ರಿಪ್ಪನ್‌ಪೇಟೆ : ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ರಿಪ್ಪನ್‌ಪೇಟೆ;-ಇಲ್ಲಿನ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಮಹಿಳೆಯರು ಅಧ್ಯಕ್ಷ ಕಾರ್ಯದರ್ಶಿಯಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಪುರಷರಿಗಿಂತ ನಾವುಗಳು ಏನು ಕಮ್ಮಿ ಎಂಬಂತೆ ಹಿಡಿದ ಸಮಾಜಮುಖಿ ಕಾರ್ಯದೊಂದಿಗೆ ರೋಟರಿಯ ದೇಯವಾಕ್ಯದಂತೆ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೋಟರಿ ಕ್ಲಬ್ ಅಧ್ಯಕ್ಷೆ ಪ್ರಮೀಳ ಎಲ್.ಗೌಡ ಮತ್ತು ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ರೋಟರಿ ಅತ್ಯುತ್ತಮ ಕಾರ್ಯದಲ್ಲಿ ಸಾರ್ವಜನಿಕರ ಪ್ರಶಂಸೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷö್ಮಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ರಿಪ್ಪನ್‌ಪೇಟೆಯ ರೋಟರಿ ಕ್ಲಬ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದೇ 22 ರಂದು ಶನಿವಾರ ಸಂಜೆ ಜಿ.ಎಸ್.ಬಿ.ಕಲ್ಯಾಣ ಮಂದಿರದಲ್ಲಿ 2023-24 ನಾಲಿನ “ಪದವಿ ಸ್ವೀಕಾರ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಜಿ.ಎಸ್.ಬಿ.ಕಲ್ಯಾಣ ಮಂದಿರಲ್ಲಿ ಆಯೋಜಿಸಲಾಗಿದೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಆಧ್ಯಕ್ಷೆ ಪ್ರಮೀಳ ಎಲ್.ಗೌಡ ವಹಿಸುವರು ಎಂದರು.
2023-24 ನೇ ಸಾಲಿಗೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ದೇವದಾಸ್ ಮತ್ತು ಕಾರ್ಯದರ್ಶಿಯಾಗಿ ಎಂ ರಾಮಚಂದ್ರ ಆಯ್ಕೆಯಾಗಿದ್ದು ನೂತನ ಅಧ್ಯಕ್ಷ ದೇವದಾಸ ಆರ್.ಹೆಚ್. ಇವರಿಗೆ ಮಾಜಿ ಅಸಿಸ್ಟಂಟ್ ಗವರ್ನರ್ ವಲಯ 11 ವಸಂತ್ ಹೋಬಳಿದಾರ್ ಪದವಿ ಪ್ರಧಾನವನ್ನು ಮಾಡುವರು.ಅಸಿಸ್ಟಂಟ್ ಗವರ್ನರ್ ವಲಯ 11 ರ ರವಿಕೋಟೋಜಿ.ಮತ್ತು ಝೋನಲ್ ಲೆಪ್ಟಿನೆಂಟ್ ಚಂದ್ರಪ್ಪ ಕೆ.ಟಿ.ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು
ನೂತನ ಅಧ್ಯಕ್ಷ ದೇವದಾಸ್ ಆರ್ ಹೆಚ್ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ರೋಟರಿ ಕ್ಲಬ್ ಮೌಲ್ಯಧಾರಿತ ಶಿಕ್ಷಣ ಮತ್ತು ಮಣ್ಣಿನ ಫಲವತ್ತತೆಯ ಸಂರಕ್ಷಣೆ ಹಾಗೂ ಇ.ತ್ಯಾಜ್ಯ ನಿರ್ವಹಣೆ .ಸುರಕ್ಷತ ವಾಹನ ಚಾಲನೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಮತ್ತು ಕ್ಲಬ್ ಇತರ ಕಾರ್ಯಕ್ರಮಗಳಾದ ರಕ್ತ ದಾನ ಶಿಬಿರ,ನೇತ್ರ ತಪಾಸಣೆ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ, ರೈತ ಮಿತ್ರ, ಶಿಕ್ಷಕರಿಗೆ ಸನ್ಮಾನ,ಅಂಗಾಂಗ ದಾನದ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ಮಳೆಕೊಯ್ಲು,ಆಯ್ದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಕಲಿಕಾ ಸಾಮಗ್ರಿಗಳ ವಿತರಣೆ ಇಂತಹ ಜನಪರ ಕಾರ್ಯಕ್ರಮಗಳನ್ನು ರೋಟರಿ ಕ್ಲಬ್ ಹಮ್ಮಿಕೊಂಡಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳ ಎಲ್.ಗೌಡ,ಕಾರ್ಯದರ್ಶಿ ಎಂ.ರಾಮಚಂದ್ರ, ಗಣೇಶಕಾಮತ್,ಜೆ.ರಾಧಾಕೃಷ್ಣ,ಡಾಕಪ್ಪ,ಎಂ.ಬಿ.ಮಂಜುನಾಥ, ರಾಧಾಕೃಷ್ಣ ಹೆಚ್.ಎಂ.ವರ್ತೇಶ್‌ಗೌಡರು, ಸುದೀಂದ್ರ ಹೆಬ್ಬಾರ್,ಡಾಕಪ್ಪ, ಇನ್ನಿತರರು ಹಾಜರಿದ್ದರು.