Headlines

RIPPONPETE | ಹುಲ್ಲು ಸಾಗಿಸುತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮ

RIPPONPETE | ಹುಲ್ಲು ಸಾಗಿಸುತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮ ಹುಲ್ಲು ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕಣಬಂದೂರು ಗ್ರಾಮದಲ್ಲಿ ನಡೆದಿದೆ. ಕಣಬಂದೂರಿನ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಒಣ ಹುಲ್ಲಿನ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಹೊತ್ತಿ ಉರಿದಿದೆ. ಸ್ಥಳೀಯರು , ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ…

Read More

ಬಸ್ ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | ಆಗುಂಬೆ ಘಾಟ್ ನಲ್ಲಿ ನಡೆದ ಘಟನೆ

ಬಸ್ ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು | ಆಗುಂಬೆ ಘಾಟ್ ನಲ್ಲಿ ನಡೆದ ಘಟನೆ ತೀರ್ಥಹಳ್ಳಿ: ಪರ್ಕಳದಿಂದ ತೀರ್ಥಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ನಲ್ಲೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಬಸ್ ನಲ್ಲಿ ಆಗಮಿಸುತ್ತಿದ್ದ ಕೊಪ್ಪದ ಹರೀಶ್ ಬಳ್ಳಾಲ್ ಎನ್ನುವವರಿಗೆ ತೀವ್ರ ಹೃದಯಘಾತ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಬಸ್ ಡ್ರೈವರ್ ಪ್ರಾಥಮಿಕ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಹರೀಶ್ ಪ್ರಾಣ ಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿಯಾದ ಅನಿಕೇತನ್ ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ….

Read More

ಮೈಕ್ರೋ ಫೈನಾನ್ಸ್ ನವರಿಂದ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ

ಮೈಕ್ರೋ ಫೈನಾನ್ಸ್ ನವರಿಂದ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ ತುಮಕೂರು : ಮೈಕ್ರೋ ಫೈನಾನ್ಸ್​ನವರಿಂದ ಬಡವರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು, ಕಾನೂನು ರಚಿಸುವ ಸಲುವಾಗಿ ರಾಜ್ಯಪಾಲರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್​ ಕುರಿತು ಸಿಎಂ, ಡಿಸಿಎಂ, ಕಾನೂನು ಸಚಿವರು ಹಾಗೂ ನಾನು ಚರ್ಚೆ ಮಾಡಿದ್ದೇವೆ. ಆರ್​ಬಿಐ ಪ್ರತಿನಿಧಿಗಳು, ಮೈಕ್ರೋ…

Read More

ಹೆದ್ದಾರಿಪುರದ ಸಿಂಧುಗೆ ಎಂ.ಎ ಪತ್ರಿಕೋದ್ಯಮ ವಿಭಾಗದಲ್ಲಿ ಮೂರು ಚಿನ್ನ

ಹೆದ್ದಾರಿಪುರದ ಸಿಂಧುಗೆ ಎಂ.ಎ ಪತ್ರಿಕೋದ್ಯಮ ವಿಭಾಗದಲ್ಲಿ ಮೂರು ಚಿನ್ನ ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರದ ಸಿಂಧು ಕೆ.ಟಿ ಕುವೆಂಪು ವಿಶ್ವವಿದ್ಯಾನಿಲಯದ ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್‌ ನೊಂದಿಗೆ ಮೂರು ಚಿನ್ನದ ಪದಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ. ಹೆದ್ದಾರಿಪುರ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ತಾಯಿ ದೇವಮ್ಮ ಮತ್ತು ತಿಮ್ಮಪ್ಪ ಗೌಡ ಅವರ ಪುತ್ರಿಯಾದ ಸಿಂಧು ಕೆ.ಟಿ ಅವರು, ಹೆದ್ದಾರಿಪುರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು,…

Read More

ಗಣರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ವೇಷ ಭೂಷಣ ಧರಿಸಿ ಜನಾಕರ್ಷಕ  ಪಥಸಂಚಲನ

ಗಣರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ವೇಷ ಭೂಷಣ ಧರಿಸಿ ಜನಾಕರ್ಷಕ  ಪಥಸಂಚಲನ ರಿಪ್ಪನ್‌ಪೇಟೆ | 76 ನೇ ಗಣರಾಜ್ಯೋತ್ಸವ ಮತ್ತು ಸ್ವಾಮಿವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ಕೋಡೂರು ಬ್ಲಾಸಂ ಅಕಾಡಮಿ ಶಾಲಾ ವಿದ್ಯಾರ್ಥಿಗಳ ವೇಷ ಭೂಷಣ ಪಥಸಂಚಲನ ಸಾರ್ವಜನಿಕರನ್ನು ಅಕರ್ಷಿಸಿತು. ಕೋಡೂರು ಇತಿಹಾಸ ಪ್ರಸಿದ್ದ ಶ್ರೀಶಂಕರೇಶ್ವರ ದೇವಸ್ಥಾನದಿಂದ  ಸ್ವಾಮಿ ವಿವೇಕಾನಂದರ ವೇಷ ಭೂಷಣದೊಂದಿಗೆ ಮಕ್ಕಳ ಪಥ ಸಂಚಲನಕ್ಕೆ ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಬ್ಲಾಸಂ ಅಕಾಡಮಿ ಆಧ್ಯಕ್ಷ ಚಂದ್ರುಮೌಳಿಗೌಡರು ಚಾಲನೆ ನೀಡಿ ಮಾತನಾಡಿ ದೇಶದ…

Read More

RIPPONPETE | ವಿವಿಧಡೆಯಲ್ಲಿ  76 ನೇ ಗಣರಾಜ್ಯೋತ್ಸವ

ರಿಪ್ಪನ್‌ಪೇಟೆಯ ವಿವಿಧಡೆಯಲ್ಲಿ  76 ನೇ ಗಣರಾಜ್ಯೋತ್ಸವ ರಿಪ್ಪನ್‌ಪೇಟೆ | ೭೬ ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ನೆರವೇರಿತು. ಪಟ್ಟಣದ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು, ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಎಸ್.ಪಿ.ಪ್ರವೀಣ್ ದ್ವಜಾರೋಹಣ ನೆರವೇರಿಸಿ ದ್ವಜಾವಂದನೆ ಸ್ವೀಕರಿಸಿದರು.ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು,ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ.ಆಧ್ಯಕ್ಷ ಮಂಜಪ್ಪ, ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮೇಲ್ವಿಚಾರಕ ರಾಘವೇಂದ್ರ, ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ  ಸುಮಿತ್ರ, ರೈತ ಸಂಪರ್ಕ ಕೇಂದ್ರದಲ್ಲಿ  ಕೃಷಿ ಆಧಿಕಾರಿ,ಬರುವೆ…

Read More

ಕಾಡಾನೆಗಳ ಸ್ಥಳಾಂತರ | ರಿಪ್ಪನ್‌ಪೇಟೆ – ಆಯನೂರು ಮಾರ್ಗ ಸಂಚಾರಕ್ಕೆ ಕೆಲಕಾಲ ಅಡಚಣೆ

ಕಾಡಾನೆಗಳ ಸ್ಥಳಾಂತರ | ರಿಪ್ಪನ್‌ಪೇಟೆ – ಆಯನೂರು ಮಾರ್ಗ ಸಂಚಾರಕ್ಕೆ ಕೆಲಕಾಲ ಅಡಚಣೆ ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಹಲವಾರು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದ ಆನೆಗಳ ಹಿಂಡನ್ನು ಅರಣ್ಯ ಇಲಾಖೆಯ ಕಾರ್ಯಾಚರಣೆ ನಡೆಸಿ ಓಡಿಸುವ ಸಂಧರ್ಭದಲ್ಲಿ ಸೂಡೂರಿನಲ್ಲಿ ರಸ್ತೆ ಮಧ್ಯೆ ಆನೆಗಳು ಪುಂಡಾಟ ನಡೆಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಶಿವಮೊಗ್ಗ-ರಿಪ್ಪನ್ ಪೇಟೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಘಟನೆ ನಡೆದಿದೆ. ಮಲೆನಾಡಿನ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿರುವ…

Read More

ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ – ಪ್ರಶ್ನಿಸಿದವರ ಮೇಲೆ ಹಲ್ಲೆಗೆ ಯತ್ನ , ವೀಡಿಯೋ ವೈರಲ್

ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ – ಪ್ರಶ್ನಿಸಿದವರ ಮೇಲೆ ಹಲ್ಲೆಗೆ ಯತ್ನ , ವೀಡಿಯೋ ವೈರಲ್ ರಿಪ್ಪನ್‌ಪೇಟೆ : ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ನಿರ್ಮಿಸಿದ ರಸ್ತೆಯನ್ನು ಅಕ್ರಮಿಸಿ ಮಣ್ಣಿನ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದರ ಜೊತೆಗೆ ಪ್ರಶ್ನಿಸಲು ತೆರಳಿದ ಗ್ರಾಮಸ್ಥರ ಮೇಲೆ ಹಲ್ಲೆಗೆ ಯತ್ನಿಸಿರುವವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುವಂತೆ ಗ್ರಾಮಸ್ಥರು ಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್‍ನ ಕಾಳೇಶ್ವರ ಗ್ರಾಮದಲ್ಲಿ…

Read More

ಸಾಲಗಾರರ ಕಾಟಕ್ಕೆ ಬೆದರಿ ಸಾವಿಗೆ ಶರಣಾದ ವ್ಯಕ್ತಿ – ಐದು ಸಾವಿರ ಸಾಲಕ್ಕೆ ಜೀವತೆತ್ತ ವ್ಯಕ್ತಿ

ಸಾಲಗಾರರ ಕಾಟಕ್ಕೆ ಬೆದರಿ ಸಾವಿಗೆ ಶರಣಾದ ವ್ಯಕ್ತಿ – ಐದು ಸಾವಿರ ಸಾಲಕ್ಕೆ ಜೀವತೆತ್ತ ವ್ಯಕ್ತಿ ಫೈನಾನ್ಸ್ ನವರ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿರುವ ಬೆನ್ನಲ್ಲೇ ವ್ಯಕ್ತಿಯೋರ್ವ ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದಲ್ಲಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಹೇಶ್ (48) ಮೃತ ವ್ಯಕ್ತಿಯಾಗಿದ್ದಾರೆ. ಖಾಸಗಿ ವ್ಯಕ್ತಿಯ ಬಳಿ 5 ಸಾವಿರ ರೂಪಾಯಿ ಸಾಲ ಪಡೆದಿದ್ದರು. 5…

Read More

ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ ವಿವಾಹ – ಕುವೆಂಪು ಆಶಯಕ್ಕೆ ಅಪಮಾನ

ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ ವಿವಾಹ – ಕುವೆಂಪು ಆಶಯಕ್ಕೆ ಅಪಮಾನ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಶುಕ್ರವಾರ ಸಂಜೆ ಗೋದೂಳಿ ಲಗ್ನದಲ್ಲಿ ಅದ್ದೂರಿ ಮಂತ್ರ ಮಾಂಗಲ್ಯವೊಂದು ಜರುಗಿದೆ. ಕುವೆಂಪು ಸದಾಶಯದ ಮಂತ್ರ ಮಾಂಗಲ್ಯ ಎಲ್ಲಾ ರೀತಿಯ ಸರಳ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭವೊಂದು ಹೈಫೈ ರೂಪದಲ್ಲಿ ನಡೆದಿದೆ. ಹೇಮಾಂಗಣದ ಮುಂಭಾಗದಲ್ಲಿ ತಳಿರುತೋರಣಗಳಿಂದ ಸಿಂಗರಿಸಿ, ಫಲ, ಪುಷ್ಪಗಳನ್ನು ಬಳಸಿಕೊಂಡು ವಿಭಿನ್ನವಾಗಿ ಮಂತ್ರ ಮಾಂಗಲ್ಯ ವಿವಾಹ ಮಾಡಲಾಗಿದೆ. ಕುವೆಂಪು ಸರಳ ನಿಯಮಗಳಿಂದ ತಮ್ಮ ಪುತ್ರ ತೇಜಸ್ವಿ ವಿವಾಹವನ್ನು ಮಾಡಿದ್ದರು….

Read More