ರಿಪ್ಪನ್‌ಪೇಟೆಯ ವಿವಿಧಡೆಯಲ್ಲಿ 76 ನೇ ಗಣರಾಜ್ಯೋತ್ಸವ
ರಿಪ್ಪನ್‌ಪೇಟೆ | ೭೬ ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ನೆರವೇರಿತು.
ಪಟ್ಟಣದ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು, ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಎಸ್.ಪಿ.ಪ್ರವೀಣ್ ದ್ವಜಾರೋಹಣ ನೆರವೇರಿಸಿ ದ್ವಜಾವಂದನೆ ಸ್ವೀಕರಿಸಿದರು.ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು,ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ.ಆಧ್ಯಕ್ಷ ಮಂಜಪ್ಪ, ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮೇಲ್ವಿಚಾರಕ ರಾಘವೇಂದ್ರ, ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಸುಮಿತ್ರ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಆಧಿಕಾರಿ,ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಘವೇಂದ್ರ ಆರ್.ಶ್ರೀ ಗುರು ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ.ಆಧ್ಯಕ್ಷ ಉಮೇಶಕಾಂಬ್ಲೆ,ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಾಚಾರ್ಯ ಪ್ರೋ ವಿರೂಪಾಕ್ಷಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಪ್ರಾಚಾರ್ಯರು ವಾಸುದೇವ,ಸರ್ಕಾರಿ ಪಶು ಅಸ್ಪತ್ರೆಯಲ್ಲಿ ಡಾ.ಸಂತೋಷಕುಮಾರ್, ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ.ಆಧ್ಯಕ್ಷ ಚಿಕ್ಕಜೇನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ.ಆಧ್ಯಕ್ಷ ನಿವೃತ್ತ ಸೇನಾನಿ ಎನ್.ಪಿ.ಗಂಗಾಧರ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಪಿ.ಕೆ.ಮೊಹಮ್ಮದ್ ಅಲಿ,ಕೋಡೂರು ಗ್ರಾಮ ಪಂಚಾಯ್ತಿ ಗ್ರಾಮಾಧ್ಯಕ್ಷ ಜೈಪ್ರಕಾಶಶೆಟ್ಟರು, ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಸುಂದರೇಶ್,ಮೇರಿಮಾತಾ ಪ್ರೌಢಶಾಲೆಯಲ್ಲಿ ಪ್ರಾಚಾರ್ಯ ಜಸ್ಲಿನ್, ಗುಡ್‌ಶಫಡ್ ಶಾಲೆಯಲ್ಲಿ ಪಾ.ಬಿನೋಯಿ, ಅರಸಾಳು ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ವಲಯ ಅರಣ್ಯಾಧಿಕಾರಿ ಶರಣಪ್ಪ,ಮೂಗುಡ್ತಿ ವನ್ಯಜೀವಿ ವಲಯ ಅರಣ್ಯಾಧಿಕಾರಿಗಳು,ಸಿರಿಗೆರೆ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ಆರ್.ಎಫ್.ಓ.ಅರವಿಂದ, ದ್ವಜಾರೋಹಣ ನೆರವೇರಿಸಿ ದ್ವಜಾವಂದನೆ ಸ್ವೀಕರಿಸಿದರು.
ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಮಿತಿ ಅಧ್ಯಕ್ಷ ಹಸನಬ್ಬ ಧ್ವಜಾರೋಹಣ ನೆರವೇರಿಸಿದರು, ಕೆರೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಸದಸ್ಯ ಸುಂದರೇಶ್ ಧ್ವಜಾರೋಹಣ ನೆರವೇರಿಸಿದರು,
ನಂತರ ಶಾಲಾ ಮಕ್ಕಳ ಪಥಸಂಚಲನ ಪ್ರಮುಖಬೀದಿಯಲ್ಲಿ ಸಂಚರಿಸಿತು.