ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಮನೆ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಮಾಲು ಸಮೇತ ಬಂಧಿಸಿದ ಪೊಲೀಸ್

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಮನೆ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಮಾಲು ಸಮೇತ ಬಂಧಿಸಿದ ಪೊಲೀಸ್

ಮನೆ ಕಳ್ಳತನವೆಸಗಿದ್ದ ಆರೋಪಿಗಳನ್ನು 24 ಗಂಟೆಯಲ್ಲಿ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗುಂಬೆ ಸಮೀಪದ ಶೆಟ್ಟಿಗಳಕೊಪ್ಪ ಗ್ರಾಮದ ಶಿವಪ್ಪ ಹೆಗಡೆ ಎಂಬುವವರ ಮನೆಯ ಕಿಟಕಿಯನ್ನು ಮುರಿದು ಪೆಟ್ಟಿಗೆಯಲ್ಲಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನವೆಸಗಿದ್ದ ಪ್ರಕರಣವನ್ನು ಪೊಲೀಸರು ಭೇಧಿಸಿ ಇಬ್ಬರು ಆರೋಪಿಗಳನ್ನು‌ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಾದ ತೀರ್ಥಹಳ್ಳಿಯ ಕೈಮರದ ನಿವಾಸಿ, ಮಂಜುನಾಥ @ ಕೊಪ್ಪ ಮಂಜ, (42) ವರ್ಷ ಮತ್ತು ಚೇತನ್ @ ಚೇತು (27)  ಇಬ್ಬರನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಆರೋಪಿತರು ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ ಜಿ ಕಾರ್ಯಪ್ಪ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ, ಪಿಎಸ್ ಐ ರಂಗನಾಥ ಅಂತರಗಟ್ಟಿ ನೇತೃತ್ವದಲ್ಲಿ  ಬಸವರಾಜ್ ಎಲ್ ಆರ್ ಪಿಎಸ್ ಐ 2, ಆಗುಂಬೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಪ್ರಕರಣ ದಾಖಲಾದ ಕೇವಲ 24 ಗಂಟೆಗಳ ಒಳಗಾಗಿ ಪ್ರಕರಣವನ್ನು ಪೊಲೀಸರು ಹಚ್ಚಿದ್ದಾರೆ, ಆರೋಪಿತರಿಂದ ಅಂದಾಜು ಮೌಲ್ಯ 1,50,500 /- ರೂಗಳ ಒಟ್ಟು 23.5 ಗ್ರಾಂ ತೂಕದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *