ಶಿವಮೊಗ್ಗದಲ್ಲಿ ಮತ್ತೊಮ್ಮೆ ರೌಡಿಗಳ ಅಟ್ಟಹಾಸ ಸದ್ದು ಮಾಡಿದೆ.ಚೀಲೂರಿನ ಬೋವಿನ ಕೋವಿಯ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ದಾಳಿ ನಡೆದಿದ್ದು ಈ ಪೈಕಿ ಆಂಜನೇಯ ಎಂಬಾತ ಸಾವನ್ನಪ್ಪಿದ್ದು, ಮಧು ಎಂಬಾತನ ಸ್ಥಿತಿ ಗಂಭೀರವಾಗಿದೆ.
ಮಧು ಮತ್ತು ಆಂಜನೇಯ ಹಂದಿ ಅಣ್ಣಿ ಕೊಲೆ ಕೇಸಿನಲ್ಲಿ ಕೋರ್ಟ್ಗೆ ಅಟೆಂಡ್ ಆಗಿ ವಾಪಸ್ ಬರುತ್ತಿದ್ದರು. ಬೈಕ್ ನಲ್ಲಿ ಬರುತ್ತಿದ್ದ ಇವರಿಬ್ಬರನ್ನ ಸ್ಕಾರ್ಪಿಯೋ ಗಾಡಿಯೊಂದು ಫಾಲೋ ಮಾಡಿ ಬೋವಿನ ಕೋವಿ ಬಳಿ ಮಧು ಮತ್ತು ಆಂಜನೇಯನ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಇಲ್ಲಿ ಅಟ್ಯಾಕ್ ಆಗುವುದಕ್ಕೂ ಮೊದಲು ಶಿವಮೊಗ್ಗ ಕೋರ್ಟ್ ಸೇರಿದಂತೆ ಶಿವಮೊಗ್ಗ ನಗರದ ಕೆಲೆವೆಡೆ ಮಧು ಹಾಗೂ ಆಂಜನೇಯನನ್ನು ಸ್ಕಾರ್ಪಿಯೋ ಗಾಡಿಯಲ್ಲಿ ಫಾಲೋ ಮಾಡಲಾಗಿತ್ತು ಎಂಬ ಮಾಹಿತಿಯಿದೆ. ಅಂತಿಮವಾಗಿ ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ಮಧು ಮತ್ತು ಆಂಜನೇಯರಿದ್ದ ಬೈಕ್ಗೆ ಸ್ಕಾರ್ಪಿಯೋ ಮೂಲಕ ಡಿಕ್ಕಿ ಹೊಡೆಸಿ ಅವರ ಮೇಲೆ ದಾಳಿ ಮಾಡಲಾಗಿದೆ.
ಈ ಮಧ್ಯೆ ಮಧು ಹೇಗೆ ತಪ್ಪಿಸಿಕೊಂಡಿದ್ದ ಅನ್ನುವುದೇ ಅಚ್ಚರಿಯಾಗಿದೆ. ಇಬ್ಬರನ್ನು ಎತ್ತಬೇಕೆಂದೇ ಟೀಂ ಹೊರಟಿತ್ತು. ಇಬ್ಬರ ಮೇಲೆಯು ದಾಳಿ ಮಾಡಿದೆ ಆದಾಗ್ಯು ಮಧು ಅದೃಷ್ಟವಶಾತ್ ಬದುಕುಳಿದಿದ್ಧಾನೆ.
ಇನ್ನೂ ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದು, ಇದೊಂದು ಪೂರ್ವ ಯೋಜಿತ ಕೃತ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮಧು ಮತ್ತು ಆಂಜನೇಯ ಇಬ್ಬರು ಹರಿಹರದ ಬಾನುವಳ್ಳಿಯವರು. ಇವತ್ತು ಕೋರ್ಟ್ಗೆ ಹಾಜರಾಗಲು ಬಂದಿದ್ದರು. ಈ ಮಾಹಿತಿಯನ್ನು ಸಹ ಹೊಂದಿದ್ದ ದುಷ್ಕರ್ಮಿಗಳು, ಅವರನ್ನ ಫಾಲೋ ಮಾಡಿ ದಾಳಿ ನಡೆಸಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟೆ ತನಿಖೆಯಿಂದ ಮತ್ತಷ್ಟು ಸತ್ಯಗಳು ಆಚೆ ಬರಬೇಕಿದೆ.