w
Headlines
Home » ಸಂತೆ ಮಾರ್ಕೆಟ್ ನಲ್ಲಿ ಪತ್ರಿಕಾಗೋಷ್ಠಿ: ಪೊಲೀಸ್ ಕ್ವಾರ್ಟರ್ಸ್ ರಸ್ತೆ ಕಾಮಗಾರಿಗೆ ತಡೆ ಆರೋಪಿಸಿ ಕೃಷ್ಣಪ್ಪ ಆಕ್ರೋಶ

ಸಂತೆ ಮಾರ್ಕೆಟ್ ನಲ್ಲಿ ಪತ್ರಿಕಾಗೋಷ್ಠಿ: ಪೊಲೀಸ್ ಕ್ವಾರ್ಟರ್ಸ್ ರಸ್ತೆ ಕಾಮಗಾರಿಗೆ ತಡೆ ಆರೋಪಿಸಿ ಕೃಷ್ಣಪ್ಪ ಆಕ್ರೋಶ

GridArt 20260516

ಸಂತೆ ಮಾರ್ಕೆಟ್ ನಲ್ಲಿ ಪತ್ರಿಕಾಗೋಷ್ಠಿ: ಪೊಲೀಸ್ ಕ್ವಾರ್ಟರ್ಸ್ ರಸ್ತೆ ಕಾಮಗಾರಿಗೆ ತಡೆ ಆರೋಪಿಸಿ ಕೃಷ್ಣಪ್ಪ ಆಕ್ರೋಶ

Social activist T.R. Krishnappa alleged that police officials stopped the concrete road work leading to Ripponpet Police Quarters during a press meet held at Hosanagara Santhe Market.

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಪೊಲೀಸ್ ಕ್ವಾರ್ಟರ್ಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾಂಕ್ರೆಟ್ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಪೊಲೀಸ್ ಅಧಿಕಾರಿಗಳು ತಡೆಹಿಡಿದಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ರಿಪ್ಪನ್‌ಪೇಟೆ ನಿವಾಸಿ, ವಿಭಿನ್ನವಾದ ಹೋರಾಟಗಳ ಮೂಲಕ ಹೆಸರುವಾಸಿಯಾಗಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರು ವಿಭಿನ್ನವಾಗಿ ಹೊಸನಗರ ಸಂತೆ ಮಾರ್ಕೆಟ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

2019ರಲ್ಲಿ ವಿಧಾನಸೌಧದಿಂದ ರಸ್ತೆ ಕಾಮಗಾರಿ ಕೈಗೊಳ್ಳಲು ಅಧಿಕೃತ ಅನುಮತಿ ಪತ್ರ ಪಡೆದುಕೊಂಡಿದ್ದರೂ, ಜಿಲ್ಲಾಡಳಿತವು ಹಲವು ವರ್ಷಗಳಿಂದ ಕಾಮಗಾರಿ ಆರಂಭಿಸದೇ ವಿಳಂಬ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಜನಸಾಮಾನ್ಯರ ಅನುಕೂಲಕ್ಕಾಗಿ ತಾವು ಸ್ವತಃ ರಸ್ತೆ ಕಾಮಗಾರಿ ಆರಂಭಿಸಲು ಮುಂದಾದ ವೇಳೆ, ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಕಾಮಗಾರಿ ನಡೆಸದಂತೆ ತಡೆಹಿಡಿದಿದ್ದಾರೆ ಎಂದು ಕೃಷ್ಣಪ್ಪ ತಿಳಿಸಿದರು. ಈ ತಡೆಯ ಹಿಂದಿನ ನಿಜವಾದ ಕಾರಣ ಸ್ಪಷ್ಟವಾಗಿಲ್ಲ ಎಂದು ಪ್ರಶ್ನಿಸಿದರು.

“ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯ ಸೌಲಭ್ಯಗಳು ಸಮರ್ಪಕವಾಗಿ ದೊರಕಬೇಕು. ಜನರಿಗೆ ಸಮಸ್ಯೆ ಉಂಟಾದಾಗ ನಾನು ಮೌನವಾಗಿರಲು ಸಾಧ್ಯವಿಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲೂ ಹೋರಾಟ ನಡೆಸಲು ಸದಾ ಸಿದ್ಧನಿದ್ದೇನೆ,” ಎಂದು ಹೇಳಿದರು.

ತಮ್ಮ ಹೋರಾಟ ಯಾವುದೇ ರಾಜಕೀಯ ಪ್ರೇರಿತವಾಗಿಲ್ಲ. ಇದು ಸಂಪೂರ್ಣವಾಗಿ ಜನಸಾಮಾನ್ಯರ ಪರವಾದ ಹೋರಾಟವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಅಧಿಕಾರಿಗಳು ಕೂಡಲೇ ರಸ್ತೆ ಕಾಮಗಾರಿಗೆ ಅನುಮತಿ ನೀಡಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.