ಶರಾವತಿ ಸಂತ್ರಸ್ಥರ ಹೋರಾಟಕ್ಕೆ ಹಿನ್ನಡೆ – ಕರ್ನಾಟಕದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ|sharavathi

ಕರ್ನಾಟಕ ರಾಜ್ಯದ ಜನತೆಗೆ ಬೆಳಕು ನೀಡಲು ತಮ್ಮ ಜೀವನವನ್ನೇ ನೀಡಿರುವ ಶರಾವತಿ ಸಂತ್ರಸ್ತರ ಹೋರಾಟಕ್ಕೆ ಹಿನ್ನಡೆಯಾಗಿದ್ದು, ಶರಾವತಿ ಕಣಿವೆ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯಿಂದ ಹಾನಿಗೊಳಗಾದ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 1958 ರಿಂದ 1969 ರವರೆಗೆ ನೀಡಲಾದ ಒಟ್ಟು 9,129 ಎಕರೆ ಅರಣ್ಯ ಭೂಮಿಯನ್ನು ಮೀಸಲಿಡುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಪರಿಸರ ಸಚಿವಾಲಯ ತಿರಸ್ಕರಿಸಿದೆ.

ಸುಪ್ರೀಂ ಆದೇಶವನ್ನು ಉಲ್ಲೇಖಿಸಿ ಕೇಂದ್ರ ಸಚಿವಾಲಯ ಕರ್ನಾಟಕ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.




ಹೌದು, ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಪುನರ್​ ವಸತಿಗೆ ಮೀಸಲಿಟ್ಟಿರುವ ಅರಣ್ಯ ಭೂಮಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಸರ್ವೆ ನಂಬರ್​​ಗಳಲ್ಲಿದೆ.

ಈ ಅರಣ್ಯ ಭೂಮಿಯ ಬಗ್ಗೆ ಇಂಡಿಯನ್​ ಎಕ್ಸ್​​ಪ್ರೆಸ್​​​ ಡಾಟ್ ​ಕಮ್​​ ವರದಿಯಲ್ಲಿ, ಮೇ2 ರ ಸಚಿವಾಲಯದ ಪತ್ರದಂತೆ 2000 ಮತ್ತು 2004ರಲ್ಲಿ ಸುಪ್ರೀಂ ಕೋರ್ಟ್​​ ಆದೇಶವನ್ನು ಉಲ್ಲೇಖಿಸಿ ಕೇಂದ್ರ ಸಚಿವಾಲಯ ಕರ್ನಾಟಕ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಫೆಬ್ರವರಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿ ಹೊಸ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಮಾಡಲಾಗಿತ್ತು.

ಯೋಜನೆಯಿಂದ ನಿರಾಶ್ರಿತರಾದ 11,000 ರಿಂದ 12,000 ಕುಟುಂಬಗಳ ಪರವಾಗಿ ಸುಮಾರು 9,600 ಎಕರೆ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಮತ್ತು ದಶಕಗಳ ಹಿಂದೆ ಪುನರ್ವಸತಿ ಕಲ್ಪಿಸಲು ತಯಾರಿಸಿದ ಮನವಿಯೊಂದನ್ನು ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿ ಮುಂದಾಗಿತ್ತು.

ಇದರಂತೆ ಮಾರ್ಚ್ 23 ರಂದು ಕರ್ನಾಟಕ ಸರ್ಕಾರ 9,129 ಎಕರೆ ಅರಣ್ಯ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಅವಕಾಶ ನೀಡುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಮನವಿ ಮಾಡಿತ್ತು.

ಶರವಾತಿ ಸಂತ್ರಸ್ತರಿಗೆ ಪುನರ್ವಸತಿಗಾಗಿ ಈ ಹಿಂದೆ ಜಮೀನುಗಳನ್ನು ಬಿಡುಗಡೆ ಮಾಡಲಾಗಿದ್ದರೂ, ಜಮೀನುಗಳ ಕಾನೂನಿ ಅಡಿಯಲ್ಲಿ ಮೀಸಲು ಅರಣ್ಯ ಪ್ರದೇಶವಾಗಿಯೇ ಉಳಿದುಕೊಂಡಿದೆ.




ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದಿರುವ ರಾಜ್ಯ ಸರ್ಕಾರ, ಮೀಸಲು ಅರಣ್ಯ ಪ್ರದೇಶವಾಗಿಯೇ ಉಳಿದುಕೊಂಡಿದ್ದು, ಈ ಪ್ರದೇಶಗಳಲ್ಲಿ ನೆಲೆಸಿರುವ ಜನರು ವಿವಿಧ ಸರ್ಕಾರಿ ಸವಲತ್ತು ಪಡೆದುಕೊಳ್ಳಲು ವಂಚಿತರಾಗಿದ್ದಾರೆ ಎಂದು ತಿಳಿಸಿತ್ತು. ಅಲ್ಲದೇ, ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಪಡೆದುಕೊಳ್ಳದೇ ಡಿನೋಟಿಫಿಕೇಶನ್​​ ಹೊರಡಿಸಿದ್ದ ಕಾರಣ 2021ರ ಮಾರ್ಚ್​​ 4ರಂದು ಸರ್ಕಾರಿ ಅಧಿಸೂಚನೆಯನ್ನು ರದ್ದುಗೊಳಿಸಿತ್ತು.

ಶರಾವತಿ ಕಣಿವೆಯ ಜಲವಿದ್ಯುತ್ ಯೋಜನೆಯೂ 1964ರಲ್ಲಿ ಕಾರ್ಯಾರಂಭ ಮಾಡಿತ್ತು. 1977ರಲ್ಲಿ ಯೋಜನೆ ಕೊನೆಗೊಂಡಿತು.

ಈ ಯೋಜನೆಯು ನೂರಾರು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಆಗಿನಿಂದ ಉಳುಮೆ ಜಾಗದ ಭೂ ಹಕ್ಕು ನೀಡುವಂತೆ ಸಂತ್ರಸ್ತರು 6 ದಶಕದ ಹೋರಾಟ ಇನ್ನು ಫಲ ಸಿಕ್ಕಿಲ್ಲ…





Leave a Reply

Your email address will not be published. Required fields are marked *