ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ದ ಗಣೇಶೋತ್ಸವ ಸಂಭ್ರಮ – 11 ದಿನ ಏನೆಲ್ಲಾ ಕಾರ್ಯಕ್ರಮಗಳಿರುತ್ತವೆ ಗೊತ್ತಾ..!!? ಈ ಸುದ್ದಿ ನೋಡಿ
ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಸಮಿತಿಯ 57 ನೇ ವರ್ಷದ 11 ದಿನಗಳ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ , ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗದ ತಿಲಕ್ ಮಹಾಮಂಟಪದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ರಾಮಚಂದ್ರ ಬಳೆಗಾರ್ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷಣ ಬಳ್ಳಾರಿ ವಿವರಿಸಿದರು.
ಏನೇನು ಕಾರ್ಯಕ್ರಮಗಳಿರುತ್ತೇ..!??
- ಸೆ.08 ರ ಭಾನುವಾರ ರಾತ್ರಿ 8.30 ಕ್ಕೆ `ಸಂತೃಪ್ತಿ’ ಆಂಧಕಲಾವಿದರ ತಂಡ ಇವರಿಂದ ರಸಮಂಜರಿ ಕಾರ್ಯಕ್ರಮ.
- ಸೆ.09 ರಂದು ಸೋಮವಾರ ರಾತ್ರಿ 8.30 ಗಂಟೆಗೆ ಯಕ್ಷಸಮೂಹ ಯಕ್ಷಗಾನಕಲಾ ಪ್ರತಿಷ್ಠಾನ ನೀಲಾವರ ಇವರಿಂದ ಯಕ್ಷಗಾನ ಪ್ರದರ್ಶನ,
- ಸೆ.10 ರಂದು ಮಂಗಳವಾರ ರಾತ್ರಿ 8.30 ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯ ಹಾಗೂ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ,
- ಸೆ.11 ರಂದು ಬುದವಾರ ರಾತ್ರಿ 8.30 ಕ್ಕೆ ಗವಟೂರು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ
- ಸೆ.12 ರಂದು ರಾತ್ರಿ 8.30 ಕ್ಕೆ ಹೆಸರಾಂತ ಜಾನಪದ ಆಯ್ದ ಅಹ್ವಾನಿತ ತಂಡಗಳಿಂದ `ಬಳೆಕೋಲಾಟ’ಸ್ಪರ್ದೆ ಹಾಗೂ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾದಲ್ಲಿನ ಸೇವೆಯನ್ನು ಪರಿಗಣಿಸಿ ಅರ್ಚಕರಾದ ರವಿ ಭಟ್ಟರು ಹಾಗೂ ವಿನಾಯಕ ಸೌಂಡ್ಸ್ ನ ದಾನಪ್ಪ ರವರಿಗೆ ಅಭಿನಂದನಾ ಕಾರ್ಯಕ್ರಮ
- ಸೆ .13 ರ ರಾತ್ರಿ 08.30 ಕ್ಕೆ ಕಲಾ ಸ್ಪೂರ್ತಿ ಹವ್ಯಾಸಿ ನಾಟಕ ತಂಡದವರಿಂದ ‘ಮನೆ ಒಕ್ಲ್’ ಎಂಬ ಹಾಸ್ಯಮಯ ನಾಟಕ ಪ್ರದರ್ಶನ
- ಸೆ 14 ರ ರಾತ್ರಿ 08.30 ಕ್ಕೆ ಹಂಸವೇಣಿ ಶಿಕ್ಷಕ ವೃಂದ ಬಟ್ಟೆಮಲ್ಲಪ್ಪ ಇವರಿಂದ ಕರೋಕೆ ಸಾಂಗ್ ಮತ್ತು ಮನೋರಂಜನಾ ಕಾರ್ಯಕ್ರಮ
- ಸೆ.15 ರ ರಾತ್ರಿ 08.30 ಕ್ಕೆ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ನೃತ್ಯ ವೈಭವ ಕಾರ್ಯಕ್ರಮ
- ಸೆ.16 ರಾತ್ರಿ 08.30 ಕ್ಕೆ ರಿಪ್ಪನ್‌ಪೇಟೆ ಕೊಪ್ಪ ಹೊಸನಗರ ವಿದ್ಯಾರ್ಥಿಗಳಿಂದ `ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್’’ ಇವರಿಂದ ನೃತ್ಯ ರೂಪಕ,
- ಸೆ.17 ರಂದು ಮದ್ಯಾಹ್ನ 12.30 ಕ್ಕೆ ಶ್ರೀ ಸ್ವಾಮಿಯ ವಿಸರ್ಜನಾ ಪೂಜೆ ನಂತರ ಸಂಜೆ 03 ಗಂಟೆಗೆ ಶ್ರೀ ಸ್ವಾಮಿಯ ವಿಸರ್ಜನಾ ಮೆರವಣಿಗೆ ಪ್ರಾರಂಭಗೊಳ್ಳುತ್ತದೆ.
ಈ ರಾಜಬೀದಿ ಉತ್ಸವದಲ್ಲಿ ವಿಶೇಷ ವಾದ್ಯ ಡೋಳ್ಳುಕುಣಿತ ತಮಟೆ ಬಡಿತ ವಿವಿಧ ಗ್ರಾಮಗಳ ಜಾನಪದ ತಂಡದವರ ಭಜನೆ ಈ ವರ್ಷದ ವಿಶೇಷ ಅಕರ್ಷಣೆ ಭದ್ರಾವತಿ ಅರಕೆರೆ ವೀರಗಾಸೆ ಶಿಗ್ಗಾಂವ್ ಜಾಂಜಾ ಪಥಾಕ್, ಕೀಲುಕುದುರೆ,ಗೊಂಬೆಕುಣಿತ,ನಗಾರಿ ತಟ್ಟಿರಾಯ ತಂಡದವರ ಕಲಾ ಪ್ರದರ್ಶನಗೊಳ್ಳಲಿದೆ.ಇದರೊಂದಿಗೆ ರಾತ್ರಿ 10-30 ರಿಂದ ವಿನಾಯಕ ವೃತ್ತದಲ್ಲಿ ಎನ್ ಆರ್ ಪುರದ ಅಭಿನವ ಮ್ಯೂಸಿಕಲ್ ಇವೆಂಟ್ಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನಾಶೀರ್ವಾದ ಪಡೆಯುವಂತೆ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.