ಬುಕ್ಕಿವರೆ – ಬೆಳ್ಳೂರು – ರಿಪ್ಪನ್‌ಪೇಟೆ ಮಾರ್ಗಕ್ಕೆ ನೂತನ KSRTC ಬಸ್ ಸೌಲಭ್ಯ : ಕುಗ್ರಾಮದ ಜನರ ಮೊಗದಲ್ಲಿ ಮೂಡಿದ ಸಂತಸ

ರಿಪ್ಪನ್‌ಪೇಟೆ : ಬೆಳ್ಳೂರು-ಬುಕ್ಕಿವರೆ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸೌಲಭ್ಯವು ಪ್ರಾರಂಭವಾಗಿದ್ದು ಎಲ್ಲರ ಮೊಗದಲ್ಲಿ ಮಂದಹಾಸ ತಂದಿದೆ.

ಶರಾವತಿ, ಚಕ್ರಾ, ವರಾಹಿ, ಮಾಣಿ, ಮಡೆನೂರು ಡ್ಯಾಂ ನಿರ್ಮಾಣಕ್ಕಾಗಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಮುಳುಗಡೆ ಸಂತ್ರಸ್ತ ಕುಟುಂಬದವರೇ ಹೆಚ್ಚು ವಾಸಿಸುತ್ತಿರುವ ಕುಗ್ರಾಮಗಳಾದ ಬೆಳ್ಳೂರು, ಬುಕ್ಕಿವರೆ, ಚಾಣಬೈಲು, ದೋಬೈಲು, ಮಸ್ಕಾನಿ, ಕಳಸೆ, ಹಾರೋಹಿತ್ತಲು, ಬಸವಾಪುರ, ಕಲ್ಲುಹಳ್ಳ, ಗುಳಿಗುಳಿ ಶಂಕರ, ಗುಬ್ಬಿಗಾ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಮತ್ತು ಶಾಲಾ – ಕಾಲೇಜ್ ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರು ವೃದ್ಧರು ಗರ್ಭಿಣಿಯರು ಸೇರಿದಂತೆ ಇನ್ನಿತರ ಹಲವರು ಬಸ್‌ ಸೌಲಭ್ಯವಿಲ್ಲದೆ ಪರದಾಡುವಂತಾಗಿತು.

ಕೆಲ ದಿನಗಳ ಹಿಂದೆ ಬೆಳ್ಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕುಗ್ರಾಮದ ಜನರ ಪ್ರಮುಖ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದ್ದರು.ಈ ಹಿನ್ನಲೆಯಲ್ಲಿ ಶಾಸಕರಾದ ಹರತಾಳು ಹಾಲಪ್ಪ ರವರು ಜಿಲ್ಲಾಧಿಕಾರಿಗಳು ಹಾಗೂ ಸಂಸದರ ಗಮನಕ್ಕೆ ತಂದು ಬಸ್ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡರಾದ ಬೆಳ್ಳೂರು ತಿಮ್ಮಪ್ಪ ರವರು ಶಾಸಕರು ಹಾಗೂ ಸಂಸದರ ಸಹಕಾರದಿಂದ ಶಾಲಾ – ಕಾಲೇಜ್ ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರು ವೃದ್ಧರು ಗರ್ಭಿಣಿಯರು ಸೇರಿದಂತೆ ಇನ್ನಿತರ ಹಲವರಿಗೆ ಬಸ್‌ ಸೌಲಭ್ಯದಿಂದ ಅನುಕೂಲವಾಗಿದೆ ಎಂದರು.

ನೂತನ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿದ್ದಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ,ಸಂಸದ ಬಿ ವೈ ರಾಘವೇಂದ್ರ ಹಾಗೂ ಶಾಸಕರಾದ ಹರತಾಳು ಹಾಲಪ್ಪ ರವರಿಗೆ ಬೆಳ್ಳೂರು, ಬುಕ್ಕಿವರೆ ಭಾಗದ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ನೂತನ ಬಸ್ ವೇಳಾಪಟ್ಟಿ ಇಂತಿದೆ :

ಬೆ.6.15 ಕ್ಕೆ ಶಿವಮೊಗ್ಗದಿಂದ ಹೊರಟು ಬೆ. 7.15 ಗೆ ಬುಕ್ಕಿವರೆಗೆ ಬರುತ್ತದೆ.

7.30ಕ್ಕೆ ಬುಕ್ಕಿವರೆಯಿಂದ ಹೊರಟು 08.00 ಕ್ಕೆ ರಿಪ್ಪನ್‌ಪೇಟೆಗೆ ಬರುತ್ತದೆ.

ಸಂಜೆ.4.30 ಕ್ಕೆ ರಿಪ್ಪನ್‌ಪೇಟೆಯಿಂದ – 5.10 ಬುಕ್ಕಿವರೆ

ಹೆಚ್ಚಿನ ಮಾಹಿತಿಗೆ ಈ ವೀಡಿಯೋ ವೀಕ್ಷಿಸಿ👇


Leave a Reply

Your email address will not be published. Required fields are marked *