ರಿಪ್ಪನ್‌ಪೇಟೆ: ಸ್ವಾತಂತ್ರ್ಯ ನಂತರ ನಮ್ಮ ರಾಷ್ಟ, ರಾಜ್ಯದ ರಾಜಕಾರಣಿಗಳು ನಡೆದುಕೊಂಡಿರುವ ರೀತಿ ಜನರಲ್ಲಿ ಅಸಹ್ಯವುಂಟುಮಾಡಿದೆ. ಇದು ಪರಿವರ್ತನೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷದ ಸಾಗರ ವಿಧಾನಸಭಾ ಕ್ಷೇತ್ರ ಸಂಭಾವ್ಯ ಅಭ್ಯರ್ಥಿ ಕೆ. ದಿವಾಕರ್ ಹೇಳಿದರು.
ಪಟ್ಟಣದ ಸಾಗರ ರಸ್ತೆಯ ಗೌರಿಶಂಕರ ಕಾಂಪ್ಲೆಕ್ಸ್ ನಲ್ಲಿ ಆಮ್‌ಆದ್ಮಿ ಪಕ್ಷದ ನೂತನ ಕಛೇರಿ ಉದ್ಘಾಟನೆಯ ನಂತರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಇದುವರೆಗೆ ನಮ್ಮನ್ನಾಳಿದ ಶಾಸಕರುಗಳು ಉಂಡುಹೋದ ಕೊಂಡುಹೋದ ಮನಸ್ಥಿತಿಯವರಾಗಿರುವುದು ದುರಂತ. ನಮ್ಮಿಂದ ಆಯ್ಕೆಯಾದ ಕಳ್ಳರು, ಕಾಕರು, ದರೋಡೆ ಕೋರರು ಸಮಾಜವನ್ನು ಏನು ಮಾಡುತ್ತಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ರಕ್ಷಣಾ ವ್ಯವಸ್ಥೆ ಹಾಳಾದರೆ ದೇಶವೇ ಹಾಳಾಗುತ್ತದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸಿದ ಕೀರ್ತಿ ಗೃಹಮಂತ್ರಿ ಆರಗ ಜ್ಞಾನೇಂದ್ರಗೆ ಸಲ್ಲ್ಲುತ್ತದೆ. ಪ್ರಾಮಾಣೀಕತೆ ಬಾಯಿಗೆ ಮಾತ್ರ ಸೀಮಿತವಾಗಿರಬಾರದು ಆಚರದಲ್ಲೂ ಇರಬೇಕು. ಬೆಂಗಳೂರಿನ ಪ್ರತಿಷ್ಠಿತವಲಯದಲ್ಲಿ ನಿವೇಶನ ಹೊಂದಲು ಗೃಹ ಮಂತ್ರಿ ಹಗರಣ ಮಾಡಿರುವುದು ತಿಳಿದುಬಂದಿದೆ. ಗೋಪಾಲಗೌಡರ ಕ್ಷೇತ್ರದ ಪ್ರತಿನಿಧಿ ನಾನು ಎಂಬ ಅಭಿಮಾನ ಇದ್ದರೆ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನರೇಂದ್ರ ಮೋದಿ ಮತ್ತು ಅಮಿತ್ ಷಾರವರು ಪ್ರಜಾಪ್ರಭುತ್ವದ ಹತ್ಯೆಗೆ ಬಂದಿರುವ ಮಾನವ ಬಾಂಬುಗಳು. ಈ ಸರ್ಕಾರ ಇಟ್ಟುಕೊಂಡು ಸಮಾಜದ ಸುಧಾರಣೆ ಸಾಧ್ಯವಿಲ್ಲ. ಕಳಂಕರಹಿತರಾದ ಕಾರ್ಯಕರ್ತರು ಯಾರಿಗೂ ಹೆದರುವ ಅಗತ್ಯವಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದಲ್ಲಿ ಧೈರ್ಯ ಮತ್ತು ಎದೆಗಾರಿಕೆಯಿಂದ ಭ್ರಷ್ಟಾಚಾರದ ವಿರುದ್ಧ ಮುನ್ನುಗ್ಗಿ. ವಿಚಾರದಿಂದ ಪ್ರಚಾರದಿಂದ ಪಕ್ಷ ಬೆಳೆಯುವುದಿಲ್ಲ. ವಿಚಾರಗಳು ಅನುಷ್ಟಾನುಗೊಳ್ಳಬೇಕು. ಇದಕ್ಕೆ ಆಮ್ ಆದ್ಮಿ ಪಕ್ಷವೇ ಪರಿಹಾರವಾಗಿದೆ. ಜನರು ಮೂರು ಪಕ್ಷಗಳಿಂದ ಭ್ರಮನಿರಸನಗೊಂಡಿದ್ದಾರೆ. ಆಮ್‌ಆದ್ಮಿ ಪಕ್ಷ ಬರಬೇಕೆಂದು ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನಪರ ಯೋಜನೆಗಳೊಂದಿಗೆ, ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರೋಣ. ಜನಸಾಮಾನ್ಯರ ಸಮಸ್ಯೆಯನ್ನು ಅಮೂಲಾಗ್ರವಾಗಿ ಪರಿಹರಿಸೋಣ ಎಂದರು.
ಕಛೇರಿ ಉದ್ಘಾಟಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಖ್ಯಾತ ಹಾಸ್ಯ ಚಿತ್ರನಟ ಟೆನಿಸ್ ಕೃಷ್ಣ ಮಾತನಾಡಿ ರಾಜ್ಯದಲ್ಲಿ ಬದಲಾವಣೆ ತರುವ ಸದಾಶಯದಿಂದ ಎಎಪಿ ಸೇರಿದ್ದೇನೆ. ಮೂರು ಪಕ್ಷಗಳು ರಾಜ್ಯವನ್ನು ಲೂಟಿಮಾಡುತ್ತಿದ್ದಾರೆ. ಇನ್ನುಮುಂದೆ ನಾವು ಅವಕಾಶಕೊಡುವುದಿಲ್ಲ. ಕೇಜ್ರಿವಾಲ್‌ರವರು ನಮ್ಮ ಕೈಗೆ ಪೊರಕೆಕೊಟ್ಟಿದ್ದಾರೆ ಎಲ್ಲಾ ಕಸವನ್ನು ಗುಡಿಸಿ ಹಾಕುತ್ತೇವೆ ಎಂದರು.
ಈ ಸಂದರ್ಭದಲ್ಲಿ ನವಿಲೇಶ್, ಅಮೃತ್‌ರಾಸ್, ಗಣೇಶ್, ಶಿವಕುಮಾರ, ತನಿಕಲ್ ಮದನ್, ಸಂತೋಷ ಆಶ್ರಿತ, ಈಶ್ವರಪ್ಪ ಕುಕ್ಕಳಲೆ, ಹಸನಬ್ಬ, ಹನೀಫ್, ರವಿ ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇