿಕ ವಿಧಾನಗಳು ಜರುಗಿದವು. ಶ್ರೀ ಪದ್ಮಾವತಿ ಮಹಿಳಾ ಮಂಡಳ, ಹುಂಚ ಜೈನ ಶ್ರಾವಕರು, ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಉತ್ತಮ ಕ್ಷಮಾ ಧರ್ಮದ ತತ್ವಗಳನ್ನು ಮನವರಿಕೆ ಮಾಡಿಕೊಂಡರು. ಮುಂದಿನ ಹತ್ತು ದಿನಗಳ ಪರ್ಯಂತ ನಿಯಮಾನುಸಾರ ಉಪವಾಸ, ಪೂಜೆ, ಸ್ವಾಧ್ಯಾಯ ಮಾಡುವ ಸಂಕಲ್ಪ ಮಾಡಿದರು. ಶ್ರೀಗಳವರ ಪ್ರವಚನ ನಿತ್ಯವೂ ಆಯೋಜಿಸಲ್ಪಟ್ಟಿದೆ ಎಂದು ಹೊಂಬುಜ ಶ್ರೀಮಠದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *