RIPPONPETE | ಹೆಡ್ ಕಾನ್ಸ್ ಟೇಬಲ್ ಮೇಲೆ ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಪ್ರಕರಣ ದಾಖಲು | ದೂರುದಾರ ಮಹಿಳೆ ಮೇಲೆ ಹನಿಟ್ರ್ಯಾಪ್ ಪ್ರಕರಣ ದಾಖಲು
ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಜಾತಿ ನಿಂದನೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ದಾಖಲಾಗಿದ್ದು ದೂರು ನೀಡಿದ ಮಹಿಳೆ ಹಾಗೂ ಆತನ ಪತಿ ವಿರುದ್ದ ಹನಿಟ್ರ್ಯಾಪ್ ಪ್ರಕರಣವೂ ದಾಖಲಾಗಿದೆ.
ಹೌದು.. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಎ ಎನ್ ಎಂಬುವವರ ವಿರುದ್ದ ಸಾಗರದ ಶೈಲಜಾ ಎಂಬುವವರು ಜಾತಿ ನಿಂದನೆ , ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಇನ್ನೂ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ರಾಘವೇಂದ್ರ ಎ ಎನ್ ರವರ ಪತ್ನಿ ಸೀಮಾ ಸಾಗರದ ಶೈಲಜಾ ಹಾಗೂ ಅವರ ಪತಿ ವೀರೇಶ್ ವಿರುದ್ದ 10 ಲಕ್ಷ ರೂ ಹಣಕ್ಕೆ ಬೇಡಿಕ್ಕೆ ಇಟ್ಟಿದ್ದಾರೆ ಎಂದು ಹನಿ ಟ್ರ್ಯಾಪ್ ಪ್ರಕರಣವನ್ನು ದಾಖಲಿಸಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು ತೀರ್ಥಹಳ್ಳಿ ಉಪ ವಿಭಾಗದ ನೇರ ನಿಷ್ಪಕ್ಷಪಾತ ಡಿವೈಎಸ್ಪಿ ಗಜಾನನ ವಾಮನ ಸುತಾರ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಾಗಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ದೂರಿನ ಪ್ರಕಾರ ರಾಘವೇಂದ್ರ ಎ ಎನ್ ಪೊಲೀಸ್ ನೌಕರಿಗೂ ಮುಂಚೆ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದು ಆ ಸಂಧರ್ಭದಲ್ಲಿ ದೂರುದಾರೆ ಶೈಲಜಾ ಅವರ ವಿದ್ಯಾರ್ಥಿಯಾಗಿದ್ದರು ಈ ದೆಸೆಯಲ್ಲಿ ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿತ್ತು. 2017 ರಲ್ಲಿ ಫೇಸ್ಬುಕ್ ನಲ್ಲಿ ಮತ್ತೆ ಪರಿಚಯವಾಗಿ ಫೋನ್ ಹಾಗೂ ಮೆಸೆಜ್ ಮೂಲಕ ಸಂಪರ್ಕದಲ್ಲಿರುತ್ತಾರೆ.
ಆರೋಪಿಯ ಪತ್ನಿ ಸೀಮಾ ಸಲ್ಲಿಸಿರುವ ದೂರಿನಲ್ಲೇನಿದೆ..!??
ತನ್ನ ಪತಿ ರಾಘವೇಂದ್ರ ಎ ಎನ್ 2004 -2005 ರಲ್ಲಿ ಸಾಗರದ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ್ದು ಆ ಸಮಯದಲ್ಲಿ ಅವರ ಬಳಿ 10 ನೇ ತರಗತಿಯಲ್ಲಿ ಶೈಲಜಾ ವಿದ್ಯಾರ್ಥಿನಿಯಾಗಿ ಓದಿರುತ್ತಾರೆ. ನನ್ನ ಪತಿಗೆ ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಕೆಲಸ ಸಿಕ್ಕಿದ ನಂತರ ಅತಿಥಿ ಶಿಕ್ಷಕರ ಕೆಲಸವನ್ನು ಬಿಟ್ಟು ಪೊಲೀಸ್ ಕೆಲಸಕ್ಕೆ ಸೇರಿರುತ್ತಾರೆ. ನಂತರ 2017 ರಲ್ಲಿ ಗಂಡನಿಗೆ ಶೈಲಜಾ ರವರು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದು ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ಒಬ್ಬರಿಗೊಬ್ಬರು ನೀಡಿ ತದನಂತರ ಮಾತನಾಡಲು ಪ್ರಾರಂಭಿಸಿರುತ್ತಾರೆ. ನಂತರ ಈ ವಿಷಯ ತಿಳಿದ ನಾನು ತಮ್ಮ ಸಂಸಾರ ಹಾಳಾಗಬಾರದೆಂದು ಗಂಡನ ಮೊಬೈಲ್ ನಲ್ಲಿ ಶೈಲಜ ರವರ ಮೊಬೈಲ್ ನಂಬರ್ ಬ್ಲಾಕ್ ಮಾಡಿಸಿ ನನ್ನ ಗಂಡನ ವಿಷಯಕ್ಕೆ ಬರಬಾರದೆಂದು ಎಚ್ಚರಿಸಿರುತ್ತಾರೆ ಆದರೆ ಶೈಲಜ ಒಂದಿಲ್ಲ ಒಂದು ಕಾರಣ ಮತ್ತು ನೆಪ ಹೇಳಿ ನನ್ನ ಗಂಡನ ಜೊತೆ ಸಲುಗೆಯಿಂದ ಮಾತನಾಡಲು ಅವರಿಗೆ ಭೇಟಿಯಾಗಲು ಹೇಳುತಿದ್ದು ನನ್ನ ಗಂಡ ಅದಕ್ಕೆ ನಿರಾಕರಿಸುತ್ತಿದ್ದಾಗ ಕೆಲಸದಿಂದ ತೆಗೆಸುತ್ತೇನೆ ಅಂತ ಹೆದರಿಸುವುದು, ಜೈಲಿಗೆ ಕೇಸು ಹಾಕಿ ಜೀವನ ಹಾಳುಮಾಡುತ್ತೇನೆ ಎಂದು ಹೇಳಿ ಹೆದರಿಸುತ್ತಿದ್ದಳು, ಇಂದು ಅಥವಾ ನಾಳೆ ಶೈಲಜ ಸರಿಯಾಗಬಹುದೆಂದು ಯಾವುದೇ ರೀತಿಯ ಕಾನೂನು ಕ್ರಮಕ್ಕೆ ಮುಂದಾಗಿರುವುದಿಲ್ಲ. ನಂತರ ದಿನಾಂಕ:21-12-2022 ರಂದು ಶೈಲಜ ಇಂದ ನನ್ನ ಗಂಡನ ಮೊಬೈಲ್ ಗೆ ಕರೆ ಮಾಡಿ ಸುಮಾರು 10 ಲಕ್ಷ ಕೊಟ್ಟರೆ ನಾನು ಯಾವುದೇ ಕೇಸನ್ನು ಯಾವುದೇ ರೀತಿಯಲ್ಲಿ ಮಾಡುವುದಿಲ್ಲ ಮತ್ತು ತೊಂದರೆಯನ್ನು ನೀಡುವುದಿಲ್ಲ ಇಲ್ಲದಿದ್ದರೆ ನಿನ್ನ ಮೇಲೆ ಸುಳ್ಳು ಪ್ರಕರಣವನ್ನು ನೀಡಿ ನಿಮ್ಮನ್ನು ಕೆಲಸದಿಂದ ತೆಗೆಸಿ ಜೀವನ ಹಾಳು ಮಾಡುತ್ತೇನೆ ಎಂದು ಹೇಳಿ ಹೆದರಿಸಿರುತ್ತಾಳೆ.
ಇದರ ಆಡಿಯೋ ರೆಕಾರ್ಡಿಂಗ್ ನನ್ನ ಬಳಿ ಇರುತ್ತದೆ. ಆದರೆ ಆ ಸಮಯದಲ್ಲಿ ಯಾವುದೇ ಹಣವನ್ನು ನೀಡಿರುವುದಿಲ್ಲ. ಇದೇ ರೀತಿ ನನ್ನ ಕುಟುಂಬದವರಿಗೆ ನಾನಾ ರೀತಿಯಲ್ಲಿ ಶೈಲಜ ಮತ್ತು ಅವರ ಗಂಡ ತೊಂದರೆಯನ್ನು ನೀಡಿರುತ್ತಾರೆ. ಶೈಲಜಳ ಮಾತನ್ನು ಕಟ್ಟಿಕೊಂಡು ರೇಖಾ ಎಂಬುವವರು ನನ್ನ ಗಂಡ ರಾಘವೇಂದ್ರ ರವರ ಮೇಲೆ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ನೀಡಿ ಜೈಲಿಗೆ ಕಳುಹಿಸಿರುತ್ತಾರೆ. ಆ ಕೇಸಿನಲ್ಲಿ ಶೈಲಜಾ ರವರು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಬಂದಿರುತ್ತಾರೆ. ಈಗ ಆ ಪ್ರಕರಣ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆಯ ಹಂತದಲ್ಲಿರುತ್ತದೆ.
ನನ್ನ ಪತಿಯ ಮೊಬೈಲ್ ಗೆ ಶೈಲಜಾ ಕರೆಮಾಡುವುದು ಮೆಸೇಜ್ ಅನ್ನು ಕಳುಹಿಸಿ ಹೀನಾಯವಾಗಿ ಬೈಯುವುದು ಅವಾಚ್ಯವಾಗಿ ನಿಂದಿಸುವುದು ಮಾಡಿರುತ್ತಾಳೆ. ಇದರಲ್ಲಿ ಶೈಲಜ ಅವರಿಗೆ ಅವರ ಗಂಡ ಕೂಡಾ ಸಹಾಯ ನೀಡಿರುತ್ತಾರೆ.ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ಥ ಮಹಿಳೆಯ ದೂರಿನಲ್ಲೇನಿದೆ..!??
ದಿನಾಂಕ:17-09-2022 ರಂದು ರೇಖಾ ಎಂಬುವವಳು ರಾಘವೇಂದ್ರ ಎ ಎನ್ ಮೇಲೆ ಅತ್ಯಾಚಾರ ಕೇಸ್ ಹಾಕಿರುತ್ತಾಳೆ, ರೇಖಾ ಎಂಬುವವಳನ್ನು ಶೈಲಜಾ ಗೆ ರಾಘವೇಂದ್ರ ರವರೇ ಪರಿಚಯಿಸಿರುತ್ತಾರೆ, ಆಕೆಯ ಕಷ್ಟಗಳನ್ನು ಶೈಲಜಾ ಹತ್ತಿರ ಹೇಳಿಕೊಂಡಿರುತ್ತಾಳೆ ಅವಳ ಕಷ್ಟಗಳನ್ನು ಕೇಳಿ ಅವಳ ಕೇಸಿನಲ್ಲಿ ಸಾಕ್ಷಿಗೆ ಶೈಲಜಾ ಸಹಿ ಹಾಕಿರುತ್ತಾರೆ.
ದಿನಾಂಕ:14/05/2024 ರಂದು ಶೈಲಜಾ ರಿಪ್ಪನ್ ಪೇಟೆಯ ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಸ್ನೇಹಿತೆಯೊಂದಿಗೆ ಬಂದಿರುತ್ತಾರೆ, ದೇವಸ್ಥಾನದಿಂದ ಬರುವಾಗ ರಾಘವೇಂದ್ರ ರವರು ಶೈಲಜಾಗೆ ಮುಖಾಮುಖಿ ಭೇಟಿಯಾದ ಸಂಧರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿತ ರಾಘವೇಂದ್ರನು ಶೈಲಜಾ ಗೆ ಮನೆಗೆ ಬರುವಂತೆ ಒತ್ತಾಯಿಸಿರುತ್ತಾನೆ, ಇದರಿಂದ ಭಯ ಬಿದ್ದು ಅವನ ಮನೆಗೆ ಹೊಗಿದ್ದು, ಮನೆಯೊಳಗೆ ಕರೆದು ನಾನು ನಿನ್ನ ಜಾತಿ ನಿಂದನೆ ಮಾಡಿರುವುದು ಸರಿ ಇರುವುದಿಲ್ಲ. ನನ್ನ ಪರವಾಗಿ ನೀನು ಸಾಕ್ಷಿ ಹೇಳಲೇ ಬೇಕು ಇಲ್ಲಂದರೆ ನಾನು ನಿನ್ನ ಮಕ್ಕಳನ್ನು ಅಪಹರಣ ಮಾಡಿಸುತ್ತೇನೆ. ನಾನು ಮಾಡದಿದ್ದರು ಬೇರೆಯವರಿಂದ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿ ಆತ್ಯಾಚಾರ ಮಾಡಲು ಪ್ರಯತ್ನಿಸುತ್ತಾನೆ. ಈ ವಿಷಯವಾಗಿ ಶೈಲಜಾ ಸ್ವಲ್ಪ ದಿನಗಳ ನಂತರ ಅವರ ಹೆಂಡತಿಗೂ ಮೆಸೇಜ್ ಮೂಲಕ ವಿಷಯ ತಿಳಿಸಿರುತ್ತಾರೆ,ನಂತರ ಈ ವಿಷಯದಲ್ಲಿ ರಾಜಿ ಸಂಧಾನ ಮಾಡಲು ಹಲವರು ಬಂದಿರುತ್ತಾರೆ, ಅವರು ಎಷ್ಟೇ ಪ್ರಯತ್ನ ಪಟ್ಟರು ರಾಜಿಯಾಗಲಿಲ್ಲ, ಇದರಿಂದ ಮರ್ಯಾದೆಗೆ ಅಂಜಿ ಯಾರಿಗೂ ಹೇಳದೆ ಶೈಲಜಾ ದಿನಾಂಕ:04/09/2024 ರಂದು ನಿದ್ದೆ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಇದರಿಂದ ರಾಘವೇಂದ್ರ ಎ ಎನ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..